ಆಳಂದ: ಗ್ರಾಮೀಣ ಭಾಗದ ಜನ ಸಾಮಾನ್ಯರಲ್ಲಿ ಕಾನೂನಿ ಅರಿವು ಇಲ್ಲದೆ ವಿನಹ ಕಾರಣ ಸಂಕಷ್ಟಗಳನ್ನು ಎದುರಿಸುತ್ತಾರೆ. ಆದರೆ ಪ್ರತಿಯೊಂದು ವ್ಯವಹಾರ ಮತ್ತು ಆಸ್ತಿ ಹಂಚಿಕ ಕಾನೂನು ಚೌಕಟ್ಟಿನಲ್ಲಿ ನಡೆದರೆ ಯಾವುದೇ ಸಮಸ್ಯೆಗಳ ಬಾರದು ಎಂದು ನ್ಯಾಯವಾದಿ ಸಂಘದ ತಾಲೂಕು ಅಧ್ಯಕ್ಷ ನಾಗೇಶ ಎಸ್. ರೆಡ್ಡಿ ಅವರು ಹೇಳಿದರು.
ತಾಲೂಕಿನ ಕಿಣ್ಣಿಸುಲ್ತಾನ ಗ್ರಾಮದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ನ್ಯಾಯವಾದಿಗಳ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡ ಭಾರತ ಅಮೃತ ಮಹೋತ್ಸವ ಹಾಗೂ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ೨೫ನೇ ವರ್ಷಾಚರಣೆ ಸಂಭ್ರಮದ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪ್ರಜಾಪ್ರಭುತ್ವ ದೇಶ ಭಾರತದಲ್ಲಿ ಪ್ರತಿಯೊಬ್ಬರಿಗೆ ಒಂದೇ ಕಾನೂನು ಒಂದೇ ನ್ಯಾಯವಿದೆ. ನಮ್ಮ ಕಾನೂನಿನ ಮುಂದೆ ಯಾರು ದೊಡ್ಡವರು, ಸಣ್ಣವರಿಲ್ಲ ಎಲ್ಲರು ಸಮಾನರೆ ಆಗಿದ್ದು, ಆದರೆ ತಪ್ಪು ತಿಳಿವಳಿಕೆಯಿಂದ ಕಾನೂನಿ ಅರಿವಿಲ್ಲದೆ ಸಾಕಷ್ಟು ತೊಂದರೆ ಅನುಭವಿಸುತ್ತಿರುವುದ ಸಮಾಜದಲ್ಲಿ ಸಾಕಷ್ಟು ಉದಾಹರಣೆಗಳು ಎದುರುಗಿವೆ. ಬಡವರಿಗೆ, ಶೋಷಿತರ ಮಹಿಳೆಯರಿಗಾಗಿ ನ್ಯಾಯ ಒದಗಿಸಲು ಇಂದು ಕಾನೂನು ಸೇವಾ ಪ್ರಾಧಿಕಾರ ಮನೆಬಾಗಿಲಿಗೆ ಬರುತ್ತಿದೆ. ಇದರ ಲಾಭವನ್ನು ಪಡೆಯಲು ಜನರು ಮುಂದಾಗಬೇಕು ಎಂದು ಹೇಳಿದರು.
ಕಾರ್ಯಕ್ರಮವನ್ನು ಹಿರಿಯ ಶ್ರೇಣಿಯ ನ್ಯಾಯಾಧೀಶ ಎಸ್.ಸಿ. ನಾಡಗೌಡ ಅವರು ಉದ್ಘಾಟಿಸಿ ಮಾತನಾಡಿ, ಯಾರು ಕೂಡ ಸಾಮಾಜಿಕ ನ್ಯಾಯದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಕಾನೂನು ಅರಿವು ಮೂಡಿಸಲು ಸೇವಾ ಪ್ರಾಧಿಕಾರವು ನಿರಂತರವಾಗಿ ಜಾಗೃತಿ ಮೂಡಿಸುತ್ತಿದೆ. ಇದಕ್ಕಾಗಿ ಕೋರ್ಟ್‌ನಲ್ಲಿ ಉಚಿತ ಕಾನೂನು ಸೇವಾ ಕೇಂದ್ರವಿದೆ. ಹಕ್ಕು ಕರ್ತವ್ಯ ವಾಹನ ಕಾಯ್ದೆ ಕುರಿತು ತಿಳಿವಳಿಕೆ ನೀಡಿದರು.
ಪ್ರಧಾನ ಕಿರಿಯ ಶ್ರೇಣಿ ನ್ಯಾಯಾಧೀಶ ಚಂದ್ರಕಾಂತ, ಸರ್ಕಾರಿ ವಕೀಲ ಜ್ಯೋತಿ ಬಂಡಿ ಮತ್ತು ಸುಭಾಶ್ರೀ ಬಡಿಗೇರ ಮಾತನಾಡಿದರು.
ಗ್ರಾಪಂ ಅಧ್ಯಕ್ಷೆ ನಾಗಮ್ಮ ನಾಗಣ್ಣ ಮೂಲಗೆ ಅಧ್ಯಕ್ಷತೆ ವಹಿಸಿದ್ದರು. ಸದಸ್ಯ ಶಾಂತಪ್ಪ ಶಹಾಪೂರೆ, ತಾಪಂ ಮಾಜಿ ಸದಸ್ಯ ಸಿದ್ಧರಾಮ ವಾಘ್ಮೀರೆ, ಮುಖಂಡ ಸುಭಾಷ ಚವ್ಹಾಣ, ರಾಜು ಪಾಟೀಲ, ಶಿವಾನಂದ ಪಾಟೀಲ, ಬಸವಂತರಾವ್ ಧೂಳೆ, ಮಲ್ಲಪ್ಪ ಕೋರೆ, ಶಿವಾನಂದ ಹತ್ತೆ, ಬಸವರಾಜ ಮೂಲಗೆ, ಶಾಂತಪ್ಪ ಬಾವಿ, ಸಿದ್ಧರಾಮ ಶಹಾಪೂರೆ, ಮಹಾದೇವ ಹೌಶಟ್ಟೆ, ಸೂರ್ಯಕಾಂತ ಪಾಟೀಲ ಮತ್ತಿತರು ಪಾಲ್ಗೊಂಡಿದ್ದರು.
ಆಸ್ತಿ ನೋಂದಣಿ, ಪಹಣಿ ಪತ್ರಿಕೆ ಕುರಿತು ಎಂ.ವಿ. ಏಕಬೋಟೆ, ಕೆ.ಯು ಇನಾಮದಾರ ಉಪನ್ಯಾಸ ನೀಡಿದರು. ನ್ಯಾಯವಾದಿ ಸಂಘದ ಕಾರ್ಯದರ್ಶಿ ಕಮಲ ರಾಠೋಡ, ನ್ಯಾಯವಾದಿ ಬಿ.ಎ. ದೇಶಪಾಂಡೆ, ಎ.ಸಿ.ತೋಳೆ, ಬಿ.ವೈ. ಶಿರೋಳೆ, ದೇವಾನಂದ ಹೋದಲೂರಕರ್, ಎಸ್.ಡಿ.ಬೋಸಗೆ, ಯು.ಕೆ. ಇನಾಮದಾg ಆಅಗಮಿಸಿದ್ದರು. ಶಿವಶಂಕರ ಮುನೋಳಿ ನಿರೂಪಿಸಿದರು. ದೀಪಾರಾಣಿ ಕುಲಕರ್ಣಿ ವಂದಿಸಿದರು.