ಕಲಬುರಗಿ: ರಾಜ್ಯದ ಜೈನ ಧರ್ಮದಲ್ಲಿ ಬರುವ ಎಲ್ಲಾ ಉಪ ಪಂಗಡಗಳನ್ನು ಜೈನ ದಿಗಂಬರ ಎಂದು ಪರಿಗಣಿಸುವಂತೆ ಕೋರಿ ಜಿಲ್ಲೆಯಲ್ಲಿ ಪ್ರವಾಸದಲ್ಲಿರುವ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾದ ಡಾ: ಅಬ್ದುಲ ಅಜೀಮ ರವರಿಗೆ ಜೈನ ಸಮಾಜದ ಹಿರಿಯರು ಹಾಗೂ ಬಂಧುಗಳು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ನಿಗಮ ನಿಯಮಿತದ ರಾಜ್ಯ ನಿರ್ದೇಶಕರಾದ ಸುರೇಶ ಎಸ್.ತ೦ಗಾ ರವರ ನೇತೃತ್ವದಲ್ಲಿ ನಿಯೋಗದ ಮೂಲಕ ತೆರಳಿ ಮನವಿ ಸಲ್ಲಿಸಿದರು.
ಅಲ್ಪಸಂಖ್ಯಾತರ ಇಲಾಖೆಯಲ್ಲಿ ಜೈನ ದಿಗಂಬರ ಎಂದು ಜಾತಿ ಕಾಲಂ ನಲ್ಲಿ ಬರೆಸಿದವರಿಗೆ ಮಾತ್ರ ಸರಕಾರದ ಸಹಾಯ ಮತ್ತು ಸೌಲಭ್ಯ, ಯೋಜನೆಗಳು ಮಂಜೂರಾಗುತ್ತಿದ್ದು ಹಾಗೂ ಅರ್ಹರೆಂದು ಪರಿಗಣಿಸುತ್ತಿದ್ದು ಉಪ ಪಂಗಡಗಳು ಬರೆಸಿರುವುದರಿಂದ ಇದನ್ನು ಪರಿಗಣಿಸುತ್ತಿಲ್ಲ. ಹೀಗಾಗಿ ಜೈನ ಬಾಂಧವರು ಎಲ್ಲ ಯೋಜನೆಗಳಿಂದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದು ಇದನ್ನು ಪರಿಹರಿಸಿ ಕೂಡಲೇ ಎಲ್ಲ ಜೈನ ಧರ್ಮದ ಉಪ ಪಂಗಡಗಳನ್ನು ಜೈನ ದಿಗಂಬರ ಎ೦ದು ಪರಿಗಣಿಸುವಂತೆ ನಿರ್ದೇಶಕರಾದ ಸುರೇಶ ತಂಗಾರವರು ಡಾ: ಅಬ್ಬುಲ ಅಜೀಮ ರವರಿಗೆ ವಿವರಿಸಿದರು.
ದಶಕ ದಶಕಗಳಿಂದ ಈ ಸಮಸ್ಯೆ ಜೈನ ಧರ್ಮೀಯರಿಗೆ ಕಾಡುತ್ತಿದ್ದು ಕೂಡಲೇ ಆಯೋಗ ಹಿಂದುಳಿದ ವರ್ಗಗಳ ಆಯೋಗಕ್ಕೆ, ರಾಜ್ಯ ಸರ್ಕಾರಕ್ಕೆ ಹಾಗೂ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸೂಕ್ತವಾದ ತೀರ್ಮಾನ ಕೈಗೊಳ್ಳಲು ಸೂಚಿಸುವಂತೆ ತಂಗಾ ರವರು ಮನವಿ ಮಾಡಿದರು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಆಯೋಗದ ಅಧ್ಯಕ್ಷರಾದ ಅಜೀಮ ರವರು ಆಯೋಗದ ವತಿಯಿಂದ ಈ ಸಮಸ್ಯೆಯನ್ನು ಪರಿಹರಿಸುವಂತೆ ಸರಕಾರಕ್ಕೆ ಸೂಚಿಸಲಾಗುವುದು. ಜೈನ ಧರ್ಮೀಯರಿಗೆ ಪ್ರಾಮಾಣಿಕವಾಗಿ ನ್ಯಾಯ ಒದಗಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜೈನ ಸಮಾಜದ ಹಿರಿಯರಾದ ಪ್ರಕಾಶ ಜೈನ, ದೀಪಕ ಪಂಡಿತ, ವೀರಕುಮಾರ ಮೆಹತಾ, ಅರಿಹ೦ತ ಪಾಟೀಲ, ಭರಮಶೆಟ್ಟಿ ಜಗಶೆಟ್ಟಿ, ರಾಜೇಂದ್ರ ಕುಣಚಗಿ, ಅನೀಲ ಭಸ್ಮೆ ಸೇರಿದ೦ತೆ ಅನೇಕರು ಉಪಸ್ಸಿತರಿದರು.