ಬಿಸಿ ಬಿಸಿ ಸುದ್ದಿ

ಪ್ರತಿಯೊಬ್ಬರೂ ಕೋವಿಡ್ ಲಸಿಕೆಯನ್ನು ಪಡೆಯಬೇಕು: ವಿಶಾಲ ದರ್ಗಿ

ಕಲಬುರಗಿ: ಮಹಿಳೆಯರಿಗೆ ದಿನಸಿ ಕಿಟ್ ಗಳನ್ನು ವಿತರಿಸಿ ಪ್ರಸ್ತುತ ಕೋವಿಡ್ ೧೯ ಹಾವಳಿ ಇನ್ನು ಇರುವದರಿಂದ ಪ್ರತಿಯೊಬ್ಬರೂ ಕೋವಿಡ್ ಲಸಿಕೆಯನ್ನು ಪಡೆಯಬೇಕು ಕಲಬುರಗಿ ಮಹಾನಗರ ಪಾಲಿಕೆಯ ಸದಸ್ಯರಾದ ವಿಶಾಲ ದರ್ಗಿ ರವರು ಹೇಳಿದರು.

ನಗರದ ಶಾಂತಿನಗರ ಬಡಾವಣೆಯಲ್ಲಿ ಮಾನುಸ್ಕಿ ಸಂಸ್ಥೆ ಪುಣೆ ಹಾಗೂ ಜೀವನ ಜ್ಯೋತಿ ಮಹಿಳಾ ಅಭಿವೃದ್ಧಿ ಸಂಸ್ಥೆ ಕಲಬುರಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ಭಾದಿತ ಮಹಿಳೆಯರಿಗೆ ೧೨೭ ಅಹಾರದ ದಿನಸಿ ಕಿಟ್‌ಗಳನ್ನು ವಿತರಿಸಿ ಮಾತನಾಡಿದರು.

ಮಾನುಸ್ಕಿ ಸಂಸ್ಥೆಯ ಕರ್ನಾಟಕ ರಾಜ್ಯದ ಕಾರ್ಯಕ್ರಮ ಸಂಯೋಜಕರಾದ ಲಕ್ಷ್ಮಣ ಗಾಯಕವಾಡ ಗಾಜಿಪುರ ಮಾತನಾಡುತ್ತಾ ನಮ್ಮ ಮಾನುಸ್ಕಿ ಸಂಸ್ಥೆಯಿಂದ ಸಾಧ್ಯವಾದ? ಎಲ್ಲಾ ವರ್ಗದ ಮಹಿಳೆಯರಿಗೆ ಕೋವಿಡ್ ಸಮಯದಲ್ಲಿ ಸೇವೆ ಮಾಡಿದ್ದೇವೆ.. ಮುಂದೆಯೂ ನಮ್ಮ ಸಂಸ್ಥೆಯಿಂದ ಧಮನಿತ ಮತ್ತು ಸೋಂಕಿತ ಮಹಿಳೆಯರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಹಾಯ ಮಾಡುತ್ತೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರೋ.ಎಚ್.ಎಸ್ ಜಂಗೆ ಸಂಯೋಜಕರು, ದೈಹಿಕ ಶಿಕ್ಷಣ ವಿಭಾಗ ಗು.ವಿ.ಕ., ಹಣಮಂತ ಬೋದನಕರ, ಅವಿನಾಶ ಗಾಯಕವಾಡ ಯುವ ಮುಖಂಡರು ಗಾಜಿಪೂರ, ಮಾನುಸ್ಕಿ ಸಂಸ್ಥೆಯ ಸಹ ಸಂಯಾಜಕರಾದ ಪ್ರತೀಕ್ ಅಂಕಲಗಿ, ಅಭಿಲಾ? ದರ್ಗಿ(ಜಗತ, ಭೀಮನಗರ), ಅಮಿತ್ ಉಪಾರೆ, ಮಹೇಶ ಪಾಟೀಲ, ಜೆಜೆಎಮ್‌ಎಎಸ್ ನ ಅಧ್ಯಕ್ಷರು ಶ್ರೀಮತಿ ಶರಣಮ್ಮ, ರಾಜಶೇಖರ ಮಾಡ್ನಲ್, ಹಣಮಂತ ಜಾಧವ, ಪ್ರಭುದಾಸ ರಾಠೋಡ ಶಶಿಕಾಂತ ಚವಾಣ್, ಜಯಶ್ರೀ. ಗುಂಡಮ್ಮ, ಶಾಂತಾಬಾಯಿ, ರೇಣುಕಾ ಇತರರು ಉಪಸ್ಥಿತರಿದ್ದರು.

emedialine

Recent Posts

ಪೂರ್ವ ಪೀಠಿಕೆ ಓದುವ ಮೂಲಕ ಸಂವಿಧಾನ ದಿನ ಆಚರಣೆ

ವಾಡಿ (ಕಲಬುರಗಿ): ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಅವರ ವೃತ್ತದಲ್ಲಿರುವ ಬಾಬಾಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಂವಿಧಾನ ಪೂರ್ವ ಪೀಠಿಕೆ ಓದುವ ಮೂಲಕ…

3 hours ago

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

14 hours ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

1 day ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

1 day ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

1 day ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

1 day ago