ಕಲಬುರಗಿ: ಇಲ್ಲಿನ ವಲಯ ಕೃಷಿ ಸಂಶೋಧನಾ ಕೇಂದ್ರ ಹಿಂಗಾರು ಬೀಜ ದಿನೋತ್ಸವವನ್ನು ಹಮ್ಮಿಕೊಳ್ಳಲಾಯಿತು.
ಕಲಬುರಗಿ ಕೃಷಿ ಮಹಾವಿದ್ಯಾಲಯ ಡೀನ್ ರಾದ ಡಾ. ಸುರೇಶ್ ಎಸ್ ಪಾಟೀಲ ಕಾರ್ಯಕ್ರಮಉದ್ಘಾಟಿಸಿ ಮಾತನಾಡುತ್ತಾ ಬೀಜ ದಿನೋತ್ಸವ ಕಾರ್ಯಕ್ರಮದ ಪ್ರಾಮುಖ್ಯತೆ ವಿವರಿಸಿದರು. ರೈತರು ತಮ್ಮ ಹೊಲಕ್ಕೆ ಸೂಕ್ತವಾದ ತಳಿಗಳ ಮಾಹಿತಿ ಪಡೆದುಕೊಳ್ಳಬೇಕೆಂದು ಮಾಹಿತಿ ನೀಡಿದರು ಹಾಗೂ ರೈತರು ಒಂದೇ ಬೆಳೆಯ ಮೇಲೆ ಅವಲಂಬನೆಗೊಳ್ಳದೆ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕೆಂದು ಹೇಳಿದರು.
ಸಹ ಸಂಶೋಧನಾ ನಿರ್ದೇಶಕರಾದ ಡಾ. ಎಂ.ಎಂ. ಧನೋಜಿ ರವರು ಅಧ್ಯಕ್ಷಿಯ ಭಾಷಣ ಮಾಡುತ್ತಾ, ಬೀಜ ದಿನೋತ್ಸವ ಕಾರ್ಯಕ್ರಮದಿಂದ ರೈತರು ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಬೆಳೆಗೆ ಬೇಕಾಗಿರುವ ಗುಣಮಟ್ಟ ಬೀಜಗಳು ಮತ್ತು ಸುಧಾರಿತ ಕೃಷಿ ತಂತ್ರಜ್ಞಾನಗಳನ್ನು ರೈತರಿಗೆ ಮುಟ್ಟಿಸಲು ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ವಿಜ್ಞಾನಿಗಳಾದ ಡಾ. ರಾಚಪ್ಪ ವಿ.ಹಾವೇರಿ, ಡಾ.ಬಿ.ಎಸ್.ರೆಡಿ, ಡಾ.ಮುನಿಸ್ವಾಮಿ ಎಸ್ ಡಾ. ಪಂಡಿತ ರಾಥೋಡ್, ಡಾ. ಡಿ.ಎಚ್. ಪಾಟೀಲ, ಡಾ. ಮಲ್ಲಿಕಾರ್ಜುನ ಕೆಂಗನಾಳ, ಡಾ. ಲಕ್ಷುಮಣ್, ಡಾ. ಬಸವರಾಜ, ಹಾಗೂ ಶೀಲಾ ದುದ್ದಗಿ ರವರುಗಳು ಭಾಗವಹಿಸಿ ನೂತನ ತಳಿ ಬಳಕೆ, ಬೀಜೋಪಚಾರ, ಸುಧಾರಿತ ಬೇಸಾಯ ಕ್ರಮಗಳು, ಚಿಕ್ಪೀ ಮಾಜ್ಯಿಕ್ ಬಳಕೆ, ಸಮಗ್ರ ಕೀಟ ಹಾಗೂ ರೋಗಗಳ ನಿಯಂತ್ರಣ ಕುರಿತು ರೈತರಿಗೆ ಮಾಹಿತಿ ಮಾಡಿ ಕೊಟ್ಟರು.
ಈ ಕಾರ್ಯಕ್ರಮವನ್ನು ಬೀಜ ಘಟಕ ವತಿಯಿಂದ ಆಯೋಜಿಸಿದ್ದು, ಭಾಗವಹಿಸಿದ ರೈತರಿಗೆ ಕಡಲೆ ಮತ್ತು ಜೋಳದ ಬೀಜ ವಿತರಣೆ ಮಾಡಲಾಯಿತು. ಡಾ.ಐ.ಬಿ.ರೆಡ್ಡಿ ನಿರೂಪಿಸಿದರು ಮತ್ತು ಡಾ.ಎಸ್.ಬಿ.ಯೆರಿ, ಇವರು ವಂದನಾಪರ್ವಣೆ ಮಾಡಿದರು.
ವಿವಿಧ ಗ್ರಾಮಗಳಿಂದ ಸುಮಾರು 50 ಜನ ರೈತರುಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…