ಬಿಸಿ ಬಿಸಿ ಸುದ್ದಿ

ಶಾಲೆಗಳಲ್ಲಿ ಮಕ್ಕಳ ಕಲರವ-ಹಬ್ಬದ ಸಡಗರ

ವಾಡಿ: ವಿದ್ಯಾದೇಗುಲದ ದ್ವಾರಕ್ಕೆ ತೆಂಗಿನೆಲೆಯ ತೋರಣ. ಪಾಠದ ಕೋಣೆಯ ಬಾಗಿಲಿಗೆ ರಂಗೋಲಿಯ ರಿಂಗಣ. ಆಟದ ಅಂಗಳದಲ್ಲಿ ಮಕ್ಕಳ ಕಲರವ. ತೆರೆದ ಶಾಲೆಗಳಲ್ಲಿ ಹಬ್ಬದ ಸಡಗರ.

ಹೌದು, ಚಿತ್ತಾಪುರ ತಾಲೂಕಿನ ವಾಡಿ ನಗರದ ವಿವಿಧ ಶಾಲೆಗಳಲ್ಲಿ ಸೋಮವಾರ ಅಕ್ಷರಶಃ ಹಬ್ಬದ ಸಡಗರ ಮನೆಮಾಡಿತ್ತು. ಹದಿನೆಂಟು ತಿಂಗಳ ನಂತರ ಬಾಗಿಲು ತೆರೆದ ಪ್ರಾಥಮಿಕ ಶಾಲೆಗಳಲ್ಲಿ ಪುಟಾಣಿ ಮಕ್ಕಳ ಸಂತಸ ಉಕ್ಕಿ ಹರಿದಿತ್ತು. ಶಿಕ್ಷಕರ ಮೊಗದಲ್ಲಿ ಮಂದಹಾಸ ಮೂಡಿದ್ದರೆ, ವಿದ್ಯಾರ್ಥಿಗಳ ಎದೆಯಲ್ಲಿ ಗುರುವಿನ ಗೌರವ ಗರಿಗೆದರಿತ್ತು. ದೀರ್ಘ ಕಾಲದ ನಂತರ ಏರ್ಪಟ್ಟಿದ್ದ ಗುರು-ಶಿಷ್ಯರ ಸಮಾಗಮದ ಸಂದರ್ಭ ಜೇನುಗೂಡಿಗಿಂತಲೂ ಸಿಹಿಯಾಗಿತ್ತು.

ನಗರದ ಸಂತ ಅಂಬ್ರೂಸ್ ಕಾನ್ವೆಂಟ್ ಶಾಲೆಯಲ್ಲಿ ನಡೆದ ಶಾಲಾ ಪ್ರಾರಂಭೋತ್ಸವದ ಸಂಭ್ರಮ ಸ್ವಾತಂತ್ರ್ಯೋತ್ಸವವನ್ನೂ ಮೀರಿಸುವಂತಿತ್ತು. ಬಣ್ಣ ಬಣ್ಣದ ಬಲೂನುಗಳನ್ನು ಹಿಡಿದು ಪ್ರಾಥಮಿಕ ಮಕ್ಕಳನ್ನು ಸ್ವಾಗತಿಸಿದ ಪ್ರೌಢ ವಿದ್ಯಾರ್ಥಿಗಳ ಶಿಸ್ತು ಪೋಷಕರ ಗಮನ ಸೆಳೆಯಿತು.

ಮಕ್ಕಳ ಬರುವಿಕೆಯನ್ನೇ ಕಾಯುತ್ತಿದ್ದ ಸಿಸ್ಟರ್ ಗ್ರೇಸಿ, ಸಿಸ್ಟೆರ್ ತೆಕಲಾ ಮೇರಿ, ಡಾನ್‌ಬಾಸ್ಕೋ ಹಾಗೂ ಶಿಕ್ಷಕಿಯರು, ಗುಲಾಬಿ ಹೂಗಳನ್ನು ಕೈಗಿಟ್ಟು ಮಕ್ಕಳ ಸಂತಸ ಇಮ್ಮಡಿಗೊಳಿಸಿದರು. ಸುರಕ್ಷತೆಗಾಗಿ ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಸಿ ಆರೋಗ್ಯದ ಆತ್ಮವಿಶ್ವಾಸ ಹೆಚ್ಚಿಸಿದರು. ಮಕ್ಕಳು ಸಾಮೂಹಿಕವಾಗಿ ಹೇಳಿದ ರಾಷ್ಟ್ರಗೀತೆ ಮತ್ತು ಪ್ರಾರ್ಥನೆಗಳು ಸ್ಮಶಾನ ಮೌನಕ್ಕೆ ಜಾರಿದ್ದ ಶಾಲೆಯ ಗೋಡೆಗಳಿಗೂ ಜೀವ ತುಂಬಿದವು. ವಿವಿಧ ಗ್ರಾಮಗಳಲ್ಲಿನ ಸರಕಾರಿ ಮತ್ತು ಖಾಸಗಿ ಶಾಲೆಗಳಲ್ಲೂ ಮಕ್ಕಳ ಸ್ವಾಗತಕ್ಕೆ ಗೌರವದ ಮನ್ನಣೆ ದೊರಕಿತು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

8 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

18 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

18 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

18 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago