ಬಿಸಿ ಬಿಸಿ ಸುದ್ದಿ

ಪ್ರತಿಭಾವಂತ ‘ಸಾಧಕ ಬೋಧಕಿಯರಿಗೆ, ಗುರು ಸ್ತ್ರೀ’ಪ್ರಶಸ್ತಿ ಪ್ರದಾನ

ಕಲಬುರಗಿ: ಸಮಾಜದಲ್ಲಿ ಮಹತ್ತರವಾದ ಬದಲಾವಣೆ ತರಬಲ್ಲ ಅದಮ್ಯ ಶಕ್ತಿ ಶಿಕ್ಷಕರ ಮೇಲಿದೆ. ಶಿಕ್ಷಕ ವೃತ್ತಿಗೆ ಎಲ್ಲ ಕಾಲದಲ್ಲೂ ಗೌರವದ ಸ್ಥಾನವಿದೆ. ಶಿಕ್ಷಕರನ್ನು ಗೌರವಿಸುವುದೆಂದರೆ ಒಂದು ಸಂಸ್ಕೃತಿಯನ್ನೇ ಗೌರವಿಸಿದಂತೆ ಎಂದು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತೆ ಭುವನೇಶ್ವರಿ ಹಳ್ಳಿಖೇಡ ಹೇಳಿದರು.

ವಿಶ್ವಜ್ಯೋತಿ ಪ್ರತಿಷ್ಠಾನದ ವತಿಯಿಂದ ನಗರದ ಬಸವೇಶ್ವರ ಪುತ್ಥಳಿ ಬಳಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರತಿಭಾವಂತ ‘ಸಾಧಕ ಬೋಧಕಿಯರಿಗೆ. ಗುರು ಸ್ತ್ರೀ’ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ಜಗತ್ತಿನಲ್ಲಿ ಶಿಕ್ಷಕ ವೃತ್ತಿಗೆ ಸಮಾನವಾದ ಇನ್ನೊಂದು ವೃತ್ತಿ ಇಲ್ಲ ಎಂದು ಮಾರ್ಮಿಕವಾಗಿ ಹೇಳಿದರು. ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಶೀತಲ್ ಜಾಧವ, ನಂದಿನಿ ಪಾಳಾ, ವೀರೇಶ ಬೋಳಶೆಟ್ಟಿ, ಹಿರಿಯ ಲೇಖಕರಾದ ಶಕುಂತಲಾ ಪಾಟೀಲ ಜಾವಳಿ, ನಾಗೇಂದ್ರಪ್ಪ ಮಾಡ್ಯಾಳೆ, ಸಾವಿತ್ರಿ ಪಾಟೀಲ, =- ಮಾತನಾಡಿದರು.

ಸಾಧಕ ಬೋಧಕಿಯರಾದ ಕಾಶಿಬಾಯಿ ಹತ್ತಿ, ಜಗದೇವಿ ಕೇದಾರನಾಥ ಕಣಕಿ, ಕಸ್ತೂರಿ ನಾಗೇಶ ಶಿವಗೋಳ, ಅಶ್ವಿನಿ ಪ್ರಕಾಶ ನರೋಣಾ, ವಿಜಯಲಕ್ಷ್ಮೀ ಬೋಳದೆ, ಜ್ಯೋತಿ ಡಿಗ್ಗಿ, ಶಾರದಾ ಕೆ., ಸಾವಿತ್ರಿ ಸಾಹು, ಲತಾ ಕುಲಕರ್ಣಿ, ಲತಾ ಹಳ್ಳಿಖೇಡ, ಸಾವಿತ್ರಿ ಜನವಾಡಕರ್ ಅವರನ್ನು ‘ಗುರು ಸ್ತ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ, ಪ್ರಮುಖರಾದ ಸೋಮಶೇಖರ ನಂದಿಧ್ವಜ, ಶರಣಬಸವ ಜಂಗಿನಮಠ, ಚಂದ್ರಕಾಂತ ಬಿರಾದಾರ, ಶಿವರಾಜ್ ಅಂಡಗಿ, ಸಂತೋಷ ಕುಡಳ್ಳಿ, ಮಂಜುನಾಥ ಕಂಬಾಳಿಮಠ, ಶರಣಬಸಪ್ಪ ನರೂಣಿ, ಶಿವಲೀಲಾ ತೆಗನೂರ, ರೇಣುಕಾ ಎನ್., ಡಾ.ಶರಣರಾಜ್ ಛಪ್ಪರಬಂದಿ, ರವೀಂದ್ರಕುಮಾರ ಭಂಟನಳ್ಳಿ, ಜಗದೀಶ ಮರಪಳ್ಳಿ, ಶಿವಾನಂದ ಮಠಪತಿ, ವಿಶ್ವನಾಥ ತೊಟ್ನಳ್ಳಿ, ಸುರೇಶ ವಗ್ಗೆ, ವಿಜಯಲಕ್ಷ್ಮೀ ಹಿರೇಮಠ, ಜ್ಯೋತಿ ಪಾಟೀಲ, ಮಾಲಾ ದಣ್ಣೂರ, ಮಾಲಾ ಕಣ್ಣಿ, ಅಶ್ವೀನಿ ಹಡಪದ, ರಾಜೇಂದ್ರ ಮಾಡಬೂಳ, ಸಿದ್ಧಾರಾಮ ಹಂಚನಾಳ,  ಮೀನಾಕ್ಷಿ ಕುಂಬಾರ, ಸಂತೋಷ ಕುಂಬಾರ, ವಿನೋದ ಶಲಗಾರ, ಪ್ರಭುಲಿಂಗ ಮೂಲಗೆ, ಜಯಶ್ರೀ ಜೈನ್, ಸಂಪತ ಹಿರೇಮಠ,  ಶಶಿಕಲಾ ಮಾಡ್ಯಾಳೆ, ಶ್ರೀಕಾಂತ ಪಾಟೀಲ ತಿಳಗೂಳ, ಶಿವಪುತ್ರ ಹಾಗರಗಿ, ಆರ್.ಹೆಚ್.ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

20 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago