ಬಿಸಿ ಬಿಸಿ ಸುದ್ದಿ

ಲೋಕಶಿಲ್ಪಿಗಳಾದ ನನ್ನಪ್ಪ ಸಿದ್ದಪ್ಪ ಮಾಸ್ತರ್ ಮತ್ತು ದೈವಿಸಂಬೂತ ಆಯುರ್ವೇದ ಪಂಡಿತ ಮ.ನ.ನದಾಫ ಮಾಸ್ತರ್ ರರೂ.!

ನನ್ನ ಪ್ರೀತಿಯ ಗೆಳೆಯ ಮತ್ತು ಗೆಳತಿಯರಲ್ಲಿ ಒಂದು ವಿನಮ್ರ ವಿನಂತಿ, ಈ ಕಥೆಯನ್ನು ದಯವಿಟ್ಟು ಪೂರ್ತಿಯಾಗಿ ಓದಿರಿಯೆಂಬುದೇ ನನ್ನ ವಿನಂತಿ.

( ನಾನು ಮೊದಲೇ ಹೇಳುತ್ತೇನೆ.‌ ಇಲ್ಲಿ ಬರುವ ಪಾತ್ರಗಳು ‘ಜಾತಿ, ಮತ, ಪಂಥ’ವನ್ನು ಮೀರೀದ ಬರೀ ‘ಅತಿಮಾನುಸತ್ವ’ದ ಗುಣಗಳನ್ನು ಹೊಂದದ ಪಾತ್ರಗಳು. ಅಷ್ಟೇ ಅಲ್ಲ ಎಲ್ಲ ಪಾತ್ರಗಳೂ ಕಟ್ಟುಕಥೆಯಲ್ಲ. ನಿಜ ಜೀವನದ ವಾಸ್ತವ ಪಾತ್ರಗಳು …! )

ನನ್ನಪ್ಪನವರ ಹೆಸರು ಸಿದ್ದಪ್ಪ ಮಾಸ್ತರ್ ಅಂತ.
ಆತ ಮುಲ್ಕಿ ಮಾಸ್ತಾರಾಗಿದ್ದರು. ಆ ಮುಲ್ಕಿ ಮಾಸ್ತಾರ್ ಮಗನಾಗಿ ನಾನು ಹುಟ್ಟಿದ್ದು ನನ್ನ ಪುಣ್ಯ ಅಂತಲೇ ನಾನು ತಿಳಿದುಕೊಂಡಿದ್ದೆನೆ. ಮತ್ತು ಹಾಗೆಯೇ ತಿಳಿದುಕೊಂಡಿದ್ದೇನೆ ಈಗಲೂ ಕೂಡ.

ಅಂತಹ ಪುಣ್ಣ್ಯಮ್ತನ ಹೊಟ್ಟೆಯಲ್ಲಿ ನಾನು ಹುಟ್ಟಿದ್ದು, ನಾನು ಪೂರ್ವ ಜನ್ಮದ ಪುಣ್ಯ ಮತ್ತು ಕರ್ಮವನ್ನು ನಂಬುವುದಿಲ್ಲ. ಆದರೂ ನನ್ನಪ್ಪನ ಹೊಟ್ಟೆಯಲ್ಲಿ ನಾನು ಹುಟ್ಟಿದ್ದು ನನ್ನ ಪುಣ್ಯ ಎಂದೇ ನಂಬಿದ್ದೇನೆ. ಅಂತಹ ಬಹುದೊಡ್ಡ ಮನುಷ್ಯ ನನ್ನಪ್ಪ ಸಿದ್ದಪ್ಪ ಮಾಸ್ತರ್.

ಆ ಮುಲ್ಕಿ ಮಾಸ್ತರ್ ಆಗಿದ್ದ ಸಿದ್ದಪ್ಪ ಮಾಸ್ತರ್, ಅಂದರೆ ನನ್ನಪ್ಪನ ಪಗಾರ ಅಂದರೆ ಸಂಬಳ ಜಾಸ್ತಿ ಇರಲಿಲ್ಲ. ಇದ್ದುದ್ದರಲ್ಲೇ ನಾವು ಅಂದರೆ ನನ್ನ ಅವ್ವ ನಾಗವ್ವ ಮತ್ತು ಎಲ್ಲಾ ಮಕ್ಕಳೂ ಅಂದರೆ ನಾನು ಮತ್ತು ನನ್ನವ್ವ ಹಾಗೂ ನನ್ನ ಅಕ್ಕನವರು ಖುಷಿಯಿಂದ ನನ್ನಪ್ಪನ ಜೊತೆಯಲ್ಲಿ ಜೀವನ ನಡೆಸಿದ್ದೆವು.

ನನ್ನಪ್ಪನಿಗೆ ಹತ್ತಾರು ಊರುಗಳಲ್ಲಿ ಆತ್ಮೀಯ ಗೆಳೆಯರು ಮತ್ತು ನನ್ನಪ್ಪನನ್ನು ನಂಬಿದವ ಶಿಷ್ಯರು ಇದ್ದಾರೆ. ಅವರೆಲ್ಲಿ ಕೆಲವರು ಈಗ ಇಲ್ಲ. ಅಂದರೆ ತೀರಿದ್ದಾರೆ ಈಗ. ಅಗ ಅವರೆಲ್ಲಾ ನನ್ನಪ್ಪನನ್ನು ಪರಮಪೂಜ್ಯ ಭಾವನೆಯಿಂದ ಕಾಣುತ್ತಿದ್ದವರು.

ನನ್ನಪ್ಪ ಹಾಕಿದ ಗೆರೆಯನ್ನು ದಾಟದ ಅವನ ಗೆಳೆಯ ಮತ್ತು ಶಿಷ್ಯ ಬಳಗ ಈಗಲೂ ನನ್ನಪ್ಪನನ್ನು ಕಾಣುತ್ತಿದ್ದ ದೃಷ್ಟಿಯಲ್ಲೇಯೇ ನನ್ನನ್ನೂ ಕೂಡ ಕಾಣುತ್ತಾರೆ, ಈಗಲೂ ಕೂಡ ನಮ್ಮೂರು ಕಬ್ಬೂರಲ್ಲಿ ಮತ್ತು ನನಗೇ ಗೊತ್ತಿಲ್ಲದ ಊರುಗಳಲ್ಲಿ. ಅಂತಹವರ ಹೊಟ್ಟೆಯಲ್ಲಿ ನಾನು ಹುಟ್ಟಿದ್ದು ನನ್ನ ಪೂರ್ವ ಜನ್ಮದ ಶುಕ್ರತ್ ಫಲವೆಂದೇ ನನ್ನನ್ನು ಕಾಣುತ್ತಿರುವ ನನ್ನಪ್ಪನ ನೂರಾರು ಆತ್ಮೀಯ ಗೆಳೆಯ ಮತ್ತು ಶಿಷ್ಯರ ಬಳಗಕ್ಕೆ ಅಷ್ಟೇ ವಿನಮ್ರವಾಗಿ ನಡೆದುಕೊಳ್ಳುತ್ತೇನೆ ನಾನೂ ಕೂಡಾ.

ನನ್ನಪ್ಪನ ಕೈಯಲ್ಲಿ ಕಲೆತ ನೂರಾರು ಜನರು ದೊಡ್ಡ ದೊಡ್ಡ ಹುದ್ದೆಯಲ್ಲಿ ಮತ್ತು ಹಲವಾರು ನೌಕರರಲ್ಲಿ ಅಲ್ಲದೇ ಹಲವಾರು ಜನರು ಕಮತದ ಅಂದರೆ ವ್ಯವಸಾಯದ ಕೆಲಸದಲ್ಲಿ ಇದ್ದಾರೆ. ಅವರೆಲ್ಲರೂ ನನ್ನಪ್ಪನಿಗೆ ತುಂಬಾ ಆಭಾರಿಯಾಗಿ ನಡೆದುಕೊಳ್ಳುತ್ತಿದ್ದರು. ಮತ್ತು ಈಗಲೂ ಕೂಡ ನನ್ನ ಮನೆಗೆ ಬಂದು ನನ್ನಪ್ಪನನ್ನು ನೆನದು ಹೋಗುತ್ತಾರೆ.

ನನ್ನಪ್ಪ ಅಂದರೆ ಸಿದ್ದಪ್ಪ ಮಾಸ್ತರ್ ಹಲವಾರು ಕಡೆಗಳಲ್ಲಿ ನೌಕರಿ ಮಾಡಿದವರು. ಈಗಿನಂತೆ ಆಗ ಒಂದೇ ಒಂದು ಕಡೆಯಲ್ಲಿ ಗೂಟ ಹೊಡೆದುಕೊಂಡು ನೌಕರಿ ಮಾಡುತ್ತಿರಲಿಲ್ಲ. ನನ್ನಪ್ಪ ಸಿದ್ದಪ್ಪ ಮಾಸ್ತರ್ ಆಗಿನ ಮುಂಬೈ ಸರ್ಕಾರ ತೋರಿಸಿದ ಕಡೆಗಳಲ್ಲಿ ಹೋಗಿ ವಿನಮ್ರತೆಯಿಂದ ಮಾಸ್ತರಿಕೆ ಮಾಡುತ್ತಿದ್ದರು.

ನನ್ನಪ್ಪನಿಗೆ ತುಂಬಾ ಕಡೆಗಳಲ್ಲಿ ವರ್ಗವಾಗಿತ್ತಂತೆ. ಮೊದಲು ಕಬ್ಬೂರು ಆನಂತರ ಹಿರೆಕೇರೂರ ತಾಲ್ಲೂಕಿನ ಚಿಕ್ಕೆರೂರು, ಹಾವೇರಿ ತಾಲ್ಲೂಕಿನ ಕುಳೇನೂರ, ಹಾವೇರಿ ತಾಲ್ಲೂಕಿನ ಕರ್ಜಗಿ, ಅಲ್ಲದೇ ನನಗೆ ಗೊತ್ತಿರುವಂತೆ ರೋಣ ತಾಲೂಕಿನ ಬೆಳವಣಿಕಿ, ಹೀಗೆಯೇ ಹತ್ತಾರು ಕಡೆಗಳಲ್ಲಿ ಮಾಸ್ತರಿಕೆ ಮಾಡಿದರೂ, ಹೋದಲೆಲ್ಲ ಅಷ್ಟೇ ನಿಷ್ಠೆ, ಶ್ರದ್ಧೆ, ಮತ್ತು ಪಾರದರ್ಶಕ ಪ್ರಾಮಾಣಿಕತೆಯಿಂದ ಮಾಸ್ತರ್ ರಿಕೆ ಮಾಡಿದರಂತೆ ನನ್ನಪ್ಪ ಸಿದ್ದಪ್ಪ ಮಾಸ್ತರ್.

ನನ್ನಪ್ಪ ಮಾಸ್ತರ್ ಕೆ ಮಾಡಿದ ಕಡೆಗಳಲ್ಲಿ ಈಗಲೂ ಆಗಿನ ಶಿಷ್ಯರು ಅಂದರೆ ಈಗಿನ ಹಿರಿ ತಲೆಗಳು ಇಂದಿಗೂ ನನ್ನಪ್ಪ ಸಿದ್ದಪ್ಪ ಮಾಸ್ತರ್ ನನ್ನು ನೆನಸುತ್ತಾರೆ.

ಕೊನೆಯಲ್ಲಿ ಅಂದರೆ ಪಿಂಚಣಿ ಆಗುವ ಹೊತ್ತಿನಲ್ಲಿ ನನ್ನಪ್ಪ ಸಿದ್ದಪ್ಪ ಮಾಸ್ತರ್ ಗೆ ಮತ್ತೇ ಕಬ್ಬೂರಿಗೇ ಬಂದಿದ್ದರಂತೆ. ಆಗ ಅಷ್ಟೇ ಅಲ್ಲ ಯಾವಾಗಲೂ ನನ್ನಪ್ಪ ಸಿದ್ದಪ್ಪ ಮಾಸ್ತರ್ ಹೆಡ್ ಮಾಸ್ತರ್ ಆಗಿ ಕುಳಿತುಕೊಳ್ಳುತ್ತಿದ್ದ ಕುರ್ಚಿಯಲ್ಲಿ ನನ್ನ ಮಾವನವರು ಅಂದರೆ ಸಿದ್ದಲಿಂಗಯ್ಯ ಶಂಕೀನ ಮಾಸ್ತರ್ ಎಂಬ ಮಹಾನುಭಾವ ಮಾಸ್ತರ್ ನನ್ನಪ್ಪನ ಮೇಲಿನ ಪೂಜ್ಯ ಭಾವನೆಯಿಂದ ಆ ಕುರ್ಚಿಯಲ್ಲಿ ಕೂಡುತ್ತಿರಲಿಲ್ಲವಂತೆ. ಅಷ್ಟು ನನ್ನಪ್ಪನ ಶಿಷ್ಯರೂ ಮಾಸ್ತರ್ ಆಗಿ ಕೆಲಸ ಮಾಡಿದರೂ‌ ಎಂದಿಗೂ ಪೂಜ್ಯ ಭಾವನಾತ್ಮಕ ಬುದ್ಧಿವಂತಿಕೆಯಿಂದ ನೋಡುತ್ತಿದ್ದರಂತೆ.

ಮುಂದೆ ಆ ಸಿದ್ದಲಿಂಗಯ್ಯ ಶಂಕೀನ ಮಾಸ್ತರ್ ಕಬ್ಬೂರಲ್ಲಿ ತಾವು ಪೆನೆಸನ್ ಆಗುವವರೆಗೂ, ತಾವೂ ಕೂಡ ಒಬ್ಬ ಹೆಡ್ ಮಾಸ್ತರ್ ಆದರೂ ನನ್ನಪ್ಪ ಅಂದರೆ ಸಿದ್ದಪ್ಪ ಮಾಸ್ತರ್ ಕೂಡುತ್ತಿದ್ದ ಕುರ್ಚಿಯಲ್ಲಿ ಕೊಡಲಿಲ್ಲವಂತೆ. ಆ ಕುರ್ಚಿ ಹಾಗೆಯೇ ಖಾಲಿ ಬಿಟ್ಟು, ಅದರ ಪಕ್ಕದ ಕುರ್ಚಿಯಲ್ಲಿ ಕೂಡುತ್ತಿದ್ದರಂತೆ.

ಹೀಗೆಯೇ ನೂರಾರು ನನ್ನಪ್ಪನ ಗೆಳೆಯರ ಬಳಗ ಈಗಿಲ್ಲವಾದರೂ ಅವರ ವಾರಸುಧಾರರು ಇದ್ದಾರೆ. ಆ ಬಳಗ ಈಗಲೂ ನನ್ನ ಕೂಡ ಆ ನನ್ನಪ್ಪ ಸಿದ್ದಪ್ಪ ಮಾಸ್ತರ್ ಮಗನೆಂದು ನನ್ನ ಕೂಡ ಆ ಹಿಂದಿನ ಭಾವನೆಯಲ್ಲಿಯೇ ನನ್ನ ಕೂಡ ನಡೆದುಕೊಳ್ಳುತ್ತಾರೆ. ನಾನೂ ಕೂಡಾ ಅವರ ಭಾವನೆಗಳೆಗೆ ದಕ್ಕೆ ಬರೆದಂತೆ ನಡೆದುಕೊಳ್ಳುತ್ತೇನೆ. ಇದು ಇರಲಿ.

ನನ್ನಪ್ಪ ಸಿದ್ದಪ್ಪ ಮಾಸ್ತರ್ ಪಿಂಚಣಿ ಆಗುವ ಕೊನೆಯಲ್ಲಿ ಮತ್ತೇ ನಾನು ಮೊದಲೇ ಹೇಳಿದಂತೆ ಕಬ್ಬೂರು ಗ್ರಾಮಕ್ಕೇ ವರ್ಗವಾಗಿ ಬಂದು ಕಬ್ಬೂರು ಗ್ರಾಮದ ಶಾಲೆಯಲ್ಲಿ ಹೆಡ್ ಮಾಸ್ತರ ಆಗಿ ಬಂದು ಕಬ್ಬೂರು ಶಾಲೆಯನ್ನು ಒಂದು ಮಾದರಿ ಶಾಲೆಯಾಗಿಸಿದರಂತೆ. ನನ್ನಪ್ಪ ಸಿದ್ದಪ್ಪ ಮಾಸ್ತರ್ ಶಾಲೆಯನ್ನೇ ಒಂದು ಮನೆ ಮಾಡಿಕೊಂಡು ಯಾವಾಗಲೂ ಶಾಲೆಯಲ್ಲೇ ಇರುತ್ತಿದ್ದ ವಿಷಯಗಳನ್ನೂ

ಕಬ್ಬೂರು ಶಾಲೆಯನ್ನು ‘ನಂದನವನ’ ಮಾಡಲು ಹವಣಿಸಿದರಂತೆ. ಶಾಲೆಯಲ್ಲಿಯ ಶಿಕ್ಷಕರೆಲ್ಲಾ ನನ್ನ ಅಪ್ಪ ಸಿದ್ದಪ್ಪ ಮಾಸ್ತರ್ ಹೇಳಿದಂತೆಯೇ ನಡೆದುಕೊಂಡರಂತೆ.

ಶಾಲೆಯನ್ನು ಅಸಂಖ್ಯಾತ ಸಸ್ಯಗಳ, ಗಿಡ, ಗಂಟಿಗಳ ತಾಣವಾಗಿಸಿದರಂತೆ. ಜೊತೆಗೆ ಅವರ ಒಡನಾಡಿಗಳೂ ಇದ್ದರಂತೆ. ಹಾಗೇ ಅವರ ಶಿಷ್ಯ ಬಳಗದಲ್ಲಿ ಮಹಾಕೂಟಯ್ಯ ಹಿರೇಮಠ, ಸಿದ್ದಲಿಂಗಯ್ಯ ಶಂಕೀನ ಮಾಸ್ತರ್, ಪುಂಡಲಿಕಪ್ಪ ಮಾಸ್ತರ್, ಬಾರ್ಕಿ ಮಾಸ್ತರ್, ಚಿನ್ನಿಕಟ್ಟಿ ಮಾಸ್ತರ್, ಹೀಗೆಯೇ ಗೆಳೆಯರ ಬಳಗವಿತ್ತಂತೆ. ಅಲ್ಲದೇ ಶಾಲೆಯ ಪಕ್ಕದಲ್ಲಿ ಒಂದು ಶಾಲೆಯ ಹೂದೋಟಕ್ಕೆ ಬಾವಿಯನ್ನು ತೋಡಿಸಿದ್ದರಂತೆ.

