ಕಲಬುರಗಿ: ಮಹಿಳೆಯರಿಗೆ ದಿನಸಿ ಕಿಟ್ ಗಳನ್ನು ವಿತರಿಸಿ ಪ್ರಸ್ತುತ ಕೋವಿಡ್ ೧೯ ಹಾವಳಿ ಇನ್ನು ಇರುವದರಿಂದ ಪ್ರತಿಯೊಬ್ಬರೂ ಕೋವಿಡ್ ಲಸಿಕೆಯನ್ನು ಪಡೆಯಬೇಕು ಕಲಬುರಗಿ ಮಹಾನಗರ ಪಾಲಿಕೆಯ ಸದಸ್ಯರಾದ ವಿಶಾಲ ದರ್ಗಿ ರವರು ಹೇಳಿದರು.
ನಗರದ ಶಾಂತಿನಗರ ಬಡಾವಣೆಯಲ್ಲಿ ಮಾನುಸ್ಕಿ ಸಂಸ್ಥೆ ಪುಣೆ ಹಾಗೂ ಜೀವನ ಜ್ಯೋತಿ ಮಹಿಳಾ ಅಭಿವೃದ್ಧಿ ಸಂಸ್ಥೆ ಕಲಬುರಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ಭಾದಿತ ಮಹಿಳೆಯರಿಗೆ ೧೨೭ ಅಹಾರದ ದಿನಸಿ ಕಿಟ್‌ಗಳನ್ನು ವಿತರಿಸಿ ಮಾತನಾಡಿದರು.
ಮಾನುಸ್ಕಿ ಸಂಸ್ಥೆಯ ಕರ್ನಾಟಕ ರಾಜ್ಯದ ಕಾರ್ಯಕ್ರಮ ಸಂಯೋಜಕರಾದ ಲಕ್ಷ್ಮಣ ಗಾಯಕವಾಡ ಗಾಜಿಪುರ ಮಾತನಾಡುತ್ತಾ ನಮ್ಮ ಮಾನುಸ್ಕಿ ಸಂಸ್ಥೆಯಿಂದ ಸಾಧ್ಯವಾದ? ಎಲ್ಲಾ ವರ್ಗದ ಮಹಿಳೆಯರಿಗೆ ಕೋವಿಡ್ ಸಮಯದಲ್ಲಿ ಸೇವೆ ಮಾಡಿದ್ದೇವೆ.. ಮುಂದೆಯೂ ನಮ್ಮ ಸಂಸ್ಥೆಯಿಂದ ಧಮನಿತ ಮತ್ತು ಸೋಂಕಿತ ಮಹಿಳೆಯರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಹಾಯ ಮಾಡುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರೋ.ಎಚ್.ಎಸ್ ಜಂಗೆ ಸಂಯೋಜಕರು, ದೈಹಿಕ ಶಿಕ್ಷಣ ವಿಭಾಗ ಗು.ವಿ.ಕ., ಹಣಮಂತ ಬೋದನಕರ, ಅವಿನಾಶ ಗಾಯಕವಾಡ ಯುವ ಮುಖಂಡರು ಗಾಜಿಪೂರ, ಮಾನುಸ್ಕಿ ಸಂಸ್ಥೆಯ ಸಹ ಸಂಯಾಜಕರಾದ ಪ್ರತೀಕ್ ಅಂಕಲಗಿ, ಅಭಿಲಾ? ದರ್ಗಿ(ಜಗತ, ಭೀಮನಗರ), ಅಮಿತ್ ಉಪಾರೆ, ಮಹೇಶ ಪಾಟೀಲ, ಜೆಜೆಎಮ್‌ಎಎಸ್ ನ ಅಧ್ಯಕ್ಷರು ಶ್ರೀಮತಿ ಶರಣಮ್ಮ, ರಾಜಶೇಖರ ಮಾಡ್ನಲ್, ಹಣಮಂತ ಜಾಧವ, ಪ್ರಭುದಾಸ ರಾಠೋಡ ಶಶಿಕಾಂತ ಚವಾಣ್, ಜಯಶ್ರೀ. ಗುಂಡಮ್ಮ, ಶಾಂತಾಬಾಯಿ, ರೇಣುಕಾ ಇತರರು ಉಪಸ್ಥಿತರಿದ್ದರು.