ಸುರಪುರ: ತಾಲ್ಲೂಕಿನ ತಿಂಥಣಿ ಗ್ರಾಮದಲ್ಲಿರುವ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯದ್ವಾರದ ಬಳಿಯಲ್ಲಿ ತೆರೆದ ಚರಂಡಿಯನ್ನು ಕಂಡು ಮಕ್ಕಳ ಪೋಷಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಚಿಕ್ಕ ಮಕ್ಕಳು ಶಾಲೆಗೆ ಹೋಗಬೇಕಾದರೆ ಚರಂಡಿ ದಾಟಿಕೊಂಡು ಹೋಗಬೇಕು.ಅಲ್ಲದೆ ಈ ಚರಂಡಿ ಪಕ್ಕದಿಂದಲೆ ಬೈಕ್,ಮೋಟಾರು ವಹನಗಳು ಓಡಾಡುತ್ತವೆ.ಇದರಿಂದ ಅಪಾಯ ಹೆದರಿಸಬೇಕಾಗಿದೆ. ಸದಾಕಾಲ ಚರಂಡಿಯಲ್ಲಿ ಮನೆಗಳಿಂದ ಬರುವ ಹೊಲಸು ನೀರು ಹರಿಯುವದರಿಂದ ಗಬ್ಬು ನಾತ ಬೀರುತ್ತದೆ.ಅಲ್ಲದೆ ಸೊಳ್ಳೆಗಳು ಹುಟ್ಟಿಕೊಂಡು ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.
ಅನೇಕ ಬಾರಿ ಗ್ರಾಮ ಪಂಚಾಯತಿಗೆ ಮೌಖಿಕವಾಗಿ ತಿಳಿಸಿದರು ಯಾವ ಕ್ರಮ ಕೈಗೊಳ್ಳುತ್ತಿಲ್ಲ.ಇದರಿಂದ ಮಕ್ಕಳ ಪೋಷಕರಿಗೆ ಸ್ಥಳಿಯ ಪಂಚಾಯತಿ ಮತ್ತು ಶಾಲಾ ಮಂಡಳಿಯ ಮೇಲು ಬೇಸರ ಮೂಡುತ್ತಿದೆ.
ಯಾದಗಿರಿ ಜಿಲ್ಲಾ ಪಂಚಾಯತಿಯ ಹಾಲಿ ಅಧ್ಯಕ್ಷರಾಗಿರುವ ರಾಜಶೇಖರಗೌಡ ಪಾಟೀಲ ವಜ್ಜಲವರ ಕ್ಷೇತ್ರವ್ಯಾಪ್ತಿಯ ಈ ಗ್ರಾಮದಲ್ಲಿನ ಚರಂಡಿಯನ್ನು ಮುಚ್ಚಿಸುವ ಕೆಲಸವನ್ನು ಅಧ್ಯಕ್ಷರು ಮಾಡಬೇಕೆಂದು ಕರ್ನಾಟಕ ಸಂರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಮೌನೇಶ ಬೋವಿ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಕೂಡಲೆ ಗ್ರಾಮ ಪಂಚಾಯತಿ ಅಥವಾ ಶಿಕ್ಷಣ ಇಲಾಖೆ ಈ ಚರಂಡಿ ಮುಚ್ಚಿಸುವ ಕೆಲಸ ಮಾಡಬೇಕು. ಇಲ್ಲವಾದರೆ ಗ್ರಾಮದ ಜನರು ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…