ಬಿಸಿ ಬಿಸಿ ಸುದ್ದಿ

ಕವಿತೆಗಳು ಹಾಡಾಗಬೇಕು-ಮಾಧ್ಯಮಗಳು ಮಾತಾಡಬೇಕು: ಗಜಲ್ ಕವಿ ಅಲ್ಲಾಗಿರಿರಾಜ್

ಕಲಬುರಗಿ: ಪ್ರಸಕ್ತ ದೇಶದಲ್ಲಿ ಬಡವರು, ರೈತರು, ಕಾರ್ಮಿಕರು, ವಿದ್ಯಾರ್ಥಿ-ಯುವಜನರು, ಮಹಿಳೆಯರು ಎದುರಿಸುತ್ತಿರುವ ಸಾಮಾಜಿಕ ಸಂಕಷ್ಟಗಳ ಮೇಲೆ ಬೆಳಕು ಚೆಲ್ಲುವ ಕವಿತೆಗಳು ರಚನೆಯಾಗಬೇಕು. ಅವು ಹೋರಾಟದ ಹಾಡುಗಳಾಗಿ ಘರ್ಜಿಸಬೇಕು. ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಮಾಧ್ಯಮಗಳು ಮಾತಾಡಬೇಕು. ದುರಂತವೆಂದರೆ, ದೇಶದಲ್ಲಿ ಅನ್ನದಾತ ಹಸಿವೆಯಿಂದ ತತ್ತರಿಸುತ್ತಿದ್ದರೂ ಮಾಧ್ಯಮಗಳು ಮೌನ ಮುರಿಯುತ್ತಿಲ್ಲ. ಕವಿತೆಗಳು ಹಾಡಾಗಿ ಮೊಳಗುತ್ತಿಲ್ಲ ಎಂದು ಖ್ಯಾತ ಗಜಲ್ ಕವಿ ಅಲ್ಲಾಗಿರಿರಾಜ್ ಕನಕಗಿರಿ ವಿಷಾಧ ವ್ಯಕ್ತಪಡಿಸಿದರು.

ಶಹೀದ್ ಭಗತ್ ಸಿಂಗ್ ಅವರ ೧೧೪ನೇ ಜನ್ಮ ವಾರ್ಷಿಕೋತ್ಸವ ನಿಮಿತ್ತ ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆ ಜಿಲ್ಲಾ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ಆನ್‌ಲೈನ್ ಕವಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು. ಯುವ ಕವಿಗಳ ಲೆಕ್ಕಣಿಕೆಯಿಂದ ದುಡಿಯುವ ವರ್ಗವನ್ನು ಕಾಡುವ ಕವಿತೆಗಳು ಹುಟ್ಟುವಂತಾದರೆ, ಅಕ್ಷರಗಳೇ ಜನರನ್ನು ಸಂಘಟಿಸಿ ಹೋರಾಟಕ್ಕೆ ನೂಕುತ್ತವೆ. ಮನಸ್ಸು ಒಡೆದು ಧರ್ಮ ಕಟ್ಟುವ ಮನುಷ್ಯ ವಿರೋಧಿ ಬರಹಗಾರರದಿಂದ ದೇಶಕ್ಕೆ ಅಪಾಯವಿದೆ.

