ಬಿಸಿ ಬಿಸಿ ಸುದ್ದಿ

ಕಾನೂನಿನ ಅರಿವಿಲ್ಲದೆ ಹೋದರೆ ಸಂಕಷ್ಟಗಳು ತಪ್ಪಿದ್ದಲ್ಲ: ರೆಡ್ಡಿ

ಆಳಂದ: ಗ್ರಾಮೀಣ ಭಾಗದ ಜನ ಸಾಮಾನ್ಯರಲ್ಲಿ ಕಾನೂನಿ ಅರಿವು ಇಲ್ಲದೆ ವಿನಹ ಕಾರಣ ಸಂಕಷ್ಟಗಳನ್ನು ಎದುರಿಸುತ್ತಾರೆ. ಆದರೆ ಪ್ರತಿಯೊಂದು ವ್ಯವಹಾರ ಮತ್ತು ಆಸ್ತಿ ಹಂಚಿಕ ಕಾನೂನು ಚೌಕಟ್ಟಿನಲ್ಲಿ ನಡೆದರೆ ಯಾವುದೇ ಸಮಸ್ಯೆಗಳ ಬಾರದು ಎಂದು ನ್ಯಾಯವಾದಿ ಸಂಘದ ತಾಲೂಕು ಅಧ್ಯಕ್ಷ ನಾಗೇಶ ಎಸ್. ರೆಡ್ಡಿ ಅವರು ಹೇಳಿದರು.

ತಾಲೂಕಿನ ಕಿಣ್ಣಿಸುಲ್ತಾನ ಗ್ರಾಮದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ನ್ಯಾಯವಾದಿಗಳ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡ ಭಾರತ ಅಮೃತ ಮಹೋತ್ಸವ ಹಾಗೂ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ೨೫ನೇ ವರ್ಷಾಚರಣೆ ಸಂಭ್ರಮದ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪ್ರಜಾಪ್ರಭುತ್ವ ದೇಶ ಭಾರತದಲ್ಲಿ ಪ್ರತಿಯೊಬ್ಬರಿಗೆ ಒಂದೇ ಕಾನೂನು ಒಂದೇ ನ್ಯಾಯವಿದೆ. ನಮ್ಮ ಕಾನೂನಿನ ಮುಂದೆ ಯಾರು ದೊಡ್ಡವರು, ಸಣ್ಣವರಿಲ್ಲ ಎಲ್ಲರು ಸಮಾನರೆ ಆಗಿದ್ದು, ಆದರೆ ತಪ್ಪು ತಿಳಿವಳಿಕೆಯಿಂದ ಕಾನೂನಿ ಅರಿವಿಲ್ಲದೆ ಸಾಕಷ್ಟು ತೊಂದರೆ ಅನುಭವಿಸುತ್ತಿರುವುದ ಸಮಾಜದಲ್ಲಿ ಸಾಕಷ್ಟು ಉದಾಹರಣೆಗಳು ಎದುರುಗಿವೆ. ಬಡವರಿಗೆ, ಶೋಷಿತರ ಮಹಿಳೆಯರಿಗಾಗಿ ನ್ಯಾಯ ಒದಗಿಸಲು ಇಂದು ಕಾನೂನು ಸೇವಾ ಪ್ರಾಧಿಕಾರ ಮನೆಬಾಗಿಲಿಗೆ ಬರುತ್ತಿದೆ. ಇದರ ಲಾಭವನ್ನು ಪಡೆಯಲು ಜನರು ಮುಂದಾಗಬೇಕು ಎಂದು ಹೇಳಿದರು.

