ಬಿಸಿ ಬಿಸಿ ಸುದ್ದಿ

ನನ್ನೊಳಗಿನ ಕನಸು ಸಾಕಾರಗೊಂಡ ಸಂಭ್ರಮ: ʻಕನ್ನಡತಿʼ ರಂಜನಿ

ಬೆಂಗಳೂರು: ಪುಸ್ತಕ ಬರೆಯುವ ನನ್ನೊಳಗಿನ ಕನಸೊಂದು ಮನಸಿನಲ್ಲಿ ಮೂಲೆಯಲ್ಲಿ ಕುಳಿತಿತ್ತು. ʻಬಹುರೂಪಿʼ ಪ್ರಕಾಶನದ ಮೂಲಕ ಈ ಕನಸು ಸಾಕಾರಗೊಂಡಿದೆ. ಮೊದಲ ಪುಸ್ತಕವಾಗಿದ್ದರಿಂದ ತುಂಬಾ ಸಂಭ್ರಮದಲ್ಲಿರುವೆ ಎಂದು ʻಕನ್ನಡತಿʼ ಖ್ಯಾತಿಯ ರಂಜನಿ ರಾಘವನ್‌ಖುಷಿಯಿಂದ ಹೇಳಿದರು.

ಸಂಜಯನಗರದಲ್ಲಿ ʻಬಹುರೂಪಿ ಬುಕ್‌ಹಬ್‌ʼನಲ್ಲಿ ಬುಧವಾರ ಬೆಳಿಗ್ಗೆ ಫೇಸ್‌ಬುಕ್‌ಲೈವ್‌ಮೂಲಕ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಾನೇ ಬರೆದ ʻಕತೆ ಡಬ್ಬಿʼ ಕಥಾ ಸಂಕಲನದ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ʻಅವಧಿʼ ವೆಬ್‌ಪತ್ರಿಕೆಯಲ್ಲಿ ವಾರಕ್ಕೊಮ್ಮೆ ಕತೆಗಳನ್ನು ಬರೆಯುವ ತವಕ, ಅದಕ್ಕೆ ಬಂದ ಪ್ರತಿಕ್ರಿಯೆಗಳು ಕಂಡು ರೋಮಾಂಚನವಾಗುತ್ತಿತ್ತು. ಆ ಎಲ್ಲ ಕತೆಗಳು ಇದೀಗ ʻಕತೆ ಡಬ್ಬಿʼಯಾಗಿ ರೂಪುಗೊಂಡಿವೆ, ಇದಕ್ಕೆ ʻಬಹುರೂಪಿʼ ಪ್ರಕಾಶನ ಸಂಸ್ಥೆಯು ತುಂಬಾ ಮುದ್ದಾಗಿ ಮುದ್ರಣಗೊಳಿಸಿದ್ದು, ಅಂಗೈಯಲ್ಲಿಟ್ಟುಕೊಂಡು ಓದಬಹುದಾದ ಪುಸ್ತಕವಾಗಿದ್ದಕ್ಕೆ ಸಂತಸವಾಗಿದೆ ಎಂದು ಅಭಿಮಾನಪೂರ್ವಕವಾಗಿ ಕೃತಜ್ಞತೆ ಸಲ್ಲಿಸಿದರು.

ನಟನೆ ಮತ್ತು ಕಾಲೇಜು ಓದುವ ನಡುವೆಯೂ ಮೊದಲ ಹೆಜ್ಜೆ ಇದಾಗಿದ್ದು, ಮುಂದೆ ಕಾದಂಬರಿಯನ್ನು ಬರೆಯುವ ಹಸಿವು ಇದೆ. ಬರವಣಿಗೆಯ ಲೋಕದಲ್ಲಿ ದಿಗ್ಗಜರ ನಡುವೆ ʻಪುಟ್ಟಗೌರಿʼಯ ಕಥಾ ಸಂಕಲನಕ್ಕೆ ಸೊಗಸಾದ ಸ್ವಾಗತ ಸಿಕ್ಕಿದ್ದಕ್ಕೆ ಅಭಿನಂದಿಸುವುದಾಗಿ ತಿಳಿಸಿದರು.

