ಬಿಸಿ ಬಿಸಿ ಸುದ್ದಿ

ಕೂಲಿ ಕಾರ್ಮಿಕರಿಗೆ ಆಹಾರ ಕಿಟ್ ವಿತರಣೆ

ಕಲಬುರಗಿ: ಇಂದು ಚಂದ್ರನಗರ ಗ್ರಾಮದಲ್ಲಿ ಬಡ ಕೂಲಿ ಕಾರ್ಮಿಕರಿಗೆ ಕಾರ್ಮಿಕ ಇಲಾಖೆ ಮತ್ತು ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಆಹಾರ ಕಿಟ್ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಗುರಪ್ಪ ದಂಡುಗುಲಕರ್ ಮಾತಾಡಿದರು. ಮುಖ್ಯ ಅಥಿತಿಗಳಾಗಿ ಯುವ ಹೋರಾಟಗಾರರಾದ ಸುನೀಲ್ ಮಾನಪಡೆ ಮಾತನಾಡಿ ಕೋವಿಡ್ ಮಾಹಾಮಾರಿಯಿಂದ ಬಡವರ ಬದುಕು ಸಾಗಿಸಲು ತುಂಬಾ ಕಷ್ಟ ಪಡುತ್ತಿದ್ದಾರೆ ಹಿಂತಾ ಸಮಯದಲ್ಲಿ ಸರ್ಕಾರದ ಸವಲತ್ತುಗಳನ್ನು ತಲುಪಿಸುವ ನಿಟ್ಟಿನಲ್ಲಿ ರೈತ ಸಂಘದ ಪ್ರಯತ್ನ ಮಾಡುತ್ತಿದ್ದೆ , ಚಂದ್ರನಗರ ಗ್ರಾಮದಲ್ಲಿ ಪ್ರತಿಯೊಬ್ಬರು ಜಮೀನು ಇಲ್ಲದೆ ಕೇವಲ ಕೂಲಿ ಕಾರ್ಮಿಕರ ಕೆಲಸವನ್ನೇ ಅವಲಂಬಿಸಿದ್ದಾರೆ ಮುಂದಿನ ದಿನಗಳಲ್ಲಿ ಹೆಚ್ಚಿನ ಸವಲತ್ತುಗಳನ್ನು ಒದಗಿಸುವ ನಿಟ್ಟಿನಲ್ಲಿ ರೈತ ಸಂಘ ಹೋರಾಟ ನಡೆಸಲಿದೆ ಎಂದರು.

ರೈತ ಸಂಘದ ಜಿಲ್ಲಾ ಮುಖಂಡರಾದ ಶಾಂತಪ್ಪ ಪಾಟೀಲ್ ಸನ್ನೂರ ಅವರು ಮಾತನಾಡಿ ಈ ಗ್ರಾಮದ ಪ್ರತಿಯೊಬ್ಬರಿಗೂ ಜಮೀನಿನ ಹಕ್ಕು ಪತ್ರ ನೀಡುವದು ಮತ್ತು ಉಳಿಮೆ ಮಾಡಲು ಯೋಗ್ಯ ಇರುವ ಸಾಗುವಳಿ ಜಮೀನನ್ನು ಪಟ್ಟಾ ಮಾಡಿಕೊಡುವ ಮೂಲಕ ಮಾರುತಿ ಮನಪಡೆಯವರ ಒಂದು ಕನಸು ನನಸಾಗುವ ಜವಾಬ್ದಾರಿ ರೈತ ಸಂಘದ ಮೇಲೆ ಇದೆ, ಕಳೆದ ಮೂವತ್ತು ವರ್ಷಗಳ ಕಾಲ ಚಂದ್ರನಗರ ಗ್ರಾಮದ ಜನರು ಕರ್ನಾಟಕ ಪ್ರಾಂತ ರೈತ ಸಂಘ ಮುಖಂಡರಾದ ಮಾರುತಿ ಮನಪಡೆಯವರ ಜೊತೆಗೆ ನಿಂತು ಅವಿರತವಾಗಿ ದುಡಿದು ರೈತ ಚಳುವಳಿ ಬಲಪಡಿಸಿ ಈ ಬಾಗದ ನೀರಾವರಿ ಯೋಜನೆ , ತೊಗರಿ ಬೋರ್ಡ್ ರಚನೆ , ಬೆಂಬಲ ನೀಡುವ ಬಗ್ಗೆ ಹಲವಾರು ರೈತರ ಹೋರಾಟಗಳು ಯಶಸ್ವಿಗೊಳಿಸದ  ಕೀರ್ತಿ ತಮಗೆ ಸಲ್ಲುತ್ತದೆ ಎಂದರು.

ವೇದಿಕೆ ಮೇಲೆ  ಹಣಮಂತ ದಂಡುಗುಲಕರ್ ,ಭೀಮಶಾ ದಂಡುಗುಲಕರ್ ಉಪಸ್ಥಿತಿಯಲ್ಲಿದ್ದರು. ಹಣಮಂತ ಪೂಜಾರಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಪವನಕುಮಾರ ಯಾಂಕಣ್ಣ ಚವ್ಹಾಣ ವಂದಾನಾರ್ಪಣೆ ನೆರವೆರಿಸಿದರು. ನೂರಾರು ಗ್ರಾಮದ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದರು .

emedialine

Recent Posts

ಪೂರ್ವ ಪೀಠಿಕೆ ಓದುವ ಮೂಲಕ ಸಂವಿಧಾನ ದಿನ ಆಚರಣೆ

ವಾಡಿ (ಕಲಬುರಗಿ): ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಅವರ ವೃತ್ತದಲ್ಲಿರುವ ಬಾಬಾಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಂವಿಧಾನ ಪೂರ್ವ ಪೀಠಿಕೆ ಓದುವ ಮೂಲಕ…

3 hours ago

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

14 hours ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

1 day ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

1 day ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

1 day ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

1 day ago