ದೊಡ್ಡಪ್ಪ ಅಪ್ಪಾ ಹುಟ್ಟು ಹಬ್ಬ ಅರ್ಥಪೂರ್ಣವಾಗಿ ಆಚರಣೆ: ಅರುಣಕುಮಾರ ಪಾಟೀಲ

ಕಲಬುರಗಿ: ಜಿಲ್ಲಾ ವೀರಶೈವ ಸಮಾಜ ಕಲಬುರಗಿಯ ಕಾರ್ಯಕಾರಿಣಿ ಸಮಿತಿ ವಿಶೇಷ ಆಹ್ವಾನಿತರ ಸಭೆ ಜರುಗಿತು. ಸಭೆಯ ಅಧ್ಯಕ್ಷತೆವಹಿಸಿದ್ದ ಅರುಣಕುಮಾರ ಪಾಟೀಲರು ಮಾತನಾಡಿ ಶೀಘ್ರದಲ್ಲಿಯೇ ಇನ್ನುಳಿದ ತಾಲೂಕ ಘಟಕಗಳನ್ನು ರಚಿಸಿ, ಸಮಾಜದಲ್ಲಿ ರಚನಾತ್ಮಕ ಕೆಲಸಗಳನ್ನು ಮಾಡಲಾಗುವುದು ಎಂದು ಅವರು ಈ ಸಭೆಯಲ್ಲಿ ನವೆಂಬರ್ ೧, ೨೦೨೧ ರಂದು ಶರಣಬಸವೇಶ್ವರ ಸಂಸ್ಥಾನದ ೯ನೇ ಪಿಠಾಧಿಪತಿಗಳಾದ ಚಿರಂಜಿವಿ ಪೂಜ್ಯ ದೊಡ್ಡಪ್ಪ ಅಪ್ಪಾ ಅವರ ಜನ್ಮದಿನವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.

ಕಾರ್ಯದರ್ಶಿ ಶ್ರೀಶೈಲ ಘೂಳಿಯವರು ಸ್ವಾಗತಿಸಿ. ಪ್ರಾಸ್ತಾವಿಕವಾಗಿ ಮಾತನಾಡಿದರು, ಸಭೆಯನ್ನುದ್ದೇಶಿಸಿ ಸಂಘಟನೆ ಮತ್ತು ಸಮಾಜಿಕ ಅಭಿವೃದ್ಧಿ ಕುರಿತು, ಉಪಾಧ್ಯಕ್ಷರಾದ ಕಲ್ಯಾಣಪ್ಪ ಮಳಖೇಡ, ಬಸವರಾಜ ಯಾಲಕ್ಯ, ಚಂದ್ರಶೇಖರ ಬಿಜಾಪುರ, ಕೆ.ಎಸ್. ಆಲಿಪಾಟೀಲ, ಪ್ರಶಾಂತ ಗುಡ್ಡಾ ಜಿಗಲ್ ಮತ್ತು ಶಿವಪ್ಪ ಪಾಟೀಲ ಮಾತನಾಡಿದರು. ಈ ಕಾರ್ಯಕ್ರಮಕ್ಕೆ ಪ್ರಖ್ಯಾತ ವಾಗ್ಮಿ ಮಹಾಸ್ವಾಮಿಗಳನ್ನು ಮತ್ತು ಖ್ಯಾತ ಗಣ್ಯರನ್ನು ಆಹ್ವಾನಿಸಲು ನಿರ್ಧರಿಸಲಾಯಿತು.

ಹಾಗೆಯೇ ಈ ಸಭೆಯಲ್ಲಿ ನೂತನ ಮಹಾನಗರ ಪಾಲಿಕೆ ಸದಸ್ಯರಾಗಿ ಆಯ್ಕೆಯಾದ ಸಮಾಜಮುಖಿ ಕಾರ್ಯ ಮಾಡುತ್ತಿರುವ ಪ್ರಭು ಹಾದಿಮನಿ, ಶಂಭು ಪಾಟೀಲ ಬಳಬಟ್ಟಿ, ಶಿವಾನಂದ ಪಿಸ್ತಿ, ಸುನೀಲ ಮಚ್ಚಟ್ಟಿ, ರಾಮುರೆಡ್ಡಿ ಮತ್ತು ಸುನೀಲ ಬನಶೆಟ್ಟಿ, ಮಲ್ಲಿಕಾರ್ಜುನ ಉದನೂರ ಅವರನ್ನು ಸನ್ಮಾನಿಸಲಾಗುತ್ತದೆ.

