ಭಾಲ್ಕಿ: ವಿಜಯಪುರದ ಜ್ಞಾನಯೋಗಾಶ್ರಮದ ಪರಮಪೂಜ್ಯ ಶ್ರೀ ಸಿದ್ಧೇಶ್ವರ ಮಹಾಸ್ವಾಮಿಗಳವರ ಆಧ್ಯಾತ್ಮಿಕ ಪ್ರವಚನ ನವ್ಹೆಂಬರ್ ೦೪ ರಿಂದ ಚನ್ನಬಸವಾಶ್ರಮದಲ್ಲಿ ಹಮ್ಮಿಕೊಳ್ಳುವ ಪ್ರಯುಕ್ತ ಪೂರ್ವಭಾವಿ ಸಭೆ ಭಾಲ್ಕಿಯ ಚನ್ನಬಸವಾಶ್ರಮದಲ್ಲಿ ಕರೆಯಲಾಗಿತ್ತು.
ದಿವ್ಯಸನ್ನಿಧಾನ ವಹಿಸಿ ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಪ್ರವಚನ ಯಶಸ್ವಿಗೊಳಿಸಲು ಎಲ್ಲರೂ ಸೇವಾಭಾವದಿಂದ ಶ್ರಮಿಸಲು ಸೂಚಿಸಿದರು. ನೇತೃತ್ವ ವಹಿಸಿದ ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು ಪ್ರವಚನದ ಸಮಯದಲ್ಲಿ ಎಲ್ಲರು ಸಮವಸ್ತ್ರ ಧರಿಸಿ ಶಾಂತಿ ಕಾಪಾಡುವ ಮೂಲಕ ಪ್ರವಚನದ ಲಾಭ ಪಡೆಯಬೇಕೆಂದು ನುಡಿದರು.
ವೇದಿಕೆಯ ಮೇಲೆ ಸೋಮನಾಥಪ್ಪ ಅಷ್ಟೂರೆ, ಸಿದ್ರಾಮಪ್ಪ ವಂಕೆ, ಪುರಸಭೆ ಅಧ್ಯಕ್ಷ ಬಸವರಾಜ ವಂಕೆ, ಪ್ರಕಾಶ ಬಿರಾದಾರ, ಪ್ರಸನ್ನ ಪ್ರಕಾಶ ಖಂಡ್ರೆ, ಸಾಗರ ಈಶ್ವರ ಖಂಡ್ರೆ ಇದ್ದರು. ಉಮಾಕಾಂತ ವಾರದ, ಶಿವು ಲೋಖಂಡೆ, ಬಸವರಾಜ ಮರೆ ಮುಂತಾದವರು ಉಪಯುಕ್ತ ಸಲಹೆ ನೀಡಿದರು. ಸಭೆಯಲ್ಲಿ ಪ್ರಮುಖರಾದ ಚನ್ನಬಸವ ಬಳತೆ, ಶಂಭುಲಿಂಗ ಕಾಮಣ್ಣ, ಚಂದ್ರಕಾಂತ ಬಿರಾದಾರ, ಪುಷ್ಪಾ ಗಂದಗೆ, ಅಪ್ಪಾಸಾಬ ದೇಶಮುಖ, ರಾಚಪ್ಪ ಗೋರ್ಟೆ ಮುಂತಾದವರು ಇದ್ದರು.
ಮಲ್ಲಮ್ಮ ಆರ್.ಪಾಟೀಲ, ನೀಲಕಂಠ ಸ್ವಾಮಿ, ವಚನ ಪ್ರಾರ್ಥನೆ ನಡೆಸಿಕೊಟ್ಟರು. ವೀರಣ್ಣ ಕುಂಬಾರ ಸ್ವಾಗತಿಸಿ ನಿರೂಪಿಸಿದರು. ಶಾಂತಯ್ಯ ಸ್ವಾಮಿ ವಂದಿಸಿದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…