ಬಿಸಿ ಬಿಸಿ ಸುದ್ದಿ

ಹದಗೆಟ್ಟ ರಸ್ತೆಗಳಲ್ಲಿ ಸಾರ್ವಜನಿಕರ ಸಂಕಟಮಯ ಪ್ರಯಾಣ: ಹರಿದು ಚಿಂದಿಯಾಗಿರುವ ತಾಲೂಕಿನ ರಸ್ತೆಗಳು

ಶಹಾಬಾದ:ಹರಿದು ಚಿಂದಿಯಾಗಿರುವ ರಸ್ತೆ, ಎಲ್ಲಿ ನೋಡಿದರಲ್ಲಿ ತಗ್ಗು ಗುಂಡಿಗಳು, ಇಲ್ಲಿನ ಬಹುತೇಖ ರಸ್ತೆಗಳಲ್ಲಿ ಸಂಚರಿಸುವ ಜನರಿಗೆ ಎಲ್ಲಿಲ್ಲದ ಸಂಕಟ.ಇದು ನಗರದ ಸಮೀಪದ ನಿಜಾಮ ಬಜಾರದಿಂದ ಹೊನಗುಂಟಾ ಗ್ರಾಮಕ್ಕೆ ಹೋಗುವ ರಸ್ತೆ, ನಗರದಿಂದ ಜೇವರ್ಗಿ ರಸ್ತೆ, ನಗರದ ಬಸವೇಶ್ವರ ವೃತ್ತದಿಂದ ಜೇವರ್ಗಿ ವೃತ್ತದವರೆಗಿನ ರಸ್ತೆ ಹಾಗೂ ನಗರದ ವಾಡಿ ಕ್ರಾಸ್‌ನಿಂದ ನಗರದೊಳಗೆ ಪ್ರವೇಶಿಸುವ ತಾಲೂಕಾ ಶಹಾಬಾದನ ರಸ್ತೆಯ ದುಸ್ಥಿತಿ.

ತಾಲೂಕಿನಿಂದ ಹೊರಗಡೆ ಯಾವುದೇ ರಸ್ತೆಯಿಂದ ಹೊರಡುವ ಜನರಿಗೆ ಹದಗೆಟ್ಟ ರಸ್ತೆಗಳ ದರ್ಶನ ಆಗದೇ ಇರಲಾರದು.ಹದಗೆಟ್ಟ ಇಲ್ಲಿನ ರಸ್ತೆಗಳು ವರ್ಷದ ಎಲ್ಲಾ ದಿನಗಳಲ್ಲಿ ಇದೇ ಸ್ಥಿತಿಯಲ್ಲಿರುತ್ತವೆ. ಈ ರಸ್ತೆಯ ದುರಸ್ತಿ ಯಾವಾಗ? ಎಂಬುದೆ ನರಕಯಾತನೇ ಅನುಭವಿಸುತ್ತಿರುವ ಪ್ರಯಾಣಿಕರ ಯಕ್ಷ ಪ್ರಶ್ನೆಯಾಗಿದೆ.

ಜನಸ್ನೇಹಿಯಾಗಿರಬೇಕಾದ ರಸ್ತೆಗಳು ಮಾತ್ರ ಹದಗೆಟ್ಟಿವೆ. ರಸ್ತೆಗಳಿಗಾಗಿ ಸರ್ಕಾರ ಕೊಟ್ಯಾಂತರ ರೂಪಾಯಿಗಳು ಖರ್ಚು ಮಾಡುವ ಹಣ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ಈ ರಸ್ತೆಯ ಮೂಲಕ ಪ್ರತಿನಿತ್ಯ ಸಾವಿರಾರು ವಾಹನಗಳು ಚಲಿಸುತ್ತವೆ. ಅದರೊಳಗೆ ಪ್ರಯಾಣಿಸುವ ಪ್ರಯಾಣಿಕರು ಜಟಕಾ ಬಂಡಿಯೊಳಗೆ ಕುಂತ ಅನುಭವ ಆಗದೇ ಇರಲಾರದು. ಜೀವ ಕೈಯಲ್ಲಿ ಹಿಡಿದುಕೊಂಡು ಇಲ್ಲಿನ ಜನರು ಪ್ರಯಾಣ ಬಯಸಬೇಕಾದ ಪರಿಸ್ಥಿತಿ ಬಂದೊದಗಿದೆ ಎಂದರೆ ಇಲ್ಲಿನ ರಸ್ತೆಗಳಲ್ಲಿ ತೆಗ್ಗು ಗುಂಡಿಗಳನ್ನು ಎಣಿಸಲು ಸಾಧ್ಯವಿಲ್ಲಷ್ಟರ ಮಟ್ಟಿಗೆ ಹಾಳಾಗಿದೆ.

