ಬಿಸಿ ಬಿಸಿ ಸುದ್ದಿ

ದೆಹಲಿಯ ಸಿವಿಲ್ ಡಿಪೆನ್ಸ್ ಮಹಿಳಾ ಅಧಿಕಾರಿಯ ಹತ್ಯೆ ಖಂಡಿಸಿ ಪ್ರತಿಭಟನೆ

ಆಳಂದ: ದೆಹಲಿಯಲ್ಲಿ ಅ.೨೬ರಂದು ಸಾಬೀಯಾ ಅಲಿಯಾಸ್ ರಾಬಿಯಾ ಎಂಬ ಮಹಿಳಾ ಸಿವಿಲ್ ಡಿಪೆನ್ಸ್ ಅಧಿಕಾರಿಯ ಅತ್ಯಾಚಾರ ಹತ್ಯೆ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ತಾಲೂಕು ದಲಿತ ಸೇನೆ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ಕೈಗೊಂಡು ಒತ್ತಾಯಿಸಿದರು.

ಪಟ್ಟಣದ ತಹಸೀಲ್ದಾರ ಕಚೇರಿಯ ಮುಂದೆ ಸೇನೆಯ ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಾರ್ಜುನ ಬೋಳಣಿ ಹಾಗೂ ತಾಲೂಕು ಅಧ್ಯಕ್ಷ ಧರ್ಮಾ ಬಂಗರಗಾ ನೇತೃತ್ವದಲ್ಲಿ ಪ್ರತಿಭಟನೆ ಕೈಗೊಂಡ ಕಾರ್ಯಕರ್ತರು ಗ್ರೇಡ್-೨ ತಹಸೀಲ್ದಾರ ಬಸವರಾಜ ರಕ್ಕಸಗಿ ಅವರ ಮೂಲಕ ರಾಷ್ಟ್ರಪತಿಗಳಿಗೆ ಬೇಡಿಕೆಯ ಮನವಿ ಸಲ್ಲಿಸಿ ಒತ್ತಾಯಿಸಿದರು.

ದೆಹಲಿಯಲ್ಲಿ ಮತ್ತೊಮ್ಮೆ ನಿರ್ಭಯಕ್ಕಿಂತ ಭೀಕರ ಘಟನೆ ನಡೆದುಹೋಗಿದೆ. ಅಲ್ಲಿನ ಜಿಲ್ಲಾ ಮ್ಯಾಜೆಸ್ಟ್ರೇಟ್ ಜೊತೆ ಕೆಲಸ ಮಾಡುತ್ತಿದ್ದ ಸಾಬೀಯಾ ಉರ್ಫ್ ರಾಬಿಯಾ ಎಂಬುವ ೨೧ ವರ್ಷದ ಮಹಿಳಾ ಸಿವಿಲ್ ಡಿಪೆನ್ಸ್ ಅಧಿಕಾರಿಯ ಹತ್ಯೆ ಘಟನೆ ಅತ್ಯಂತ ಭಯಾನಕ ಹಾಗೂ ಅಘಾತಕಾರಿಯಾಗಿದೆ. ಈ ಕೃತ್ಯ ಎಸಗಿದ ದುಷ್ಕರ್ಮಿಗಳು ಆಕೆಯ ಸ್ತನಗಳನ್ನು ಕತ್ತರಿಸಿ ಕುತ್ತಿಗೆಯನ್ನು ಸೀಳಿ ಮತ್ತು ಆಕೆಯ ಗುಪ್ತಾಂಗಗಳನ್ನು ವಿರೂಪಗೊಳಿಸಿದ ವರದಿ ಮಾನವ ಜನಾಂಗವನ್ನು ತಲೆತಗ್ಗಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಘಟನೆಗೆ ಮುಖ್ಯ ಕಾರಣ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿಯಲ್ಲಿ ಭ್ರಷ್ಟಾಚಾರ ಹಾಗೂ ಅವ್ಯವಹಾರಗಳು ಎಗಿಲ್ಲದೆ ನಡೆಯುತ್ತಿದ್ದವು. ಈ ಕಚೇರಿಯ ಒಳಗೆ ಪ್ರತಿದಿನ ೩ರಿಂದ ೪ ಲಕ್ಷ ರೂಪಾಯಿ ಭ್ರಷ್ಟಾಚಾರದ ಹಣವನ್ನು ಠೇವಣಿ ಇಡಲಾಗುತ್ತಿತ್ತು. ಇಂಥ ಹಣವನ್ನು ಇಡಲು ರಹಸ್ಯ ಲಾಕರ್, ರಹಸ್ಯ ಬೀಗದಂತಹ ಅನೇಕ ಸಂಗತಿಗಳನ್ನು ಮರೆ ಮಾಚಲು ಅಕೆಯನ್ನು ಹತ್ಯೆ ಮಾಡಲಾಗಿದೆ ಎಂದು ಸಂತ್ರಸ್ಥರ ಕುಟುಂಬವು ಆರೋಪಿಸಿದೆ ಎಂದರು.