ಕತೆ ಡಬ್ಬಿ ಕೃತಿಯನ್ನು ಬಿಡುಗಡೆ ಮಾಡಿದ ಹಿರಿಯ ಪತ್ರಕತ, ಲೇಖಕ ಜೋಗಿ ಮಾತನಾಡಿದ, ಕಥಾ ಜಗತ್ತು ನಮ್ಮದು ಎನ್ನಿಸಬೇಕು, ಕತೆ ಹೇಳುವ ಶೈಲಿ ಮತ್ತು ವಯಸ್ಸನ್ನು ಮೀರಿ ಆಲೋಚಿಸಿದ್ದು, ಸೊಗಸಾದ ತಂತ್ರಗಾರಿಕೆಯ ಬಳಕೆ ಮತ್ತು ಇಂದಿನ ಕಾಲದ ಭಾಷೆಯನ್ನು ಹಿಡಿದಿಡುವ ನೈಜತೆ ʻಕನ್ನಡತಿʼ ರಂಜನಿ ರಾಘವನ್‌ಅವರ ಕಥಾ ಹಂದರ ಇಷ್ಟವಾಯಿತು ಎಂದು ಹೇಳಿದರು.

ಮನುಷ್ಯನ ಪಿಪಾಸುತನ ಮತ್ತು ದಾಹವನ್ನು ಹಿಡಿದಿಟ್ಟಿದ್ದಾರೆ. ಗಾಢವಾಗಿರುವ ಕತೆಗಳನ್ನು ಕಟ್ಟಿಕೊಟ್ಟಿದ್ದಾರೆ. ಬದುಕನ್ನು ಸುಂದರಗೊಳಿಸುವ ಮತ್ತು ಕತೆಯಲ್ಲಿ ಬರುವ ಸೂಕ್ಷ್ಮಗಳನ್ನು ಬಹುವಾಗಿ ಹಿಡಿದಿದ್ದಾರೆ ಎಂದು ಜೋಗಿ ಶ್ಲಾಘಿಸಿದರು. ಅತಿಥಿಯಾಗಿದ್ದ ಚಿತ್ರ ನಿರ್ದೇಶಕ ಜಯತೀರ್ಥ ಮಾತನಾಡಿ, ಸಂಪ್ರದಾಯದ ಹೊರೆ ಕಳಚಿ ಸತ್ಯಕ್ಕೆ ಹತ್ತಿರವಾಗುವ ಪ್ರಾಮಾಣಿಕ ಪ್ರಯತ್ನಪಟ್ಟಿದ್ದಾರೆ. ಕತೆ ಡಬ್ಬಿ ಹೊರತಂದ ಬಹುರೂಪಿ ಮತ್ತು ಬಹುಮುಖ ಪ್ರತಿಭೆಯ ರಂಜನಿ, ಶರತ್ಕಾಲದ ನವೀನತೆಗಳು ಎಂದು ಹೇಳಿದರು.

ನಟ ಋಷಿ ಮಾತನಾಡಿ, ಶೂಟಿಂಗ್‌ಟೈಂನಲ್ಲಿ ಕತೆಗಳನ್ನು ಹೇಳುತ್ತಿದ್ದ ರಂಜನಿ, ಇದೀಗ ಕತೆಗಾರ್ತಿಯಾಗಿ ರೂಪುಗೊಂಡಿದ್ದಕ್ಕೆ ಹೆಮ್ಮೆಪಡುವೆ ಎಂದರು.

`ಬಹುರೂಪಿ’ ಪ್ರಕಾಶನದ ಜಿ ಎನ್‌ಮೋಹನ್‌, ಶ್ರೀಜಾ, ಧೀರಜ್‌ಮತ್ತು ಮಹಿಪಾಲರೆಡ್ಡಿ ಸೇಡಂ ಉಪಸ್ಥಿತರಿದ್ದರು. ರಂಜನಿ ತಂದೆ ರಾಘವನ್‌ಮಾತನಾಡಿದರು. ಟಿವಿ ನಿರೂಪಕಿ ತನುಜಾ ಅವರು ಸೊಗಸಾಗಿ ಕಾರ್ಯಕ್ರಮ ನಿರ್ವಹಿಸಿದರು. ಕತೆ ಡಬ್ಬಿ ಪುಸ್ತಕಕ್ಕೆ ೭೦೧೯೧ ೮೨೭೨೯ ನಂಬರಿಗೆ ಸಂಪರ್ಕಿಸಬಹುದು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

52 mins ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

11 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

11 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

11 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago