ಕಲಬುರಗಿ: ಜಿಲ್ಲಾ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಬೆಂಗಳೂರಿನ ವಿಂದ್ಯಾ ಇ-ಇನ್ಪೊಮೀಡಿಯಾ ಪೈವೆಟ್ ಲಿಮಿಟೆಡ್ ಇವುಗಳ ಸಹಯೋಗದೊಂದಿಗೆ ಇದೇ ಅಕ್ಟೋಬರ್ 21 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಕಲಬುರಗಿ (ಪುರುಷ) ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಆವರಣದಲ್ಲಿ ಕಸ್ಟಮರ್ ಸಪೋರ್ಟ್ ಎಕ್ಸಿಕ್ಯೂಟಿವ್ ಹುದ್ದೆಗೆ ವಿಕಲಚೇತನರಿಗಾಗಿ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಜಿಲ್ಲಾ ಕೌಶಲ್ಯ ಮಿಷನ್‍ನ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳು ತಿಳಿಸಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿನ ವಿಕಚೇತನರಿಗಾಗಿ ಚಲನವಲನ ನೂನ್ಯತೆ ಹಾಗೂ ಪ್ರತಿಶತ 40-50 ಮಂದದೃಷ್ಟಿ ಹೊಂದಿದ ಅಭ್ಯರ್ಥಿಗಳು ಮಾತ್ರ ಈ ಉದ್ಯೋಗ ಮೇಳಕ್ಕೆ ಹಾಜರಾಗಬೇಕು. ಬೆಂಗಳೂರು ಮತ್ತು ಕೃಷ್ಣಗಿರಿ ಸ್ಥಳದಲ್ಲಿರುವ ಕಸ್ಟಮರ್ ಸಪೋರ್ಟ ಎಕ್ಸಿಕ್ಯೂಟಿವ್ ಹುದ್ದೆಗೆ ಎಸ್.ಎಸ್.ಎಲ್.ಸಿ., ಪಿಯುಸಿ ಹಾಗೂ ಯಾವುದೇ ಪದವಿ ಪಾಸಾಗಿರಬೇಕು.
ವಯೋಮಿತಿ 18 ರಿಂದ 35 ವರ್ಷದೊಳಗಿರಬೇಕು. ಅಭ್ಯರ್ಥಿಗಳು ಕಂಪ್ಯೂಟರ್ ಜ್ಞಾನದೊಂದಿಗೆ ಕನ್ನಡ, ಹಿಂದಿ, ಇಂಗ್ಲೀಷ, ತೆಲಗು ಹಾಗೂ ಮರಾಠಿ ಭಾಷೆಗಳಲ್ಲಿ ಯಾವುದಾದರೂ ಎರಡು ಭಾಷೆಗಳಲ್ಲಿ ಭಾಷಾಜ್ಞಾನ ಹೊಂದಿರಬೇಕು. ಹೆಚ್ಚಿನ ಮಾಹಿತಿಗಾಗಿ ಸದರಿ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-225569, ಮೊಬೈಲ್ ಸಂಖ್ಯೆ 8317384664, 9538155569, 9945727378ಗಳಿಗೆ ಸಂಪರ್ಕಿಸಲು ಕೋರಲಾಗಿದೆ.
ಕಲಬುರಗಿ: ಜಯನಗರ ಬಡಾವಣೆಯ ಹಳೆ ಸಾರ್ವಜನಿಕ ಉದ್ಯಾನವನ ಅಭಿವೃದ್ಧಿಗಾಗಿ ಕಲಬುರಗಿ ಬೀದರ ಜಿಲ್ಲೆಯ ವಿಧಾನ ಪರಿಷತ್ ಸದಸ್ಯರಾದ ಡಾ.ಬಿ.ಜಿ.ಪಾಟೀಲ ಇವರ…
ಕಲಬುರಗಿ: ಪಕ್ಷದ ಜಿಲ್ಲಾ ಕಾರ್ಯಾಲಯದಲ್ಲಿ ಸಂವಿಧಾನ ದಿನ ಆಚರಣೆ ಕಾರ್ಯಕ್ರಮ ವನ್ನು ಸವಿಧಾನ ಪ್ರತಿಯನ್ನು ಓದುವ ಮೂಲಕ ಸವಿಧಾನ ಶಿಲ್ಪಿ…
ಕಲಬುರಗಿ : ಸೇಡಂ ಮತಕ್ಷೇತ್ರದ ವ್ಯಾಪ್ತಿಯ ಕರ್ಚಖೇಡ, ಕಾನಗಡ್ಡ,ಮದನ, ಮುಧೋಳ ಗ್ರಾ.ಪಂನ ಉಪ ಚುನಾಚುನಾವಣೆಯಲ್ಲಿ ಬಿ.ಜೆ.ಪಿ ಬೆಂಬಲಿತ ಅಭ್ಯರ್ಥಿಗಳು ಜಯ…
ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ 75ನೇ ಸಂವಿಧಾನ ಸಮರ್ಪಣಾ ದಿನಾಚರಣೆ ಅಂಗವಾಗಿ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್…
ಚಿಂಚೋಳಿ: ತಾಲೂಕಿನ ಸಾಲೆಬೀರನಳ್ಳಿ ಗ್ರಾಮದ ನೀವೃತ ಮುಖ್ಯಗುರುಗಳಾದ ಅಲ್ ಹಜ್ ಶಮಶೋದ್ದಿನ ಬೀರಗಿ ಪಟೇಲ್ (86) ಮಂಗಳವಾರ ನಿಧನರಾದರು. ಅವರಿಗೆ…
ವಾಡಿ (ಕಲಬುರಗಿ): ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಅವರ ವೃತ್ತದಲ್ಲಿರುವ ಬಾಬಾಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಂವಿಧಾನ ಪೂರ್ವ ಪೀಠಿಕೆ ಓದುವ ಮೂಲಕ…