ಯಾದಗಿರಿ: ವಡಗೇರ ತಾಲೂಕಿನ ಯಕ್ಷಿಂತಿ ಗ್ರಾಮದ ದಲಿತರು ಬಹುವರ್ಷಗಳಿಂದ ಗ್ರಾಮದಿಂದ ಕೃಷ್ಣ ನದಿಯಿಂದ ಸಾಗುವ ಮಾರ್ಗದಲ್ಲಿ ಶವಸಂಸ್ಕಾರ ಮಾಡುತ್ತ ಬಂದಿದ್ದೆವು ಆ ಮಾರ್ಗಕ್ಕೆ ಗ್ರಾಮದ ಎಲ್ಲ ಚರಂಡಿ ನೀರು ಹರಿದುಹೊಗುತ್ತಿದ್ದು ಆ ಜಾಗ ತೀರಾ ಹದಗೆಟ್ಡು ಹೊಗಿದೆ ನಡೆದಾಡುವುದೆ ಕಷ್ಟವಾಗಿದೆ ನಮ್ಮ ಜನಾಂಗದಲ್ಲಿ ಮರಣ ಸಂಬವಿಸಿದಾಗ ಅಂತ್ಯ ಸಂಸ್ಕಾರದ ಚಿಂತೆ ಕಾಡುತ್ತಿದೆ ನಮ್ಮ ಸ್ವಂತ ಜಮೀನುಗಳಲ್ಲಿ ಸಂಸ್ಕಾರ ಮಾಡಲು ಹಲವು ದಲಿತ ಕುಟುಂಬಗಳಿಗೆ ಜಮೀನೆಯಿಲ್ಲ ಕೆಲವರಿಗೆ ಇದ್ದರು ಮೂರು ನಾಲ್ಕು ಕಿಲೋ ಮೀಟರ ದೂರದಲ್ಲಿದ್ದು ತೀರ ಸಂಕಷ್ಟ ಪರಿಸ್ಥಿತಿ ಎದುರಾಗಿದೆ ದಲಿತರಾದ ಕಾರಣ ಶವಸಾಗಿಸಲು ಯಾರು ವಾಹನ ಸಹಾಯ ನೀಡುವುದಿಲ್ಲ ಎಂದು ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ನಿಂಗಣ್ಣ ಕರಡಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಇದು ವಡಗೇರ ತಾಲೂಕಿನ ಯಕ್ಷಿಂತಿ ಗ್ರಾಮದ ದಲಿತರ ಜ್ವಲಂತ ಸಮಸ್ಯ ಕುಟುಂಬಗಳಲ್ಲಿ ಮರಣ ಸಂಬವಿಸಿದಾಗ ದಿಕ್ಕುದೊಚದ ಸ್ಥಿತಿ ಕಾಲಮಾನ ಕಳೆದು ಹೊಗಿ ೨೧ನೇ ಶತಮಾನದಲ್ಲಿಯೂ ಆದುನಿಕತೆಯಿಂದ ಬದುಕುತ್ತಿದ್ದೆವೆ ದಲಿತರ ಬದುಕಿನ ಸ್ಥಿತಿಗಳು ಬದಲಾಗಿಲ್ಲ ಎನ್ನುವುದಕ್ಕೆ ಈ ಸಮಸ್ಯಯೊಂದೆ ಜ್ವಲಂತ ಸಾಕ್ಷಿ. ತಾಂಡವಾಡುತ್ತಿರುವ ಅಷ್ಪೃಶ್ಯತೆ ವರ್ಗ ತಾರತಮ್ಯ ನಿಂದನೆ ದಲಿತರ ಬದುಕು ಆ ಬದುಕನ್ನು ಸಹಿಸುವು ಅನಿವಾರ್ಯತೆ .
ಸರಕಾರ ಪ್ರತಿವರ್ಷ ಎಸ್ ಸಿ ಎಸ್ ಟಿ ಜನಾಂಗದ ಅಭಿವೃಧ್ದಿಗಾಗಿ ಸಾವಿರಾರು ಕೋಟಿರೂಪಾಯಿಗಳು ಅನುದಾನ ಮೀಸಲಿಡುತ್ತಾರೆ ಇಂದಿಗೂ ದಲಿತರ ಕಾಲೋನಿಗಳು ಹೀನ ಸ್ಥಿತಿಯಲ್ಲಿವೆ ಬದುಕು ದಾರುಣವಾಗಿದೆ ಜಿಲ್ಲಾಡಳಿತ ಕೂಡ ದಲಿತರಿಗೆ ಮೂಲ ಸೌಕರ್ಯ ಒದಗಿಸುವಲ್ಲಿ ತಾರತಮ್ಯ ಮಾಡುತ್ತಿದೆ ದಲಿತರಾಗಿ ಹುಟ್ಟಿರುವುದೆ ಒಂದು ಶಾಪವೆಂಬ ಭಾವನೆ ಕಾಡುತ್ತಿದೆ ಎಂದು ಹೇಳಿದರು ಶವಸಂಸ್ಕಾರಕ್ಕಾಗಿ ಸ್ಮಶಾನ ಭೂಮಿ ಮಂಜೂರ ಮಾಡುವ ಬೇಡಿಕೆಯೊಂದಿಗೆ ೨೧/೦೯/೨೦೨೦ ರಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಮಿತಿ ವತಿಯಿಂದ ಧರಣಿ ಸತ್ಯಗ್ರಹ ಹಮ್ಮಿಕೊಳ್ಳಲಾಗಿತ್ತು ಆಗ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗಳು ಮನವಿ ಸ್ವಿಕರಿಸುತ್ತ ಸಮಸ್ಯಯನ್ನು ತ್ವರಿತವಾಗಿ ಪರಿಹರಿಸುವುದಾಗಿ ಬರವಸೆ ನೀಡಿದರು,ಒಂದು ವರ್ಷವೆ ಕಳೆದರು ಇದುವರೆಗೆ ಸಮಸ್ಯ ಪರಿಹರಿಸಿಲ್ಲ.
ಹೊರಾಟಗಳನ್ನು ನಿರ್ಲಕ್ಷಿಸುವ ಈ ಧೊರಣೆ ಮಾನವ ಹಕ್ಕುಗಳ ಉಲ್ಲಂಘನೆ ಎಂಬುದಾಗಿ ಕಂಡುಬರುತ್ತಿದೆ ನಮ್ಮ ಹಕ್ಕುಗಳು ಪಡೆದುಕೊಳ್ಳುವುದೆ ಹೇಗೆ ಎಂದು ಆಕ್ರೋಷ ವ್ಯಕ್ತಪಡಿಸಿದರು.
ಈ ಕುರಿತು ೧೨/೧೧/೨೦೨೦ ರಂದು ಜಿಲ್ಲಾಧಿಕಾರಿಗಳು ಸಮಾಜ ಕಲ್ಯಾಣ ಇಲಾಖೆಗೆ ಸೂಚಿಸಿದರು ಸಮಾಜ ಕಲ್ಯಾಣ ಇಲಾಖೆ ವಡಗೇರ ತಹಸಿಲ್ದಾರರಿಗೆ ೧೭/೧೧/೨೦೨೦ ರಂದು ಸರಕಾರಿ ಸ್ತಳದ ಲಭ್ಯತೆಯ ಕುರಿತು ಪರಿಸಿಲಿಸುವಂತೆ ಸೂಚಿಸಲಾಗಿತ್ತು ಸ್ಥಳ ಲಭ್ಯವಿಲ್ಲದಿದ್ದಲ್ಲಿ ಖಾಸಗಿ ಜಮೀನು ಖರಿದಿಸಿ ಮಂಜೂರಮಾಡಲು ಸೂಚನೆ ನೀಡಲಾಗಿತ್ತು ಖಾಸಗಿ ಜಮೀನು ಕೊಡಲು ಮುಂದು ಬಂದರು ಜಿಲ್ಲಾಡಳಿತ ಭೂಮಿ ಖರಿದಿಮಾಡಿ ಮಂಜೂರ ಮಾಡಲು ವರ್ಷವೆ ಕಳೆದರು ಸಮಸ್ಯ ಸಮಸ್ಯಯಾಗಿ ಉಳಿದಿದೆ ಯಾವ ಕ್ರಮವು ಕೈಗೊಂಡಿಲ್ಲ ಇದು ಅತ್ಯಂತ ಶೋಚನಿಯ ನಡೆ ಶಿಘ್ರದಲ್ಲಿ ಜಿಲ್ಲಾಧಿಕಾರಿಗಳು ಉಸ್ತುವರಿ ಮಂತ್ರಿಗಳು ಸಮಾಜ ಕಲ್ಯಾಣ ಸಚಿವರು ಯಾದಗಿರಿ ಜಿಲ್ಲೆಯ ಹಲವು ಗ್ರಾಮಗಳ ಇಂತ ಸಮಸ್ಯಗಳನ್ನು ಪರಿಹರಿಸಬೇಕು ಸ್ಮಶಾನ ಭೂಮಿ ಮಂಜೂರ ಮಾಡಲು ನಿರ್ಲಕ್ಷ್ಯವಹಿಸಿದರೆ ಮುಂದಿನ ದಿನಗಳಲ್ಲಿ ಶವವನ್ನು ಜಿಲ್ಲಾಡಳಿತ ಭವನದ ಮುಂದಿಟ್ಟು ಪ್ರತಿಭಟಿಸಲಾಗುವುದು ಎಂದು ನಿಂಗಣ್ಣ ಕರಡಿ ಆಗ್ರಹಿಸಿದ್ದಾರೆ
ವಾಡಿ (ಕಲಬುರಗಿ): ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಅವರ ವೃತ್ತದಲ್ಲಿರುವ ಬಾಬಾಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಂವಿಧಾನ ಪೂರ್ವ ಪೀಠಿಕೆ ಓದುವ ಮೂಲಕ…
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…