ಹೈದರಾಬಾದ್ ಕರ್ನಾಟಕ

ನಾಯಕರ ಪರ ಬಿಜೆಪಿ, ಕಾಂಗ್ರೆಸ್ ಅಧ್ಯಕ್ಷ ಅಧ್ಯಕ್ಷರ ಬ್ಯಾಟಿಂಗ್ ಜೋರು

ಆಳಂದ: ಬಿಜೆಪಿ ಶಾಸಕ ಸುಭಾಷ ಗುತ್ತೇದಾರ ಮತ್ತು ಕಾಂಗ್ರೆಸ್ ಪಕ್ಷದ ಹಿರಿಯ, ಮಾಜಿ ಶಾಸಕ ಬಿ.ಆರ್. ಪಾಟೀಲ ಅವರ ನಡುವಿನ ರಾಜಕೀಯ ವಾಗ್ದಾಳಿ ಬಿರುಗಾಳಿಯನ್ನೇ ಎಬ್ಬಿಸಿದರೆ, ಮತ್ತೊಂಡೆ ಅವರ ಬೆಂಬಲಿತ ಬಿಜೆಪಿ ಮಂಡಲ ಅಧ್ಯಕ್ಷ ಆನಂದ ಕೊರಳ್ಳಿ ಹಾಗೂ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಜೈಚಿತ್ರ ಕೆ. ವೇದಶಟ್ಟಿ ಅವರು ತಮ್ಮ ನಾಯಕರ ಪರ ಆರಂಭಿಸಿದ ಬ್ಯಾಟಿಂಗ್ ತಾರಕಕ್ಕೇರಿದೆ.
ವಿಧಾನಸಭೆ ಚುನಾವಣೆ ಮುಗಿದ ಬಳಿಕ ಬಹುದಿನಗಳಿಂದಲೂ ಶಾಂತವಾಗಿದ್ದ ಇಲ್ಲಿನ ರಾಜಕೀಯ ವಲಯ ಈಗ ತಾಪಂ, ,ಜಿಪಂ ಚುನಾವಣೆ ಸಮೀಪಿಸುತ್ತಿದ್ದಂತೆ ಆರೋಪ ಪ್ರತ್ಯೇರೋಗಳು ಜೋರಾಗುತ್ತಿವೆ.

ಸದ್ಯ ಬಿಜೆಪಿಯ ಆನಂದ ಬಿರಾದಾರ ಕೊರಳ್ಳಿ ಮತ್ತು ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಜೈಚಿತ್ರ ಕೆ. ವೇದಶೆಟ್ಟಿ ಅವರು ನೀಡಿದ ಹೇಳಿಕೆಗಳು ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ರಾಜಕೀಯ ವಲಯದಲ್ಲಿ ಹುಬ್ಬೇರಿಸತೊಡಗಿವೆ. ನಾಯಕರ ಪರ ಆರಂಭಿಸಿದ ಇವರ ಬ್ಯಾಟಿಂಗ್ ಮುಂದೆ ಕಾದುನೋಡುವಂತೆ ಮಾಡಿದೆ.

ಬಿಜೆಪಿ ಆನಂದ ಹೇಳಿದ್ದೇನು: ಶಾಸಕರು ರೈತರ ಪರವಾಗಿ ಧ್ವನಿ ಎತ್ತಿದರೆ ಅದು ಹೊಟ್ಟೆ ಕಿಚ್ಚು ಹೇಗಾಗುತ್ತದೆ. ಜನತೆಯ ವಿಶ್ವಾಸ ಗಳಿಸಿ ೪ ಬಾರಿ ಸುಭಾಷ್ ಗುತ್ತೇದಾರ ಶಾಸಕರಾಗಿದ್ದಾರೆ. ಬಿಆರ್ ಪಾಟೀಲ ಮಾತು ಮಾತಿಗೆ ಹೆಂಡ ಹಂಚಿ ಚುನಾವಣೆ ಗೆದ್ದಿದ್ದಾರೆ ಎನ್ನುತ್ತಾ ಮತ ನೀಡಿದ ಜನತೆಯನ್ನು ಪದೇ ಪದೇ ಅವಮಾನಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಚುನಾವಣೆಯ ಸಮಯದಲ್ಲಿ ರುದ್ರವಾಡಿ ಗ್ರಾಮದಲ್ಲಿ ಯಾರ ಬೆಂಬಲಿಗರ ಹೊಲದಲ್ಲಿ ಅಕ್ರಮ ಸಾರಾಯಿ ಪತ್ತೆ ಆಗಿತ್ತು ಅದು ಯಾರಿಗೆ ಸೇರಿತ್ತು ಎಂಬ ವಿಷಯ ಅಶೋಕ ಸಾವಳೇಶ್ವರಗೆ ಮರೆತು ಹೋಯಿತೆ?. ಆಳಂದನಲ್ಲಿ ನಿರ್ಮಾಣವಾಗುತ್ತಿರುವ ಮಿನಿ ವಿಧಾನಸೌಧ ಕಾಮಗಾರಿಗೆ ಪಕ್ಷಪಾತ ಮಾಡದೇ ತಾಲೂಕಿನ ಕಾಮಗಾರಿ ಎಂದು ಶಾಸಕರೂ ಹೆಚ್ಚುವರಿ ಅನುದಾನ ಮಂಜೂರಿ ಮಾಡಿಸಿದ್ದಾರೆ ಎಂದರು.

ಆಳಂದ ಕುಡಿಯುವ ನೀರಿನ ಪೈಪಲೈನ್ ವ್ಯವಸ್ಥೆ, ಧಂಗಾಪೂರ- ನಿಂಬರ್ಗಾ, ತಡಕಲ್- ಹಳ್ಳಿಸಲಗರ, ಸುಂಟನೂರ- ನಿಂಬರ್ಗಾ, ಲಾಡ ಚಿಂಚೋಳಿ- ಕಡಗಂಚಿ, ಹೊದಲೂರ- ಜವಳಗಾ, ಮೋಘಾ ಕೆ- ಅಲ್ಲಾಪೂರ, ಮಾದನ ಹಿಪ್ಪರ್ಗಾ ರಸ್ತೆ ಮತ್ತು ಸೇತುವೆ, ದಣ್ಣೂರ ಸೇತುವೆ, ಆಳಂದ- ಹೆಬಳಿ ರಸ್ತೆಯ ಕಾಮಗಾರಿಗಳು ನಿಂಬರ್ಗಾ, ತಡಕಲ ಕೆರೆ ಕಾಮಗಾರಿಗಳು ಹಾಗೂ ಆಳಂದ ಪಟ್ಟಣದಲ್ಲಿ ವಸತಿ ರಹಿತ ನಿವೇಶನದಾರಿಗೆ ಸೂರು ಕಟ್ಟಿಸಿಕೊಳ್ಳಲು ೭೦ ಕೋಟಿ ರೂ ವೆಚ್ಚದ ಯೋಜನೆ ಟೆಂಡರ್ ಸೇರಿದಂತೆ ಅನೇಕ ಕಾಮಗಾರಿಗಳು ಕಣ್ಣಿಗೆ ಕಾಣಿಸುತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಅವರ ಕಾಲದಲ್ಲಿ ಮಂಜೂರಾದ ಕಾಮಗಾರಿಗಳು ಯಾಕೆ ಮುಂದುವರೆಯುತ್ತಿಲ್ಲ ಎಂದು ಅವರೇ ಉತ್ತರಿಸಬೇಕು. ಸಾಲ ವಿತರಣೆ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಬಿ. ಆರ್. ಪಾಟೀಲ ಮತ್ತು ಡಿಸಿಸಿ ಬ್ಯಾಂಕ್ ನಿರ್ದೇಶಕ ಅಶೋಕ ಸಾವಳೇಶ್ವರ ಬ್ಯಾಂಕ್‌ನ್ನು ಉಳಿಸಿ ಬೆಳೆಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಅವರ ಹೆಸರು ನೆಪಮಾತ್ರಕ್ಕೂ ಪ್ರಸ್ತಾಪ ಮಾಡುತ್ತಿಲ್ಲ. ಒಟ್ಟಾರೆಯಾಗಿ ತಾಲೂಕಿನಲ್ಲಿ ಸಾಲ ವಿತರಣೆ ಕಾರ್ಯಕ್ರಮ ರಾಜಕೀಯ ಕಾರ್ಯಕ್ರಮ ಮಾಡಲು ಹೊರಟಿದ್ದಾರೆ ಎಂದು ದೂರಿದ್ದಾರೆ.

ಡಿಸಿಸಿ ಬ್ಯಾಂಕ್ ನಿರ್ದೇಶಕ ಅಶೋಕ ಸಾವಳೇಶ್ವರ ಒಬ್ಬ ಅವಕಾಶವಾದಿ ರಾಜಕಾರಣಿ. ಅವರಿಗೆ ಸಾಕಷ್ಟು ಅವಕಾಶಗಳನ್ನು ನೀಡುವಲ್ಲಿ ಶಾಸಕ ಸುಭಾಷ್ ಆರ್ ಗುತ್ತೇದಾರ ಪಾತ್ರವಿದೆ. ನಿರಂತರ ಅಭಿವೃದ್ಧಿ ಕಾರ್ಯಗಳು ಜರುಗುತ್ತಿವೆ ಆದರೆ ನೋಡುವ ಕಣ್ಣುಗಳಿರಬೇಕು ಕೇವಲ ಕೀಳುಮಟ್ಟದ ರಾಜಕಾರಣಕ್ಕಾಗಿ ಹೋದಲ್ಲಿ ಬಂದಲ್ಲಿ ವಿರೋಧ ಮಾಡುವುದನ್ನು ಬಿಡಬೇಕು. ಪಕ್ಷಾತೀತವಾಗಿ ನಡೆಯುವ ಸಾಲ ವಿತರಣೆ ಕಾರ್ಯಕ್ರಮದಲ್ಲಿಯೂ ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ, ರಾಜ್ಯ ಸರ್ಕಾರವನ್ನು ಟೀಕಿಸುತ್ತಿರುವುದು ಅವರ ಅಪಕ್ವ ಮನಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ ಹೀಗಾಗಿ ಬಿ ಆರ್ ಪಾಟೀಲರು ಹಿಂಬಾಗಿಲ ರಾಜಕಾರಣವನ್ನು ಬಿಡಬೇಕು ಎಂದು ಛೇಡಿಸಿದ್ದಾರೆ.

ಕಾಂಗ್ರೆಸ್ಸಿನ್ ಜೈಚಿತ್ರ ಬ್ಯಾಟಿಂಗ್: ಬಿಜೆಪಿ ಮಂಡಲ ಅಧ್ಯಕ್ಷ ಆನಂದ ಪಾಟೀಲ ಅಣ್ಣನವರೇ ಮಾಜಿ ಶಾಸಕರು, ಅಭಿವೃದ್ಧಿಯ ಹರಿಕಾರ ಬಿ.ಆರ್. ಪಾಟೀಲ ಅವರ ಬಗ್ಗೆ ಹೇಳುವುದುಕಿಂತು ಮುಂಚೆ ನೀವು ಯೋಚನೆ ಮಾಡಬೇಕಾಗಿತ್ತು. ತಾಲೂಕಿನಲ್ಲಿ ಕಣ್ಣಿಗೆ ಕಾಣುವಂತಹ ಅಭಿವೃದ್ದಿಯ ಕಾರ್ಯಗಳು ಆಗಿವೆ ಅನ್ನುವುದಾದರೆ ಬಿ.ಆರ್. ಪಾಟೀಲ ಅವಧಿಯಲ್ಲಿ ಅನ್ನೊದು ಮಾತ್ರ ಮರೆಯಬೇಡಿ. ಈ ವಿಷಯ ನಿಮಗೆ ಗೋತ್ತಿದೆ. ನಿಮ್ಮ ಹೇಳಿಕೆಯಲ್ಲಿ ನೀರಾವರಿ ಯೋಜನೆಗಳ ಬಗ್ಗೆ ಪ್ರಸ್ತಾಪ ಮಾಡಿದ್ದು, ಹಿಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಅವಧಿಯಲ್ಲಿ ಶಾಸಕರಾಗಿದ್ದ ಬಿ.ಆರ್. ಪಾಟೀಲ ಅವರು ಈ ಸಂದರ್ಭದಲ್ಲಿ ಅಫಜಲಪೂರ ತಾಲೂಕಿನ ಸೊನ್ನ ಬ್ಯಾರೇಜ್‌ನಿಂದ ೫೦ ಕೋಟಿ ವೆಚ್ಚದಲ್ಲಿ ಅಮರ್ಜಾ ಅಣೆಕಟ್ಟೆಗೆ ನೀರು ತುಂಬುವ ಯೋಜನೆಗೆ ಚಾಲನೆ ನೀಡಿದ್ದು ಜ್ಞಾಪಕವಿಲ್ಲವೇ ಅಮರ್ಜಾ ನದಿ ಬರುವುದು ನಿಮ್ಮ ಕೊರಳ್ಳಿಯ ಸ್ವಗ್ರಾಮ ವ್ಯಾಪ್ತಿಗೆ ಅನುವುದು ಅರಿವಿಗೆ ಬರಬಾದಾಯಿತೇ ಎಂದು ಪ್ರಶ್ನಿಸಿದರು.

ಆಳಂದ ಮಿನಿ ವಿಧಾಸೌಧ ಕಟ್ಟಡ ಬಗ್ಗೆ ಮಾತ್ತೇತ್ತಿರುವ ಆನಂದ ಪಾಟೀಲರೂ, ಈ ಕಟ್ಟಡ ನಿರ್ಮಾಣದ ಶಂಕುಸ್ಥಾಪನೆ ಆಗಿ ಚಾಲನೆ ಸಿಕ್ಕಿದ್ದು ಸಹ ಬಿ.ಆರ್. ಪಾಟೀಲ ಅವರ ಅವಧಿಯಲ್ಲೇ ಎಂಬುದು ಮರೆಯಬೇಡಿ. ಆನಂದ ಅವರು ಆಳಂದ ಮಂಡಲದ ಅಧ್ಯಕ್ಷರಾಗಿದ್ದೀರಿ ನಿಮಗೆ ನೈತಿಕತೆ ಅನ್ನುವುದು ಇದ್ದರೆ ಅಮರ್ಜಾ ಕ್ರಾಸ್‌ನಿಂದ ನಿಮ್ಮ ಊರು ಕೊರಳ್ಳಿ ಹೋಗುವ ರಸ್ತೆ ವಿಪರೀತ ಕಳಪೆಮಟ್ಟದ್ದಾಗಿ ಕಿತ್ತುಹೋಗಿದೆ. ಇದು ನಿಮ್ಮ ಶಾಸಕರ ಪುತ್ರ ಸಂತೋಷ ಗುತ್ತೇದಾರ ನಿರ್ವಹಣೆ ಮಾಡುತ್ತಿದ್ದಾರೆ. ನಿಮ್ಮಲಿ ಅಭಿವೃದ್ಧಿ ಪದ ಅನ್ನುವುದಿದ್ದರೆ ಅದನ್ನು ಖಂಡಿಸಿ ಪ್ರತಿಭಟನೆಗಿಳಿಯಿರಿ ಅವಾಗ ನಿಮ್ಮನ್ನು ಬೇಷ ಎನ್ನುತ್ತೇನೆ. ಅಷ್ಟೇ ಅಲ್ಲದೆ, ಕ್ಷೇತ್ರದೆಲ್ಲಡೆ ಹಲವಾರು ಕಾಮಗಾರಿಗಳು ಕಳಪೆ ಮಟ್ಟದಾಗಿವೆ. ಮಾಡಿದ ಹೈದನೈದು ದಿನಗಳಲ್ಲಿ ಕಿತ್ತುಹೋಗಿವೆ. ಅದರ ಬಗ್ಗೆ ನೀವು ಗಮನ ಹರಿಸಿಲಿಲ್ಲ ಏಕೆ ಎಂದಿದ್ದಾರೆ.

ಮಾಜಿ ಶಾಸಕ ಬಿ.ಆರ್. ಪಾಟೀಲರ ಮಾರ್ಗದರ್ಶನದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಅಶೋಕ ಸಾವಳೇಶ್ವರ ಅವರ ನೇತೃತ್ವದಲ್ಲಿ ತಾಲೂಕಿನ ವಿಎಸ್‌ಎಸ್‌ಎನ್ ಸಂಘಗಳ ಮೂಲಕ ರೈತರಿಗೆ ಬಡ್ಡಿ ರಹಿತ ಸಾಲ ವಿತರಿಸುತ್ತಿರುವ ಕಾರ್ಯಕ್ರಮ ನಡೆಯುತ್ತಿದೆ. ಇದರಲ್ಲಿ ತಾವು ಸೇರಿ ತಮ್ಮ ಬಿಜೆಪಿ ಪಕ್ಷದ ಕಾರ್ಯಕರ್ತರುಗಳು ಹಾಗೂ ಮುಖಂಡರುಗಳು ಫಲಾನುಭವಿಗಳು ಆಗಿದ್ದೀರಿ. ಆದರೆ ಸಾಲ ವಿತರಣೆಯಲ್ಲಿ ಭ್ರಷ್ಟಾಚಾರ ಅಡಗಿದೆ ಅನ್ನುವ ಮಾತು ಕೇಳಿದ್ದಿರಿ ಭ್ರಷ್ಟಾಚಾರ ಆಗಿದೆ ಅನ್ನುವ ನಂಬಿಕೆ ನಿಮಗಿದ್ದರೆ ರಾಜ್ಯದಲ್ಲಿ ನಿಮ್ಮದೇ ಪಕ್ಷದ ಸರ್ಕಾರ ಅಸ್ತಿತ್ವದಲ್ಲಿದ್ದು, ನಿಮ್ಮ ಪಕ್ಷದ ಶಾಸಕರೇ ಡಿಸಿಸಿ ಬ್ಯಾಂಕಿನ ಅಧ್ಯಕ್ಷರಿದ್ದು, ಭ್ರಷ್ಟಾಚಾರ ಮಾಡಿದವರ ವಿರುದ್ಧ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಜರುಗಿಸಬಹುದಾಗಿತ್ತು. ಆದು ಬಿಟ್ಟು ರೈತರನ್ನು ದಾರಿ ತಪ್ಪಿಸಲು ನಾನು ಚೆಕ್ ವಿತರಣೆ ಮಾಡುವುದಿಲ್ಲ ಎನ್ನುವ ಶಾಸಕರ ಕಪಟ ನಾಟಕವಾಡುತ್ತಿರಿ ನಾಚಿಕೆಯಾಗುವುದಿಲ್ಲವೇ ನಿಮಗೇ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಕೊರಳ್ಳಿ ಅವರ ಹೇಳಿಕೆ ನೋಡಿದರೆ ಪಕ್ಷದಲ್ಲಿ ಅವರ ಹುದ್ದೆ ಅಲುಗಾಡುತ್ತಿದೆ. ಹುದ್ದೆ ಭದ್ರಪಡಿಸಿಕೊಳ್ಳಲು ಶಾಸಕರನ್ನು ಒಲೈಸಿಕೊಳ್ಳಲು ಕಾಟಾಚಾರದ ಹೇಳಿಕೆಯನ್ನು ನೀಡಿದ್ದೀರಿ, ನಾನು ನಿಮ್ಮ ಹೇಳಿಕೆಯನ್ನು ಖಂಡಿಸುತ್ತೇನೆ. ನಮ್ಮ ನಾಯಕರಿಗೆ ಟೀಕಿಸುವ ನೈತಿಕ ಹಕ್ಕಿಲ್ಲ. ಇಂಥ ಹೇಳಿಕೆ ನೀಡುವಾಗ ವಿಚಾರ ಮಾಡಿ ಹೇಳಿಕೆ ನೀಡಬೇಕು ಎಂದು ಜೈಚಿತ್ರ ವೇದಶಟ್ಟಿ ಅವರು ಗುಡಗಿದ್ದಾರೆ.

emedialine

Recent Posts

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

10 hours ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

21 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

21 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

23 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

23 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

24 hours ago