ಕಲಬುರಗಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬೆಂಗಳೂರು ವತಿಯಿಂದ ಕಲಬುರಗಿಯ ಪಿ.ಡಿ.ಎ. ಇಂಜನಿಯರಿಂಗ ಕಾಲೇಜಿನಲ್ಲಿ ಸಿ.ಇ.ಟಿ. ಕೌನ್ಸಲಿಂಗ ಮತ್ತು ಮೂಲ ದಾಖಲಾತಿಗಳ ಪರಿಶೀಲನೆ (ಡಾಕ್ಯೂಮೆಂಟ ವೆರಿಫಿಕೇಶನ) ಕಾರ್ಯ ಇಂದು ದಿನಾಂಕ ೩೦ ಸೆಪ್ಟೆಂಬರ್ ೨೦೨೧ ರಂದು ಆರಂಭಗೊಂಡಿತು.
ಹೈ.ಕ.ಶಿ. ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಶ್ರೀ ಸೋಮನಾಥ ನಿಗ್ಗುಡಗಿ ರವರು ಉದ್ಘಾಟನೆಗೊಳಿಸುತ್ತಾ, ಸಿ.ಇ.ಟಿ. ಕೌನ್ಸಲಿಂಗ್ ಸೆಲ್‌ಗೆ ಬೇಕಾದ ಎಲ್ಲಾ ಸಹಕಾರವನ್ನು ನಮ್ಮ ಸಂಸ್ಥೆಯು ಪಿ.ಡಿ.ಎ. ಕಾಲೇಜ ಪರವಾಗಿ ನೀಡುತ್ತೇವೆ ಎಂದು ನುಡಿದರು. ಉಪ ಪ್ರಾಚಾರ್ಯರಾದ ಡಾ. ಶಶಿಧರ ಕಲಶೆಟ್ಟಿ ಅತಿಥಿಗಳಾಗಿ ಕಾಲೇಜಿನ ಡೀನ್ ಅಕಾಡೆಮಿಕ್ ಡಾ. ಸಿದ್ರಾಮ ಆರ್. ಪಾಟೀಲ ರವರು ಗೌರವ ಅತಿಥಿಗಳಾಗಿ ಆಗಮಿಸಿದ್ದರು. ಕೆ.ಇ.ಎ. (ಸಿ.ಇ.ಟಿ) ಕಲಬುರಗಿ ಸಹಾಯ ಕೇಂದ್ರದ ನೊಡಲ್ ಅಧಿಕಾರಿಯಾದ ಶ್ರೀ ಡಿ.ಆರ್. ಶಿಂಧೆ ಅಧ್ಯಕ್ಷತೆ ವಹಿಸಿದ್ದರು. ಕಲಬುರಗಿಯ ಅತ್ಯನ್ನತ ರ‍್ಯಾಂಕ ಹೊಂದಿದ ವಿದ್ಯಾರ್ಥಿ ನಾಗರಾಜ ಅವಂತಗಿ (ರ‍್ಯಾಂಕ್ ೧೯೩ ಇಂಜನಿಯರಿಂಗ) ಯನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸಿ.ಇ.ಟಿ. ಸಹಾಯ ಕೇಂದ್ರದ ಸಿಬ್ಬಂದಿ ಶ್ರೀ ರಾಜೇಂದ್ರ ಬಡಿಗೇರ ರಾನಗರಾಜ ಎಂ. ಗುರುರಾಜ ಮಹಾಗಾಂವಕರ್ ಡಾ. ಬಾಬುರಾವ ಎನ್. ಶೇರಿಕಾರ, ಕಾಂತರಾಜ ಉಪಸ್ಥಿತರಿದ್ದರು.
೩೦ ರಿಂದ ದಿನಾಂಕ : ೨೮-೧೦-೨೦೨೧ ರ ರವರೆಗೆ ಇಂಜನೆಯರಿಂಗ ಸಿ.ಇ.ಟಿ. ರ‍್ಯಾಂಕ್ ಆಧಾರದಲ್ಲಿ ಮೂಲ ದಾಖಲೆಗಳ ಪರಿಶೀಲನೆ ನಡೆಯುತ್ತಿದ್ದು ವಿದ್ಯಾರ್ಥಿಗಳು ತಮ್ಮ ತಮ್ಮ ರ‍್ಯಾಂಕಿಗೆ ಅನುಗುಣವಾಗಿ ಕೇಂದ್ರ ಅಗಲಿಸಿ ದಾಖಲೆಗಳ ಪರಿಶೀಲನೆ ಮಾಡಿಕೊಳ್ಳಬೇಕು ಮೂಲ ದಾಖಲೆಗಳ ಜೊತೆಯಲ್ಲಿ ಎಲ್ಲ ಪ್ರಮಾಣ ಪತ್ರಗಳ ಒಂದು ಪ್ರತಿಯನ್ನು ಗೆಜೆಟೆಡ್ ಅಧಿಕಾರಿಯಿಂದ ಅಟೆಸ್ಟೆಶನ್ ಮಾಡಿಸಿಕೊಂಡು ಸಲ್ಲಿಸವುದು ಕಡ್ಡಾಯವಾಗಿದೆ ಎಂದು ಈ ಮೂಲಕ ನೂಡಲ್ ಅಧಿಕಾರಿ ಡಿ.ಆರ್. ಶಿಂಧೆ ತಿಳಿಸಿರುತ್ತಾರೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…