ಬಿಸಿ ಬಿಸಿ ಸುದ್ದಿ

ಸಾಲದ ಹಣದಲ್ಲಿ ಮೋಜು ಮಾಡದೆ ಒಳ್ಳೆ ಕೆಲಸಕ್ಕೆ ಉಪಯೋಗಿಸಿಕೊಳ್ಳಿ: ರಾಜುಗೌಡ

ಸುರಪುರ: ನಾನು ಮೂರು ಬಾರಿ ಶಾಸಕನಾಗಿದ್ದರು ಮೊದಲ ಬಾರಿಗೆ ರೈತರನ್ನು ಹೀಗೆ ಕಾರ್ಯಕ್ರಮದಲ್ಲಿ ಕರೆದು ಸಹಕಾರಿ ಸಾಲ ನೀಡುತ್ತಿರುವುದು ಇದೆ ಮೊದಲಬಾರಿ ನೋಡುತ್ತಿರುವುದು ತೃಪ್ತಿದಾಯಕ ಕೆಲಸವಾಗಿದೆ ಎಂದು ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಅಧ್ಯಕ್ಷರು ಮತ್ತು ಶಾಸಕರಾದ ನರಸಿಂಹ ನಾಯಕ (ರಾಜುಗೌಡ) ಮಾತನಾಡಿದರು.

ನಗರದ ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ಸಹಕಾರಿ ಸಂಘದ ಸದಸ್ಯ ರೈತರಿಗೆ ಬಡ್ಡಿ ರಹಿತ ಸಾಲ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ,ನನ್ನ ಮತಕ್ಷೇತ್ರದ 15 ಸಾವಿರ ರೈತರಿಗೆ ತಲಾ 25 ಸಾವಿರ ರೂಪಾಯಿಗಳ ಸಾಲ ನೀಡಲಾಗುತ್ತಿದೆ.ದಯವಿಟ್ಟು ರೈತರು ಯಾವುದೇ ಮದ್ಯವರ್ತಿಗಳಿಗೆ ಒಂದು ರೂಪಾಯಿಯನ್ನು ನೀಡಬೇಡಿ ಸಾಲದ ಹಣ ನೇರವಾಗಿ ನಿಮ್ಮ ಖಾತೆಗೆ ಜಮಾ ಆಗಲಿದೆ ಎಂದು ತಿಳಿಸಿದರು.

ಅಲ್ಲದೆ ಈ ಸಾಲವನ್ನು ಒಂದು ವರ್ಷದ ನಂತರ ಬಡ್ಡಿ ಇಲ್ಲದೆ ಮರಳಿ ಕಟ್ಟಿದಲ್ಲಿ ಮುಂದಿನ ವರ್ಷ 50 ಸಾವಿರ ಸಾಲ ಪಡೆಯಲು ಸಾಧ್ಯವಾಗಲಿದೆ. ಆದ್ದರಿಂದ ಸಾಲ ಸಕಾಲಕ್ಕೆ ಮರಳಿಸುವಂತೆ ತಿಳಿಸಿದರು.

ನಮ್ಮ ಯಾದಗಿರಿ ಜಿಲ್ಲೆಗೆ ಸಹಕಾರಿ ಬ್ಯಾಂಕ್ ತರುವ ಕೆಲಸ ಮಾಡುವೆ,ಇನ್ನು ಕೆಲ ತಿಂಗಳುಗಳಲ್ಲಿ ಕೇಂದ್ರ ಹಣಕಾಸು ನಿರ್ಮಲಾ ಸೀತಾರಾವiನ್ ಅವರು ನಮ್ಮ ಜಿಲ್ಲೆಗೆ ಆಗಮಿಸಲಿದ್ದು,ಅವರು ಬಂದ ನಂತರ ಸಹಕಾರಿ ಕ್ಷೇತ್ರಕ್ಕೆ ಇನ್ನೂ ಹೆಚ್ಚಿನ ನೆರವು ಸಿಗಲಿದೆ ಎಂದರು.

