ಕಲಬುರಗಿ: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಆಗ್ರಹಿಸಿ ಕರ್ನಾಟಕ ಮಾದಿಗ ದಂಡೋರ (ರಿ) ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಸಮಾಜ ಕಲ್ಯಾಣ ಇಲಾಖೆ ಸಚಿವರು ಹಾಗೂ ಹಿಂದುಳಿದ ವರ್ಗಗಳ ಸಚಿವರಾದ ಶ್ರೀನಿವಾಸ ಕೋಟಾ ಪೂಜಾರಿ ಅವರಿಗೆ ಮನವಿ ಸಲ್ಲಿಸಲಾಯಿತು.
ಸುಧೀರ್ಘವಾಗಿ ಆರು ವರ್ಷ ಎಂಟು ತಿಂಗಳ ಕಾಲ ಸಮೀಕ್ಷೆಯನ್ನು ನಡೆಸಿದ ನ್ಯಾಯಮೂರ್ತಿ ಎ.ಜೆ. ಸದಾಶಿವ ಅವರ ಆಯೋಗವು ಪರಿಶಿಷ್ಠ ಜಾತಿಯಲ್ಲಿ ಜನಸಂಖ್ಯೆ ಆಧಾರದ ಮೇಲೆ ಒಳ ಮೀಸಲಾತಿ ನೀಡುವುದಕ್ಕೆ ಶಿಫಾರಸ್ಸು ಮಾಡಿದ್ದು ತಮಗೆ ಗೊತ್ತಿರದ ಸಂಗತಿಯೇನಲ್ಲ. ಆದರೆ, ಇಲ್ಲಿಯವರೆಗೆ ವರದಿಯನ್ನು ಅನುಷ್ಠಾನಗೊಳಿಸಲು ವಿಳಂಭ ಮಾಡುತ್ತಿರುವುದು ದುರದೃಷ್ಠಕರವಾದ ಸಂಗತಿಯಾಗಿದೆ ಎಂದು ಸಮಿತಿಯ ಜಿಲ್ಲಾಧ್ಯಕ್ಷ ರಮೇಶ.ಎಚ್.ವಾಡೇಕರ್ ಹೇಳಿದರು.
ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಪರಿಶಿಷ್ಠ ಜಾತಿಯಲ್ಲಿರುವ ೧೦೧ ಉಪ ಜಾತಿಗಳ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಬೆಳವಣಿಗೆಗಳ ಕುರಿತು ಸಮೀಕ್ಷೆ ನಡೆಸುವುದಕ್ಕೆ ಈ ಆಯೋಗ ರಚಿಸಲಾಗಿತ್ತು. ಆಗ ಎನ್.ವಾಯ್, ಹನುಮಂತಪ್ಪನವರು ಆಯೋಗಕ್ಕೆ ಅಧ್ಯಕ್ಷರಾಗಿದ್ದು, ಆದರೆಮ ಅವರಯ ಕೆಲವೇ ದಿನಗಳ ನಂತರ ರಾಜೀನಾಮೆ ನೀಡಿದ ಪ್ರಯುಕ್ತ ಎಚ್.ಜಿ. ಬಾಲಕೃಷ್ಣ ಅವರ ನೇತೃತ್ವದಲ್ಲಿ ಸಮೀಕ್ಷೆ ನಡೆಸಬೇಕೆಂದಾಗ ಅವರು ನಿಧನ ಹೊಂದಿದ್ದರು.
ಇದರಿಂದಾಗಿ ಸಮೀಕ್ಷೆ ನೆನೆಗುದಿಗೆ ಬಿದ್ದಿತ್ತು. ನಂತರ ಜೆಡಿಎಸ್ ಕಾಂಗ್ರೆಸ್, ಸಮ್ಮಿಶ್ರ ಸರಕಾರ ಆಡಳಿತಕ್ಕೆ ಬಂದಾಗ ಆಗಿನ ಮುಖ್ಯಮಂತ್ರಿ ಎನ್.ಧರ್ಮಸಿಂಗ್ ಅವರು ನ್ಯಾಯಮೂರ್ತಿ ಎ.ಜೆ. ಸದಾಶಿವ ರವರ ಆಯೋಗವನ್ನು ರಚಿಸಿತ್ತು. ದಿನಾಂಕ ೨೫-೦೯-೨೦೧೫ ರಂದು ರಚನೆಗೊಂಡ ಆಯೋಗವು ರಾಜ್ಯದ ಎಲ್ಲಾ ಜಿಲ್ಲಾ, ತಾಲೂಕು ಮತ್ತು ಹೊಬಳಿ ಮಟ್ಟಗಳಲ್ಲಿ ಪ್ರವಾಸ ಮಾಡಿ, ಎಲ್ಲರೊಂದಿಗೆ ಚರ್ಚಿಸಿ ಬುದ್ದಿಜೀವಿಗಳನ್ನು ಭೇಟಿ ಮಾಡಿ ಈ ಬಗ್ಗೆ ಅಭಿಪ್ರಾಯ ನೀಡುವಂತೆ ಅವಕಾಶ ಕಲ್ಪಿಸಿ ಅದರಂತೆ ಸಂಗ್ರಹಿಸಲಾದ ಅಭಿಪ್ರಾಯಗಳನ್ನು ಪಡೆದು ೧೯೫ ಪ್ರಶ್ನಾವಳಿಗಳಂತೆ ಸಮೀಕ್ಷೆ ಪ್ರಾರಂಭಿಸಿತ್ತು ಎಂದು ತಿಳಿಸಿದರು.
ಅದಕ್ಕೆ ಆಗಿನ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪನವರು ಆರ್ಥಿಕ ನೆರವನ್ನು ನೀಡಿ ಸಮೀಕ್ಷೆ ಚುರುಕುಗೊಳಿಸಲು ಅನುವು ಮಾಡಿಕೊಟ್ಟಿದ್ದು, ನಂತರ ಆಯೋಗ ೨೦೦ ಪುಟಗಳ ವರದಿಯನ್ನು ಸಿದ್ದಪಡಿಸಿ ಅಸ್ಪಶ್ಯ ಜಾತಿಗಳ ಜನಗಣತಿ ನಡೆಸಿ ಜಾತಿವಾರು ಶಿಕ್ಷಣ, ಉದ್ಯೋಗ, ಕೃಷಿ, ಬಡತನ, ವಾಣಿಜ್ಯ ಮತ್ತು ಕೈಗಾರಿಕೋದ್ಯಮ ಹಾಗೂ ರಾಜಕೀಯ ಸ್ಥಾನಮಾನಗಳಂತೆ ಮಾಹಿತಿ ಸಂಗ್ರಹಿಸಿ ವಿಶ್ಲೇಷಣೆ ಮಾಡಿದ ನಂತರ ಶೇ. ೩೩.೪೭ ರಷ್ಟಿರುವ ಎಡಗೈ ಗುಂಪಿಗೆ ಶೇ. ೬, ಶೇ, ೩೨ ರಷ್ಟಿರುವ ಬಲಗೈ ಶೆ. ೫, ಇತರೆ ಉಪಜಾತಿಗಳಿಗೆ ಶೇ, ೩, ಅಲೆಮಾರಿ ಅಸ್ಪೃಶ್ಯ ಶೇ, ೧, ರಂತೆ ಮೀಸಲಾತಿ ನಿಗದಿಪಡಿಸಿ, ಆಯೋಗ ಸರ್ಕಾರಕ್ಕೆ ದಿನಾಂಕ ೧೪-೦೬-೨೦೧೧ ರಂದು ಹಿಂದಿನ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರಿಗೆ ವರದಿ ಸಲ್ಲಿಸಿತ್ತು. ವರದಿ ಸಲ್ಲಿಸಿ ಈವರೆಗೆ ಸುಮಾರು ೮ ವರ್ಷ ಗತಿಸಿದರೂ ಸದಾಶಿವ ಆಯೋಗದ ವರದಿಯನ್ನು ಯಾವುದೇ ಸರಕಾರ ಅಂಗೀಕಾರ ಮಾಡಲು ಮೀನಾಮೇಷ ಎಣಿಸುತ್ತಿರುವುದರ ಮರ್ಮವೇನೆಂಬುದು ಅರ್ಥವಾಗುತ್ತಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ ಎಂದರು.
ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಆಯೋಗದ ವರದಿ ಅನುಷ್ಠಾನಗೊಳಿಸುವಂತೆ ಛಲವಾದಿ ಮತ್ತು ಮಾದಿಗ ಹಲವಾರು ರೀತಿಯ ಹೋರಾಟಗಳನ್ನು ರೂಪಿಸಿ ಸುವರ್ಣ ಸೌಧ ಚಲೋ, ಹೋರಾಟದಲ್ಲಿ ಪೊಲೀಸ್ ಲಾಠಿಯಿಂದ ೫೦ ಜನರಿಗೆ ಮೂಲೆ ಮುರಿದು ನಂತರ ಬೃಹತ್ ಪ್ರತಿಭಟನೆಗಳು ರಾಜ್ಯಾಧ್ಯಾಂತ ಜನಾಂದೋಲನ ರ‍್ಯಾಲಿ ತಮಟೆ ಚಳುವಳಿ, ದೆಹಲಿ ಚಲೋ ಚಳುವಳಿ ಮತ್ತು ಹುಬ್ಬಳ್ಳಿಯಲ್ಲಿ ಮಾದಿಗರ ಐತಿಹಾಸಿಕ ಸಮಾವೇಶ, ಕೂಲಸಂಗಮದಿಂದ ಕಾಲ್ನಡಿಗೆ ಜಾಥಾ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲಾ, ತಾಲೂಕು, ಹೋಬಳಿ, ಮತ್ತು ಗ್ರಾಮ ಮಟ್ಟದಲ್ಲಿ ಹಲವಾರು ರೀತಿಯ ಹೋರಾಟಗಳನ್ನು ಮಾಡಿದರೂ ಕೂಡಾ ಸರ್ಕಾರ ಇದರ ಬಗ್ಗೆ ಚಕಾರವೆತ್ತುತ್ತಿಲ್ಲ, ಏನೇ ಇದ್ದರೂ ಶೀಘ್ರದಲ್ಲಿ ಸಂವಿಧಾನದ ವಿಧಿ ೩೪೧(೨) ತಿದ್ದುಪಡಿ ತಂದು, ಸದಾಶಿವ ಆಯೋಗದ ವರದಿ ಅನುಷ್ಠಾನಗೊಳಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ಥಾವಣೆ ಕಳುಹಿಸಿಕೊಡಬೇಕೆಂದು ಸಮಿತಿಯು ಮನವಿ ಮಾಡಕೊಳ್ಳಲಾಯಿತು ಎಂದರು.
ಕರ್ನಾಟಕ ರಾಜ್ಯದಲ್ಲಿ ವಿಧಾನ ಸಭಾ ಮತ್ತು ಲೋಕ ಸಭಾ ಚುನಾವಣೆಯಲ್ಲಿ ನಮ್ಮ ಮಾದಿಗ ಸಮಾಜದವರು ತಾವು ಹೇಳಿದಂತೆ ಹೆಚ್ಚಿನ ಪ್ರಮಾಣದಲ್ಲಿ ಬಿಜೆಪಿ ಪಕ್ಷಕ್ಕೆ ಬೆಂಬಲಿಸಲಾಗಿದೆ. ಆದ್ದರಿಂದ ಮುಂದಿನ ಸಚಿವ ಸಂಪುಟದಲ್ಲಿ ಚರ್ಚಿಸಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ಸಚಿವರಿಗೆ ಮನವಿ ಮಾಡಲಾಯಿತು ಎಂದರು.
ಈ ಸಂದರ್ಭದಲ್ಲಿ ದಶರಥ ಎನ್.ಕಲಬುರಗಿ, ರಾಜು ಎಸ್.ಕಟ್ಟಿಮನಿ, ಬಂಡೇಶ ರತ್ನಡಗಿ, ರಂಜಿತ್ ಮೂಲಿಮನಿ, ಹರಿಶ್ಚಂದ್ರ ಎಸ್.ದೊಡ್ಡಮನಿ, ಪ್ರದೀಪ್ ಭಾವೆ, ಮಲ್ಲಿಕಾರ್ಜುನ ಎಸ್. ಸರಡಗಿ, ಪ್ರದೀಪ ಬಾಚನಾಳ, ಗುರುರಾಜ ಭಂಡಾರಿ, ಸಚೀನ ಆರ್. ಕಟ್ಟಿಮನಿ, ಮನೋಹರ ಬಿರೇನೂರ, ಹಣಮಂತ ರತ್ನಡಗಿ, ಮಹೇಶ ಮೂಲಿಮನಿ, ರಾಹುಲ ಟಿ. ಮೇತ್ರೆ, ರಾಜು ಹದನೂರ, ಶಿವು ಕಟ್ಟಿಮನಿ, ಕುಶಲ ಕಟ್ಟಿಮನಿ, ಚಂದಪ್ಪ ಕಟ್ಟಿಮನಿ ಸೇರಿದಂತೆ ಇನ್ನಿತರರು ಇದ್ದರು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…