ಕೃಷಿ ಸಂಶೋಧನಾ ಕೇಂದ್ರದಲ್ಲಿ ಹಿಂಗಾರು ಬೀಜ ದಿನೋತ್ಸವ

0
39

ಕಲಬುರಗಿ: ಇಲ್ಲಿನ ವಲಯ ಕೃಷಿ ಸಂಶೋಧನಾ ಕೇಂದ್ರ ಹಿಂಗಾರು ಬೀಜ ದಿನೋತ್ಸವವನ್ನು ಹಮ್ಮಿಕೊಳ್ಳಲಾಯಿತು.

ಕಲಬುರಗಿ ಕೃಷಿ ಮಹಾವಿದ್ಯಾಲಯ ಡೀನ್ ರಾದ ಡಾ. ಸುರೇಶ್ ಎಸ್ ಪಾಟೀಲ ಕಾರ್ಯಕ್ರಮಉದ್ಘಾಟಿಸಿ ಮಾತನಾಡುತ್ತಾ ಬೀಜ ದಿನೋತ್ಸವ ಕಾರ್ಯಕ್ರಮದ ಪ್ರಾಮುಖ್ಯತೆ ವಿವರಿಸಿದರು. ರೈತರು ತಮ್ಮ ಹೊಲಕ್ಕೆ ಸೂಕ್ತವಾದ ತಳಿಗಳ  ಮಾಹಿತಿ ಪಡೆದುಕೊಳ್ಳಬೇಕೆಂದು ಮಾಹಿತಿ ನೀಡಿದರು ಹಾಗೂ ರೈತರು ಒಂದೇ ಬೆಳೆಯ ಮೇಲೆ ಅವಲಂಬನೆಗೊಳ್ಳದೆ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕೆಂದು ಹೇಳಿದರು.

Contact Your\'s Advertisement; 9902492681

ಸಹ ಸಂಶೋಧನಾ ನಿರ್ದೇಶಕರಾದ ಡಾ. ಎಂ.ಎಂ. ಧನೋಜಿ ರವರು ಅಧ್ಯಕ್ಷಿಯ ಭಾಷಣ ಮಾಡುತ್ತಾ, ಬೀಜ ದಿನೋತ್ಸವ ಕಾರ್ಯಕ್ರಮದಿಂದ ರೈತರು ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಬೆಳೆಗೆ ಬೇಕಾಗಿರುವ ಗುಣಮಟ್ಟ ಬೀಜಗಳು ಮತ್ತು ಸುಧಾರಿತ ಕೃಷಿ ತಂತ್ರಜ್ಞಾನಗಳನ್ನು ರೈತರಿಗೆ ಮುಟ್ಟಿಸಲು ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ವಿಜ್ಞಾನಿಗಳಾದ ಡಾ. ರಾಚಪ್ಪ ವಿ.ಹಾವೇರಿ, ಡಾ.ಬಿ.ಎಸ್.ರೆಡಿ, ಡಾ.ಮುನಿಸ್ವಾಮಿ ಎಸ್  ಡಾ. ಪಂಡಿತ ರಾಥೋಡ್, ಡಾ. ಡಿ.ಎಚ್. ಪಾಟೀಲ, ಡಾ. ಮಲ್ಲಿಕಾರ್ಜುನ ಕೆಂಗನಾಳ, ಡಾ. ಲಕ್ಷುಮಣ್, ಡಾ. ಬಸವರಾಜ, ಹಾಗೂ ಶೀಲಾ ದುದ್ದಗಿ ರವರುಗಳು ಭಾಗವಹಿಸಿ ನೂತನ ತಳಿ ಬಳಕೆ, ಬೀಜೋಪಚಾರ, ಸುಧಾರಿತ ಬೇಸಾಯ ಕ್ರಮಗಳು, ಚಿಕ್ಪೀ ಮಾಜ್ಯಿಕ್ ಬಳಕೆ, ಸಮಗ್ರ ಕೀಟ ಹಾಗೂ ರೋಗಗಳ ನಿಯಂತ್ರಣ ಕುರಿತು ರೈತರಿಗೆ ಮಾಹಿತಿ ಮಾಡಿ ಕೊಟ್ಟರು.

ಈ ಕಾರ್ಯಕ್ರಮವನ್ನು ಬೀಜ ಘಟಕ ವತಿಯಿಂದ ಆಯೋಜಿಸಿದ್ದು, ಭಾಗವಹಿಸಿದ ರೈತರಿಗೆ ಕಡಲೆ ಮತ್ತು ಜೋಳದ ಬೀಜ ವಿತರಣೆ ಮಾಡಲಾಯಿತು.  ಡಾ.ಐ.ಬಿ.ರೆಡ್ಡಿ ನಿರೂಪಿಸಿದರು ಮತ್ತು ಡಾ.ಎಸ್.ಬಿ.ಯೆರಿ, ಇವರು ವಂದನಾಪರ್ವಣೆ ಮಾಡಿದರು.

ವಿವಿಧ ಗ್ರಾಮಗಳಿಂದ ಸುಮಾರು 50 ಜನ ರೈತರುಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here