ನಮ್ಮ ಕಲಬುರ್ಗಿ ಯಾದಗಿರಿ ಸಹಕಾರಿ ಬ್ಯಾಂಕ್ ತುಂಬಾ ನಷ್ಟದಲ್ಲಿದ್ದಾಗ ರಾಜಕುಮಾರ ಪಾಟೀಲ್ ತೇಲ್ಕೂರ್ ಅಧ್ಯಕ್ಷರಾಗಿ ಮತ್ತು ಸುರೇಶ ಸಜ್ಜನ್ ಉಪಾಧ್ಯಕ್ಷರಾಗಿ ಬಂದು ಉತ್ತಮ ಕೆಲಸ ಮಾಡಿದ್ದಾರೆ.ಅಲ್ಲದೆ ಬ್ಯಾಂಕ್ ಅಭೀವೃಧ್ಧಿಗಾಗಿ 200 ಕೋಟಿ ರೂಪಾಯಿಗಳ ಅನುದಾನ ದೊರೆಯಲು ಕಾರಣಿಭೂತರಾದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೂ ಮತ್ತು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾದ ಬೆಳ್ಳಿ ಪ್ರಕಾಶ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಪ್ರತಿ 4 ಸಾವಿರ ಎಕರೆಗೆ ಒಂದು ಸಹಕಾರಿ ಬ್ಯಾಂಕ್ ತೆರಯಲು ಅವಕಾಶವಿದೆ,ಸದ್ಯ ಪ್ರತಿ ಗ್ರಾಮ ಪಂಚಾಯತಿಗೆ ಒಂದು ಆರಂಭಿಸಿ ಮುಂದೆ ನಿಯಮದಂತೆ ಹೆಚ್ಚಿನ ಬ್ಯಾಂಕ್‍ಗಳನ್ನು ಆರಂಭಿಸುವ ಭರವಸೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಲಬುರಗಿ ಯಾದಗಿರಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ ಸಜ್ಜನ್ ಮಾತನಾಡಿ,ಇಂದು ಸೂಗುರು, ದೇವಿಕೇರಾ, ಹೆಮನೂರು, ಪೇಠ ಅಮ್ಮಾಪುರ, ಖಾನಾಪುರ ಎಸ್.ಹೆಚ್, ದೇವರಗೋನಾಲ ಮತ್ತು ತಿಂಥಣಿ ಭಾಗದ ರೈತರಿಗೆ ಸಾಲ ವಿತರಣೆ ಮಾಡುತ್ತಿದ್ದು,ಇದು ಒಂದು ವರ್ಷದ ಅವಧಿಗೆ ಬಡ್ಡಿ ರಹಿತವಾಗಿದೆ,ಒಂದು ವರ್ಷಕ್ಕೆ ಕಟ್ಟದಿದ್ದಲ್ಲಿ ಪ್ರತಿಶತ ಶೇ 16 ಬಡ್ಡಿದರ ವಿಧಿಸಲಾಗುವುದು ಎಂದು ತಿಳಿಸಿದರು.

ಅಲ್ಲದೆ ನಮ್ಮ ತಾಲೂಕಿನಲ್ಲಿ ಇನ್ನೂ ಅನೇಕ ಸಹಕಾರಿ ಬ್ಯಾಂಕ್ ಆರಂಭಿಸಬೇಕಿದೆ ಎಂದರಲ್ಲದೆ,ಡಿಸಿಸಿ ಬ್ಯಾಂಕ್‍ಗೆ 200 ಕೋಟಿ ದೊರೆಯಲು ಕಾರಣಿಭೂತರಾದ ಶಾಸಕರಾದ ರಾಜುಗೌಡ ಅವರಿಗೆ ಧನ್ಯವಾದ ತಿಳಿಸಿದರು.

ಇದೇ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಬಾಪುಗೌಡ ಪಾಟೀಲ್ ಪ್ರಸ್ತಾವಿಕವಾಗಿ ಹಾಗು ದೇವಿಕೇರಿ ಸಹಕಾರಿ ಬ್ಯಾಂಕ್ ಅಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ ಮಾತನಾಡಿದರು.

ಇದೇ ಸಂದರ್ಭದಲ್ಲಿ ಕೃಷಿ ಸಾಹಿತಿ ಶಾಂತಪ್ಪ ಬೂದಿಹಾಳರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು. ನಂತರ ಪೇಠ ಅಮ್ಮಾಪುರ ಸೇರಿದಂತೆ ಅನೇಕ ಗ್ರಾಮಗಳ ಸಹಕಾರಿ ಸದಸ್ಯ ರೈತರಿಗೆ ಸಾಂಕೇತಿಕವಾಗಿ ಸಾಲದ ಚೆಕ್‍ಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದ ವೇದಿಕೆ ಮೇಲೆ ಡಿಸಿಸಿ ಬ್ಯಾಂಕ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಚಿದಾನಂದ ನಿಂಬಾಳ,ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ರಾಮನಗೌಡ ಸುಬೇದಾರ,ಎಪಿಎಮ್‍ಸಿ ಅಧ್ಯಕ್ಷ ದುರ್ಗಪ್ಪ ಗೋಗಿಕೇರಿ ಮುಖಂಡರಾದ ಬಸವರಾಜ ಸ್ವಾಮಿ ಸ್ಥಾವರಮಠ,ದೊಡ್ಡದೇಸಾಯಿ ದೇವರಗೋನಾಲ, ಗ್ಯಾನಚಂದ್ ಜೈನ್,ಯಲ್ಲಪ್ಪ ಕುರಕುಂದಿ, ಹೆಚ್.ಸಿ.ಪಾಟೀಲ್,ಸಿದ್ದನಗೌಡ ಕರಿಬಾವಿ,ಮಲ್ಲಿಕಾರ್ಜುನ ಛಲವಾದಿ, ಶರಣಬಸಪ್ಪ ಕನಗುಂಡ,ಬಸವರಾಜ ಕುಂಬಾರ,ಶಿವಲಿಂಗಪ್ಪ ವೆಂಕಟಗಿರಿ ಸೇರಿದಂತೆ ಎಲ್ಲಾ ಕೃಷಿ ಸಹಕಾರಿ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಹಾಗು ನೂರಾರು ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಶಿವರುದ್ರ ಉಳ್ಳಿ ಸ್ವಾಗತಿಸಿದರು,ಅಮರಯ್ಯಸ್ವಾಮಿ ಜಾಲಿಬೆಂಚಿ ವಂದಿಸಿದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

21 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago