ಸುರಪುರ: ಆನಂದದಾಸರ ಆರಾಧನಾ ಸಮಿತಿ ಹಾಗೂ ಕನ್ನಡ ಸಾಹಿತ್ಯ ಸಂಘ ಸಹಯೋಗದಲ್ಲಿ ಶುಕ್ರವಾರ ಹಾಗೂ ಶನಿವಾರದಂದು ಎರಡು ದಿನಗಳವರೆಗೆ ಗಾನಗಂಧರ್ವ ಸುರಪುರದ ಆನಂದದಾಸರ ಆರಾಧನಾ ಮಹೋತ್ಸವವನ್ನು ಆಚರಿಸಲಾಯಿತು.
ಶುಕ್ರವಾರದಂದು ಸಂಜೆ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಕಲಾವಿದ ಹಳ್ಳೆರಾವ ಕುಲಕರ್ಣಿ ಕೆಂಭಾವಿ ವಿರಚಿತ ಆನಂದದಾಸರ ಭಾವಚಿತ್ರವನ್ನು ಸುರಪುರ ಸಂಸ್ಥಾನದ ಅರಸು ವಂಶಸ್ಥರಾದ ರಾಜಾ ಕೃಷ್ಣಪ್ಪ ನಾಯಕ ಅನಾವರಣಗೊಳಿಸಿದರು ನಂತರ ದೇವಸ್ಥಾನದಿಂದ ದರಬಾರವರೆಗೆ ಭಾವಚಿತ್ರದ ಶೋಭಾಯಾತ್ರೆ ನಡೆಯಿತು.
ಸಾಯಂಕಾಲ ದರಬಾರ ಆವರಣದಲ್ಲಿ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ,ಭರತನಾಟ್ಯ,ಕವಿಗೋಷ್ಠಿ ಹಾಗೂ ಸಂಗೀತ ಕಾರ್ಯಕ್ರಮವನ್ನು ರಾಜಾ ಕೃಷ್ಣಪ್ಪ ನಾಯಕ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿದ್ದ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಬಸವರಾಜ ಜಮದ್ರಖಾನಿ ಮಾತನಾಡಿ ಸುರಪುರ ನಾಡು ದಾಸರು,ಶರಣರು,ಸಂತರು ಜನಿಸಿದ ಪುಣ್ಯಭೂಮಿ ಆಗಿದ್ದು ಈ ನಾಡಿನಲ್ಲಿ ಆಗಿ ಹೋದ ಸುರಪುರ ಸಂಸ್ಥಾನದ ಅರಸರ ರಾಜಾಶ್ರಯದಲ್ಲಿದ್ದ ಗಾನಗಂಧರ್ವ ಆನಂದದಾಸರು ತಮ್ಮ ಕೀರ್ತನೆಗಳ ಮೂಲಕ ಮನೆ ಮಾತಾಗಿದ್ದರು ಮೈಸೂರು ಮಹಾರಾಜರಿಂದ ಕನಕಾಭಿಷೇಕ ನೆರವೇರಿಸಿಕೊಂಡ ಅವರು ಸುರಪುರ ಸಂಸ್ಥಾನವನ್ನು ಮರೆಯಲಿಲ್ಲ ತಮ್ಮ ಕೊನೆಯ ದಿನಗಳನ್ನು ಇಲ್ಲಿಯೇ ಕಳೆದರು ಎಂದು ಹೇಳಿದರು.
ಈ ಭಾಗದಲ್ಲಿ ಆಗಿ ಹೋದ ಇಂತಹ ದಾಸವರೇಣ್ಯರನ್ನು ಈ ಭಾಗದ ಜನರಿಗೆ ತಿಳಿಸುವ ಉದ್ದೇಶದಿಂದ ಆರಾಧನೆಯನ್ನು ನೆರವೇರಿಸಲಾಗಿದ್ದು ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಫರ್ಧೆಗಳನ್ನು ಏರ್ಪಡಿಸಿ ಪ್ರೋತ್ಸಾಹಿಸುವ ಕೆಲಸ ಕೈಗೊಳ್ಳಲಾಗಿದೆ ಎಂದು ಹೇಳಿದರು,ಮುಂಬರುವ ನಾಡಹಬ್ಬವನ್ನು ಕೋವಿಡ್ ಪ್ರಯುಕ್ತ ಸರಳವಾಗಿ ಆಚರಿಸಲಾಗುತ್ತಿದ್ದು ಮಕ್ಕಳಿಗಾಗಿ ಕೆಲವು ಸ್ಪರ್ಧೆಗಳನ್ನು ಆಯೋಜಿಸುವ ಉದ್ದೇಶವಿದೆ ಎಂದು ತಿಳಿಸಿದರು.
ಸಮಿತಿಯ ಅಧ್ಯಕ್ಷರಾದ ಕೇದಾರನಾಥಶಾಸ್ತ್ರಿ ಯಾಳಗಿಕರ ಅಧ್ಯಕ್ಷತೆ ವಹಿಸಿದ್ದರು, ನರಸಿಂಹ ಭಂಡಿ ನಿರೂಪಿಸಿದರು ರಾಘವೇಂದ್ರ ಭಕ್ರಿ ಸ್ವಾಗತಿಸಿದರು ಹಾಗೂ ಕಮಲಾಕರ ಎ ವಂದಿಸಿದರು, ರಾತ್ರಿ ಸ್ಥಳೀಯ ಕಲಾವಿದರಿಂದ ನಂತರ ಖ್ಯಾತ ದೂರದರ್ಶನ ಹಾಗೂ ರೇಡಿಯೋ ಕಲಾವಿದರಾದ ಬಸವರಾಜ ಭಂಟನೂರ ಹಾಗೂ ಕಲಾವಿದ ಹಳ್ಳೆರಾವ ಕುಲಕರ್ಣಿ ಅವರಿಂದ ಕುಂಚ ಗಾಯನ,ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಹಾಗೂ ಕಲಾವಿದ ಚಂದ್ರಶೇಖರ ಗೋಗಿ ಅವರಿಂದ ಕೊಳಲುವಾದನ ನಡೆಯಿತು.
ಜೆ.ಅಗಸ್ಟಿನ್,ಯಮುನೇಶ ಯಾಳಗಿ ಹಾಗೂ ರಾಜಶೇಖರ ಗೆಜ್ಜಿ ತಬಲಾ ಸಾಥ ನೀಡಿದರು,ಈ ಸಂದರ್ಭದಲ್ಲಿ ಗಣೇಶ ಜಾಗೀರದಾರ,ಭೀಮಶೇನಾಚಾರ್ಯ ಮಂಗಳೂರು,ವಿಷ್ಣುಪ್ರಕಾಶ ಜೋಷಿ,ಪ್ರಾಣೇಶಾಚಾರ್ಯ ಗುಡಿ ಇತರರು ಇದ್ದರು.
ಕಲಬುರಗಿ: ನ.25 ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಕಮಲಾಪುರ ಮತ್ತು ಕಲಬುರಗಿ ವತಿಯಿಂದ ಧರ್ಮಾಧಿಕಾರಿ ಡಾ.…
ಕಲಬುರಗಿ: ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್, ಐಟಿ, ಬಿಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರೀಯಾಂಕ್ ಖರ್ಗೆ ಅವರ 46ನೇ ವರ್ಷದ…
ಕಲಬುರಗಿ: ವಕ್ಫ್ ಬೋರ್ಡ್ ವಿರುದ್ಧ ಹೋರಾಟ ಮಾಡುತ್ತಿರುವ ಯತ್ನಾಳ ಟೀಮ್ ಗೆ ಬೆಂಬಲವಿಲ್ಲ ಭಾರತೀಯ ಜನತಾ ಪಕ್ಷದ ಯುವ ಮುಖಂಡ…
ಕಲಬುರಗಿ: ನ.25- ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆ-2024 ಜಾರಿಗೆ ತರಲು ಮುಂದಾಗಿದ್ದನ್ನು ಆಲ್ ಇಂಡಿಯಾ ಮುಸ್ಲೀಮ ವೈಯಕ್ತಿಕ ಕಾನೂನು…
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…