ಕಲಬುರಗಿ: ದೇಶದ ಮಾಲಿನ್ಯ ನಗರಗಳಲ್ಲಿ ವಾಯುಮಾಲಿನ್ಯ ಮಾಪನಾಂಕ ಗಳನ್ನು ಪರಿಗಣಿಸಿ ನೋಡಿದಾಗ ನಗರವು ವಾಯು ಮಾಲಿನ್ಯಕ್ಕೊಳಗಾದ ನಗರವೆಂದು ತಿಳಿದಿದೆ. ಆದಕಾರಣ ನಮ್ಮ ನಗರವನ್ನು ವಾಯು ಪರಿಶುದ್ಧ ನಿರ್ಮಲ ನಗರವನ್ನಾಗಿ ಮಾಡಿ ಜನರ ಆರೋಗ್ಯ ಕಾಪಾಡುವದು ನಮ್ಮ ಆದ್ಯ ಕರ್ತವ್ಯ ಅದಕ್ಕಾಗಿ ಪೂರಕ ಕಾರ್ಯಕ್ರಮಗಳಾದ ಸಮೂಹ ಸಾರಿಗೆವ್ಯವಸ್ಥೆ ಮತ್ತು ರಸ್ತೆ ಬದಿಗಳಲ್ಲಿ ಹಸಿರೀಕರಣ ಮುಂತಾದ ಕಾರ್ಯಕ್ರಮಗಳಿಂದ ನಗರವನ್ನು ಪರಿಶುದ್ಧಗೊಳಿಸಬಹುದೆಂದು ಸಿ.ಎನ್. ಮಂಜಪ್ಪ ಪರಿಸರ ಅಧಿಕಾರಿಗಳು ಪ್ರಾದೇಶಿಕ ಕಛೇರಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಲಬುರಗಿಯವರು ಮಾತನಾಡಿದರು.
ಅವರು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾ ವಿಜ್ಞಾನ ಕೇಂದ್ರ ಕಲಬುರಗಿ ಮತ್ತು ಸಿವಿಲ್ ಇಂಜನಿಯರಿಂಗ ವಿಭಾಗ ಪಿ.ಡಿ.ಎ. ಇಂಜನಿಯರಿಂಗ ಕಾಲೇಜು ಜಂಟಿಯಾಗಿ ಕಾಲೇಜಿನ ತರಬೇತಿ ಮತ್ತು ನೇಮಕಾತಿ ಕೇಂದ್ರದ ಸಭಾಂಗಣದಲ್ಲಿ ಇಂದು ದಿನಾಂಕ ೦೭ ಸೆಪ್ಟೆಂಬರ್ ೨೦೨೧ ರಂದು ಆಯೋಜಿಸಲಾಗಿದ್ದ ಅಂತರ ರಾಷ್ಟ್ರೀಯ ನೀಲಾಕಾಶಕ್ಕೆ ಶುದ್ಧ ವಾಯು ದಿನಾಚರಣೆ ಇಂಟರನ್ಯಾಶನಲ್ ಡೇ ಆಫ್ ಕ್ಲೀನ್ ಎರ್‌ಫಾರ್ ಬ್ಲು ಸ್ಕೈ ಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಕಲಬುರಗಿ ಜಿಲ್ಲಾ ವಿಜ್ಞಾನ ಕೇಂದ್ರದ ವೈಜ್ಞಾನಿಕ ಅಧಿಕಾರಿ ಲಕ್ಷ್ಮೀನಾರಾಯಣ ರವರು ಗೌರವ ಅತಿಥಿಗಳಾಗಿ ಆಗಮಿಸಿದರು, ಕಾಲೇಜಿನ ಪ್ರಾಚಾರ್ಯರಾದ ಡಾ. ಎಸ್.ಎಸ್. ಹೆಬ್ಬಾಳ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಚಾರ್ಯರಾದ ಡಾ. ಶಶಿಧರ ಕಲಶೆಟ್ಟಿ ಸ್ವಾಗತಿಸಿದರು, ಕಾರ್ಯಕ್ರಮದ ಸಂಯೋಜಕರಾದ ಡಾ. ಬಿ.ಜಿ. ಮಹಿಂದ್ರ ಅತಿಥಿ ಪರಿಚಯ ಮಾಡಿದರು, ಸಹ ಸಂಯೋಜಕರಾದ ಪ್ರೊ. ಶಿವರಾಜ ಇಂಗನಕಲ್ ಉಪನ್ಯಾಸ ನೀಡಿದ್ದರು, ಅರ್ಚನಾ ಪ್ರಾರ್ಥಿಸಿದರು, ಪ್ರಭಾರಿ ಮುಖ್ಯಸ್ಥರಾದ ಪ್ರೊ. ಕೆ.ಎಮ್. ಗಿರಿಜಾ ವಂದಿಸಿದರು, ರಾಮೇಶ್ವರಿ ನಿರೂಪಿಸಿದರು.