ಕಾರ್ಯಕ್ರಮವನ್ನು ಹಿರಿಯ ಶ್ರೇಣಿಯ ನ್ಯಾಯಾಧೀಶ ಎಸ್.ಸಿ. ನಾಡಗೌಡ ಅವರು ಉದ್ಘಾಟಿಸಿ ಮಾತನಾಡಿ, ಯಾರು ಕೂಡ ಸಾಮಾಜಿಕ ನ್ಯಾಯದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಕಾನೂನು ಅರಿವು ಮೂಡಿಸಲು ಸೇವಾ ಪ್ರಾಧಿಕಾರವು ನಿರಂತರವಾಗಿ ಜಾಗೃತಿ ಮೂಡಿಸುತ್ತಿದೆ. ಇದಕ್ಕಾಗಿ ಕೋರ್ಟ್‌ನಲ್ಲಿ ಉಚಿತ ಕಾನೂನು ಸೇವಾ ಕೇಂದ್ರವಿದೆ. ಹಕ್ಕು ಕರ್ತವ್ಯ ವಾಹನ ಕಾಯ್ದೆ ಕುರಿತು ತಿಳಿವಳಿಕೆ ನೀಡಿದರು.

ಪ್ರಧಾನ ಕಿರಿಯ ಶ್ರೇಣಿ ನ್ಯಾಯಾಧೀಶ ಚಂದ್ರಕಾಂತ, ಸರ್ಕಾರಿ ವಕೀಲ ಜ್ಯೋತಿ ಬಂಡಿ ಮತ್ತು ಸುಭಾಶ್ರೀ ಬಡಿಗೇರ ಮಾತನಾಡಿದರು.
ಗ್ರಾಪಂ ಅಧ್ಯಕ್ಷೆ ನಾಗಮ್ಮ ನಾಗಣ್ಣ ಮೂಲಗೆ ಅಧ್ಯಕ್ಷತೆ ವಹಿಸಿದ್ದರು. ಸದಸ್ಯ ಶಾಂತಪ್ಪ ಶಹಾಪೂರೆ, ತಾಪಂ ಮಾಜಿ ಸದಸ್ಯ ಸಿದ್ಧರಾಮ ವಾಘ್ಮೀರೆ, ಮುಖಂಡ ಸುಭಾಷ ಚವ್ಹಾಣ, ರಾಜು ಪಾಟೀಲ, ಶಿವಾನಂದ ಪಾಟೀಲ, ಬಸವಂತರಾವ್ ಧೂಳೆ, ಮಲ್ಲಪ್ಪ ಕೋರೆ, ಶಿವಾನಂದ ಹತ್ತೆ, ಬಸವರಾಜ ಮೂಲಗೆ, ಶಾಂತಪ್ಪ ಬಾವಿ, ಸಿದ್ಧರಾಮ ಶಹಾಪೂರೆ, ಮಹಾದೇವ ಹೌಶಟ್ಟೆ, ಸೂರ್ಯಕಾಂತ ಪಾಟೀಲ ಮತ್ತಿತರು ಪಾಲ್ಗೊಂಡಿದ್ದರು.

ಆಸ್ತಿ ನೋಂದಣಿ, ಪಹಣಿ ಪತ್ರಿಕೆ ಕುರಿತು ಎಂ.ವಿ. ಏಕಬೋಟೆ, ಕೆ.ಯು ಇನಾಮದಾರ ಉಪನ್ಯಾಸ ನೀಡಿದರು. ನ್ಯಾಯವಾದಿ ಸಂಘದ ಕಾರ್ಯದರ್ಶಿ ಕಮಲ ರಾಠೋಡ, ನ್ಯಾಯವಾದಿ ಬಿ.ಎ. ದೇಶಪಾಂಡೆ, ಎ.ಸಿ.ತೋಳೆ, ಬಿ.ವೈ. ಶಿರೋಳೆ, ದೇವಾನಂದ ಹೋದಲೂರಕರ್, ಎಸ್.ಡಿ.ಬೋಸಗೆ, ಯು.ಕೆ. ಇನಾಮದಾg ಆಅಗಮಿಸಿದ್ದರು. ಶಿವಶಂಕರ ಮುನೋಳಿ ನಿರೂಪಿಸಿದರು. ದೀಪಾರಾಣಿ ಕುಲಕರ್ಣಿ ವಂದಿಸಿದರು.

emedialine

Recent Posts

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

8 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

8 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

10 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

10 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

10 hours ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

10 hours ago