ಬಿಸಿ ಬಿಸಿ ಸುದ್ದಿ

ವಚನಕಾರರು ಕಾವ್ಯಕ್ಕೆ ದೀಕ್ಷೆ ಕೊಟ್ಟರೆ, ದಾಸರು ಸಂಗೀತದ ಲಯ ಕೊಟ್ಟರು: ಡಾ. ನಾಗರಾಳ

ಕಲಬುರಗಿ: ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನ ಸಹಯೋಗದಲ್ಲಿ  ಕನ್ನಡ ಭಾಷೆಯ ಮೇಲೆ ಅನ್ಯ ಭಾಷೆಗಳ ಪ್ರಭಾವ ಎಂಬ ವಿಷಯ ಕುರಿತು ಬುಧವಾರ ಮದರ್ ತೆರೆಸಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಕಾರ್ಯಾಗಾರದ ನಂತರ ಜರುಗಿದ ಕವಿ ಸಮಯ ಕಾರ್ಯಕ್ರಮದಲ್ಲಿ ಡಾ. ಎಸ್.ಪಿ. ಸುಳ್ಳದ, ಡಾ. ಸೂರ್ಯಕಾಂತ ಪಾಟೀಲ, ಡಾ. ನಾಗಪ್ಪ ಗೋಗಿ, ಫರವೀನ ಸುಲ್ತಾನ, ಡಾ. ರಾಜಶೇಖರ ಮಾಂಗ್, ಡಾ. ಕೆ. ಗಿರಿಮಲ್ಲ, ಅನಸೂಯಾ ನಾಗನಳ್ಳಿ, ಡಾ. ಎಸ್.ಎ. ವಡ್ಡನಕೇರಿ ಇತರರು ತಮ್ಮ ಕವನ ವಾಚಿಸಿದರು.

ವಿಷಯ ಮಂಡಿಸಿದ ನಿವೃತ್ತ ಪ್ರಾಚಾರ್ಯ ಡಾ. ಶ್ರೀಶೈಲ ನಾಗರಾಳ ಮಾತನಾಡಿ, ಕಾವ್ಯ ತಂತ್ರಕ್ಕೊಳಪಡಿಸುವ ಮಂತ್ರ. ಅನುಭವ, ಮಾತು, ಭಾವನೆಗಳಿಗೆ ಸಂಸ್ಕಾರ ಕೊಟ್ಟರೆ ಕವಿತೆಯಾಗಬಲ್ಲದು.  ಮಾತಿಗೆ ಕಾವ್ಯದ ಸ್ಪರ್ಶ ಕೊಟ್ಟರೆ ಮನ ಮುದಗೊಳ್ಳಬಲ್ಲದು ಎಂದು ಹೇಳಿದರು.

ವಚನಕಾರರು ಮಾತಿಗೆ ಕಾವ್ಯ ದೀಕ್ಷೆ ಕೊಟ್ಟರು. ದಾಸರು ಮಾತಿಗೆ ಸಂಗೀತದ ಲಯ ಕೊಟ್ಟರು. ಪದಗಳ ಜೋಡಣೆಯೊಂದೇ ಕಾವ್ಯವಲ್ಲ. ಕಾವ್ಯಕ್ಕೆ ಕವಿ ನಿರ್ಮಾಪಕರಾದರೆ, ಸಹೃದಯರು ಕಾವ್ಯಕ್ಕೆ ಪೋಷಕರು. ಕಾವ್ಯ ನಿಲ್ಲುವುದು ಜನ ಒಪ್ಪಿಕೊಂಡಾಗ ಮಾತ್ರ. ಕಾವ್ಯಕ್ಕೆ ಭಾವ ಪ್ರಾಣವಾದರೆ, ರೂಪಕಗಳು ಅದರ ಶರೀರ. ಭಾವ ತೀವ್ರತೆಯ ಹವ್ಯಾಸಕ್ಕೆ ಬಿದ್ದು ಇಂದು ಕಾವ್ಯ ಬರೆಯುತ್ತಿದ್ದೇವೆ.‌ ಕಾವ್ಯ ದೇವರನ್ನಾಗಿ ಮಾಡದೆ ಮನುಷ್ಯರನ್ನಾಗಿ ಮಾಡಬೇಕು ಎಂದು ಅವರು ತಿಳಿಸಿದರು. ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ ಅಧ್ಯಕ್ಷತೆ ವಹಿಸಿ ಮಾತನಾಡಿದರು.

emedialine

Recent Posts

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

2 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

2 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

4 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

4 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

4 hours ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

4 hours ago