ಈ ಕಾರ್ಯಕ್ರಮದಲ್ಲಿ ಸಾತಪ್ಪ ಪಟ್ಟಣಕರ, ಸುಭಾಷ ಬಿಜಾಪುರೆ, ಶಶಿಕಾಂತ ಪಾಟೀಲ, ಕಲ್ಯಾಣಪ್ಪ ಗೋಗಿ, ಶಿವಶರಣಪ್ಪ ಮುಕರಂಬಿ, ಮಾಂತೇಶ ಪಾಟೀಲ ಜಗತ್ತ, ರಮೇಶ ಪಾಟೀಲ, ಹಣಮಂತರಾವ ಪಾಟೀಲ, ಸಂಗಪ್ಪ ಮನ್ನಪ್ಪ, ಶಿವಕುಮಾರ ಶಾಬಾದಿ, ಅವಿನಾಶ್ ಉಪಳಾಂವ, ಸಂತೋಷ ಪಾಟೀಲ, ಪೂರ್ವಿ ಮೆಡಿಕಲ್, ಹಣಮಂತರಾವ ಪಾಟೀಲ ಅಳಂದ, ಸಚ್ಚಿನ ಸ್ವಂತ ಯುವ ಘಟಕದ ಅಧ್ಯಕ್ಷರು, ಸಂಜುಕುಮಾರ ಕಾಳಗಿ, ಎಸ್.ವ್ಹಿ. ಮಠಪತಿ ಉಪಾಧ್ಯಕ್ಷರು ಇನ್ನಿತರರು ಇದ್ದರು.

emedialine

Recent Posts

ಎಲೇಕ್ಷನ್’ನಲ್ಲಿ ಗಿಮಿಕ್ ಮಾಡಿ ಮತಪಡೆದುಕೊಳ್ಳುವುದು ಮಾತ್ರ ಗೊತ್ತು; ಮಣಿಕಂಠ

ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ; ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಎಲೇಕ್ಷನ್ ಬಂದಾಗ ಗಿಮಿಕ್ ಮಾಡಿ ಮತ ಪಡೆದುಕೊಳ್ಳುವುದು ಮಾತ್ರ…

1 hour ago

ಶ್ರೀಮತಿ ವಿ. ಜಿ  ಕಾಲೇಜಿನ ವಿದ್ಯಾರ್ಥಿನಿಯರಿಂದ ದಾಂಡಿಯಾ ನೃತ್ಯ

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಪ್ರತಿ ವರ್ಷದಂತೆ…

5 hours ago

ತೂಕದಲ್ಲಿ ಆಗುವ ವ್ಯತ್ಯಾಸ ಸರಿಪಡಿಸಿ: ಪ್ರತಿ ಟನ್ ಕಬ್ಬಿಗೆ 3500 ಬೆಲೆ ನಿಗದಿ ಪಡಿಸಿ

ಅಫಜಲಪುರ: 2024-25ನೇ ಸಾಲಿನಲ್ಲಿ ಅಫಜಲಪುರ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕನಿಷ್ಠ 3500 ರೂ.ಬೆಲೆ ನಿಗದಿ ಪಡಿಸಿ ಘೋಷಣೆ ಮಾಡಬೇಕು,ಅಲ್ಲದೇ…

10 hours ago

ಕಲಬುರಗಿ: ಯತಿ ನರಸಿಂಹಾನಂದ್ ಬಂಧನಕ್ಕೆ ಆಗ್ರಹಿಸಿ ದಿಢೀರ್ ಪ್ರತಿಭಟನೆ

ಕಲಬುರಗಿ: ಕಾರ್ಯಕ್ರಮ ಒಂದರಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ಅವರ ವಿರುದ್ಧ ಅಕ್ರಮಣಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿರುವ ಗಾಜಿಯಾಬಾದ್‌ನ ದಾಸ್ನಾ…

21 hours ago

ದುಶ್ಚಟ ಮುಕ್ತ ಸಮಾಜ ನಿರ್ಮಾಣ ಹಕ್ಕೊತ್ತಾಯ ಪತ್ರ ಜಿಲ್ಲಾಧಿಕಾರಿಗಳಿಗೆ ಮಂಡನೆ

ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಮತ್ತು ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಮಿತಿಯಿಂದ…

23 hours ago

ನೀರಿನ ಬಿಲ್ ಬಡ್ಡಿ ಮನ್ನಾ ಮಾಡಲು ಡಾ.ರಶೀದ್ ಜಿಲ್ಲಾಧಿಕಾರಿಗಳಿಗೆ ಮನವಿ

ಶಹಾಬಾದ: ನಗರಸಭೆ ವ್ಯಾಪ್ತಿಯ ಸಾರ್ವಜನಿಕರ ಕುಡಿಯುವ ನೀರಿನ ಬಿಲ್ ಬಡ್ಡಿ ಮನ್ನಾ ಮಾಡಿ ಅಸಲು ಮಾತ್ರ ಪಾವತಿಸಲು ಅನುಕೂಲ ಮಾಡಿಕೊಡಬೇಕೆಂದು…

23 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420