• ಡಾ. ಶಿವರಂಜನ್ ಸತ್ಯಂಪೇಟೆ, ಕಲಬುರಗಿ

ಇಂದು ಅಕ್ಟೋಬರ್ 29 (ಶುಕ್ರವಾರ) ಮಧ್ಯಾಹ್ನ ಸುಮಾರು 12.30 ಗಂಟೆಯಾಗಿರಬಹುದು. ನಮ್ಮ ನೆರೆಮನೆಯ ಸಹೋದರಿಯೊಬ್ಬರು ನನ್ನ ಹೆಂಡತಿಗೆ ಫೋನ್ ಮಾಡಿ ಪುನೀತ್ ರಾಜಕುಮಾರ್ ಗೆ ಹಾರ್ಟ್ ಅಟ್ಯಾಕ್ ಅಂತೆ ಟಿವಿಯಲ್ಲಿ ಬರುತ್ತಿದೆ ನೋಡಿ ಎಂದು ಹೇಳಿದರು.

ಟಿವಿ ಆನ್ ಮಾಡಿದ್ದೇ ತಡ ಪುನೀತ್ ಆರೋಗ್ಯ ಸ್ಥಿತಿ ಗಂಭೀರ-ಚಿಂತಾಜನಕ ಎಂಬಿತ್ಯಾದಿಯಾಗಿ ಹೇಳುತ್ತಿದ್ದರು. ನನ್ನನ್ನು ಸೇರಿದಂತೆ ಮಡಿದಿ ಮಕ್ಕಳಿಗೆಲ್ಲ ಏಕದಂ ಶಾಕ್ ಆದಂತಾಯಿತು. ಸಿಎಂ ಬಸವರಾಜ ಬೊಮ್ಮಾಯಿ, ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ಚಿತ್ರರಂಗದ ಗಣ್ಯಾತಿಗಣ್ಯರು ಬೆಂಗಳೂರಿನ ವಿಕ್ರಮ ಆಸ್ಪತ್ರೆಗೆ ಬಂದು ಹೋಗುವುದನ್ನು ನೋಡಿದಾಗ ನನಗಂತೂ ಅವರು ತೀರಿಕೊಂಡಿದ್ದಾರೆ ಎಂಬುದು ಖಾತ್ರಿಯಾಯಿತು.

ಕೆಲಸದ ನಿಮಿತ್ತ ಹೊರಗಡೆ ಹೋಗುವುದರಿಂದ ನಮ್ಮ ಮನೆಯವರಿಗೆ ಅವರು ಖಂಡಿತ ತೀರಿಕೊಂಡಿದ್ದಾರೆ. ಆದರೆ ಅದಿನ್ನೂ ಡಿಕ್ಲೇರ್ ಮಾಡುತ್ತಿಲ್ಲ ಎಂದು ಹೇಳಿ ಬೈಕ್ ಹತ್ತಿದೆ. ನವಕರ್ನಾಟಕ ಪ್ರಕಾಶನದ ಪುಸ್ತಕ ಮಳಿಗೆಯಲ್ಲಿ ಕುಳಿತು ಟಿವಿ ನೋಡುತ್ತಿದ್ದೆ. ಮಧ್ಯಾಹ್ನ ಸರಿಯಾಗಿ ಎರಡುವರೆ ಗಂಟೆಯಾಗಿತ್ತು. ಟಿವಿಯಲ್ಲಿ ಪುನೀತ್ ಸಾವಿನ ಸುದ್ದಿಯನ್ನು ಡಿಕ್ಲೇರ್ ಮಾಡುತ್ತಿದ್ದಂತೆಯೇ ನನ್ನ ಕಿರಿಯ ಮಗ ಪ್ರಣವ ನನಗೆ ವಿಡಿಯೋ ಕಾಲ್ ಮಾಡಿ, “ಪಪ್ಪಾ ಪುನೀತ್ ರಾಜಕುಮಾರ ಸತ್ತಿರುವುದಕ್ಕೆ ಪ್ರಮಥ ಅಣ್ಣ ಅಳುತ್ತಿದ್ದಾನೆ” ಎಂದು ಹೇಳಿದ.

