ಬಿಸಿ ಬಿಸಿ ಸುದ್ದಿ

ಜೈನ ಧರ್ಮದ ಎಲ್ಲಾ ಉಪ ಪಂಗಡಗಳನ್ನು ಜೈನ ದಿಗಂಬರ ಎಂದು ಪರಿಗಣಿಸುವಂತೆ ಸುರೇಶ ತ೦ಗಾ ಮನವಿ

ಕಲಬುರಗಿ: ರಾಜ್ಯದ ಜೈನ ಧರ್ಮದಲ್ಲಿ ಬರುವ ಎಲ್ಲಾ ಉಪ ಪಂಗಡಗಳನ್ನು ಜೈನ ದಿಗಂಬರ ಎಂದು ಪರಿಗಣಿಸುವಂತೆ ಕೋರಿ ಜಿಲ್ಲೆಯಲ್ಲಿ ಪ್ರವಾಸದಲ್ಲಿರುವ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾದ ಡಾ: ಅಬ್ದುಲ ಅಜೀಮ ರವರಿಗೆ ಜೈನ ಸಮಾಜದ ಹಿರಿಯರು ಹಾಗೂ ಬಂಧುಗಳು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ನಿಗಮ ನಿಯಮಿತದ ರಾಜ್ಯ ನಿರ್ದೇಶಕರಾದ ಸುರೇಶ ಎಸ್‌.ತ೦ಗಾ ರವರ ನೇತೃತ್ವದಲ್ಲಿ ನಿಯೋಗದ ಮೂಲಕ ತೆರಳಿ ಮನವಿ ಸಲ್ಲಿಸಿದರು.

ಅಲ್ಪಸಂಖ್ಯಾತರ ಇಲಾಖೆಯಲ್ಲಿ ಜೈನ ದಿಗಂಬರ ಎಂದು ಜಾತಿ ಕಾಲಂ ನಲ್ಲಿ ಬರೆಸಿದವರಿಗೆ ಮಾತ್ರ ಸರಕಾರದ ಸಹಾಯ ಮತ್ತು ಸೌಲಭ್ಯ, ಯೋಜನೆಗಳು ಮಂಜೂರಾಗುತ್ತಿದ್ದು ಹಾಗೂ ಅರ್ಹರೆಂದು ಪರಿಗಣಿಸುತ್ತಿದ್ದು ಉಪ ಪಂಗಡಗಳು ಬರೆಸಿರುವುದರಿಂದ ಇದನ್ನು ಪರಿಗಣಿಸುತ್ತಿಲ್ಲ. ಹೀಗಾಗಿ ಜೈನ ಬಾಂಧವರು ಎಲ್ಲ ಯೋಜನೆಗಳಿಂದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದು ಇದನ್ನು ಪರಿಹರಿಸಿ ಕೂಡಲೇ ಎಲ್ಲ ಜೈನ ಧರ್ಮದ ಉಪ ಪಂಗಡಗಳನ್ನು ಜೈನ ದಿಗಂಬರ ಎ೦ದು ಪರಿಗಣಿಸುವಂತೆ ನಿರ್ದೇಶಕರಾದ ಸುರೇಶ ತಂಗಾರವರು ಡಾ: ಅಬ್ಬುಲ ಅಜೀಮ ರವರಿಗೆ ವಿವರಿಸಿದರು.

ದಶಕ ದಶಕಗಳಿಂದ ಈ ಸಮಸ್ಯೆ ಜೈನ ಧರ್ಮೀಯರಿಗೆ ಕಾಡುತ್ತಿದ್ದು ಕೂಡಲೇ ಆಯೋಗ ಹಿಂದುಳಿದ ವರ್ಗಗಳ ಆಯೋಗಕ್ಕೆ, ರಾಜ್ಯ ಸರ್ಕಾರಕ್ಕೆ ಹಾಗೂ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸೂಕ್ತವಾದ ತೀರ್ಮಾನ ಕೈಗೊಳ್ಳಲು ಸೂಚಿಸುವಂತೆ ತಂಗಾ ರವರು ಮನವಿ ಮಾಡಿದರು.

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಆಯೋಗದ ಅಧ್ಯಕ್ಷರಾದ ಅಜೀಮ ರವರು ಆಯೋಗದ ವತಿಯಿಂದ ಈ ಸಮಸ್ಯೆಯನ್ನು ಪರಿಹರಿಸುವಂತೆ ಸರಕಾರಕ್ಕೆ ಸೂಚಿಸಲಾಗುವುದು. ಜೈನ ಧರ್ಮೀಯರಿಗೆ ಪ್ರಾಮಾಣಿಕವಾಗಿ ನ್ಯಾಯ ಒದಗಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜೈನ ಸಮಾಜದ ಹಿರಿಯರಾದ ಪ್ರಕಾಶ ಜೈನ, ದೀಪಕ ಪಂಡಿತ, ವೀರಕುಮಾರ ಮೆಹತಾ, ಅರಿಹ೦ತ ಪಾಟೀಲ, ಭರಮಶೆಟ್ಟಿ ಜಗಶೆಟ್ಟಿ, ರಾಜೇಂದ್ರ ಕುಣಚಗಿ, ಅನೀಲ ಭಸ್ಮೆ ಸೇರಿದ೦ತೆ ಅನೇಕರು ಉಪಸ್ಸಿತರಿದರು.

emedialine

Recent Posts

ಪೂರ್ವ ಪೀಠಿಕೆ ಓದುವ ಮೂಲಕ ಸಂವಿಧಾನ ದಿನ ಆಚರಣೆ

ವಾಡಿ (ಕಲಬುರಗಿ): ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಅವರ ವೃತ್ತದಲ್ಲಿರುವ ಬಾಬಾಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಂವಿಧಾನ ಪೂರ್ವ ಪೀಠಿಕೆ ಓದುವ ಮೂಲಕ…

2 hours ago

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

13 hours ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

24 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

1 day ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

1 day ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

1 day ago