ಇಂತಹ ಘೋರ ಅಪರಾಧಗಳು ದೆಹಲಿಯ ಮತ್ತು ಯುಪಿಯಲ್ಲಿ ಪದೇ ಪದೇ ನಡೆಯುತ್ತಲೇ ಇವೆ. ಈ ಪ್ರಕರಣವಾಗಿ ಇಷ್ಟು ದಿನವಾದರೂ ನಿಜಾಮುದ್ದಿನ ಎಂಬ ಆರೋಪಿಯನ್ನು ಹೊರತು ಪಡಿಸಿ ಯಾರನ್ನು ಸಹ ಪೊಲೀಸರು ಬಂಧಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಪ್ರಕರಣವನ್ನು ತಿರುಚುವ ಹಾಗೂ ಮುಚ್ಚಿಹಾಕುವ ಪ್ರಯತ್ನ ಕೂಡ ನಡೆದ ಬಗ್ಗೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಕೂಡಲೇ ಘನವೆತ್ತ ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸಿ ಸಂತ್ರಸ್ಥರ ಕುಟುಂಬಕ್ಕೆ ನ್ಯಾಯ ಒದಗಿಸಿ ಕೃತ್ಯ ಎಸಗಿದ ಆರೋಪಿಗಳನ್ನು ಜೀವಾವಧಿ ಶಿಕ್ಷೆಗೆ ಒಳಡಿಸಬೆಕು ಎಂದು ಆಗ್ರಹಿಸಿದರು.

ಈ ಪ್ರಕರಣವನ್ನು ಮುಚ್ಚಿ ಹಾಕುವ ಅಥವಾ ತಿರುಚುವ ಪ್ರಯತ್ನ ಮಾಡಿದರೆ ಇಡೀ ದೇಶದಲ್ಲಿ ದಲಿತ ಸೇನೆಯಿಂದ ಉಗ್ರವಾಗಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಮನವಿ ಸ್ವೀಕರಿಸಿದ ಗ್ರೇಡ್-೨ ತಹಸೀಲ್ದಾರ ಬಸವರಾಜ ರಕ್ಕಸಗಿ ಅವರು ಈ ಕುರಿತು ಮೇಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಕಳುಹಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.

ಮಲ್ಲಿಕಾರ್ಜುನ ಬೋಳಣಿ, ಧರ್ಮಾ ಬಂಗರಗಾ, ಮಹೇಶ ಕೊಚ್ಚಿ, ಹಣಮಂತ ಗಾಯಕವಾಡ, ಪುರಸಭೆ ಸದಸ್ಯ ಶಿವುಪುತ್ರ ನಡಗೇರಿ, ಮಲ್ಲಿನಾಥ ಚಿಂಚೋಳಿ, ದಿಲೀಪ ಮಂಟಗಿ, ಜೈಭೀಮ ಕಂಟೆಕೂರೆ, ಚಂದ್ರಶಾ ಗಾಯಕವಾಡ, ಮಂಜುನಾಥ ಸಿಂಗೆ, ಮಹಿಂದ್ರ ಸಿಂಗೆ, ದತ್ತಾ ಕಟ್ಟಿಮನಿ ಮತ್ತು ಆಕಾಶ ಬಿ. ವಾಘ್ಮೋರೆ ಸೇರಿದಂತೆ ಮತ್ತಿತರು ಪಾಲ್ಗೊಂಡಿದ್ದರು.

emedialine

Recent Posts

ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಸಂವಿಧಾನ ಓದು ಕಾರ್ಯಕ್ರಮ

ಕಲಬುರಗಿ: ಸ್ಲಂ ಜನರ ಸಂಘಟನೆ ಕರ್ನಾಟಕ ವತಿಯಿಂದ ಆಯೋಜಿಸಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತ ಹೈ -ಕೋರ್ಟ್ ರಸ್ತೆ…

8 hours ago

ಶೋಷಿತ ಜನಜಾಗೃತಿ ವೇದಿಕೆ ವತಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಮನವಿ

ಕಲಬುರಗಿ: ಕರ್ನಾಟಕ ರಾಜ್ಯದ ಕಲಬುರಗಿ-ಜಿಲ್ಲೆಯಲ್ಲಿ ದಲಿತ (ಮಾದಿಗ) ಸಮುದಾಯದವರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳು ಸಾಲ ಸೌಲಭ್ಯ ನೀಡದಿರುವ ಕುರಿತು ಶೋಷಿತ ಜನಜಾಗೃತಿ…

8 hours ago

ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರು: ಡಾ. ಎಸ್.ಎಸ್. ಗುಬ್ಬಿ ಬೇಸರ

ಕಲಬುರಗಿ: ಪ್ರಶಸ್ತಿ ಪುರಸ್ಕೃತರು ಸನ್ಮಾನ ಸಮಾರಂಭಕ್ಕೆ ಗೈರಾಗಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ವೈದ್ಯ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ…

8 hours ago

ಹಣೆಯ ಮೇಲೆ ಹಚ್ಚಿದ ವಿಭೂತಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ: ಅರ್ಪಿತಾ ಪಾಟೀಲ

ಕಲಬುರಗಿ: ಹಣೆಯ ಮೇಲೆ ಹಚ್ಚಿದ ವಿಭೂತಿ ಸಮಾನತೆ ಸಾರುವದರೊಂದಿಗೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಆರಾಧನಾ ಪದವಿ ಪೂರ್ವ ಕಾಲೇಜಿನ…

8 hours ago

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಸಂವಿಧಾನ ದಿನ ಆಚರಣೆ

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಸಂವಿಧಾನ ದಿನವನ್ನು ಸರ್ಕಾರದ ಸುತ್ತೋಲೆ ಆದೇಶದಂತೆ ಕಾರಾಗೃಹದ ಲಿಪಿಕ/ ಕಾನಿನಿರ್ವಹಕ ಅಧಿಕಾರಿ/ಸಿಬ್ಬಂದಿಯವರೊಂದಿಗೆ ಡಾ|| ಬಾಬಾ ಸಾಹೇಬ್…

8 hours ago

ಸಂವಿಧಾನವನ್ನು ರಕ್ಷಿಸಲು ಜವಾಬ್ದಾರಿ ಯುವಕರು ಮೇಲಿದೆ : ಹಿರಿಯ ವಕೀಲ ವೈಜನಾಥ ಎಸ್ ಝಳಕಿ

ಕಲಬುರಗಿ; ಸಂವಿಧಾನವನ್ನು ರಕ್ಷಿಸಲು ಮತ್ತು ಜನರಲ್ಲಿ ಸಂವಿಧಾನದ ಮೇಲಿನ ನಂಬಿಕೆಯನ್ನು ಬಲಪಡಿಸಲು ಜಾಗೃತ ಶಕ್ತಿಯಾಗಿ ಕಾರ್ಯನಿರ್ವಹಿಸುವ ಗುರುತರವಾದ ಜವಾಬ್ದಾರಿಯನ್ನು ದೇಶದ…

8 hours ago