ಪಿ.ಡಿ.ಎ. ಇಂಜನಿಯರಿಂಗ ಕಾಲೇಜಿನಲ್ಲಿ ಸಿ.ಇ.ಟಿ. ಕೌನ್ಸಲಿಂಗ ದಾಖಲಾತಿ ಪರಿಶೀಲನೆ

0
9

ಕಲಬುರಗಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬೆಂಗಳೂರು ವತಿಯಿಂದ ಕಲಬುರಗಿಯ ಪಿ.ಡಿ.ಎ. ಇಂಜನಿಯರಿಂಗ ಕಾಲೇಜಿನಲ್ಲಿ ಸಿ.ಇ.ಟಿ. ಕೌನ್ಸಲಿಂಗ ಮತ್ತು ಮೂಲ ದಾಖಲಾತಿಗಳ ಪರಿಶೀಲನೆ (ಡಾಕ್ಯೂಮೆಂಟ ವೆರಿಫಿಕೇಶನ) ಕಾರ್ಯ ಇಂದು ದಿನಾಂಕ ೩೦ ಸೆಪ್ಟೆಂಬರ್ ೨೦೨೧ ರಂದು ಆರಂಭಗೊಂಡಿತು.

ಹೈ.ಕ.ಶಿ. ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಶ್ರೀ ಸೋಮನಾಥ ನಿಗ್ಗುಡಗಿ ರವರು ಉದ್ಘಾಟನೆಗೊಳಿಸುತ್ತಾ, ಸಿ.ಇ.ಟಿ. ಕೌನ್ಸಲಿಂಗ್ ಸೆಲ್‌ಗೆ ಬೇಕಾದ ಎಲ್ಲಾ ಸಹಕಾರವನ್ನು ನಮ್ಮ ಸಂಸ್ಥೆಯು ಪಿ.ಡಿ.ಎ. ಕಾಲೇಜ ಪರವಾಗಿ ನೀಡುತ್ತೇವೆ ಎಂದು ನುಡಿದರು. ಉಪ ಪ್ರಾಚಾರ್ಯರಾದ ಡಾ. ಶಶಿಧರ ಕಲಶೆಟ್ಟಿ ಅತಿಥಿಗಳಾಗಿ ಕಾಲೇಜಿನ ಡೀನ್ ಅಕಾಡೆಮಿಕ್ ಡಾ. ಸಿದ್ರಾಮ ಆರ್. ಪಾಟೀಲ ರವರು ಗೌರವ ಅತಿಥಿಗಳಾಗಿ ಆಗಮಿಸಿದ್ದರು. ಕೆ.ಇ.ಎ. (ಸಿ.ಇ.ಟಿ) ಕಲಬುರಗಿ ಸಹಾಯ ಕೇಂದ್ರದ ನೊಡಲ್ ಅಧಿಕಾರಿಯಾದ ಶ್ರೀ ಡಿ.ಆರ್. ಶಿಂಧೆ ಅಧ್ಯಕ್ಷತೆ ವಹಿಸಿದ್ದರು. ಕಲಬುರಗಿಯ ಅತ್ಯನ್ನತ ರ‍್ಯಾಂಕ ಹೊಂದಿದ ವಿದ್ಯಾರ್ಥಿ ನಾಗರಾಜ ಅವಂತಗಿ (ರ‍್ಯಾಂಕ್ ೧೯೩ ಇಂಜನಿಯರಿಂಗ) ಯನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸಿ.ಇ.ಟಿ. ಸಹಾಯ ಕೇಂದ್ರದ ಸಿಬ್ಬಂದಿ ಶ್ರೀ ರಾಜೇಂದ್ರ ಬಡಿಗೇರ ರಾನಗರಾಜ ಎಂ. ಗುರುರಾಜ ಮಹಾಗಾಂವಕರ್ ಡಾ. ಬಾಬುರಾವ ಎನ್. ಶೇರಿಕಾರ, ಕಾಂತರಾಜ ಉಪಸ್ಥಿತರಿದ್ದರು.

Contact Your\'s Advertisement; 9902492681

೩೦ ರಿಂದ ದಿನಾಂಕ : ೨೮-೧೦-೨೦೨೧ ರ ರವರೆಗೆ ಇಂಜನೆಯರಿಂಗ ಸಿ.ಇ.ಟಿ. ರ‍್ಯಾಂಕ್ ಆಧಾರದಲ್ಲಿ ಮೂಲ ದಾಖಲೆಗಳ ಪರಿಶೀಲನೆ ನಡೆಯುತ್ತಿದ್ದು ವಿದ್ಯಾರ್ಥಿಗಳು ತಮ್ಮ ತಮ್ಮ ರ‍್ಯಾಂಕಿಗೆ ಅನುಗುಣವಾಗಿ ಕೇಂದ್ರ ಅಗಲಿಸಿ ದಾಖಲೆಗಳ ಪರಿಶೀಲನೆ ಮಾಡಿಕೊಳ್ಳಬೇಕು ಮೂಲ ದಾಖಲೆಗಳ ಜೊತೆಯಲ್ಲಿ ಎಲ್ಲ ಪ್ರಮಾಣ ಪತ್ರಗಳ ಒಂದು ಪ್ರತಿಯನ್ನು ಗೆಜೆಟೆಡ್ ಅಧಿಕಾರಿಯಿಂದ ಅಟೆಸ್ಟೆಶನ್ ಮಾಡಿಸಿಕೊಂಡು ಸಲ್ಲಿಸವುದು ಕಡ್ಡಾಯವಾಗಿದೆ ಎಂದು ಈ ಮೂಲಕ ನೂಡಲ್ ಅಧಿಕಾರಿ ಡಿ.ಆರ್. ಶಿಂಧೆ ತಿಳಿಸಿರುತ್ತಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here