ವಾಯು ಮಾಲಿನ್ಯ ನಿಯಂತ್ರಣಕ್ಕೆ ಕಡಿವಾಣ ಹಾಕಲು ಶಾಲಾ ಮಟ್ಟದಿಂದಲೇ ವಿದ್ಯಾರ್ಥಿಗಳಿಗೆ ವಾಯು ಮಾಲಿನ್ಯದ ಕುರಿತು ಅರಿವು ಮೂಡಿಸುವ ಅಗತ್ಯತೆ ಇದೆ ಇದರ ಜೋತೆಗೆ ಎಲ್ಲಾ ಕ್ಷೇತ್ರದ ಜನರ ಸಹಯೋಗದೊಂದಿಗೆ ಕಾರ್ಯ ನಿರ್ವಹಿಸುವುದು ತುಂಬಾ ಪ್ರಾಮುಖ್ಯತೆ ಎಂದು ಕಲಬುರಗಿ ಜಿಲ್ಲಾ ವಿಜ್ಞಾನ ಕೇಂದ್ರದ ವೈಜ್ಞಾನಿಕ ಅಧಿಕಾರಿ ಶ್ರೀ ಲಕ್ಷ್ಮೀನಾರಾಯಣ ರವರು ತಿಳಿಸಿದ್ದರು.
ಸುಸ್ಥಿರ ಆರೋಗ್ಯಯುಕ್ತ ಭೂಮಿಗಾಗಿ ಶುದ್ಧ ವಾಯುವಿನ ಅಗತ್ಯತೆಯ ಬಗ್ಗೆ ಪ್ರಾಚಾರ್ಯರಾದ ಡಾ. ಎಸ್.ಎಸ್. ಹೆಬ್ಬಾಳ ರವರು ತಮ್ಮ ಅಧ್ಯಕ್ಷಿಯ ಭಾಷಣದಲ್ಲಿ ವಿವರಿಸಿದ್ದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಾದ ಸಿ.ಎನ್. ಮಂಜಪ್ಪ ಮತ್ತು ಆದಮ ಪಟೇಲ ರವರು ವೈಜ್ಞಾನಿಕ ಉಪನ್ಯಾಸ ನೀಡಿದ್ದರು.
ಈ ಸಂದರ್ಭದಲ್ಲಿ ಪ್ರೌಢ ಶಾಲೆ ಮತ್ತು ಮಾಧ್ಯಮಿಕ ಶಾಲೆ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ ವಿವಿಧ ಸ್ಪರ್ಧೆ (ಕ್ವಿಜ್, ಡ್ರಾಯಿಂಗ್ ಪ್ರಬಂಧ ಸ್ಪರ್ಧೆ) ಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ಪದಕಗಳು ಹಾಗೂ ನಗದು ಬಹುಮಾನಗಳನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ದ್ವಿಚಕ್ರ ಮತ್ತು ನಾಲ್ಕು ಚಕ್ರದ ಪೆಟ್ರೋಲ್ ವಾಹನಗಳ ಉಚಿತ ಎಮಿಶನ್ ಟೆಸ್ಟ್ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಎಲ್ಲಾ ವಿಭಾಗದ ಮುಖ್ಯಸ್ಥರು, ಡೀನ್ ಅಕಾಡೆಮಿಕ್ ಹಾಗೂ. ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…