ಬಿಸಿ ಬಿಸಿ ಸುದ್ದಿ

ಭಾರತದ ಸಂವಿಧಾನವನ್ನು ಬದಲಾಯಿಸುವ ತಯ್ಯಾರಿ ನಡೆದಿದೆ: ಸತೀಶ ದೊಡ್ಡಗುಬ್ಬಿ

ಸುರಪುರ: ನಗರದ ಬೀದರ ಬೆಂಗಳೂರು ರಾಜ್ಯ ಹೆದ್ದಾರಿಯಲ್ಲಿನ ಹೋಟೆಲ್ ಅದಿತಿಯಲ್ಲಿ ಮೂಲನಿವಾಸಿ ಅಂಬೇಡ್ಕರ್ ಸೇನೆ ವತಿಯಿಂದ ಪೂನಾ ಒಪ್ಪಂದ ಕುರಿತು ವಿಚಾರ ಸಂಕಿರಣ ಹಾಗು ಸಂಘಟನೆಯ ಯಾದಗಿರಿ ಜಿಲ್ಲಾ ಪದಾಧಿಕಾರಿಗಳ ಪುನರ್ ರಚನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಆರಂಭದಲ್ಲಿ ಬುದ್ಧ ಬಾಬಾ ಸಾಹೇಬ್ ಡಾ:ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ದೀಪ ಬೆಳಗಿ ಪುಷ್ಪಾರ್ಚನೆ ಮಾಡಲಾಯಿತು.ನಂತರ ನಡೆದ ಉದ್ಘಾಟನೆಯಲ್ಲಿ ಸಂಘಟನೆಯ ರಾಜ್ಯ ಸಂಚಾಲಕ ಸತೀಶ ದೊಡ್ಡಗುಬ್ಬಿಯವರು ಸಸಿಗೆ ನೀರೆರೆದು ಉದ್ಘಾಟಿಸಿ ಮಾತನಾಡಿ,ಭಾರತದ ಸಂವಿಧಾನವನ್ನು ಬದಲಿಸಲು ತಯ್ಯಾರಿ ನಡೆಯುತ್ತಿದೆ,ಬದಲಾಯಿಸುತ್ತಾರೆ ಆದ್ದರಿಂದ ದೇಶದ ದಲಿತರು ಮತ್ತು ಒಬಿಸಿಗಳು ಎಚ್ಚೆತ್ತುಕೊಳ್ಳಬೇಕು ಎಂದರು. ಭಾರತ ದೇಶದಲ್ಲಿ ದಲಿತರಿಗೆ ಸುಮಾರು ೬ ಸಾವಿರ ವರ್ಷಗಳಿಂದ ಶೋಷಣೆ ಮಾಡಲಾಗುತ್ತದೆ,ಅದು ಬಾಬಾ ಸಾಹೇಬರು ಸಂವಿಧಾನ ರಚಿಸುವವರೆಗೂ ನಡೆದಿದೆ ಎಂದರು.

ಆದರೆ ಇಂದು ನಾವೆಲ್ಲರು ಕೇವಲ ಪೂನಾ ಒಪ್ಪಂದ ಒಂದರ ಮೂಲಕ ಬಾಬಾ ಸಾಹೇಬರು ಹೇಳಿದ ದಲಿತರು ೨ ಮತಗಳನ್ನು ಚಲಾಯಿಸುವ ಯೋಜನೆಗೆ ವಿರೋಧಿಸಿ ರದ್ದುಗೊಳಿಸಿರುವುದು ಆದರೆ ದಲಿತರ ಮೇಲೆ ೬ ಸಾವಿರ ವರ್ಷಗಳಿಂದಲೂ ಇದೇ ರೀತಿಯ ಅನ್ಯಾಯವನ್ನು ಮಾಡಲಾಗುತ್ತಿದೆ ಎಂದರು.

ಗಾಂಧಿಜಿಯವರು ಕೂಡ ದಲಿತರಿಗೆ ಎರಡು ಮತಗಳ ಚಲಾವಣೆಯನ್ನು ವಿರೋಧಿಸಿ ಉಪವಾಸ ಸತ್ಯಾಗ್ರಹ ಮಾಡುವ ಮೂಲಕ ನಮಗೆ ಅನ್ಯಾಯ ಮಾಡಿದ್ದಾರೆ.ಇದೆಲ್ಲವನ್ನು ಅರಿತುಕೊಂಡು ನಾವೆಲ್ಲರು ಎಚ್ಚೆತ್ತುಕೊಳ್ಳಬೇಕಿದೆ,ಮುಂದೆ ಯಾವುದೇ ಸಾಮಾನ್ಯ ಕ್ಷೇತ್ರದಲ್ಲಿ ನಮ್ಮ ದಲಿತರು ಚುನಾವಣೆಗೆ ನಿಂತು ಗೆದ್ದು ಬರುವಂತಾಗಬೇಕು ಮತ್ತು ಪ್ರತಿ ಸಾಮಾನ್ಯ ಕ್ಷೇತ್ರದಲ್ಲಿ ನಮ್ಮವರ ಮತಗಳೆ ಮುಖ್ಯ ಎನ್ನುವ ರೀತಿಯಲ್ಲಿ ನಾವೆಲ್ಲರು ರಾಜಕಾರಣಿಗಳಿಗೆ ಕಂಡಾಗ ಮಾತ್ರ ನಮ್ಮ ಏಳಿಗೆ ಸಾಧ್ಯವಿದೆ.ಆದ್ದರಿಂದ ಎಲ್ಲರು ಎಚ್ಚೆತ್ತುಕೊಳ್ಳುವಂತೆ ಕರೆ ನೀಡಿದರು.ಅಲ್ಲದೆ ಸಂವಿಧಾನ ಜಾರಿಯಾದ ೨೦ ವರ್ಷಕ್ಕೆ ರಾಜಕೀಯ ಮೀಸಲಾತಿ ತೆಗೆಯಲು ತಿಳಿಸಿದ್ದರು ಆದರೆ ಶೈಕ್ಷಣಿಕ ಮತ್ತಿತರೆ ಮೀಸಲಾತಿ ಇರಬೇಕು ಮತ್ತು ಸಾಮಾಜಿಕ ಬಹಿಷ್ಕಾರ ನಿಲ್ಲಬೇಕು ಎಂದಿದ್ದರು ಎಂದು ತಿಳಿಸಿದರು.

