ಆಳಂದ: ದಸರಾ ಬಳಿಕ ರಾಜ್ಯದಲ್ಲಿ ೧ರಿಂದ೫ನೇ ತರಗತಿ ಶಾಲಾ ಮಕ್ಕಳ ತರಗತಿ ಆರಂಭಕ್ಕೆ ರಾಜ್ಯ ಸರ್ಕಾರ ಕೈಗೊಂಡ ಕ್ರಮದ ಹಿನ್ನೆಲೆಯಲ್ಲಿ ಶಾಲಾ ಆರಂಭಕ್ಕೆ ಎಲ್ಲಡೆ ಭರದ ಸಿದ್ಧತೆ ನಡೆಯುತ್ತಿದೆ. ಸರ್ಕಾರದ ಈ ನಿರ್ಧಾದರ ಕ್ರಮವನ್ನು ಅನುದಾನ ರಹಿತ ಶಾಲೆಗಳ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಜಗದೀಶ ಕೋರೆ ಅವರು ಸ್ವಾಗತಿಸಿ ಅಭಿನಂದಿಸಿದ್ದಾರೆ.
ಈ ಕುರಿತು ಪಟ್ಟಣದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದೆರಡು ವರ್ಷಗಳಿಂದಲೂ ಶಾಲೆಗಳಿಲ್ಲದೆ, ಅನುದಾನ ರಹಿತ ಶಾಲೆಗಳಲ್ಲಿನ ಶಿಕ್ಷಕರು ಕೆಲಸ ಕಳೆದುಕೊಂಡು ತೊಂದರೆ ಅನುಭವಿಸಿದ್ದದಾರೆ. ಜೊತೆಗೆ ಶಾಲಾ ಮಕ್ಕಳು ಮತ್ತವರ ಪಾಲಕರು ಸಹ ತೀರಾ ಸಂಕಷ್ಟದಿಂದ ದಿನದೊಡಿ ಮಕ್ಕಳ ಜೀವನ ಶೈಲಿಯೇ ವಿಭಿನ್ನವಾಗಿ ಆತಂಕ ಮೂಡಿಸಿತು.
ಕೊನೆಗೂ ಶಾಲಾ ಆರಂಭದಿಂದ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಮತ್ತು ಪಾಲಕರಿಗೆ ನಿಟ್ಟಿಸಿರು ಬಿಡುವಂತಾಗಿದೆ ಎಂದು ಅವರು ಸಂತಷವ್ಯಕ್ತಪಡಿಸಿದರು.
ದಸರೆ ರಜೆಯ ನಂತರ ಶಾಲೆಯನ್ನು ಪೂರ್ಣ ಪ್ರಮಾಣದಲ್ಲಿ ಪ್ರಾರಂಭಿಸಲು ರಾಜ್ಯದ ಶಿಕ್ಷಣ ಸಚಿವರ ಕೈಗೊಂಡ ನಿರ್ಧಾರ ಸೂಕ್ತವಾಗಿದೆ. ಕೋವಿಡ್ ಆರಂಭದಾಗಿನಿಂದಲೂ ಶಾಲೆಗಳ ನಡೆಯದೆ ಶಿಕ್ಷಣ ಸಂಸ್ಥೆಗಳ ಸಂಕಷ್ಟಕ್ಕೆ ಒಳಗಾಗಿ ಅನೇಕ ಕಡೆ ಶಾಲೆಗಳು ಮುಚ್ಚಿಕೊಂಡಿವೆ. ಜೊತೆಗೆ ಅನುದಾನ ರಹಿತ ಶಾಲಾ ಶಿಕ್ಷಕರಿಗೆ ಕೆಲಸವಿಲ್ಲದೆ, ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ಕೃಷಿ, ಹೋಟೆಲ್, ಬಟ್ಟೆ ಅಂಗಡಿ ಗ್ಯಾರೇಜ್‌ಗಳಲ್ಲಿ ಕೆಲಸಕ್ಕೆ ನಿಂತು ತೊಂದರೆ ಅನುಭವಿಸಿದ್ದಾರೆ. ಈ ನಡುವೆ ಶಿಕ್ಷಕರಿಗೆ ಕಷ್ಟ ಕಾಲದಲ್ಲಿ ರಾಜ್ಯ ಸರ್ಕಾರ ೫ ಸಾವಿರ ರೂ.ಗಳು ಸಹಾಯಧನ ನೀಡಿರುವುದು ಶಿಕ್ಷಕರು ಎಂದು ಮರೆಯುವುದಿಲ್ಲ ಎಂದರು.