ಇದು ಇರಲಿ. ಮುಖ್ಯವಾಗಿ ನಾನು ಹೇಳಬೇಕಿರುವ ವಿಷಯಗಳು ಬಹಳಷ್ಟಿವೆ. ಅವುಗಳಲ್ಲಿ ಒಂದೆರಡು ಸಂಗತಿಗಳನ್ನು ಮಾತ್ರ ಹೇಳುತ್ತಿದ್ದೇನೆ‌ ನಾನು. ( ಉಳಿದ ಆ ಎಲ್ಲಾ ಸಂಗತಿಗಳನ್ನು ನನ್ನ ಹೊಸದಾಗಿ ಬರಲಿರುವ ಕಾದಂಬರಿಯಲ್ಲಿ ಬರುತ್ತವೆ. )

ಪುಂಡಲೀಕಪ್ಪ ಮಾಸ್ತರ್ ನನಗೆ ಯಾವಾಗಲೂ ನೀವು ಒಂದನೇ ತರಗತಿಯನ್ನೇ ಕೊಡುತ್ತೀರಿ, ನನಗೆ ಬೇಜಾರು ಆಗಿದೆ. ಬದಲಾಗಿ ಬೇರೇ ತರಗತಿ ಕೊಡಿರಿ ಎಂದು ಜಗಳವಿಡಿದರಂತೆ. ಆಗ ನನ್ನ ಅಪ್ಪ ಸಿದ್ದಪ್ಪ ಮಾಸ್ತರ್ ಆ ಸಿಟ್ಟಾದ ಪುಂಡಲೀಕಪ್ಪ ಮಾಸ್ತರ್ ರರನ್ನು ಹತ್ತಿರ ಕರೆದು ಹೇಳಿದರಂತೆ, ಒಂದನೇ ತರಗತಿ ತೆಗೆಕೊಳ್ಲುವುದು, ಅಷ್ಟು ಸುಲಭದ ಕೆಲಸವಲ್ಲ. ಚಿಕ್ಕ ಮಕ್ಕಳ ತರಗತಿಗೆ ನೀವೇ ಸೂಕ್ತ. ಚಿಕ್ಕ ಮಕ್ಕಳನ್ನು ತಿದ್ದಿ–ತೀಡಿ, ಆ ಚಿಕ್ಕ ಮಕ್ಕಳನ್ನು ದೊಡ್ಡ ಮನುಷ್ಯರನ್ನಾಗಿ ಮಾಡಲು ನೀವೇ ಸೂಕ್ತ. ಅದಕ್ಕೆ ನೀವೇ ಆ ಒಂದನೇ ತರಗತಿಯನ್ನು ತೆಗೆದುಕೊಳ್ಳಬೇಕೆಂದು. ಹೀಗೆಯೇ ಯಾವ ತರಗತಿಗೆ ಯಾವ ಶಿಕ್ಷಕರು ಸೂಕ್ತವೋ ಆ ತರಗತಿಗೆ ಅಂತಹ ಶಿಕ್ಷಕರನ್ನು ಹಾಕುತ್ತಿದ್ದರಂತೆ ನನ್ನಪ್ಪ ಸಿದ್ದಪ್ಪ ಮಾಸ್ತರ್.

ಆ ಶಿಕ್ಷಕ ಪುಂಡಲೀಕಪ್ಪ ಮಾಸ್ತರ್ ಚಿಕ್ಕ ಮಕ್ಕಳಿಗೆ ಕಲಿಸುವ ಪರಿ ಹೇಗಿತ್ತೆಂದರೆ ಅದು ಒಂದು ತಪಸ್ಸು ಆಗಿತ್ತು. ಚಿಕ್ಕ ಮಕ್ಕಳಿಗೆ ಪಾಠ ಕಲಿಸುವಾಗ ಒಮ್ಮೆ ದಿಕ್ಕುಗಳನ್ನು ಪರಿಚಯಿಸುವಾಗ, ಅವರು ನೋಡಿ ಮಕ್ಕಳೇ ಈಗ ನಾನು ನಿಮಗೆ ದಿಕ್ಕುಗಳನ್ನು ಪರಿಚಯಿಸುತ್ತೇನೆ ಅಂತ ಹೇಳಿ ತಮ್ಮ ಅಂಗಿಯ ಹಿಂಬದಿಯಲ್ಲಿ ಚುಕುಬುಕು ಗಾಡಿಯಂತೆ ತಮ್ಮ ತೊಟ್ಟ ಅಂಗಿಯ ಚುಂಗನ್ನು ಮಕ್ಕಳ ಕೈ ಹಿಡಿಸಿಕೊಂಡು ಈಗ ಹೇಳಿ ನಮ್ಮ ಗಾಡಿ ಯಾವ ದಿಕ್ಕಿನಲ್ಲಿ ಹೋಗುತ್ತಿದೆ ಎಂದು ಮಕ್ಕಳಿಗೆ. ಈಗ ಇದು ಪೂರ್ವ ದಿಕ್ಕಿನಲ್ಲಿ ಚಲಿಸುತ್ತಿದೆ.

ಈಗ ಪಶ್ಚಿಮ ದಿಕ್ಕಿನಲ್ಲಿ. ಹೀಗೆಯೇ ಮಕ್ಕಳೊಂದಿಗೆ ಮಕ್ಕಳಾಗಿ ಆಟವಾಡುತ್ತಾ ದಿಕ್ಕುಗಳನ್ನು ಪರಿಚಯಿಸದರಂತೆ. ಹೀಗೆಯೇ ಅವರ ಪಾಠ ಮಾತ್ರವಾಗಿರಲಿಲ್ಲ. ಆಟವಾಡುತ್ತಲೇ ಪಾಠ ಮಾಡುತ್ತಿದ್ದರಂತೆ. ಇದನ್ನು ಕಂಡ ನನ್ನಪ್ಪ ಸಿದ್ದಪ್ಪ ಮಾಸ್ತರ್ ಖುಷಿಯಿಂದ ಅದಕ್ಕಾಗಿಯೇ ನಿಮಗೇ ಒಂದನೆಯ ವರ್ಗದ ಜವಾಬ್ದಾರಿ ವಹಿರುವುದು ಎಂದು ಆ ಪುಂಡಲೀಕಪ್ಪ ಮಾಸ್ತರ್ ರರನ್ನು ಹತ್ತಿರ ಕರೆದು ಹೇಳಿದರಂತೆ. ಆವಾಗಿನಿಂದ ಆ ಪುಂಡಲೀಕಪ್ಪ ಮಾಸ್ತರ್ ಒಂದನೆಯ ತರಗತಿ ಬಿಟ್ಟು ಯಾವ ತರಗತಿಯನ್ನೂ ತೆಗೆದುಕೊಳ್ಳಲಿಲ್ಲವಂತೆ. ಕೊನೆಗೂ ಅವರು ನಿವೃತ್ತಿ ಆಗುವ ವರೆಗೂ ಒಂದನೆಯ ತರಗತಿಯಲ್ಲೇ ತಮ್ಮ ಪಾಠ ಮುಂದುವರೆಸಿದ್ದರಂತೆ.

ಹೀಗೆಯೇ ನನ್ನಪ್ಪ ಸಿದ್ದಪ್ಪ ಮಾಸ್ತರ್ ಹೆಡ್ ಮಾಸ್ತರಗಿರಿ ನಡೆದಿತ್ತಂತೆ. ಇದೂ ಇರಲಿ. ( ಮತ್ತೊಮ್ಮೆ ನಾನು ಕಾದಂಬರಿ ಬರೆಬೇಕು ಎಂದು ಹೇಳಿದ್ದೆನಲ್ಲಾ ಆಗ ಈ ಎಲ್ಲಾ ಶಿಕ್ಷಕರ ವಿಷಯಗಳನ್ನೂ ಮತ್ತು ಅಸಂಖ್ಯಾತ ವಿಷಯಗಳನ್ನು ಅಲ್ಲದೇ ಸಾಕಷ್ಟು ಪಾತ್ರಗಳ ಮತ್ತು ವಸ್ತುಗಳ ಬಗೆಗೆ ಹೇಳುತ್ತೇನೆ. ಮುಖ್ಯವಾಗಿ ಇಲ್ಲಿ ಗಡ್ಡದ ಗೌಡರು ಅಂದರೆ ತಿರುಕನಗೌಡರು, ಮುಪ್ಪನಗೌಡರು, ಪಕ್ಕೀರಣ್ಣ ಕಾಕಾ, ಮೊದಲೇ ಹೇಳಿದ್ದೇನಲ್ಲಾ ಸಿದ್ದಲಿಂಗಯ್ಯ ಮಾಸ್ತರ್, ಮಹಾಕೂಟಯ್ಯ ಹಿರೇಮಠ, ಎಮ್.ಆರ್.ಪಾಟೀಲ, ಬೈಲಪ್ಪನವರ ಮಾಸ್ತರ್, ಅಷ್ಟೇ ಅಲ್ಲ ಚಿಕೇರೂರ ಶಂಕ್ರಣ್ಣ, ಮತ್ತು ಅವಳ ಮಹಾತಾಯಿ ಗಟ್ಟಿಗಿತ್ತಿ ಹಾಲಮ್ಮ, ಚಿಕ್ಕೇರೂರ ಶಿವಯೋಗಿ ಅಣ್ಣ. ಹೀಗೆಯೇ ಹತ್ತಾರು ಪಾತ್ರಗಳನ್ನು ತೆಗೆದುಕೊಳ್ಳುತ್ತೇನೆ. ಒಬ್ಬೊಬ್ಬರದು ಒಂದು ಅಧ್ಯಾಯವಾಗುತ್ತದೆ. ) ಮತ್ತೂ ನನ್ನಪ್ಪ ಸಿದ್ದಪ್ಪ ಮಾಸ್ತರನ ಹೆಡ್ ಮಾಸ್ತರಗಿರಿಯು ಸಾಗಿತ್ತು. ಹೀಗೆಯೇ ನನ್ನಪ್ಪ ಸಿದ್ದಪ್ಪ ಮಾಸ್ತರ್ ಶಾಲೆಯನ್ನು ‘ಮಾದರಿ’ ಶಾಲೆಯಾಗಿಸಿದ್ದರಂತೆ. ಆ ಶಾಲೆಯು ಬರೀ ಹೇಳಿಕೊಳ್ಳಲು ಮಾತ್ರ ಶಾಲೆಯಾಗಿರಲಿ. ಅದು ಮೊದಲೇ ಹೇಳಿದಂತೆ ‘ನಂದನವನ’ದ ಶಾಲೆಯಾಗಿತ್ತು.

ಶಾಲೆಯಲ್ಲಿ ಬರೀ ಮಕ್ಕಳಿಗೆ ಪಾಠ ಕಲಿಸುವ ಕೆಲಸವಷ್ಟೇ ಆಗುತ್ತಿರಲಿಲ್ಲ. ಚಿಕ್ಕ ಪುಟ್ಟ ಮಕ್ಕಳು ಮುಂದೆ ‘ಆದರ್ಶ ಮಾನವ’ರಾಗುವ ಜೀವನದ ಪಾಠವನ್ನೂ ಹೇಳಿಕೊಡುತ್ತಿದ್ದರಂತೆ ನನ್ನಪ್ಪ ಸಿದ್ದಪ್ಪ ಮಾಸ್ತರ್. ಆ ಕಬ್ಬೂರು ಶಾಲೆಯಲ್ಲಿ ಚಿಕ್ಕೊಂದು ತೋಟವನ್ನು ಮಾಡಿದ್ದರಂತೆ ನನ್ನಪ್ಪ. ಶಾಲೆಯ ಪಾಠದ ಜೊತೆಗೆ ನಮ್ಮ ಪರಿಸರದ ಸಂಗತಿಗಳನ್ನೂ ಕಲಿಸುತ್ತಿದ್ದರಂತೆ ನನ್ನಪ್ಪ ಸಿದ್ದಪ್ಪ ಮಾಸ್ತರ್. ಶಾಲೆಯಲ್ಲಿ ಆಟ, ಊಟ, ಪಾಠದ ಜೊತೆಗೆ ಶಾಲೆಯನ್ನು ಒಂದು ಸುಂದರ ಹೂದೋಟವನ್ನು ನಿರ್ಮಿಸಿದ್ದರಂತೆ ನನ್ನಪ್ಪ ಸಿದ್ದಪ್ಪ ಮಾಸ್ತರ್. ಶಾಲೆಯ ಅಂಗಳದ ತುಂಬೆಲ್ಲಾ ಗಿಡ, ಮರ, ಅನೇಕ ಬಗೆಯ ಸಸ್ಯಗಳನ್ನೂ ಬೆಳೆಸಿದ್ದರಂತೆ. ಅವುಗಳಲ್ಲಿ ಮುಂದೆ ಕೆಲವಾರು ಗಿಡ ಮತ್ತು ಮರಗಳು ಬೆಳೆಯುದ್ದಿವಂತೆ. ಅವು ಮುಂದೆ ಬಂದ ಶಿಷ್ಯರ ಪಾಲಿಗೆ ಮತ್ತು ಶಾಲೆಯ ಪಾಲಿಗೆ ಬಹುದೊಡ್ಡ ಉತ್ಪನ್ನ ತಂದವಂತೆ. ಇದಿಷ್ಟೇ ಸಾಕು ಶಾಲೆಯ ಬಗೆಗಿನ ಮಾಹಿತಿ. ನಾನು ಮುಂದೆ ಆ ನನ್ನ ಕಾದಂಬರಿಯಲ್ಲಿ ಎಲ್ಲವನ್ನೂ ಹೇಳಿಕೊಳ್ಳುತ್ತೇನೆ.

ಅಲ್ಲದೇ ಇಂತಿಷ್ಟು ಚಿಕ್ಕದಾದ ಪರಿಚಯ ಈಗಷ್ಟೇ ಆ ಶಾಲೆಯ ಮತ್ತು ಶಾಲಾ ಶಿಕ್ಷಕರ ವೃತ್ತಿಯ ಬಗೆಗೆ ಸಾಕು ಅನಿಸುತ್ತಿದೆ ನನಗೆ.