ಫೋನ್‌ ನಲ್ಲಿಯೇ ಅವನಿಗೆ ಸಮಾಧಾನಪಡಿಸಲು ಯತ್ನಿಸಿದರೂ ಅವನು ಮಾತೇ ಆಡಲಿಲ್ಲ. ಬದಲಿಗೆ ಮುಖ ಮುಚ್ವಿಕೊಂಡು ದುಃಖಿಸುತ್ತಿದ್ದ. ತಕ್ಷಣವೇ ಮನೆಗೆ ಹೋಗಿ ಅವನನ್ನು ಸಮಾಧಾನಪಡಿಸಿದೆ. ಚಿಕ್ಕವನಿದ್ದಾಗಿನಿಂದ ಪುನೀತ್ ರಾಜಕುಮಾರ್ ನ ಅಪ್ಪಟ ಅಭಿಮಾನಿಯಾಗಿದ್ದ ಅವನು, ಪುನೀತ್ ರಾಜಕುಮಾರ ಟಿವಿ, ಸಿನಿಮಾ ಹಾಗೂ ಕಾರ್ಯಕ್ರಮಗಳಲ್ಲಿ ಕಾಣಿಸಿ ಕೊಂಡರೆ ಸಾಕು ಅವರನ್ನೇ ತದೇಕಚಿತ್ತದಿಂದ ನೋಡುತ್ತಿದ್ದ ಮಾತ್ರವಲ್ಲ ಅವರಂತೆ ಅನುಕರಣೆ ಮಾಡುತ್ತಿದ್ದ. ತೀರಾ ಇತ್ತೀಚೆಗೆ ತೆರೆ ಕಂಡಿದ್ದ ಪುನೀತ್ ರಾಜಕುಮಾರ ಅವರ ನಟ ಸಾರ್ವಭೌಮ ಹಾಗೂ ಯುವ ರತ್ನ ಸಿನೆಮಾಗಳನ್ನು ಅವನ ಒತ್ತಾಯಕ್ಕೆ ಮಣಿದು ಕೊರೊನಾ ಕಾಲಘಟ್ಟದಲ್ಲೂ ಥೇಟರ್ ಗೆ ಹೋಗಿ ಮನೆ ಮಂದಿಯೆಲ್ಲಾ ಸಿನಿಮಾ ನೋಡಿ ಬಂದಿದ್ದೇವು.

ಪುನೀತ್ ರಾಜಕುಮಾರ ಅವರು ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಕಲಬುರಗಿಗೆ ಆಗಮಿಸಿದ ವೇಳೆ ನನ್ನ ಮಗ ಪ್ರಮಥ ‘ಪಪ್ಪಾ ನಾವೂ ಪುನೀತ್ ರಾಜ್‍ಕುಮಾರ್ ಅವರನ್ನು ನೋಡಿ ಭೇಟಿಯಾಗಿ ಬರೋಣವೇ?’ ಎಂದು ಕೇಳಿದ್ದ. ಈಗ ಬೇಡ ಮುಂದೊಂದು ದಿನ ನೀನೂ ಅವರಂತೆ ದೊಡ್ಡ ಸಾಧನೆ ಮಾಡು. ಆಗ ನಾನೇ ಬೆಂಗಳೂರಿನ ಸದಾಶಿವ ನಗರದ ಅವರ ಮನೆಗೆ ನಿನ್ನನ್ನು ಕರೆದೊಯ್ಯುವೆ ಎಂದು ಹೇಳಿದ್ದೆ. ಆದರೆ ಈಗ ಅವರೆಲ್ಲಿ?