ಈಗ ಶಾಲಾ ಆರಂಭದಿಂದ ಮತ್ತೆ ಅವರ ಜೀವನ ಮೊದಲಿನ ಸ್ಥಿತಿಗೆ ಮರಕಳುಸುವಂತಾಗಲಿದೆ. ತಾಲೂಕಿನಲ್ಲಿ ಅನುದಾನ ರಹಿತ ಆಂಗ್ಲ, ಕನ್ನಡ ಮತ್ತು ಉರ್ದು ಮಾಧ್ಯಮದ ಪ್ರಾಥಮಿಕ ೫೮ ಶಾಲೆಗಳ ೪೦೬ ಶಿಕ್ಷಕರು ಹಾಗೂ ೩೮ ಪ್ರೌಢಶಾಲೆಗಳ ೨೬೬ ಶಿಕ್ಷಕರು ಮತ್ತು ಸೇವಕರ ಸಂಖ್ಯೆ ೧೦೦ ಸೇರಿ ಒಟ್ಟು ೭೭೨ ಸಿಬ್ಬಂದಿಗಳಿಗೆ ಶಾಲಾ ಪ್ರಾರಂಭದಿಂದ ಜೀವನ ಸಾಗಿಸಲು ಅನುಕೂಲವಾಗಲಿದೆ ಎಂದು ಹೇಳಿದರು.
ಸಂಕಷ್ಟದಲ್ಲೂ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಭರತರಾಜ ಸಾವಳಗಿ ಅವರು ಇಲಾಖೆಯ ಕಾರ್ಯದ ಒತ್ತಡದ ನಡುವೆ ಅನುದಾನ ರಹಿತ ಶಾಲೆಗಳಿಗೆ ಆರ್‌ಟಿಇ ಮರುಶುಲ್ಕ ಪಾವತಿಯನ್ನು ಸಕಾಲಕ್ಕೆ ಮಂಜೂರಾತಿ ನೀಡಿ ಅನುಕೂಲಮಾಡಿದ್ದಾರೆ, ಮುಂಬರುವ ದಿನಗಳಲ್ಲಿ ಅನುದಾನ ರಹಿತ ಶಾಲೆಯವರು ಹೊಸ ಶಾಲೆ ಪ್ರಸ್ತಾವನೆ ಹಾಗೂ ನವೀಕರಣಕ್ಕೆ ಕಟ್ಟಡ ಸುರಕ್ಷತಾ ಪ್ರಮಾಣ ಪತ್ರ ಮತ್ತು ಅಗ್ನಿನಂದಕ ಪ್ರಮಾಣ ಪತ್ರ ಕಡ್ಡಾಯವಾಗಿ ಪಡೆಯುವಂತೆ ಸರ್ಕಾರ ಸೂಚಿಸಿದೆ. ಈ ನಿಟ್ಟಿನಲ್ಲಿ ಆಯಾ ಶಾಲೆಯ ಮುಖ್ಯ ಶಿಕ್ಷಕರು ಈ ಪ್ರಮಾಣ ಪತ್ರವನ್ನು ಮಾಡಿಸಿಕೊಳ್ಳಬೇಕು ಎಂದು ಹೇಳಿದರು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…