ಮುಂದೆ ನಾನು ಹೇಳಿಕೊಳ್ಳಬೇಕಾದ ಸಾಕಷ್ಟು ಮಾಹಿತಿಗಳಿವೆ.

ನನ್ನಪ್ಪ ಸಿದ್ದಪ್ಪ ಮಾಸ್ತರ್ ಚಿಕ್ಕವನಿರುವಾಗ ಅದೆಂತೆದೋ ರೋಗಕ್ಕೆ ತುತ್ತಾದನಂತೆ. ಅದು ಅಂದರೆ ಎಲ್ಲೂ ಗುಣಪಡಿಸದ ರೋಗ ಬಂದಿತ್ತಂತೆ. ಮೈಯೆಲ್ಲಾ ಹಸಿರು ಗಟ್ಟಿತಂತೆ. ಎಲ್ಲಾ ರೀತಿಯ ಎಲ್ಲಾ ಬಗೆಯಲ್ಲಿ ಚಿಕಿತ್ಸೆ ಕೊಡಿಸಿದರೂ, ಆ ರೋಗ ಗುಣವಾಗಲಿಲ್ಲಿವಂತೆ. ಆಗ ನನ್ನಪ್ಪನ ಸಿದ್ದಪ್ಪನ ಅಪ್ಪ ಮಲ್ಲಪ್ಪನಿಗೆ ಅದ಼ೇಗೋ ಒಂದು ಮಾಹಿತಿ ಸಿಕ್ಕಿತಂತೆ. ಈ ರೋಗ ಗುಣವಾಗಬೇಕೆಂದರೆ ನೀನು ಲಗುಬಗೆಯಿಂದ ಗದಗ ತಾಲ್ಲೂಕಿನ ನೀಲಗುಂದಕ್ಕೆ ಹೋಗು. ಮೊದಲು ನೀಲಗುಂದಕ್ಕೆ ಹೋಗಿ, ಅಲಿಯ ಒಬ್ಬ ಹೀಗೆಯೇ ಮುಲ್ಕಿ ಮಾಸ್ತರ್ ಆಗಿರುವ ಮ.ನ.ನದಾಫರನ್ನು ಭೇಟಿಮಾಡಿ ಖಾಯಿಲೆಯ ಬಗೆಗೆ ಹೇಳು ಅಂದರಂತೆ ಮ.ನ.ನದಾಫರನ್ನು ಬಲ್ಲವರು. ಆ ಮ.ನ.ನದಾಫರು ಬರೀ ಮುಲ್ಕಿ ಮಾಸ್ತರ್ ಆಗಿರಲಿಲ್ಲವಂತೆ. ಅವರು ಆರ್ಯುವೇದದ ಔಷಧ ಕೊಡುವ ವೈದ್ಯಕೀಯ ಪಾಂಡಿತ್ಯ ಮತ್ತು ದೈವಿಗುಣವನ್ನೂ ಹೊಂದಿದ್ದರಂತೆ.

ಆ ಕಾಲದಲ್ಲಿ ನನ್ನ ಅಜ್ಜ ಮಲ್ಲಪ್ಪನು ನನ್ನಪ್ಪ ಸಿದ್ದಪ್ಪನನ್ನು ಕರೆದುಕೊಂಡು ಗದಗ ತಾಲ್ಲೂಕಿನ ನೀಲಗುಂದಕ್ಕೆ ಹೋದರಂತೆ. ಆಗ ಆ ಮುಲ್ಕಿ ಮಾಸ್ತರ್ ಆಗಿದ್ದ ಮತ್ತು ಆಯುರ್ವೇದ ಔಷಧ ಮಹಾವಿದ್ಯಾಲಯವಾಗಿದ್ದ ಆ ಮ.ನ.ನದಾಫ ಮಾಸ್ತರ್, ಆಯಿತು ಬಿಡಿರಿ, ಇದೆಂತ ಗುಣವಾಗದ ರೋಗವೆಂದು. ಆದರೆ ಒಂದು ತಿಂಗಳು ಕಾಲ ಅಲ್ಲೇ ನೀಲಗುಂದದಲ್ಲಿ ಇರಬೇಕು. ನಾನು ಹೇಳಿದಂತೆ ಪತ್ತೆ ಮಾಡಬೇಕು ಅಷ್ಟೇ. ಇದನ್ನು ನಾನು ಗುಣಪಡಿಸುತ್ತೇನೆ ಅಂದರಂತೆ ಮ.ನ.ನದಾಫ ಮಾಸ್ತರ್.

ಮ.ನ.ನಧಾಫ ಮಾಸ್ತರ್ ಮರುದಿನದಿಂದಲೇ ನನ್ನಪ್ಪ ಸಿದ್ದಪ್ಪ ಮಾಸ್ತರ್ ಗೆ ಚಿಕಿತ್ಸೆ ಶುರು ಮಾಡಿದರಂತೆ. ನೀಲಗುಂದ ಪಕ್ಕದಲ್ಲಿರುವ ಕಪ್ಪತ್ ಗುಡ್ಡದಿಂದ ಅದೆಂತದೋ ಗಿಡಮೂಲಿಕೆ ತರಸಿ ಚಿಕಿತ್ಸೆ ಶುರು ಮಾಡಿದರಂತೆ. ಆಯಿತು ಒಂದು ತಿಂಗಳೂ ವರೆಗೂ ಚಿಕಿತ್ಸೆ ಮಾಡಿದರಂತೆ. ಆವಾಗ ಅಲ್ಲಿಯೇ ಉಳಿದಿದ್ದ ನನ್ನ ಅವ್ವ ಮತ್ತು ಅಪ್ಪನ ಊಟೋಪಚಾರಕ್ಕೆ ನೀಲಗುಂದದ ಮಠದಲ್ಲಿ ಗುರುತುಮಾಡಿದ್ದರಂತೆ ದೈವಿಸಂಬೂತ ಮ.ನ.ನದಾಫ ಮಾಸ್ತರ್ ಮತ್ತು ವೈದ್ಯರು.

ನನ್ನ ಅವ್ವ ನಾಗವ್ವ ಬೇರೇ ಯಾರೂ ಆಗಿರಲಿಲ್ಲ. ನನ್ನಪ್ಪನ ಮನೆಯಲ್ಲಿ ಬೆಳೆದ ನನ್ನಪ್ಪನ ಸಹೋದರ ಮಾವನ ಮಗಳಾಗಿದ್ದಳು. ಅವಳು ಇನ್ನೂ ಕೂಸಿರುವಾಗಲೇ ನನ್ನ ತಾಯಿಯ ತಾಯಿ ತೀರಿದಳಂತೆ. ಹಾಗಾಗಿ ಇನ್ನೂ ಕೂಸಿರುವಾಗಲೇ ಬಂದ ನನ್ನ ತಾಯಿ ನಾಗವ್ವನನ್ನು, ನನ್ನ ಅಜ್ಜಿ ಗಂಗವ್ವ ಸಾಕಿದಳಂತೆ.ಮುಂದೆ ನನ್ನ ತಾಯಿ ನಾಗವ್ವ ನನ್ನಪ್ಪನನ್ನು ವರೆಸಿದಳಂತೆ. ಆ ಕಥೆ ಕೂಡ ಒಂದು ರೋಚಕ ವಿಷಯ. ಅದನ್ನು ಮುಂದೆ ಹೇಳಿಕೊಳ್ಳುತ್ತೇನೆ. ಹಾಗಾಗಿ ಅವಳೇ ನನ್ನಪ್ಪನ ಆರೈಕೆಗೆ ನಿಂತಿದ್ದಳು.

ಆ ಒಂದು ತಿಂಗಳಲ್ಲೇ ನನ್ನಪ್ಪ ಸಿದ್ದಪ್ಪ ಹುಷಾರಾದರಂತೆ. ಹಸಿರುಗಟ್ಟಿದ್ದ ಮೈಯಿಯು ಅತಾಸ್ಥಿತಿಗೆ ಬಂದಿತಂತೆ. ಆ ನೀಲಗುಂದ ಆಯುರ್ವೇದ ವೈದ್ಯಕೀಯ ದೈವಿಸಂಬೂತ ಮ.ನ.ನದಾಫ ಮಾಸ್ತರ್ ಪವಾಡದಂತೆ ನನ್ನಪ್ಪನನ್ನು ಗುಣಪಡಿಸಿದರಂತೆ.

ನನ್ನಪ್ಪ ಸಿದ್ದಪ್ಪ ಸಣ್ಣವನು ಇರುವಾಗ ನನ್ನಪ್ಪ ಸಿದ್ದಪ್ಪನನ್ನು ಗುಣ ಪಡಿಸಿದ ಆ ಮ.ನ.ನಾದಾಫ ಮಾಸ್ತರ್ ರರನ್ನು ತೀರಾ ಹಚ್ಚಿಕೊಂಡಿದ್ದರಂತೆ. ಅವರನ್ನು ಅಪ್ಪನೆಂದೇ ಕರೆಯುತ್ತಿದ್ದನಂತೆ. ನನ್ನಪ್ಪನಿಗೆ ಹಡೆದ ತಂದೆ ಮತ್ತು ತಾಯಿ ಒಬ್ಬರಾದರೇ, ಸಾಕಿ, ಸಲುವಿ, ಲಾಲನೆ ಪಾಲನೆ ಮಾಡಿದ, ಪೋಸಿಸಿ ಬೆಳೆಸಿದ, ಮತ್ತೂ ನನ್ನಪ್ಪನ ನಿಜವಾದ ತಂದೆ ಮತ್ತು ತಾಯಿ ಮ.ನ.ನದಾಫ ಮಾಸ್ತರ ಮತ್ತು ಲಾಡಮ್ಮ, ದಾವಲಮ್ಮ ಆಗಿದ್ದರಂತೆ. ಹಾಗಾಗಿ ನನ್ನಪ್ಪ ಸಣ್ಣವನು ಇರುವಾಗ ಅವನ ವಾಸ್ತವವಾಗಿ ಇದ್ದ ತಂದೆ ಮತ್ತು ತಾಯಿಯಾದ ದೊಡ್ಡ ಮಲ್ಲಪ್ಪ ಮತ್ತು ಗಂಗವ್ವರು ಇರಲಿ ಬಿಡು, ಅವನು ಅಂದರೆ ನನ್ನಪ್ಪ ಸಿದ್ದಪ್ಪನನ್ನು ಆ ನೀಲಗುಂದದ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದಂತೆ ಇದ್ದ ಆ ಮ.ನ.ನಾದಾಫ ಮಾಸ್ತರ ಬಳಿಯೇ ಇರಲು ಬಿಟ್ಟರಂತೆ.

ಅಂದಿನಿಂದ ನನ್ನಪ್ಪನಿಗೆ ಮ.ನ.ನದಾಫ ಮಾಸ್ತರ ಮನೆಯೇ ಮಂತ್ರಾಲಯವಾಯಿತಂತೆ. ಆವಾಗಿನಿಂದ ನನ್ನಪ್ಪ ಸಿದ್ದಪ್ಪ ಮ.ನ.ನದಾಫ ಮಾಸ್ತರ ಬಳಿಯೇ ಬೆಳೆದರಂತೆ. ಆವಾಗಿನಿಂದ ನನ್ನಪ್ಪನಿಗೆ ನನ್ನ ಅಜ್ಜ, ( ಈಗ ಅನ್ನುತ್ತೇನೆ ನನ್ನ ಅಜ್ಜನ ) ನಿಜವಾದ ಮಕ್ಕಳೆಲ್ಲರೂ ನನ್ನಪ್ಪನಿಗೆ ಅಣ್ಣ ಎಂದು ಕರೆಯಲು ಶುರುಮಾಡಿದರಂತೆ. ನನ್ನ ಕಾಕಾ ಅಂದರೆ ನನ್ನಜ್ಜನ ಮಕ್ಕಳೆಲ್ಲಾ ಮಾಸ್ತರಗಿರಿ ಮಾಡುತ್ತಿದ್ದಾರೆ ಈಗಲೂ. ಅದರಲ್ಲಿ ನನ್ನಪ್ಪನ ಹಿರಿಯ ತಮ್ಮ ಹಜೆರೇಸಾಬ್ ನನ್ನು ಬಿಟ್ಟು. ಆ ಹಜರೇಸಾಬ್ ಕಾಕಾ ಆಜನ್ಮ ಬ್ತಹ್ಮಚಾರಿ. ಮದುವೆಯಾಗಿಲ್ಲ. ಶುದ್ಧ ದೇವರ ದಾಸನಂತೆ ಬದುಕುತ್ತಿದ್ದಾನೆ. ಹಾಗೂ ಬಾಪು ಕಾಕಾ ಮಾತ್ರ ಹೊಲದ ಕಮತದಲ್ಲಿ ( ಕೃಷಿ ) ಇದ್ದಾನೆ. ಇನ್ನುಳಿದ ಎಲ್ಲರೂ ಮಾಸ್ತರಗಿರಿ ಮಾಡುತ್ತಿದ್ದಾರೆ.

ಇವರಲ್ಲಿ ಸ್ವಾಮಿ ಕಾಕಾನಿಗೆ ಮಾತ್ರ, ಅವನ ಮಾಸ್ತರ ಗಿರಿಯ ಜೊತೆಯಲ್ಲಿಯೇ ನನ್ನಜ್ಜನಂತೇ ಆಯುರ್ವೇದ ಪಾಂಡಿತ್ಯ ಒಲಿದಿದ್ದು. ಈ ಸ್ವಾಮಿ ಕಾಕಾ ಮಾಸ್ತರಗಿರಿಯ ಜೊತೆಗೆ ಆಯುರ್ವೇದ ಔಷಧ ಕೊಡುತ್ತಾನೆ. ಒಂದಿನಿತೂ ಚಿಕ್ಕಾಸನ್ನು ಯಾರಿಂದಲೂ ಪಡೆಯದೇ ಆಯುರ್ವೇದ ಔಷಧ ಕೊಡುತ್ತಾನೆ ಸ್ವಾಮಿ ಕಾಕಾ. ಅದು ನನ್ನಜ್ಜ ಮ.ನ.ನದಾಫ ಮಾಸ್ತರಿಂದ ಕಲೆತ ಪಾಠ. ನನ್ನಜ್ಜ ಮ.ನ.ನದಾಫ ಮಾಸ್ತರ ಮನಸ್ಸು ಮಾಡಿದ್ದರೆ ಆಯುರ್ವೇದ ಚಿಕಿತ್ಸೆಯಲ್ಲಿ ಹಣ ಪಡೆದಿದ್ದರೇ ಅವರು ಒಂದು ಬಂಗಾರದ ಮನೆಯನ್ನು ಕಟ್ಟಿಸುತ್ತಿದ್ದರಂತೆ, ಹಾಗಂತ ನನ್ನಪ್ಪ ಸಿದ್ದಪ್ಪ ಮಾಸ್ತರ ಹೇಳುದ ಮಾತಿದು. ಇದೂ ಇರಲಿ. ವಿಷಯಕ್ಕೆ ಬರುತ್ತೇನೆ .

ನನ್ನಜ್ಜನ ಮನೆಯೆಂದರೆ ಅದು ಬರೀ ಮನೆಯಾಗಿರಲಿಲ್ಲವಂತೆ. ದಿನಾಲೂ ಅಸಂಖ್ಯಾತ ರೋಗಿಗಳನ್ನು ಗುಣಪಡಿಸುವ ಸಂಜೀವಿನಿಯ ಮನೆಯಾಗಿತಂತೆ. ಅದು ನನ್ನಪ್ಪ ಸಿದ್ದಪ್ಪ ಮಾಸ್ತರ ನನಗೆ ಹೇಳಿದ ಮಾತಿದು.

ಹೀಗೆಯೇ ನನ್ನಜ್ಜ ಅಂದರೆ ಮ.ನ.ನದಾಫ ಮಾಸ್ತರ ಎಲ್ಲಿಯೇ ಹೊಗಲಿ, ಅಲ್ಲಿಗೆ ನನ್ನಪ್ಪ ಹಾಜರಾಗುತ್ತಿದ್ದನಂತೆ. ಈಗಿನಂತೆ ಆಗ ಬಸ್ ಇರಲಿಲ್ಲವಂತೆ. ಎತ್ತಿನಗಾಡಿ ಅಥವಾ ಜಟಕಾಬಂಡಿಗಳೇ ಗತಿಯಾಗಿದ್ದವಂತೆ. ಹಾಗೆಯೇ ನನ್ನಜ್ಜ ಮ.ನ.ನಾದಾಫ ಮಾಸ್ತರ ಎಲ್ಲಿಗೇ ಹೋಗಲು ತಯ್ಯಾರುಗುತ್ತಿದ್ದಂತೆ ನನ್ನಪ್ಪ ಸಿದ್ದಪ್ಪ ಆಗಲೇ ತಯ್ಯಾರಾಗಿ ಮ.ನ.ನದಾಫ ಮಾಸ್ತರ ಮುಂಚೆ ಹೋಗಿ ಅವರು ಅಂದರೆ ಮ.ನ.ನದಾಫ ಮಾಸ್ತರಗಿಂತ ಮುಂಚೆ ಹೋಗಿ ಟಕ್ಕಂತೆ ಆ ಎತ್ತಿನಗಾಡಿ ಅಥವಾ ಜಟಕಾಬಂಡಿಯಲ್ಲಿ ಹೋಗಿ ಕುಳಿತು ಬಿಡುತ್ತಿದ್ದರಂತೆ. ಆಗ ನನ್ನಜ್ಜ ಹೋಗಲಿ ಅವನೂ ಬರಲಿಬಿಡು ಎಂದು ಸುಮ್ಮನೇ ಆಗುತ್ತಿದ್ದರಂತೆ. ಹೀಗೆಯೇ ಸಾಗಿತ್ತು ನನ್ನಪ್ಪನ ಆವಾಗಿನ ಬಾಲ್ಯ.

ಮುಂದೆ ನನ್ನಪ್ಪನೂ ಮಾಸ್ತರ ಅದರಂತೆ. ಅವರ ಮಾಸ್ತರಗಿರಿಯ ಬಗೆಗೆ ಮೊದಲೇ ಹೇಳಿದ್ದೇನೆ.
ನಾನು ಹುಟ್ಟುದ ವರ್ಷವೇ ನನ್ನಪ್ಪ ಸಿದ್ದಪ್ಪನ ಮಾಸ್ತರಗಿರಿಗೆ ಪಿಂಚಣಿ ಆಯಿತಂತೆ. ಹೀಗೆಯೇ ಕಾಲ ಕಳೆಯಿತು. ಮುಂದೆ ನನ್ನಪ್ಪ ಸಿದ್ದಪ್ಪ ಮಾಸ್ತರ ತೀರಿದರು..!

ಸದ್ಯಕ್ಕೆ ಇಷ್ಟು ಸಾಕು. ಉಳಿದ ಪಾತ್ರಗಳು ಮತ್ತು ಅನೇಕಾನೇಕ ಘಟನೆಗಳು, ವಾಸ್ತವವಾಗಿ ಎಲ್ಲವನ್ನೂ ಹೇಳುತ್ತೇನೆ ಮುಂದೆ ಬರಲಿರುವ ನನ್ನ ಕಾದಂಬರಿಯಲ್ಲಿ..!

# ಕೆ.ಶಿವು.ಲಕ್ಕಣ್ಣವರ

emedialine

Recent Posts

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

18 seconds ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

8 mins ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

2 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

2 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

2 hours ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

2 hours ago