ಶಹಾಬಾದ: ಭಾರತದಲ್ಲಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಸ್ವಾತಂತ್ರ್ಯ ಹೋರಾಟದಲ್ಲಿ ಗೊತ್ತಿರುವ ಕ್ರಾಂತಿಕಾರಿ ನಾಯಕ ಎಂದರೆ ಅದು ಭಗತ್‍ಸಿಂಗ್ ಅಲ್ಲದೇ ಮತ್ಯಾರೂ ಅಲ್ಲ ಎಂದು ಎಸ್‍ಯುಸಿಐ(ಸಿ) ಸ್ಥಳೀಯ ಕಾರ್ಯದರ್ಶಿ ಗಣಪತ್‍ರಾವ್ ಮಾನೆ ಹೇಳಿದರು.
ಅವರು ನಗರದ ಎಐಡಿಎಸ್‍ಓ ಸಂಘಟನೆ ವತಿಯಿಂದ ಆಯೋಜಿಸಲಾದ ಶಹೀದ್ ಭಗತ್ ಸಿಂಗ ರವರ 114 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಕ್ರಾಂತಿಕಾರಿ ಭಗತ್‍ಸಿಂಗ್ ಅವರ ಪಾತ್ರ ಬಹಳ ಮಹತ್ವದ್ದಾಗಿದೆ. ಬ್ರಿಟಿಷರ ವಿರುದ್ಧ ಎದೆಗುಂದದೆ ಹೋರಾಡಿ ತನ್ನ 23ನೇ ವಯಸ್ಸಿನಲ್ಲೇ ವೀರಮರಣ ಹೊಂದಿದ ಧೀಮಂತ ಭಗತ್‍ಸಿಂಗ್. ಭಗತ್ ಸಿಂಗ್ ಹುಟ್ಟು ಹೋರಾಟಗಾರ. ಸಾಮಾಜಿಕ ಕ್ರಾಂತಿಕಾರಿ. 1931ರಲ್ಲಿ ತನ್ನ ಗೆಳೆಯರಾದ ರಾಜ್‍ಗುರು ಮತ್ತು ಸುಖದೇವ್ ಜೊತೆಗೆ ನೇಣಿಗೆ ಕೊರಳೊಡ್ಡಿದ ವೀರ ಸೇನಾನಿ. ಬ್ರಿಟಿಷರ ವಿರುದ್ಧ ಕ್ರಾಂತಿಕಾರಿ ಹೋರಾಟ ನಡೆಸಿದ ವೀರ. ದೇಶಕ್ಕಾಗಿ ತನ್ನ ಪ್ರಾಣ ತ್ಯಾಗ ಮಾಡಿದ ಧೀರ ಭಗತ್ ಸಿಂಗ್. ಆದರೆ ಇಂದು ಸರಕಾರದ ಎಲ್ಲಾ ನೀತಿಗಳು ಕಾರ್ಪೋರೇಟ್ ಪರವಾಗಿ ತರುತ್ತಿದ್ದು ಇದರ ವಿರುದ್ಧ ಹೋರಾಡಲು ಭಗತ್‍ಸಿಂಗ್‍ರ ವಿಚಾರ ಬಹಳ ಅವಶ್ಯಕವೆಂದು ಎಂದು ಹೇಳಿದರು.
ಎಐಡಿವೈಓ ಜಿಲಾ ್ಲಕಾರ್ಯದರ್ಶಿ ಜಗನ್ನಾಥ.ಎಸ್.ಎಚ್ ಕೃಷಿ ನೀತಿಗಳು ಸಾರ್ವಜನಿಕ ಉದ್ಯಮಗಳ ಖಾಸಗಿಕರಣ ಹಾಗೂ ಬೆಲೆ ಏರಿಕೆ ಕಾರ್ಪೋರೇಟ್ ಪರವಾಗಿದ್ದು ಇದರ ವಿರುಧ್ಧ ಸಂಘಟಿತ ಹೋರಾಟ ಕಟ್ಟಲು ಯುವಜನರು ಮಂದಾಗಬೇಕೆಂದು ಹೇಳಿದರು.
ಎಐಡಿಎಸ್‍ಓ ಅಧ್ಯಕ್ಷ ಸಿದ್ದು ಚೌಧರಿ ಅಧ್ಯಕ್ಷತೆ ವಹಿಸಿದ್ದರು.
ತಿಮ್ಮಯ್ಯ ಮಾನೆ , ನೀಲಕಂಠ.ಎಮ್.ಹುಲಿ , ಪ್ರವೀಣ.ಬಿ , ಶ್ರೀನೀವಾಸ , ರಾಘು ಪವಾರ, ಮಲ್ಲಿಕಾರ್ಜನ್, ಕಿರಣ ಕುಮಾರ ಇತರರು ಇದ್ದರು.
ವಾಡಿ (ಕಲಬುರಗಿ): ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಅವರ ವೃತ್ತದಲ್ಲಿರುವ ಬಾಬಾಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಂವಿಧಾನ ಪೂರ್ವ ಪೀಠಿಕೆ ಓದುವ ಮೂಲಕ…
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…