ಕೋಮುವಾದ ಹೆಡೆಯಾಡುತ್ತಿದ್ದು, ಸೌಹಾರ್ಧತೆ ಎಂಬುದು ತೀವ್ರ ಸಂಕಷ್ಟದಲ್ಲಿದೆ. ಹಣವಂತರು ಕವಿಗಳನ್ನು ಖರೀದಿಸುತ್ತಿದ್ದಾರೆ. ರಾಜಕಾರಣಿಗಳ ಕೈಗೊಂಬೆಯಾಗುವ ಕವಿಗಳು ಸಮಾಜದ ಸ್ವಾಸ್ಥ್ಯವನ್ನು ಹದಗೆಡಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಕವಿ ಅಲ್ಲಾಗಿರಿರಾಜ್, ಬಡವರ ಪರವಾಗಿ ಯಾರು ಸಾಹಿತ್ಯ ರಚಿಸುತ್ತಾರೋ ಅವರು ಜನಪರ ಕವಿಯಾಗಿ ಜನೈಕ್ಯತೆಗೆ ಕಾರಣವಾಗುತ್ತಾರೆ. ಭಗತ್‌ಸಿಂಗ್ ನೇಣಿಗೆ ಶರಣಾಗುವಾಗ ಆತನ ತಾಯಿ ಖುಷಿಪಟ್ಟಳು. ನನ್ನ ಮಗ ಸ್ವಾತಂತ್ರ್ಯಕ್ಕಾಗಿ ವೀರ ಮರಣವನ್ನಪ್ಪುತ್ತಿದ್ದಾನೆ ಎಂದು ಹೆಮ್ಮೆಪಟ್ಟಳು. ಆದರೆ ಇಂದಿನ ತಾಯಿ ಹೋರಾಟದ ಹಾದಿ ತುಳಿಯದಂತೆ ಮಗನನ್ನು ಮನೆಯಲ್ಲಿ ಕೂಡಿಟ್ಟು ಬೀಗ ಹಾಕುತ್ತಿದ್ದಾಳೆ. ಕ್ರಾಂತಿಕಾರಿ ಯುವಕ ಭಗತ್ ಮತ್ತು ಆತನ ತಾಯಿ ವಿದ್ಯಾವತಿ ನಮಗಿಂದು ಆದರ್ಶವಾಗಿದ್ದಾರೆ ಎಂದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ಬರಹಗಾರ, ಪ್ರಗತಿಪರ ಚಿಂತಕ ವಿ.ಜಿ.ದೇಸಾಯಿ, ಭಾರತ ಸ್ವಾತಂತ್ರ್ಯ ಸಂಗ್ರಾಮದ ಧೀರೋದ್ಧಾತ ಹೋರಾಟದಲ್ಲಿ ಕ್ರಾಂತಿಕಾರಿಗಳ ಪಾತ್ರ ದೊಡ್ಡದಿದೆ ಎಂಬುದನ್ನು ಯಾರೂ ಮರೆಯುವಂತಿಲ್ಲ. ಶೋಷಣೆ ರಹಿತ ಸಮಾಜವಾದಿ ಚಿಂತನೆಯನ್ನು ಹೊತ್ತು ಹೋರಾಟದ ಹಾದಿ ತುಳಿದ ಭಗತ್‌ಸಿಂಗ್, ಚಂದ್ರಶೇಖರ ಆಜಾದ್, ನೇತಾಜಿ ಶುಭಾಶ್ಚಂದ್ರ ಬೋಸ್, ರಾಜಗುರು, ಸುಖದೇವ, ರಾಂಪ್ರಸಾದ್ ಬಿಷ್ಮಿಲ್ಲಾಹ, ಖುದಿರಾಮ ಬೋಸ್, ಅಶ್ಪಾಖುಲ್ಲಾ ಖಾನ್ ರಂತಹ ರಾಜಿರಹಿತ ಹೋರಾಟದ ಸೇನಾನಿಗಳು ಬ್ರಿಟೀಷರ ಎದೆಗುಂಡಿಗೆ ನಡುಗಿಸುವಲ್ಲಿ ಸಫಲರಾದರು.

ಹಿಂಸೆಯನ್ನು ಪ್ರತಿಪಾದಿಸದೆ ಭಗತ್ ಸಿಂಗ್ ಬಿಳಿಯರ ಸಾಮ್ರಾಜ್ಯದ ತಳಬುಡವನ್ನೇ ನಡುಗಿಸಿದ್ದ. ಜೈಲಿನಲ್ಲಿ ನಗುನಗುತ್ತ ನೇಣು ಹಗ್ಗಕ್ಕೆ ಭಗತ್‌ಸಿಂಗ್ ಮುತ್ತಿಟ್ಟು ಹುತಾತ್ಮರಾಗುವ ಮೂಲಕ ದೇಶದ ಯುವಜನರಲ್ಲಿ ಸ್ವಾತಂತ್ರ್ಯ ಹೋರಾಟದ ಕೆಚ್ಚು ತುಂಬಿದರು. ಆದರೆ ಇಂದು ಆ ಹುತಾತ್ಮನ ಜೀವನ ಮತ್ತು ಹೋರಾಟದ ಇತಿಹಾಸವನ್ನು ಪಠ್ಯಗಳಲ್ಲಿ ಅಳವಡಿಸದೆ ಸರ್ಕಾರಗಳು ಅನ್ಯಾಯ ಮಾಡಿವೆ ಎಂದು ಆಪಾದಿಸಿದರು. ಪ್ರತಿಯೊಬ್ಬ ಯುವಕ ಯುವತಿಯರಲ್ಲಿ ಭಗತ್ ಸಿಂಗ್ ಮತ್ತೆ ಜೀವ ಪಡೆಯಬೇಕು. ಅವರು ಕಂಡ ಸಮಾಜವಾದ ಕನಸಿನ ಭಾರತವನ್ನು ಸ್ಥಾಪಿಸಲು ಸಂಘಟಿತರಾಗಬೇಕು ಎಂದು ಕರೆ ನೀಡಿದರು.

ಆವಿಷ್ಕಾರ ವೇದಿಕೆಯ ಜಿಲ್ಲಾ ಸಮಿತಿ ಸದಸ್ಯ ಪುಟ್ಟರಾಜ ಲಿಂಗಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಸಂಚಾಲಕರಾದ ಎ.ಅಶ್ವಿನಿ ಅಧ್ಯಕ್ಷತೆ ವಹಿಸಿದ್ದರು. ವಿಶಾಲಾಕ್ಷಿ ದೇಸಾಯಿ ಹಾಗೂ ಪ್ರೀತಿ ದೊಡ್ಡಮನಿ ಅವರು ಕ್ರಾಂತಿಗೀತೆಗಳನ್ನು ಹಾಡಿದರು. ಕವಿಗಳಾದ ವೆಂಕಟೇಶ ಜನಾದ್ರಿ, ಶಿಲ್ಪಾ ಜ್ಯೋಶಿ, ಡಾ.ಗೀತಾ ಪಾಟೀಲ, ಅಂಬಿಕಾ ಡಬಿಗೇರಾ, ರೇಣುಕಾ ಎನ್, ನೀಲಮ್ಮಾ ಮಲ್ಲೆ ಕೆಂಬಾವಿ, ಕೆ.ಎಂ.ವಿಶ್ವನಾಥ ಮರತೂರ, ಕಾಶೀನಾಥ ಹಿಂದಿನಕೇರಿ, ರಾಜಶೇಖರ ಯಾಳಗಿ, ಮಾಲತೇಶ ಬಬ್ಬಜ್ಜಿ, ದಯಾನಂದ ಖಜೂರಿ, ವಿಕ್ರಮ ನಿಂಬರ್ಗಾ, ರವಿ ಕೋಳಕೂರ, ರಾಜಶೇಖರ ಗಡಗನ್, ಯಲ್ಲಪ್ಪ ಮರ್ಚೆಡ್, ರಾಹುಲ ಕಟ್ಟಿ, ರಾಜು ಒಡೆಯರಾಜ್, ವೆಂಕಟೇಶ ಧಾರವಾಡ, ಶಿವು ಬಳಿಚಕ್ರ, ದೇವಿಂದ್ರ ಧೋತ್ರೆ ಸೇರಿದಂತೆ ಒಟ್ಟು ೨೨ ಜನ ಕವಿಗಳು ಭಗತ್‌ಸಿಂಗ್ ಕುರಿತು ಸ್ವರಚಿತ ಕವಿತೆಗಳನ್ನು ವಾಚಿಸಿದರು. ಆವಿಷ್ಕಾರ ವೇದಿಕೆಯ ಜಿಲ್ಲಾ ಸಮಿತಿ ಸದಸ್ಯ ಮಡಿವಾಳಪ್ಪ ಹೇರೂರ ನಿರೂಪಿಸಿ, ವಂದಿಸಿದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

9 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

9 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

9 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago