ಬಿಸಿ ಬಿಸಿ ಸುದ್ದಿ

ಬೆಳೆ ನಿರ್ವಹಣೆಯಲ್ಲಿ ಅನಾವಶ್ಯಕ ಔಷಧಿ ರಸಗೊಬ್ಬರ ಬಳಕೆ ಬೇಡ: ಕೃಷಿ ವಿಜ್ಞಾನಿ ಡಾ. ರಾಜು ತೆಗ್ಗಳಿ

ಆಳಂದ: ಕೃಷಿಯಲ್ಲಿ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಉತ್ಪಾದನೆಗೆ ತಾಂತ್ರಿಕ ಜ್ಞಾನವನ್ನು ಹೊಂದುವುದು ಹಾಗೂ ಅನಾವಶಕವಾಗಿ ಕೀಟನಾಶಕ ಮತ್ತು ರಸಗೊಬ್ಬರ ಬಳಸದೆ ಅವಶ್ಯಕನುಗುಣವಾಗಿ ಸಮಗ್ರ ಬೆಳೆ ನಿರ್ವಾಹಣೆಗೆ ರೈತರು ಮುಂದಾಗಬೇಕು ಎಂದು ಕಲಬುರಗಿ ಕೃಷಿ ಸಂಶೋಧನಾ ಕೇಂದ್ರದ ಕಾರ್ಯಕ್ರಮ ಸಂಯೋಜಕ, ಹಿರಿಯ ವಿಜ್ಞಾನಿ ಡಾ| ರಾಜು ತೆಗ್ಗಳ್ಳಿ ಅವರು ಇಂದಿಲ್ಲಿ ಸಲಹೆ ನೀಡಿದರು.

ಪಟ್ಟಣದ ಎ.ವಿ. ಪಾಟೀಲ ಕಲ್ಯಾಣ ಮಂಟಪದಲ್ಲಿ ಶನಿವಾರ ಕೃಷಿ ಸಂಶೋಧನ ಕೇಂದ್ರ ಕಲಬುರಗಿ, ಕೃಷಿ ಇಲಾಖೆ ಹಾಗೂ ಎಚ್‌ಐಎಲ್. ಸಿಎನ್‌ಆರ್‌ಐ ಕಂಪನಿಗಳ ಆಶ್ರಯದಲ್ಲಿ ಹಮ್ಮಿಕೊಂಡ ಪೀಡೆ ನಾಶಕಗಳು ಸಮಪರ್ಕ ಬಳಕೆ ಮತ್ತು ಸಮಗ್ರ ಪೀಡೆ ನಿರ್ವಾಹೆ ಪದ್ಧತಿ ಕುರಿತು ರೈತರಿಗೆ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಪ್ರಸ್ತುತ ಸಂದರ್ಭದಲ್ಲಿ ವಿವಿಧ ಕೀಟ ನಿರ್ವಹಣೆಯಲ್ಲಿ ಖರ್ಚು ಕಡಿಮೆಗೊಳಿಸಿ ಬೇಸಾಯದಲ್ಲಿ ಕೀಟದ ಜೀವನ ಚಕ್ರ, ಕೀಟ ಬಾಧೆ ಲಕ್ಷಣ ಅರಿತು ಕೀಟನಾಶಕ ಬಳಕೆಗೆ ಮುಂದಾಗಬೇಕು ಎಂದು ಹೇಳಿದರು.

ರೈತರು ನೇರವಾಗಿ ಕೀಟನಾಶಕಗಳಿಗೆ ಮೊರೆ ಹೋಗದೆ, ಸಮಗ್ರ ಕೀಟ ನಿರ್ವಹಣೆ ಪದ್ಧತಿ ಅಳವಡಿಕೆ ಪ್ರಸ್ತುತ ಸಮಯದಲ್ಲಿ ಪ್ರಮುಖವಾದ ಅಂಶವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಕೃಷಿಯಲ್ಲಿ ಅಲ್ಪ ವೆಚ್ಚದದ ತಂತ್ರಜ್ಞಾನಗಳಾದ ಬಿತ್ತನೆ ಸಮಯದಲ್ಲಿ ಜೋಳ, ಪುಂಡಿ ಮಿಶ್ರ ಬೆಳೆಯಾಗಿ ಅಳವಡಿಕೆ ಜೊತೆಗೆ ಬೇವಿನ ಬೀಜದ ಕಷಾಯ ಮತ್ತು ಎನ್‌ಪಿವಿ ನಂಜಾಣು ಮತ್ತು ಕೀಟನಾಶಕಗಳ ಕೀಟದ ಹಂತಕ್ಕನುಗುಣವಾಗಿ ಬಳಸಬೇಕು ಎಂದು ಹಲವು ಮಹತ್ವದ ವಿಷಯಗಳನ್ನು ವಿಡಿಯೋ ಮೂಲಕ ವಿವರಿಸಿದ ಅವರು, ಪೀಡೆನಾಶಕಗಳ ಬಳಸುವಾಗ ಎಲ್ಲ ಸುರಕ್ಷತೆಗಾಗಿ ಸುರಕ್ಷಾ ಉಡುಪಗಳನ್ನು ಬಳಿಸುವ ಕುರಿತು ಪ್ರಾತ್ಯೇಕ್ಷಿಕವಾಗಿ ತೋರಿಸುವ ಮೂಲಕ ಬೆಳಗಳಿಗೆ ಕೀಟನಾಶಕ ಸಿಂಪರಣೆ ಪದ್ಧತಿ ವಿವರಿಸಿದರು.

ಕೇಂದ್ರದ ಇನ್ನೂರ್ವ ಸಸ್ಯ ರೋಗ ವಿಜ್ಞಾನಿ ಡಾ| ಜಹೀರ ಅವರು ಮಾತನಾಡಿ, ತೊಗರಿ ಮತ್ತು ಹತ್ತಿ ಬೆಳೆಯಲ್ಲಿ ಬರುವ ರೋಗಗಳಿಗೆ ಪೂರಕವಾದ ವಾತಾವರಣ, ಭಾಧೆಯ ಲಕ್ಷಣಗಳು ಮತ್ತು ನಿರ್ವಹಣೆ ಪದ್ದತಿಗಳ ಬಗ್ಗೆ ಕೂಲಂಕುಷವಾಗಿ ಮಾಹಿತಿ ನೀಡಿದ ಅವರು ಆಳಂದನಿಂದ ಬೆಂಗಳೂರಿಗೆ ಹೋದರು ಸಹಿತ ಆಳಂದದ ರೈತರು ತೊಗರಿ ಬೆಳೆಯಲ್ಲಿ ಮಿಶ್ರ ಬೆಳೆಯಾಗಿ ಹೆಸರು, ಉದ್ದು, ಸೋಯಾಭಿನ್ ಹೊಸದೊಂದು ಅಳವಡಿಸಿದ ಮಾದರಿಯನ್ನು ನೆನಪಿಸಿಕೊಳ್ಳುತ್ತಾರೆ ಎಂದರು.

ಕೆವಿಕೆ ಬೇಸಾಯ ಶಾಸ್ತ್ರಜ್ಞ ಡಾ| ಯಸೂಫ್ ಅಲಿ ಮಾತನಾಡಿ, ಹಿಂಗಾರು ಬೆಳೆಗಳಲ್ಲಿ ತಳಿಗಳ ಆಯ್ಕೆ ಬೀಜೋಪಚಾರ ಮತ್ತು ಬೇಸಾಯ ಕ್ರಮಗಳ ಕೈಗೊಳ್ಳುವ ಕುರಿತು ಉಪನ್ಯಾಸ ನೀಡಿದರು.

ತರಬೇತಿಯನ್ನು ಕಲಬುರಗಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಅನುಸೋಯಾ ಹೂಗಾರ ಅವರು ಉದ್ಘಾಟಿಸಿದರು. ಬೆಂಗಳೂರಿನ ಸಿಎನ್‌ಆರ್‌ಐ ಉಪಾಧ್ಯಕ್ಷೆ ಕುಶಿರಾಧ್ಯ, ಕೃಷಿ ತಾಂತ್ರಿಕ ಅಧಿಕಾರಿ ಬಿ.ಎನ್. ಬಿರಾದಾರ, ಬಸವೇಶ್ವರ ಅಗ್ರೋ ಕೇಂದ್ರದ ಮುಖ್ಯಸ್ಥ ರಾಜಶೇಖರ ಪಾಟೀಲ ಜಿಡಗಾ, ಎಚ್‌ಐಎಲ್ ವ್ಯವಸ್ಥಾಪಕ ಹರಿಷ, ಅಧಿಕಾರಿ ಸಿದ್ಧಾರ್ಥ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಂಪನಿಗಳಿಂದ ಸಾಧಕ ರೈತರಿಗೆ ಮತ್ತು ಔಷಧಿ, ಬೀಜಮಾರಾಟಗಾರಿಗೆ ಸನ್ಮಾನಿಸಲಾಯಿತು. ಆಗಮಿಸಿದ್ದ ರೈತರಿಗೆ ಕೀಟ ನಿರ್ವಹಣೆ ಸುರಕ್ಷಾ ಕಿಟ್ ಹಾಗೂ ತೋಟಗಾರಿಕೆ ಬೀಜಗಳನ್ನು ವಿತರಿಸಲಾಯಿತು.

ಕೆವಿಕೆ ಎಂ.ಸಿ. ಪಾಟೀಲ ನಿರೂಪಿಸಿದರು. ವಿವಿಧ ಭಾಗಗಳಿಂದ ರೈತರು ಮತ್ತು ರೈತ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮಾಹಿತಿ ಆಲಿಸಿದರು.

emedialine

Recent Posts

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

6 hours ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

17 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

17 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

19 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

19 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

19 hours ago