ಸುಮಾರು ೨೫ ರಿಂದ ೪೦ ಟನ್ ಭಾರ ಹೊತ್ತ ಸಿಮೆಂಟ ಹಾಗೂ ಫರ್ಸಿ ಲಾರಿಗಳಿಂದ ರಸ್ತೆ ಸಂಪೂರ್ಣ ಹಾಳಾಗಿ ಹೋಗಿದೆ. ಅಲ್ಲದೆ ಒಬ್ಬರಿಗೊಬ್ಬರೂ ಗುರುತು ಸಿಗದ ಹಾಗೇ ಮುಖ, ಮೈಗೆ ಭಾರಿ ಪ್ರಮಾಣದ ಧೂಳು ಹತ್ತುವುದರಿಂದ ಜನರು ಅನೇಕ ತೊಂದರೆಗಳಿಗೆ ಒಳಗಾಗುತ್ತಿದ್ದಾರೆ. ಕಳಪೆ ಡಾಂಬರೀಕರಣದಿಂದ ರಸ್ತೆ ಕಿತ್ತು ಹೋಗಿ ದೊಡ್ಡ ದೊಡ್ಡ ತಗ್ಗು ದಿನ್ನೆಗಳು ನಿರ್ಮಾಣವಾಗಿದೆ. ಇದರಿಂದ ಜನರು ರಸ್ತೆಗಿಳಿಯಲು ತೊಂದರೆ ಪಡಬೇಕಾಗಿದೆ. ವಾಹನ ಸವಾರರು ಈ ಹದಗೆಟ್ಟ ರಸ್ತೆಯ ಸುಧಾರಣೆಗೆ ಮುಂದಾಗದ ಲೋಕೋಪಯೋಗಿ ಇಲಾಖೆ ಹಾಗೂ ಸಂಬಂಧಿಸಿದ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಸದ್ಯ ಈ ರಸ್ತೆಯಿಂದ ಹೋಗಬೇಕಾದರೆ ಉಯ್ಯಾಲೆ ಆಡಿದಂತಾಗುತ್ತದೆ. ಸುಲಭ ಹೆರಿಗೆಗೆ ಇಲ್ಲಿಗೆ ಬರಬೇಕಷ್ಟೆ ಎಂದು ಇಲ್ಲಿನ ಜನರು ಈ ರಸ್ತೆಯ ಕುರಿತು ವ್ಯಂಗವಾಗಿ ಮಾತನಾಡುತ್ತಾರೆ.

ಇದೇ ರಸ್ತೆಯ ಮೂಲಕ ಅಧಿಕಾರಿಗಳು, ಜನಪ್ರತಿನಿಧಿಗಳು ಅನೇಕ ಬಾರಿ ತಿರುಗಾಡಿದರೂ ಬಹುಶ: ಅವರಿಗೆ ಇದರ ಅನುಭವ ಬಂದಿರಲಕ್ಕಿಲ್ಲ. ಇವರು ಇದ್ದು ಏನು ಪ್ರಯೋಜನವಿಲ್ಲ ಎಂದು ಪ್ರಯಾಣಿಕರ ಅಂಬೋಣವಾಗಿದೆ.ಇಲ್ಲಿನ ರಸ್ತೆಗಳು ಸಂಪೂರ್ಣ ಹದಗೆಟ್ಟು ಹೋದರೂ ಸಂಬಂಧಿಸಿದ ಅಧಿಕಾರಿಗಳು ಈ ಕಡೆ ಗಮನಹರಿಸುತ್ತಿಲ್ಲ.ಜನರ ಗೋಳು ಕೇಳುತ್ತಿಲ್ಲ. ಈ ರಸ್ತೆಗಳ ಶಾಶ್ವತ ಸುಧಾರಣೆಗೆ ಸಂಬಂಧಿಸಿದ ಇಲಾಖೆ ಹಾಗೂ ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಕ್ರಮ ಕೈಗೊಳ್ಳುವ ಮೂಲಕ ಪ್ರಯಾಣಿಕರ ನರಕಯಾತನೆ ತಪ್ಪಿಸಬೇಕಾಗಿದೆ.

ರಸ್ತೆಯ ಉದಕ್ಕೂ ತಗ್ಗು ಗುಂಡಿಗಳು, ನೆಲದ ಮೇಲೆ ಕರಡಿಕೊಂಡಿರುವ ಕಂಕರ್ ಬಚಾವಾಗಿ ಹೋಗಬೇಕಾದ ಪ್ರಸಂಗ ಎದುರಾಗಿದೆ. ಶಹಾಬಾದ ನಗರದಿಂದ ಹೊನಗುಂಟಾ ಗ್ರಾಮಕ್ಕೆ ಹೋಗಬೇಕಾದರೆ ಎಲ್ಲಿಲ್ಲದ ಸಂಕಟ ಉಂಟಾಗುತ್ತಿದೆ.ಕೂಡಲೇ ರಸ್ತೆ ಮಾಡಬೇಕಾದ ಅನಿವಾರ್ಯವಿದೆ. -ರಾಯಪ್ಪ ಹುರಮುಂಜಿ ಸಾಮಾಜಿಕ ಕಾರ್ಯಕರ್ತ.

ನಗರೋತ್ಥಾನ ಯೋಜನೆಯಲ್ಲಿ ನಗರಸಭೆಯಿಂದ ನಿರ್ಮಾಣವಾಗುತ್ತಿರುವನಗರದ ಬಸವೇಶ್ವರ ವೃತ್ತದಿಂದ ಜೇವರ್ಗಿ ವೃತ್ತದವರೆಗಿನ ನೂತನ ರಸ್ತೆ ಹಳ್ಳ ಹಿಡಿದಿವೆ.ಮೂರು ವರ್ಷದಿಂದ ಜನರು ಸರಿಯಾ ರಸ್ತೆ ಕಾಣದೇ ತೊಂದರೆ ಅನುಭವಿಸುತ್ತಿದ್ದರೂ ಶಾಸಕರು ಸರಿಪಡಿಸುವ ಗೋಜಿಗೆ ಯಾರು ಮುಂದಾಗುತ್ತಿಲ್ಲ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರಜೆಗಳಿಗೆ ಮೂಲಭೂತ ಸೌಕರ್ಯ ನೀಡದ ಜನಪ್ರತಿನಿಧಿಗಳಿಗೆ ಮುಂದಿನ ಚುನಾವಣೆಯಲ್ಲಿ ಜನರೇ ಪಾಠ ಕಲಿಸುತ್ತಾರೆ. ಲೋಹಿತ್ ಕಟ್ಟಿ ಪ್ರ.ಕಾರ್ಯದರ್ಶಿ ಜೆಡಿಎಸ್ ಶಹಾಬಾದ.

ನಗರದೊಳಗೆ ಪ್ರವೇಶ ಮಾಡಿದರೂ, ನಗರದಿಂದ ಹೊರ ಹೋದರೂ ಹದಗೆಟ್ಟ ರಸ್ತೆಗಳ ದರ್ಶನ ಜತೆಗೆ ಕೆಟ್ಟ ಅನುಭವ ಉಂಟಾಗುತ್ತಿದೆ.ತಗ್ಗು ಗುಂಡಿಯಲ್ಲಿ ಬಿದ್ದು ಅದೆಷ್ಟೋ ಜನರು ಆಸ್ಪತ್ರೆಗೆ ಒಳಗಾಗಿದ್ದಾರೆ. ಧೂಳಿನಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.ಆದರೂ ಜನರ ಸಂಕಷ್ಟಕ್ಕೆ ಯಾರು ಸ್ಪಂದಿಸುತ್ತಿಲ್ಲ. ಶಾಸಕರೇ ದಯಮಾಡಿ ಜನರ ಸಂಕಷ್ಟಕ್ಕೆ ಸ್ಪಂದಿಸಿ. -ನಾಗಣ್ಣ ರಾಂಪೂರೆ ನಾಗರಿಕ.

ಪರ್ಸೆಂಟೇಜ್ ಸಂಸ್ಕೃತಿಯಿಂದ ನಗರದ ಬಸವೇಶ್ವರ ವೃತ್ತದಿಂದ ಜೇವರ್ಗಿ ವೃತ್ತದವರೆಗಿನ ರಸ್ತೆ ಸಂಪೂರ್ಣ ಹಾಳಾಗಿದೆ.ಸರ್ಕಾರದ ಕೋಟಿಗಟ್ಟಲೇ ಅನುದಾನ ವ್ಯರ್ಥವಾಗುತ್ತಿದೆ.ಆದರೂ ನಗರಸಭೆಯ ಹಾಗೂ ಡಿಯುಡಿಸಿ ಅಧಿಕಾರಿಗಳು ಏನು ಮಾಡುತ್ತಿಲ್ಲ. ಕೂಡಲೇ ಜಿಲ್ಲಾಧಿಕಾರಿಗಳು ಕ್ರಮಕೈಗೊಳ್ಳಬೇಕು.- ಪೂಜಪ್ಪ ಮೇತ್ರೆ ನಾಗರಿಕ.

emedialine

Recent Posts

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

46 mins ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

12 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

12 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

14 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

14 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

14 hours ago