ಈ ಹಿಂದೆ ನಮ್ಮ ಮನೆಯಲ್ಲಿ ನಮ್ಮ ಚಿಕ್ಕಪ್ಪಂದಿರಾದ ವಿಶ್ವಾರಾಧ್ಯ, ಬಸವರಾಜ ಹಾಗೂ ಅಣ್ಣ ವಿಶ್ವಾರಾಧ್ಯ ಅವರು ಕೂಡ ಅನಂತನಾಗ್ ಹಾಗೂ ಶಂಕರನಾಗ್ ಅವರ ಅಭಿಮಾನಿಯಾಗಿದ್ದರು. ಅಂತೆಯೇ ಅವರಂತೆ ಅವರುಗಳು ಹಿಪ್ಪಿ ಕಟ್ , ನೆಹರೂ ಶರ್ಟ್, ಆಫ್ ಶರ್ಟ್, ದಾಡಿ ಕೂಡ ಬಿಟ್ಟಿದ್ದರು. ನಾನು ಕೂಡ ಮೊದ ಮೊದಲು ಹಿಪ್ಪಿ ಕಟ್ ಹಾಗೂ ದಾಡಿ ಬಿಟ್ಟಿದ್ದೆ. ಆನಂತರ ವಿಷ್ಣುವರ್ಧನ್ ಅವರ ಅಭಿಮಾನಿಯಾದೆ ಆ ಮಾತು ಬೇರೆ!

ಅದು ೮೦ರ ದಶಕದಲ್ಲಿ ನಡೆದ ಗೋಕಾಕ್ ಚಳವಳಿಯ ಸಂದರ್ಭ. ವರನಟ ಡಾ. ರಾಜಕುಮಾರ ಮತ್ತು ಅವರ ಇಡೀ ಕುಟುಂಬ ಯಾದಗಿರಿ ಜಿಲ್ಲೆಯ ಶಹಾಪುರಕ್ಕೆ ಆಗಮಿಸಿತ್ತು.‌ ಡಾ. ಪಾಟೀಲ ಪುಟ್ಟಪ್ಪನವರಿಂದಾಗಿ ಅಪ್ಪನೇ ಆಗ ಕಾರ್ಯಕ್ರಮದ ಆಯೋಜಕರಲ್ಲೊಬ್ಬರಾಗಿದ್ದರು. ಹೀಗಾಗಿ ಕಾರ್ಯಕ್ರಮ ನಡೆಯುವ ಸ್ಥಳದ ಹಿಂಬದಿಯ ಮುನ್ಸಿಪಲ್ ಕಚೇರಿ ಬಳಿ ಕಾರಿನಿಂದ ಇಳಿದು ನಿಂತಿದ್ದ ಪಾರ್ವತಮ್ಮ ರಾಜಕುಮಾರ, ಶಿವರಾಜಕುಮಾರ, ರಾಘವೇಂದ್ರ ರಾಜಕುಮಾರ ಹಾಗೂ ಪುನೀತ್ ರಾಜಕುಮಾರ ಅವರನ್ನು ಬಹಳ ಹತ್ತಿರದಿಂದಲೇ ನೋಡಿದ್ದೆ.

ನಟನಾ ಕೌಶಲದ ಜೊತೆ ಸರಳ, ವಿನೀತಭಾವದಿಂದಾಗಿ ಕನ್ನಡಿಗರ ಮನೆ ಮಗನಂತಿದ್ದ ಪುನೀತ್ ಸಾವಿನ ಸುದ್ದಿ ಕೇಳಿ ಇವೆಲ್ಲ ನೆನಪಾದವು ಅಷ್ಟೇ! ನನ್ನ ಮಗನ ಕನಸು ನನಸು ಮಾಡದೆ ಬಾರದ ಲೋಕಕ್ಕೆ ತೆರಳಿದ ಪುನೀತ್ ರಾಜಕುಮಾರ ನಿಧನ ನಿಜಕ್ಕೂ ತುಂಬಿ ಬಾರದ ನಷ್ಟವೇ ಸೈ!

