ಬಿಸಿ ಬಿಸಿ ಸುದ್ದಿ

ಕನ್ನಡ ನಾಡಿನ ಎಲ್ಲರ ತನು ಮನ ಕನ್ನಡವಾಗಲಿ: ಡಿವೈಎಸ್ಪಿ ಡಾ:ದೇವರಾಜ್ ಆಶಯ

ಸುರಪುರ: ತಾಲೂಕು ಆಡಳಿತ,ತಾಲೂಕು ಪಂಚಾಯತ್ ಸುರಪುರ ಹಾಗು ಸಾರ್ವಜನಿಕ ಶಿಕ್ಷಣ ಇಲಾಖೆ ಇವರುಗಳ ಸಹಯೋಗದಲ್ಲಿ ರಾಜ್ಯೋತ್ಸವದ ಅಂಗವಾಗಿ ನಗರದ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ವಿಶೇಷ ಗೀತಗಾಯನ ಕಾರ್ಯಕ್ರಮ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಡಿವೈಎಸ್ಪಿ ಡಾ:ದೇವರಾಜ್ ಬಿ. ಮಾತನಾಡಿ,ಈ ನಾಡಿನ ಹುಟ್ಟಿದ ಎಲ್ಲ ಕನ್ನಡಿಗರು ನಮ್ಮ ಭಾಷೆಯ ಅಭಿಮಾನವನ್ನು ಬೆಳೆಸಿಕೊಳ್ಳಬೇಕು,ಕನ್ನಡದ ಅನ್ನ ತಿನ್ನುತ್ತೇವೆ,ಕನ್ನಡದ ನೀರು ಕುಡಿಯುತ್ತೇವೆ,ಕನ್ನಡದ ಗಾಳಿಯನ್ನು ಸೇವಿಸುತ್ತೇವೆ,ಒಂದು ನಾಡು ಹಾಳು ಮಾಡುವುದೆಂದರೆ ಅದು ಕೇವಲ ಕೋಟೆಗಳನ್ನು ಹಾಳು ಮಾಡುವುದರಿಂದ ನಾಡು ಹಾಳಾಗುವುದಿಲ್ಲ,ಆದರೆ ಅಲ್ಲಿಯ ಭಾಷೆಯಿಂದ ನಾಡು ಮತ್ತು ಸಂಸ್ಕೃತಿ ಹಾಳಾಗಲಿದೆ. ಪ್ರತಿಯೊಬ್ಬರ ತನು ಮನ ಕನ್ನಡವಾಗಬೇಕು.ಕನ್ನಡ ಎಂದರೆ ನಮ್ಮ ತಾಯಿ ಎಂದು ತಿಳಿದುಕೊಳ್ಳಬೇಕು.ಆದ್ದರಿಂದ ಎಲ್ಲರು ಸದಾಕಾಲ ಕನ್ನಡದಲ್ಲಿಯೇ ಮಾತನಾಡುವಂತೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿದ್ದ ಶಿಕ್ಷಕ ನಿಂಗಣ್ಣ ಗೋನಾಲ ಮಾತನಾಡಿ,ಕನ್ನಡ ಭಾಷೆಗೆ ತನ್ನದೆ ಆದ ವಿಶೇಷವಾದ ಗೌರವ ಸ್ಥಾನಮಾನವಿದೆ.ಸುಮಾರು ೩ ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆ ಇಂದು ಗ್ರಾಮೀಣ ಭಾಗದಲ್ಲಿ ಉಳಿದಿದ್ದು ಪಟ್ಟಣಗಳಲ್ಲಿ ಅಪಾಯಕ್ಕೆ ಸಿಲುಕಿದೆ,ಅದನ್ನು ಉಳಿಸಿ ಬೆಳೆಸುವ ಕಾರ್ಯ ಎಲ್ಲರಿಂದ ಆಗಬೇಕು.೨೦೦೯ ರಲ್ಲಿ ಕನ್ನಡಕ್ಕೆ ಶಾಸ್ತ್ರಿಯ ಸ್ಥಾನಮಾನ ಲಭಿಸಿದೆ.ಅಂತಹ ಕನ್ನಡ ಭಾಷೆ ನಮ್ಮದೆಂಬ ಅಭಿಮಾನ ಎಲ್ಲರಲ್ಲಿ ಸದಕಾಲ ಬೆಳಗಲಿ ಎಂದು ಆಶಯ ವ್ಯಕ್ತಪಡಿಸಿದರು.

ಆಕಾಶವಾಣಿ ಕಲಾವಿದ ಗಾಯಕ ಬಸವರಾಜ ಬಂಟನೂರ ಅವರ ತಂಡದಿಂದ ಮೊದಲಿಗೆ ನಾಡಗೀತೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಕುವೆಂಪು ಅವರ ಬಾರಿಸು ಕನ್ನಡ ಡಿಂಡಿಮವ,ಕೆ.ಎಸ್.ನಿಸಾರಅಹ್ಮದ್ ಅವರ ನಿತ್ಯೋತ್ಸವ ಹಾಗು ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಮತ್ತು ಸುರಪುರದ ಕವಿ ಎ.ಕೃಷ್ಣ ಸುರಪುರ ಅವರ ಕನ್ನಡವೆ ಜೀವನದ ಉಸಿರಾಗಲಿ ಎಂಬ ಹಾಡು ಎಲ್ಲರ ಗಮನಸೆಳೆಯಿತು.ನಂತರ ಶಾಲಾ ಮಕ್ಕಳಿಂದ ಗೀತಗಾಯನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು,ವೇದಿಕೆ ಮೇಲಿದ್ದ ತಾಲೂಕು ಪಂಚಾಯತಿ ಇಒ ಅಂಬ್ರೇಶ ಮೂಡಲದಿನ್ನಿ ಕನ್ನಡಭಿಮಾನದ ಕುರಿತು ಪ್ರಮಾಣ ವಚನ ಬೊಧೀಸಿದರು.ನಗರಸಭೆ ವ್ಯವಸ್ಥಾಪಕ ಯಲ್ಲಪ್ಪ ನಾಯಕ,ಅರಣ್ಯ ಇಲಾಖೆ ಅಧಿಕಾರಿ ಮೌಲಾಲಿಸಾಬ್ ವೇದಿಕೆ ಮೇಲಿದ್ದರು.ಮುಖಂಡರಾದ ವಿರುಪಾಕ್ಷಿಗೌಡ ಕೋನಾಳ,ಕರವೇ ತಾಲೂಕು ಅಧ್ಯಕ್ಷ ವೆಂಕಟೇಶ ನಾಯಕ ಬೈರಿಮಡ್ಡಿ,ಜಯಕರ್ನಾಟಕ ತಾಲೂಕು ಅಧ್ಯಕ್ಷ ರವಿ ನಾಯಕ ಬೈರಿಮಡ್ಡಿ,ಯಲ್ಲಪ್ಪ ಕಲ್ಲೋಡಿ ಸೇರಿದಂತೆ ವಿವಿಧ ಶಾಲೆಗಳ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಗು ಸಾರ್ವಜನಿಕರು ಭಾಗವಹಿಸಿದ್ದರು.ಶಿಕ್ಷಕ ಹಣಮಂತ್ರಾಯ ಪೂಜಾರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

emedialine

Recent Posts

ಕಲಬುರಗಿ: ಬಿಜೆಪಿ ಹಿರಿಯ ಮುಖಂಡ ಧರ್ಮಣ್ಣ ದೊಡ್ಡಮನಿ ನಿಧನ

ಕಲಬುರಗಿ: ಬಿಜೆಪಿ ಹಿರಿಯ ಮುಖಂಡ ಧರ್ಮಣ್ಣ ಇಂದು ಬೆಳಗ್ಗೆ ವಾಕಿಂಗ್ ಹೋದಾಗ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಲಬುರಗಿ ನಗರದ ಜೇವರ್ಗಿ…

50 mins ago

ಜೇವರ್ಗಿ: ಲಂಚಾಪಡೆಯುತ್ತಿದ್ದಾಗ ಮಹಿಳಾ ಸಿಬ್ಬಂದಿ ಲೋಕಾಯುಕ್ತರ ಬಲೆಗೆ

ಕಲಬುರಗಿ: ನೀರಿನ ಕನೆಕ್ಷನಗಾಗಿ ಹತ್ತು ಸಾವಿರ ಲಂಚಾಪಡೆಯುತ್ತಿದ್ದಾಗ ಜೇವರ್ಗಿ ಪುರಸಭೆಯ ಮಹಿಳಾ ಸಿಬ್ಬಂದಿ ಲಣೊಕಾಯುಕ್ತರ ಬಲೆಗೆ ಬಿದ್ದ ಘಟನೆ ಬುಧವಾರ…

13 hours ago

371 ಜೆ ಅಡಿ ಉದ್ಯೋಗ ನೇಮಕಾತಿ ಸಂಬಂಧದ ಗೊಂದಲ ನಿವಾರಿಸಿ ಮಾರ್ಗಸೂಚಿ ಸಿದ್ಧಪಡಿಸಲು ಸಚಿವರ ಸೂಚನೆ

ಬೆಂಗಳೂರು: ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 371 ಜೆ ಅಡಿ ಉದ್ಯೋಗ ನೇಮಕಾತಿ ಹಾಗೂ ಬಡ್ತಿ ಸಂಬಂಧದಲ್ಲಿ ಆಗಿರುವ ಗೊಂದಲಗಳನ್ನು ನಿವಾರಿಸಿ…

14 hours ago

ಶ್ಯಾಮರಾವ ನಾಟಿಕಾರಗೆ ಅಧ್ಯಕ್ಷರನ್ನಾಗಿ ನೇಮಕಕ್ಕೆ ಡಾ. ಮಲ್ಲಿಕಾರ್ಜುನ ಖರ್ಗೆಗೆ ಮನವಿ

ಕಲಬುರಗಿ: ಆದಿಜಾಂಬವ ಸರ್ಕಾರಿ ಅರೆ ಸರ್ಕಾರಿ ನೌಕರರ ಪತ್ತಿನ ಸಹಕಾರ ಸಂಘದ ನಿಯೋಗ ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷರಾದ ಡಾ.ಮಲ್ಲಿಕಾರ್ಜುನ ಖರ್ಗೆ…

15 hours ago

ಚಿರಂಜೀವಿ ವೆಂಕಯ್ಯ ಕುಶಾಲ್ ಗುತ್ತೇದಾರ್ ಗೆ ಸನ್ಮಾನ

ಕಲಬುರಗಿ: ಮಾಜಿ ಸಚಿವರಾದ ಮಾಲಿಕೆಯ್ಯಾ ಗುತ್ತೇದಾರ್ ಅವರ ಅಪ್ಪಟ ಅಭಿಮಾನಿ ಹಾಗೂ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ…

15 hours ago

ಮಹಿಳಾ ಘಟಕದ ನೂತನ ಪದಾಧಿಕಾರಿಗಳ ನೇಮಕ

ಕಲಬುರಗಿ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷರಾದ ಪ್ರಶಾಂತ್ ಗೌಡ ಮಾಲಿಪಾಟೀಲ್ ಅವರ ನೇತೃತ್ವದಲ್ಲಿ ಜಿಲ್ಲಾ…

16 hours ago