ಸುರಪುರ ನಗರದಲ್ಲಿ ಐತಿಹಾಸಿಕ ದಸರಾ ಹಬ್ಬ ಆಚರಣೆ

ಸುರಪುರ: ರಾಜ್ಯದಲ್ಲಿ ಮೈಸೂರು ಮತ್ತು ವಿಜಯನಗರ ಸಾಮ್ರಾಜ್ಯಗಳಂತೆ ದಸರಾ ಹಬ್ಬದ ಐತಿಹಾಸಿಕ ಹಿನ್ನೆಲೆ ಹೊಂದಿರುವ ಸುರಪುರ ನಗರದಲ್ಲಿ ವಿಜಯದಶಮಿಯಂದು ದಸರಾ ಹಬ್ಬವನ್ನು ಹಿಂದಿನ ಸಂಪ್ರದಾಯದಂತೆ ಅದ್ದೂರಿಯಾಗಿ ಆಚರಿಸಲಾಯಿತು, ಸುರಪುರ ಸಂಸ್ಥಾನದ ಆರಾಧ್ಯ ದೈವ ವೇಣುಗೋಪಾಲ ಸ್ವಾಮಿಯ ಪಲ್ಲಕ್ಕಿ ಮೆರವಣಿಗೆ ಹಾಗೂ ಬನ್ನಿ ಮುಡಿಯುವ ಕಾರ್ಯಕ್ರಮ ವಿಜೃಂಭಣೆಯಾಗಿ ಜರುಗಿತು.

ಈ ಸಂಸ್ಥಾನದ ವಂಶಸ್ಥರು ಇಂದಿಗೂ ಜಾತ್ರೆ,ಹಬ್ಬ-ಉತ್ಸವಗಳನ್ನು ಹಾಗೂ ಸಂಪ್ರದಾಯಗಳಂತಹ ಆಚರಣೆಗಳನ್ನು ಮುಂದುವರೆಸಿಕೊಂಡು ಬರುತ್ತಿದ್ದು ಎಲ್ಲಾ ಸಮುದಾಯಕ್ಕೆ ಸೇರಿದ ಜನಸಾಮಾನ್ಯರೊಂದಿಗೆ ಬೆರೆತು ಸಂಸ್ಥಾನದ ವೈಭವವನ್ನು ಸಾರುವ ಹಬ್ಬ ಹಾಗೂ ಉತ್ಸವಗಳಲ್ಲಿ ಭಾಗಿಗಳಾಗುತ್ತಾ ಬಂದಿರುವುದು ಇಲ್ಲಿ ಆಚರಿಸುತ್ತಿರುವ ಆಚರಣೆಗಳ ಜೀವಂತಿಕೆಗೆ ಸಾಕ್ಷಿಯಾಗಿದೆ, ನಮ್ಮ ರಾಜ್ಯದಲ್ಲಿ ವಿಜಯನಗರ ಸಂಸ್ಥಾನದ ಪತನಗೊಂಡ ನಂತರ ಅವರು ಆಚರಿಸುತ್ತಿದ್ದ ವಿಜಯದಶಮಿ ಹಾಗೂ ಮಹಾನವಮಿಯನ್ನೊಳಗೊಂಡ ದಸರಾ ಹಬ್ಬವನ್ನು ಮೈಸೂರು ಅರಸರು ಆಚರಿಸುತ್ತಾ ಬರುತ್ತಿದ್ದಾರೆ ಎಂದು ಹೇಳುತ್ತಾರೆ.

ಕ್ರಿ.ಶ ೧೩೩೬ರಲ್ಲಿ ಸ್ಥಾಪನೆಗೊಂಡ ವಿಜಯನಗರ ಸಂಸ್ಥಾನದ ಸಾಮ್ರಾಜ್ಯದ ವೈಭವದ ಉನ್ನತಿಗೆ ಕಾರಣರಾದ ಅನೇಕ ಮನೆತನಗಳ ಪೂರ್ವಜರಲ್ಲಿ ಸುರಪುರ ಸಂಸ್ಥಾನಿಕರ ಪಾತ್ರವೂ ಇದೆ ಎಂಬುದು ಇತಿಹಾಸದಿಂದ ತಿಳಿದುಬರುತ್ತದೆ ಕೃಷ್ಣದೇವರಾಯನ ದಂಡಯಾತ್ರೆ ಹಾಗೂ ಮುದಗಲ್ ಯುದ್ಧದಲ್ಲಿ ವಿಜಯನಗರವನ್ನು ಬೆಂಬಲಿಸಿದ ಬೇಡ ಪಾಳೆಯಗಾರರು ಸುರಪುರದ ಪೂರ್ವಜರೇ ಆಗಿದ್ದರು ಎಂದು ಅನೇಕ ಇತಿಹಾಸಕಾರರು ತಮ್ಮ ಸಂಶೋಧನೆ ಮೂಲಕ ಆಧಾರ ನೀಡಿದ್ದು ಹೀಗಾಗಿ ವಿಜಯನಗರ ಸಂಸ್ಥಾನ ಕಾಲದಲ್ಲಿ ಆಚರಿಸುತ್ತಾ ಬರುತ್ತಿದ್ದ ದಸರಾ ಹಬ್ಬದ ದಿನಗಳಾದ ಮಹಾನವಮಿ ಹಾಗೂ ವಿಜಯದಶಮಿಯನ್ನು ಸುರಪುರ ನಗರದಲ್ಲಿ ಇಂದಿಗೂ ಸುರಪುರ ಸಂಸ್ಥಾನಿಕರ ನೇತೃತ್ವದಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ.

ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಒಂಭತ್ತು ದಿನಗಳವರೆಗೆ ವಾಹನೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆದವು, ಅಲ್ಲದೆ ಅರಮನೆಯಲ್ಲಿ (ದರಬಾರ) ಕೂಡಾ ಒಂಭತ್ತು ದಿನಗಳವರೆಗೆ ಪೂಜೆ ನೆರವೇರಿದವು, ಆಯುಧ ಪೂಜೆ ನಿಮಿತ್ತವಾಗಿ ಇಲ್ಲಿನ ದರಬಾರನಲ್ಲಿ ರಾಜ ವಂಶಸ್ಥರಿಂದ ಶಸ್ತ್ರಾಸ್ತ್ರಗಳಿಗೆ ಪೂಜೆ ಕಾರ್ಯಗಳನ್ನು ಕೈಗೊಳ್ಳಲಾಯಿತು, ವಿಜಯದಶಮಿಯ ದಿನವಾದ ಶುಕ್ರವಾರದಂದು ನೂತನ ಗರುಢವಾಹನರೂಢನಾಗಿ ಶ್ರೀ ವೇಣುಗೋಪಾಲಸ್ವಾಮಿ ದೇವರ ಪಲ್ಲಕ್ಕಿ ಮೆರವಣಿಗೆ ಹಾಗೂ ಬನ್ನಿ ಮುಡಿಯುವ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿದವು, ಪಲ್ಲಕ್ಕಿ ಮೆರವಣಿಗೆ ದರಬಾರ ಮುಂದುಗಡೆ ಆಗಮಿಸಿದಾಗ ವೇಣುಗೋಪಾಲಸ್ವಾಮಿ ದೇವರಿಗೆ ಅರಸು ವಂಶಸ್ಥರಾದ ರಾಜಾ ಕೃಷ್ಣಪ್ಪ ನಾಯಕ ಹಾಗೂ ಪರಿವಾರದವರು ಭಕ್ತಿಯಿಂದ ಪೂಜೆ ಸಲ್ಲಿಸಿದರು.

ದರಬಾರದ ಹತ್ತಿರ ರಾಜ ವಂಶಸ್ಥರಿಂದ ಪೂಜೆ ನೆರವೇರಿದ ನಂತರ ದೇವರ ಪಲ್ಲಕ್ಕಿ ಮೆರವಣಿಗೆಯಲ್ಲಿ ಸಾಗಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯದಂತೆ ನಗರದ ಪ್ರಭು ಕಾಲೇಜು ಮೈದಾನದ (ಖಾನಿಕೆರೆ) ಹಿಂದುಗಡೆ ಇರುವ ಸ್ಥಳದಲ್ಲಿ ಬನ್ನಿ ಮುಡಿಯುವ ಪೂಜಾ ಕೈಂಕರ್ಯಗಳು ಜರುಗಿದವು, ದೇವಸ್ಥಾನದ ಪ್ರಧಾನ ಅರ್ಚಕ ಆಂಜನೇಯಾಚಾರ್ಯಲು ನೇತೃತ್ವದಲ್ಲಿ ಎಲ್ಲಾ ಧಾರ್ಮಿಕ ವಿಧಿ ವಿಧಾನಗಳು ನಡೆದವು, ಮೆರವಣಿಗೆಯಲ್ಲಿ ಸಾಗುತ್ತಾ ವಾದ್ಯಮೇಳ, ಭಜನೆ ಹಾಗೂ ಗೋವಿಂದ ಗೋವಿಂದ ಎಂಬ ವೆಂಕಟರಮಣನ ನಾಮಾವಳಿಗಳ ಘೋಷಣೆಗಳು ಹಾಗೂ ಛತ್ರ ಚಾಮರಗಳೊಂದಿಗೆ ಶ್ರೀ ವೇಣುಗೋಪಾಲಸ್ವಾಮಿ ದೇವರ ಪಲ್ಲಕ್ಕಿ ಬನ್ನಿ ಮುಡಿಯುವ ಕಾರ್ಯ ಮುಗಿಸಿ ವಾಪಾಸು ದೇವಸ್ಥಾನಕ್ಕೆ ದೇವರು ಬರುವ ಸಮಯದಲ್ಲಿ ರಸ್ತೆಗಳ ಇಕ್ಕೆಲಗಳಲ್ಲಿ ನಿಂತುಕೊಂಡಿದ್ದ ಭಕ್ತಾದಿಗಳು ದೇವರಿಗೆ ಕಾಯಿ, ಕರ್ಪೂರ, ಮಂಗಳಾರುತಿ ಹಾಗೂ ಬನ್ನಿ ಅರ್ಪಿಸಿ ಕೃತಾರ್ಥರಾದರು, ದೇವರಿಗೆ ಬನ್ನಿ ಅರ್ಪಿಸಿದ ನಂತರ ಜನರು ಒಬ್ಬರಿಗೊಬ್ಬರು ಬನ್ನಿ ವಿನಿಯಮ ಮಾಡಿಕೊಂಡರು, ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸಂಸ್ಥಾನದ ವತನದಾರರಾದ ದೊಡ್ಡಪ್ಪ ನಿಷ್ಠಿ,ಗಣೇಶ ಜಾಗೀರದಾರ,ದಿನೇಶ ಜೋಷಿ ಮಂತ್ರಿ,ಸಂಗಣ್ಣ ಸರಪಟ್ಟಣಶೆಟ್ಟಿ,ಲಿಂಗೋಜಿರಾವ ಮುಜುಂದಾರ,ವಿರೇಶ ನಿಷ್ಠಿ,ಉಸ್ತಾದ ವಜಾಹತ್ ಹುಸೇನ,ವೆಂಕಟೇಶ ಸರ್‌ಹವಾಲ್ದಾರ ಹಾಗೂ ಇತರರು ಪಾಲ್ಗೊಂಡಿದ್ದರು.

emedialine

Recent Posts

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

2 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

2 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

2 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

2 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

2 hours ago

ನಮೋಶಿ ನೇತೃತ್ವದಲ್ಲಿ, ಕಲ್ಯಾಣ ಕರ್ನಾಟಕ ವಿಭಾಗದ ಪ್ರೌಢಶಾಲಾ ಶಿಕ್ಷಕರ ಸಭೆ

ಕಲಬುರಗಿ: ಈಶಾನ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಶಶಿಲ್ ನಮೋಶಿ ರವರ ನೇತೃತ್ವದಲ್ಲಿ ಹಾಗೂ ಶಾಲಾ ಶಿಕ್ಷಣ ಇಲಾಖೆಯ…

2 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420