ಶಹಾಪುರ: ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಾ ಸಾವು ಮತ್ತು ಬದುಕಿನ ಮಧ್ಯೆ ಹೋರಾಟ ನಡೆಸಿದ ರೋಗಿಯನು ಕೊನೆಗೂ ವೈದ್ಯರ ತಂಡವೊಂದನ್ನು ಪ್ರಾಣ ಉಳಿಸುವಲ್ಲಿ ಯಶಸ್ವಿಯಾಗಿರುವ ಘಟನೆ ಶಹಾಪುರದ ಶ್ರೀಅಚ್ಚಪ್ಪಗೌಡ ಸುಬೇದರ್ ಸ್ಮಾರಕ ಆಸ್ಪತ್ರೆಯಲ್ಲಿ ಜರುಗಿದೆ.
ಶಹಾಪುರ ತಾಲೂಕಿನ ಗಂಗನಾಳ ಗ್ರಾಮದ ನಿವಾಸಿ ಬೀರಪ್ಪ(28) ಎಂಬ ವ್ಯಕ್ತಿ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಾ ಸುಬೇದಾರ ಆಸ್ಪತ್ರೆಗೆ ಬಂದಾಗ ಅಲ್ಲಿನ ವೈದ್ಯರಾದ ಡಾ. ಚಂದ್ರಶೇಖರ್ ಸುಬೇದಾರ್ ಆತನನ್ನು ಪರೀಕ್ಷೆಗೆ ಒಳಪಡಿಸಿ ರೋಗಿಯ ಹೊಟ್ಟೆಯಲ್ಲಿನ ದೊಡ್ಡ ಕರುಳಿಗೆ ರಂಧ್ರ ಬಿದ್ದಿದೆ ಎಂದು ಖಚಿತಪಡಿಸಿದರು.
ಸಮಯ ಕಳೆದಂತೆಲ್ಲ ರೋಗಿಯ ಹೊಟ್ಟೆ ನೋವು ತುಂಬಾ ಜಾಸ್ತಿ ಆಗ ತೊಡಗಿದಾಗ ಕಲಬುರ್ಗಿಯ ವೈದ್ಯರೊಂದಿಗೆ ಡಾ. ಚಂದ್ರಶೇಖರ ಸುಬೇದಾರ್ ಮಾತನಾಡಿ ಸಮಗ್ರವಾದ ವಿಷಯವನ್ನು ಅವರೊಂದಿಗೆ ಹಂಚಿಕೊಂಡಾಗ 2 ಗಂಟೆಯ ಒಳಗಾಗಿ ಆ ರೋಗಿಗೆ ಚಿಕಿತ್ಸೆ ಮಾಡದಿದ್ದರೆ ಬದುಕುವುದು ಬಹಳ ಕಷ್ಟ ಎಂದು ಕಲಬುರ್ಗಿ ವೈದ್ಯರು ಸ್ಪಷ್ಟಪಡಿಸಿದರು.
ಆಗ ಡಾ. ಚಂದ್ರಶೇಖರ್ ಸುಬೇದಾರರು ಅವರನ್ನು ಕೂಡಲೇ ಶಹಾಪುರ ಪಟ್ಟಣದ ಶ್ರೀಅಚ್ಚಪ್ಪಗೌಡ ಸುಬೇದಾರ್ ಆಸ್ಪತ್ರೆಗೆ ಬರಲು ಹೇಳಿದಾಗ ಕೇವಲ 1 ತಾಸಿನಲ್ಲಿ ಕಲಬುರ್ಗಿಯಿಂದ ವೈದ್ಯರಾದ ದಾ. ಅಭಿಷೇಕ್ ರೆಡ್ಡಿ ಪಲ್ಲಾ, ಹಾಗೂ ಡಾ.ಶರಣರೆಡ್ಡಿ ತಂಡ ಆಗಮಿಸಿ ಚಿಕಿತ್ಸೆ ಮಾಡಿ ಆ ರೋಗಿಯ ಪ್ರಾಣ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಡ ರೋಗಿಯ ಪ್ರಾಣ ಉಳಿಸಿದ ಶ್ರೇಯಸ್ಸು ಆ ಚಿಕಿತ್ಸಾ ತಂಡದ ವೈದ್ಯರಿಗೂ ಹಾಗೂ ಅಚ್ಚಪ್ಪಗೌಡ ಸುಬೇದಾರ ಸ್ಮಾರಕ ಆಸ್ಪತ್ರೆಯ ಆಡಳಿತ ಮಂಡಳಿಯವರಿಗೂ ಸಲ್ಲುತ್ತದೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…