ಆಳಂದ: ಪ್ರತಿಯೊಂದು ಸರ್ಕಾರದ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಬೇಕಾದರೆ ಅಧಿಕಾರಿಗಳು, ಜನ ಪ್ರತಿನಿಧಿಗಳು ಹಾಗೂ ನಾಗರಿಕರ ಮಧ್ಯ ಸಮನ್ವತೆ ಸಾಧಿಸಿಕೊಂಡರೆ ಮಾತ್ರ ಯೋಜನೆಗಳ ಯಶಸ್ವಿಯಾಗಿ ಅನುಷ್ಠಾನಗೊಳ್ಳಲು ಸಾಧ್ಯವಿದೆ ಎಂದು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಹಾದೇವ ವಡಗಾಂವ ಅವರು ಹೇಳಿದರು.
ತಾಲೂಕಿನ ಹೋಬಳಿ ಕೇಂದ್ರ ನಿಂಬರಗಾ ಗ್ರಾಮ ಪಂಚಾಯತ ಆವರಣದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ತಾಲೂಕು ಆಡಳಿತ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಸರ್ಕಾರಿ ಯೋಜನೆಗಳ ಜಾಗೃತಿ ಸರಣಿ ೩ನೇ ಅಭಿಯಾನ ಹಾಗೂ ಕೊರೊನಾ ಮುಂಜಾಗೃತೆ ಅರಿವು ನೆರವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜನ ಸಾಮಾನ್ಯರಿಗೆ, ಬಡವರಿಗೆ, ದರ್ಬಲವರ್ಗದವರಿಗೆ ಕೃಷಿ, ಕಟ್ಟಡ ಕಾರ್ಮಿಕರಿಗೆ ವೃಯೋದ್ಧರಿಗೆ, ಮಹಿಳೆಯರಿಗೆ, ಅಂಗವಿಕಲರಿಗೆ ಮತ್ತು ರೈತರಿಗೆ ಸಂಬಂಧಿತ ಇಲಾಖೆಯ ಮೂಲಕ ಸರ್ಕಾರ ಸೌಲಭ್ಯಗಳನ್ನು ನೀಡುತ್ತಿದೆ. ಆದರೆ ಜನರು ಸಹ ಜಾಗೃತರಾಗಿ ತಮ್ಮ ಹಕ್ಕು, ಸೌಲಭ್ಯಗಳನ್ನು ಪಡೆಯಲು ಮುಂದಾರೆ ಮಾತ್ರ ಸರ್ಕಾರದ ಯೋಜನೆಗಳು ಸಾರ್ಥಕವಾಗುತ್ತವೆ ಎಂದು ಹೇಳಿದರು.
ಗ್ರಾಪಂ ಅಧ್ಯಕ್ಷ ಸಾತಪ್ಪ ಜಿ. ಮಂಟಗಿ ಅವರು ಕನ್ನಡ ಪುಸ್ತಕ ವಿತರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಅಲ್ಲದೆ, ಫಲಾನುಭವಿಗಳಿಗೆ ಕಂದಾಯ ಇಲಾಖೆಯ ಮಾಸಾಶನ ಹಾಗೂ ಭಾಗ್ಯಲಕ್ಷ್ಮೀ ಬಾಂಡ್‌ಗಳನ್ನು ವಿತರಿಸಿ ಮಾತನಾಡಿ, ಇದೊಂದು ಮಾದರಿಯ ಕಾರ್ಯಕ್ರಮವಾಗಿದೆ. ಇಂಥ ಕಾರ್ಯಕ್ರಮದ ಮೂಲಕ ಜನ ಸಾಮಾನ್ಯರಿಗೆ ಅರಿವು ಮೂಡಿಸುತ್ತಿರುವ ಪತ್ರಕರ್ತರ ಸಂಘದ ಕಾರ್ಯ ಶ್ಲಾಘನಿಯವಾಗಿದೆ. ಗ್ರಾಪಂ ಆಡಳಿತದಲ್ಲೂ ಸಾಕಷ್ಟು ಸುಧಾರಣೆ ತರಲು ಮುಂದಾಗಿದ್ದು ನಾಗರಿಕರ ಸಹಕಾರ ನೀಡಬೇಕು ಎಂದರು.
ಮುಖ್ಯ ಅತಿಥಿಗಳಾಗಿ ನಾಡ ತಹಸೀಲ್ದಾರ ಮಹೇಶೆ, ಕಂದಾಯ ನಿರೀಕ್ಷಕ ಅನೀಲ, ಗ್ರಾಪಂ ಸದಸ್ಯರಾದ ಕಾರ್ತಿಕ ಎಂ. ಕುಂಬಾರ, ರಾಜು ಚವ್ಹಾಣ, ಮೋಹನ ನಿರ್ಮಲಕರ್, ಮುಖಂಡ ಸೋಮಣ್ಣಾ ನಾಗೂರೆ, ಸೂರ್ಯಕಾಂತ ಜಿಡಗಿ, ಪತ್ರಕರ್ತ ಜಗದೀಶ ಕೋರೆ, ಮಲ್ಲಿಕಾರ್ಜುನ ಪಗಡೆ ಸೇರಿದಂತೆ ನೂರಾರು ಮಂದಿ ಉಪಸ್ಥಿತರಿದ್ದರು.
ರೇಷ್ಮೆ ಇಲಾಖೆಯ ತಾಲೂಕು ಅಧಿಕಾರಿ ಡಿ.ಬಿ. ಪಾಟೀಲ, ತೋಟಗಾರಿಕೆ ಹಿರಿಯ ಅಧಿಕಾರಿ ಶಂಕರಗೌಡ, ಅಂಗನವಾಡಿ ಮೇಲ್ವಿಚಾರಕಿ ಮೀನಾಕ್ಷಿ ಹಿರೇಮಠ, ಶಿಕ್ಷಣ ಇಲಾಖೆಯ ಅಧಿಕಾರಿ ಅಶೋಕ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಉಷಾ ಪಾಟೀಲ, ವಿಎ ಬಸವರಾಜ ಖಂಡಾಳೆ ಸೇರಿ ಇನ್ನಿತರ ಅಧಿಕಾರಿಗಳು ತಮ್ಮ ಇಲಾಖೆಯ ನಾಗರಿಕ ಸೌಲಭ್ಯದ ಮಾಹಿತಿ ಹಂಚಿಕೊಂಡರು.
ಬಿಲ್ ಕಲೆಕ್ಟರ್ ಕಲ್ಯಾಣಿ ನಿರ್ಮೂಲಕರ್ ನಿರೂಪಿಸಿದರು. ಪತ್ರಕರ್ತ ಅರ್ಜುನ ಬಂಡೆ ಸ್ವಾಗತಿಸಿದರು. ಪತ್ರಕರ್ತರ ಪ್ರಭಾಕರ ಸಲಗರೆ ಪ್ರಾಸ್ತಾವಿಕ ಮಾತನಾಡಿದರು. ಬಸವರಾಜ ಜಿ. ಯಳಸಂಗಿ ವಂದಿಸಿದರು. ಸೆ. ೧೩ರಂದು ಆಳಂದ ತಾಪಂ ಕಚೇರಿಯಲ್ಲಿ ಜಾಗೃತಿ ಸರಣಿ ಅಭಿಯಾನ ನಡೆಯಲಿದೆ.
ಮಾದರಿ ಕಾರ್ಯ: ಇತಿಹಾಸದಲ್ಲೇ ಪತ್ರಕರ್ತರ ಸಂಘ, ತಾಲೂಕು ಆಡಳಿತದಿಂದ ಜನರಿಗೆ ಯೋಜನೆಗಳ ಮಾಹಿತಿ ಒದಗಿಸಿ ಸೌಲಭ್ಯಗಳ ಒದಗಿಸುವುದು ಹಾಗೂ ರಾಜ್ಯದ ಮುಖ್ಯಮಂತ್ರಿಗಳ ಘೋಷಣೆಯಂತೆ ಕಾರ್ಯಕ್ರಮ ಆಡಂಬರವಿಲ್ಲದೆ, ಬರೀ ಪುಸ್ತಕ ವಿತರಣೆ, ಕೊರೊನಾ ಜಾಗೃತಿಯಂತ ಸರಳ ರೀತಿಯಂತ ಅರ್ಥಪೂರ್ಣ ಕಾರ್ಯಕ್ರಮ ಆಚರಣೆ ಇದು ರಾಜ್ಯಕ್ಕೆ ಮಾದರಿಯಾಗಿದೆ. – ಬಸವರಾಜ ಯಳಸಂಗಿ ಯುವ ಮುಖಂಡ ನಿಂಬರಗಾ
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…