ಬುದ್ಧ ವಂದನೆ ಸಲ್ಲಿಸಿ ನಂತರ ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘಟನೆಯ ರಾಜ್ಯ ಸಂಘಟನಾ ಸಂಚಾಲಕ ರಾಹುಲ್ ಹುಲಿಮನಿ,ಪೂನಾ ಒಪ್ಪಂದದ ಬಗ್ಗೆ ಎಲ್ಲರು ಅರಿತುಕೊಳ್ಳಬೇಕು ಈ ದೇಶದಲ್ಲಿ ದಲಿತರು ೨ ಓಟು ಚಲಾಯಿಸುವ ಹಕ್ಕನ್ನು ಬಾಬಾ ಸಾಹೇಬರು ಮಂಡಿಸಿದರೆ ಅದನ್ನು ವಿರೋಧಿಸಿದವರು ಗಾಂಧಿ ಮತ್ತು ಇತರೆ ಮುಖಂಡರು.ಇದನ್ನು ತಿಳಿಸುವ ಕಾರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಅಲ್ಲದೆ ಜಿಲ್ಲಾ ಪದಾಧಿಕಾರಿಗಳನ್ನು ಪನಾರಚನೆ ಮಾಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಘಟನೆಯ ರಾಜ್ಯ ಪ್ರಧಾನ ಸಂಚಾಲಕ ಧನರಾಜ್ ನಾಗವಂಶಿ,ರಾಜ್ಯ ಕಾನೂನು ಸಲಹೆಗಾರ ವಿಕ್ರಮ್ ವಿ ಮಾತನಾಡಿ ಸಂಘಟನೆ ಕಟ್ಟುವಲ್ಲಿ ಹೋರಾಟ ನಡೆಸಲು ಯಾರಿಗೂ ಹೆದರಬೇಡಿ ನಿಮ್ಮೊಂದಿಗೆ ನಾವಿರುವುದಾಗಿ ಭರವಸೆ ನೀಡಿದರು.

ಮುಖ್ಯ ಅತಿಥಿಗಳಾಗಿ ನಗರಸಭೆ ಮಾಜಿ ಸದಸ್ಯ ವೆಂಕಟೇಶ ಹೊಸ್ಮನಿ,ಸಂಘಟನೆ ರಾಜ್ಯ ಖಜಾಂಚಿ ಅಮರನಾರಾಯಣ,ಸದಸ್ಯ ಅಂಜೀನಪ್ಪ ವಿ ವೇದಿಕೆ ಮೇಲಿದ್ದರು.ರಾಜು ಬಡಿಗೇರ ಅಮ್ಮಾಪುರ ನಿರೂಪಿಸಿದರು,ಮೈಲಾರಿ ಹೊಸಮನಿ ಸ್ವಾತಿಸಿದರು,ಶರಣು ಹೊಸ್ಮನಿ ವಂದಿಸಿದರು.ಕಾರ್ಯಕ್ರಮದಲ್ಲಿ ಚಂದಪ್ಪ ಪಂಚಮ್ ಸೇರಿದಂತೆ ಶಹಾಪುರ,ಯಾದಗಿರಿ ಮತ್ತು ರಾಯಚೂರಿನಿಂದ ಸಂಘಟನೆಯ ಕಾರ್ಯಕರ್ತರು ಭಾಗವಹಿಸಿದ್ದರು.

emedialine

Recent Posts

ಪೂರ್ವ ಪೀಠಿಕೆ ಓದುವ ಮೂಲಕ ಸಂವಿಧಾನ ದಿನ ಆಚರಣೆ

ವಾಡಿ (ಕಲಬುರಗಿ): ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಅವರ ವೃತ್ತದಲ್ಲಿರುವ ಬಾಬಾಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಂವಿಧಾನ ಪೂರ್ವ ಪೀಠಿಕೆ ಓದುವ ಮೂಲಕ…

2 hours ago

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

13 hours ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

24 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

24 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

1 day ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

1 day ago