ಬಿಸಿ ಬಿಸಿ ಸುದ್ದಿ

ಗಣೇಶ ಹಬ್ಬ ಆಚರಣೆ ಅಂಗವಾಗಿ ಪೊಲೀಸ್ ಠಾಣೆಯಲ್ಲಿ ಶಾಂತಿಸಭೆ

ಸುರಪುರ: ತಾಲೂಕಿನಾದ್ಯಂತ ಗಣೇಶ ಹಬ್ಬ ಆಚರಣೆ ಅಂಗವಾಗಿ ಪಾಲಿಸಬೇಕಾದ ನಿಯಮಗಳ ಕುರಿತು ನಗರದ ಪೊಲೀಸ್ ಠಾಣೆಯಲ್ಲಿ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಹಾಗು ಪಿಐ ಸುನೀಲಕುಮಾರ ಮೂಲಿಮನಿಯವರ ನೇತೃತ್ವದಲ್ಲಿ ಶಾಂತಿ ಸಭೆ ನಡೆಸಲಾಯಿತು.

ಈ ಸಂದರ್ಭದಲ್ಲಿ ತಹಸೀಲ್ದಾರ ಸುಬ್ಬಣ್ಣ ಜಮಖಂಡಿ ಮಾತನಾಡಿ,ರಾಜ್ಯದಲ್ಲಿ ಕೊರೊನಾ ನಿಯಮಗಳು ಜಾರಿಯಲ್ಲಿರುವ ಕಾರಣದಿಂದ ಸರಕಾರ ಜಾರಿಗೊಳಿಸಿರುವ ಮಾರ್ಗಸೂಚಿಗಳನ್ವಯ ಗಣೇಶ ಹಬ್ಬವನ್ನು ಆಚರಿಸಿ,ಯಾವುದೇ ಕಾರಣಕ್ಕೂ ಸರಕಾರದ ನಿಯಮಗಳನ್ನು ಯಾರೂ ಮೀರುವಂತಿಲ್ಲ ಎಂದು ತಿಳಿಸಿದರು.ಅಲ್ಲದೆ ಈಬಾರಿ ಮಾದರಿ ಗಣೇಶ ಹಬ್ಬ ಆಚರಿಸಲು ಪ್ರತಿ ಗಣೇಶನ ಕೂಡಿಸಿದ ಸ್ಥಳದಲ್ಲಿ ಕೊರೊನಾ ಲಸಿಕೆ ಹಾಕಿಸಲು ಕ್ಯಾಂಪ್ ನಡೆಸುವಂತೆ ಸಲಹೆ ನೀಡಿದರು.

ಪೊಲೀಸ್ ಇನ್ಸ್ಪೇಕ್ಟರ್ ಸುನೀಲಕುಮಾರ ಮೂಲಿಮನಿ ಮಾತನಾಡಿ,ಸರಕಾರ ಜಾರಿಗೊಳಿಸಿರುವ ನಿಯಮಗಳಂತೆ ಗಣೇಶ ಹಬ್ಬವನ್ನು ಆಚರಿಸಬೇಕಿದೆ.ಗಣೇಶನ ಕೂಡಿಸುವ ಸ್ಥಳದಲ್ಲಿ ವಿದ್ಯುತ್ ಬಳಸಲು ಕಡ್ಡಾಯವಾಗಿ ಜೆಸ್ಕಾಂ ಇಲಾಖೆ ಪರವಾನಿಗೆ ತೆಗೆದುಕೊಂಡು,ನಂತರ ಸ್ಥಳಿಯ ನಗರಸಭೆಯಿಂದ ಪೂರ್ವಾನುಮತಿ ಪಡೆಯಬೇಕು ನಂತರ ಪೊಲೀಸ್ ಇಲಾಖೆಯ ಪರ್ಮಿಶನ್ ಕಡ್ಡಾಯವಾಗಿ ಪಡೆಯಬೇಕು ಎಂದರು.ಗಣೇಶನ ಕೂಡಿಸಿದ ಸ್ಥಳದಲ್ಲಿ ೨೦ ಜನಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ,ಸೇರಿದ ೨೦ ಜನರು ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನು ಪಾಲಿಸಬೇಕು ಮತ್ತು ಎಲ್ಲರು ಕೋವಿಡ್ ನೆಗೆಟಿವ್ ವರದಿ ಹೊಂದಿರಬೇಕು.ಪೊಲೀಸರು ಕೇಳಿದಾಗ ರಿಪೋರ್ಟ್ ತೋರಿಸಬೇಕು ಇಲ್ಲವಾದಲ್ಲಿ ಪ್ರಕರಣ ದಾಖಲಿಸುವುದಾಗಿ ತಿಳಿಸಿದರು.

ಇನ್ನು ಗಣೇಶನನ್ನು ಕೂಡಿಸಿದ ಸ್ಥಳದಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಹಾಕಿಸಬೇಕು,ಗಣೇಶನನ್ನು ಕೂಡಿಸಲು ತರುವಾಗ ಮತ್ತು ವಿಸರ್ಜಿಸಲು ಹೋಗುವಾದ ಯಾವುದೇ ಮೆರವಣಿಗೆ ನಡೆಸುವಂತಿಲ್ಲ,ಧ್ವನಿವರ್ಧಕ ಬಳಸುವಂತಿಲ್ಲ,ಗಣೇಶನ ಕೂಡಿಸುವುದ ಕೇವಲ ೫ ದಿನಗಳಿಗೆ ಮಾತ್ರ ಸೀಮಿತವಾಗಿದ್ದು ಇದಕ್ಕಿಂತಲೂ ಹೆಚ್ಚಿನ ದಿನಗಳಿಗೆ ಅವಕಾಶವಿಲ್ಲ ಎಂದರು.ಗಣೇಶನನ್ನು ವಿಸರ್ಜಿಸುವುದಾದರೆ ಸ್ಥಳಿಯ ನಗರಸಭೆ ಅಥವಾ ಜಿಲ್ಲಾ ಅಥವಾ ತಾಲೂಕು ಆಡಳಿತ ನಿಗದಿಪಡಿಸಿದ ಹೊಂಡ ಅಥವಾ ಮೊಬೈಲ್ ಟ್ಯಾಂಕ್‌ಗಳಲ್ಲಿ ವಿಸರ್ಜಿಸುವಂತೆ ತಿಳಿಸಿದರು.ಇನ್ನು ಗಣೇಶನ ಕೂಡಿಸಿದ ಸ್ಥಳದಲ್ಲಿ ಯಾವುದೇ ಜೂಜು ಮತ್ತಿತರೆ ಅನೈತಿಕ ಚಟುವಟಿಕೆ ಕಂಡುಬಂದಲ್ಲಿ ಅಂತವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ವೆಂಕಟೇಶ ಬೇಟೆಗಾರ,ವೆಂಕೋಬದೊರೆ ಬೊಮ್ಮನಹಳ್ಳಿ,ಉಸ್ತಾದ ವಜಾಹತ್ ಹುಸೇನ್,ರಾಮ್‌ಸೇನಾ ತಾಲೂಕು ಅಧ್ಯಕ್ಷ ಶರಣು ನಾಯಕ,ಇಕ್ಬಾಲ್ ಮುಫ್ತಿ ಒಂಟಿ,ಧರ್ಮರಾಜ ಬಡಿಗೇರ,ಮಲ್ಲು ಬಾದ್ಯಾಪುರ ಸೇರಿದಂತೆ ಅನೇಕರು ಮಾತನಾಡಿ,ಸರಕಾರದ ನಿಯಮಗಳನ್ನು ಪಾಲಿಸೋಣ ಆದರೆ ಕೆಲವು ಬಾರಿ ಗೊತ್ತಿಲ್ಲದೆ ಸಣ್ಣ ಪುಟ್ಟ ಲೋಪಗಳಾದಲ್ಲಿ ಅವುಗಳನ್ನು ಸರಿಪಡಿಸಿಕೊಳ್ಳಲು ಅವಕಾಶ ನೀಡುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ವೇದಿಕೆ ಮೇಲೆ ಪಿಎಸ್‌ಐ ಕೃಷ್ಣಾ ಸುಬೇದಾರ ಇದ್ದರು.ಪೊಲೀಸ್ ಪೇದೆ ದಯಾನಂದ ಜಮಾದಾರ್ ಸಭೆ ನಿರೂಪಿಸಿ ವಂದಿಸಿದರು,ಸಭೆಯಲ್ಲಿ ವಿವಿಧ ಸಂಘಟನೆಗಳ ಅನೇಕ ಮುಖಂಡರು ಭಾಗವಹಿಸಿದ್ದರು.

emedialine

Recent Posts

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

3 hours ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

13 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

13 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

16 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

16 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

16 hours ago