emedialine

Recent Posts

ಎಲೇಕ್ಷನ್’ನಲ್ಲಿ ಗಿಮಿಕ್ ಮಾಡಿ ಮತಪಡೆದುಕೊಳ್ಳುವುದು ಮಾತ್ರ ಗೊತ್ತು; ಮಣಿಕಂಠ

ಎಂ.ಡಿ ಮಶಾಖ ಚಿತ್ತಾಪುರ ಚಿತ್ತಾಪುರ; ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಎಲೇಕ್ಷನ್ ಬಂದಾಗ ಗಿಮಿಕ್ ಮಾಡಿ ಮತ ಪಡೆದುಕೊಳ್ಳುವುದು ಮಾತ್ರ…

2 mins ago

ಶ್ರೀಮತಿ ವಿ. ಜಿ  ಕಾಲೇಜಿನ ವಿದ್ಯಾರ್ಥಿನಿಯರಿಂದ ದಾಂಡಿಯಾ ನೃತ್ಯ

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಪೂರ್ವ ಮಹಿಳಾ ಮಹಾವಿದ್ಯಾಲಯ ಕಲಬುರಗಿಯಲ್ಲಿ ಪ್ರತಿ ವರ್ಷದಂತೆ…

4 hours ago

ತೂಕದಲ್ಲಿ ಆಗುವ ವ್ಯತ್ಯಾಸ ಸರಿಪಡಿಸಿ: ಪ್ರತಿ ಟನ್ ಕಬ್ಬಿಗೆ 3500 ಬೆಲೆ ನಿಗದಿ ಪಡಿಸಿ

ಅಫಜಲಪುರ: 2024-25ನೇ ಸಾಲಿನಲ್ಲಿ ಅಫಜಲಪುರ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕನಿಷ್ಠ 3500 ರೂ.ಬೆಲೆ ನಿಗದಿ ಪಡಿಸಿ ಘೋಷಣೆ ಮಾಡಬೇಕು,ಅಲ್ಲದೇ…

9 hours ago

ಕಲಬುರಗಿ: ಯತಿ ನರಸಿಂಹಾನಂದ್ ಬಂಧನಕ್ಕೆ ಆಗ್ರಹಿಸಿ ದಿಢೀರ್ ಪ್ರತಿಭಟನೆ

ಕಲಬುರಗಿ: ಕಾರ್ಯಕ್ರಮ ಒಂದರಲ್ಲಿ ಪ್ರವಾದಿ ಮುಹಮ್ಮದ್ (ಸ.ಅ) ಅವರ ವಿರುದ್ಧ ಅಕ್ರಮಣಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿರುವ ಗಾಜಿಯಾಬಾದ್‌ನ ದಾಸ್ನಾ…

20 hours ago

ದುಶ್ಚಟ ಮುಕ್ತ ಸಮಾಜ ನಿರ್ಮಾಣ ಹಕ್ಕೊತ್ತಾಯ ಪತ್ರ ಜಿಲ್ಲಾಧಿಕಾರಿಗಳಿಗೆ ಮಂಡನೆ

ಕಲಬುರಗಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಮತ್ತು ಜಿಲ್ಲಾ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸಮಿತಿಯಿಂದ…

21 hours ago

ನೀರಿನ ಬಿಲ್ ಬಡ್ಡಿ ಮನ್ನಾ ಮಾಡಲು ಡಾ.ರಶೀದ್ ಜಿಲ್ಲಾಧಿಕಾರಿಗಳಿಗೆ ಮನವಿ

ಶಹಾಬಾದ: ನಗರಸಭೆ ವ್ಯಾಪ್ತಿಯ ಸಾರ್ವಜನಿಕರ ಕುಡಿಯುವ ನೀರಿನ ಬಿಲ್ ಬಡ್ಡಿ ಮನ್ನಾ ಮಾಡಿ ಅಸಲು ಮಾತ್ರ ಪಾವತಿಸಲು ಅನುಕೂಲ ಮಾಡಿಕೊಡಬೇಕೆಂದು…

22 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420