ಆಳಂದ: ಸ್ಥಳೀಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಚಲುವರಾಜ ಅವರು ಶುಕ್ರವಾರ ಹಠಾತ್ ಭೇಟಿ ನೀಡಿದ ಮರುದಿನ ಶನಿವಾರವೂ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಸುಧಾರಣೆ ಆಗದೆ ಇರುವುದು ವಿಪರ್ಯಾಸವಾಗಿ ಕಂಡಿದೆ.
ಮೇಲಾಧಿಕಾರಿಗಳ ಬರುವ ಭಯ ಅಥವಾ ಇಲ್ಲಿನ ಜನ ಪ್ರತಿಧಿನಿಗಳು, ಸಾರ್ವಜನಿಕರ ಹೀಗೆ ಯಾರೊಬ್ಬರ ಭಯವಿಲ್ಲದೆ, ಆಸ್ಪತ್ರೆಯಲ್ಲಿ ಬೇಕಾಬಿಟ್ಟಿ ವ್ಯವಸ್ಥೆಗೆ ರೋಗಿಗಳ ಆಕ್ರೋಶಕ್ಕೆ ವ್ಯಕ್ತಪಡಿಸಿದ್ದಾರೆ.
ನಿನ್ನೆಯಷ್ಟೇ ಜಿಲ್ಲಾ ಆರೋಗ್ಯಾಧಿಕಾರಿಗಳು ಭೇಟಿ ನೀಡಿ ಹೋದ ಮೇಲಾದರೂ ಮರುದಿನ ಪರಿಸ್ಥಿತಿ ಸುಧಾರಿಸಿಕೊಳ್ಳುವ ಬದಲು ಮುಖ್ಯ ಆಡಳಿತಾಧಿಕಾರಿಗಳು ಒಳಗೊಂಡು ಎಲ್ಲ ವೈದ್ಯರು ಹಾಗೂ ಕೆಲವು ಸಿಬ್ಬಂದಿಗಳು ಎರಡು ಗಂಟೆ ವಿಳಂಬವಾಗಿ ಹಾಜರಾಗಿರುವ ಪರಿಸ್ಥಿತಿ ಇಲಾಖೆಯ ಆಡಳಿತವನ್ನೇ ನಾಚಿಸುವಂತೆ ಮಾಡಿದೆ.
ಸುರ್ಜಿತ ಕಟ್ಟಡ ಹಾಗೂ ಲಕ್ಷಾಂತರ ರೂಪಾಯಿ ತಿಂಗಳಿಗೆ ಸಿಬ್ಬಂದಿಗಳ ವೇತನ ಪಾವತಿಯಾದ ಮೇಲೂ ರೋಗಿಗಳಿಗೆ ಸಕಾಲಕ್ಕೆ ಸ್ಪಂದನೆ ಆಗದೆ ಹೋದರೆ ತಪ್ಪಿತಸ್ಥೆ ಮೇಲೆ ಯಾರು ಕ್ರಮ ಕೈಗೊಳ್ಳಬೇಕು ಎಂಬ ಯಕ್ಷ ಪ್ರಶ್ನೆ ಕಾಡತೊಡಗಿದೆ. ರೋಗಿಗಳಿಗೆ ಒಂದೊಂದು ಕ್ಷಣವೂ ಮಹತ್ವದಾಗಿದ್ದರೆ ಆಳಂದ ಸಾರ್ವಜನಿಕ ಆಸ್ಪತ್ರೆಯ ವೈದ್ಯ ಸಿಬ್ಬಂದಿಗಳಿಗೆ ಅದರ ಪರಿವೇ ಇಲ್ಲವೇನು ಎನ್ನುವಂತಾ ಪರಿಸ್ಥಿತಿ ಸಾರ್ವಜನಿಕ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ.
ಆಸ್ಪತ್ರೆಗೆ ಬರುವ ಹೊರ ರೋಗಿಗಳ ತಪಾಸಣೆ ಮತ್ತು ಚಿಕಿತ್ಸೆಗೆ ಬೆಳಗಿನ ೯:೦೦ ಗಂಟೆಗೆ ಎಂದು ಸಮಯದ ಪರಿಮಿತಿಯನ್ನು ಆಸ್ಪತ್ರೆಯ ಕಟ್ಟಡಕ್ಕೆ ಬರೆಯಲಾಗಿದೆ. ಆದರೆ ಬೆಳಗಿನ ೧೧:೧೫ ಗಂಟೆಯಾದರು ಸಂಬಂಧಿತ ಬಹುತೇಕ ವೈದ್ಯರು ಮತ್ತು ಸಿಬ್ಬಂದಿಗಳು ಸಮಯದ ಪರಿವೇ ಇಲ್ಲಂತೆ ನಡೆದುಕೊಳ್ಳುತ್ತಿರುವುದರಿಂದ ಆಸ್ಪತ್ರೆಗೆ ಬರುವ ರೋಗಿಗಳು ಗಂಟೆ, ಗಂಟಲೆ ವೈದ್ಯರಿಗಾಗಿ ಕಾಯ್ದು ಸುಸ್ತಾಗಿ ಹೋಗಿದ್ದಾರೆ. ಮೇಲಾಗಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ದೊರೆಯದೆ ಪಟ್ಟಣದಲ್ಲಿನ ಖಾಸಗಿ ಆಸ್ಪತ್ರೆಗಳಲ್ಲಿನ ರೋಗಿಗಳ ಜಂಗುಳಿಯೇ ಸಾಕ್ಷಿಕರೀಸುತ್ತಿದೆ.
ಹೊರ ರೋಗಿಗಳ ತಪಾಸಣೆ ಒಪಿಡಿ ಶನಿವಾರ ೧೧:೧೫ಕ್ಕೆ ಆರಂಭಸಿದ್ದು ಎರಡು ಗಂಟೆ ವಿಳಂಬವಾಗಿದ್ದು, ಹಾಗೂ ಇದೇ ಹೊತ್ತಿನಲ್ಲಿ ಆಸ್ಪತ್ರೆಗೆ ಒಬ್ಬರ ನಂತರ ಮತ್ತೊಬ್ಬರು ವೈದ್ಯರು ರೋಗಿಗಳ ತಪಾಸಣೆ ಕೋಣೆಗೆ ಬಂದರಾದರು, ರೋಗಿಗಳಿಗೆ ಸೂಕ್ತ ತಪಾಸಣೆ ಕೈಗೊಳ್ಳದೆ ಬಾಯಿ ಮಾತಿನಲ್ಲೇ ಕೇಳಿ ಔಷಧಿ ಮಾತ್ರ ಬರೆದುಕೊಟ್ಟು ಕಳುಹಿಸಿದ್ದರಾದರು ಯಾರೊಬ್ಬರ ರೋಗಿಗಳಿಗೆ ಪ್ರತ್ಯೇಕವಾಗಿ ಸಂದರ್ಶಿಸಿ ತಪಸಣೆ ಮತ್ತು ಚಿಕಿತ್ಸೆ ಕೈಗೊಳ್ಳುವುದಿಲ್ಲ ಎನ್ನಲಾಗಿದೆ.
ಹೋರ ರೋಗಿಳ ತಪಾಸಣೆಗೆ ಬೆಳಗಿನ ೯:೦೦ಗಂಟೆಯಿಂದ ೧:೦೦ಗಂಟೆವರೆಗೆ ಮತ್ತು ಮಧ್ಯಾಹ್ನ ೧:೪೫ರಿಂದ: ೪:೩೦ರವರೆಗೆ ಇರುವ ಕಾಲಮಿತಿಯಲ್ಲೇ ಯಾರೊಬ್ಬರು ಸಮಯ ಪಾಲನೆ ಮಾಡದೆ ವಿಳಂಬವಾಗಿಯಾದರು ಅಥವಾ ಬಂದ ಮೇಲೆ ಸಮಯದ ಮೊದಲೆ ನಿರ್ಗಮನದಂತ ಪರಿಸ್ಥಿತಿಯ ಇಲ್ಲಿನ ಆಸ್ಪತ್ರೆಯಲ್ಲಿ ನಡೆಯುತ್ತಿದೆ ಎಂಬುದು ಕೇಳಿಬರುತ್ತಿದೆ.
ಪ್ರಸಕ್ತ ದಿನಗಳಲ್ಲಿ ಹೃದಯ ರೋಗ ಎದುರಿಸುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚಾಗಿ ತಪಾಸಣೆ ಬಂದರೆ ಇಸಿಜಿ ಇಲ್ಲ ಎಂದು ಹೇಳುತ್ತಾರೆ. ಆದರೆ ಮುಖ್ಯ ಆಡಳಿತಾಧಿಕಾರಿಗಳು ಇದೇ ಎನ್ನುತ್ತಾರೆ. ಆದರೆ ತಪಾಸಣೆ ಅಂಕಿಅಂಶಗಳು ಮಾತ್ರ ಎಲ್ಲವನ್ನು ತಿರುಮುರಗುಗೊಳಿಸುತ್ತಿವೆ. ಈ ಕುರಿತು ತನಿಖೆಯ ಮೂಲಕ ವ್ಯವಸ್ಥೆಗೆ ಚಿಕಿತ್ಸೆ ನೀಡಬೇಕಾದ ಮೇಲಾಧಿಕಾರಿಗಳು ಮತ್ತೊಮ್ಮೆ ಮಿಂಚಿನ ದಾಳಿಯ ಮೂಲಕ ಇಲ್ಲಿನ ವ್ಯವಸ್ಥೆ ಸರಿಪಡಿಸಲು ಮುಂದಾಗಬೇಕಾಗಿದೆ.
ಭೇಟಿ ನೀಡಿದ್ದು: ಆಕ್ಸಿಜನ್ ಘಟಕ ಅರಂಭ ಕುರಿತು ಪರಿಶೀಲನೆ ಕೈಗೊಂಡಿದ್ದು, ೩ನೇ ಕೋವಿಡ ಅಲೆ ತಡೆಗಟ್ಟಲು ಐಷಿಯೂ ಘಟಕ ತೆರೆಯುವ ಕುರಿತು ಪರಿಶೀಲಿಸಲಾಗಿದೆ. ಆಸ್ಪತ್ರೆಯಲ್ಲಿ ಸಾಮಾನ್ಯ ಎಕ್ಸರೆ ಇದೆ. ರೋಟಿನ್ ತಪಾಸಣೆ ನಡೆಯುತ್ತಿದೆ. ಎಲ್ಲ ರೀತಿಯ ತಜ್ಞರು ನೇಮಿಸಲಾಗಿದೆ. ಮೊದಲಿಗಿಂತಲೂ ಸುಧಾರಿಸಲಾಗಿದೆ. ಸಮಯ ಪಾಲನೆ ಮಾಡಬೇಕು. ಇದಕ್ಕೆ ನಿಗಾವಹಿಸುವಂತೆ ಆಡಳಿತಾಧಿಕಾರಿಗಳು ಸೂಚಿಸಲಾಗಿದೆ. ಇಷ್ಟಾಗಿಯೂ ದುರ್ನಡೆ ಕಂಡಬಂದಲ್ಲಿ ಕ್ರಮ ಕೈಗೊಳ್ಳಲು ಹಿಂದೆ ಮುಂದೆ ನೋಡುವುದಿಲ್ಲ. -ಚಲುವರಾಜ ಡಿಎಚ್‌ಒ ಕಲಬುರಗಿ
ಹೃದಯ ಚಿಕಿತ್ಸೆಗೆ ಇಸಿಜಿ ಯಂತ್ರ ಸಣ್ಣ ಪ್ರಮಾಣದಲ್ಲಿದೆ ದೊಡ್ಡ ಪ್ರಮಾಣದು ಮೇಲಾಧಿಕಾರಿಗಳಿಗೆ ಕೋರಿದ್ದೇವೆ. ಬೆಳಗಿನ ಜಾವ ಕಡ್ಡಾಯವಾಗಿ ೯ರಿಂದ ೧೦ ಗಂಟೆಯವರೆಗೆ ಕರ್ತವ್ಯ ನಿರತ ಎಲ್ಲ ವೈದ್ಯರನ್ನು ಹಾಜರಿರುವಂತೆ ಶನಿವಾರವೇ ಸಭೆ ಕರೆದು ಸೂಚಿಸಿದ್ದೇನೆ. ಬಯೋಮೆಟ್ರಿಕ ಅಳವಡಿಸಲಾಗಿದೆ. ಒಪಿಡಿ ಕೇಂದ್ರ ಮತ್ತು ಸಮಯಕ್ಕೆ ವೈದ್ಯರನ್ನು ಹಾಜರುವಂತೆ ತಾಕೀತು ಮಾಡಲಾಗಿದೆ. ಮುಂದೆ ಹೀಗಾಗದಂತೆ ಎಚ್ಚರವಹಿಸಲಾಗುವುದು. ಸಮಯ ಪಾಲನೆ ಅಥವಾಅ ಕರ್ತವ್ಯದಲ್ಲಿ ನಿಷ್ಕಾಳಜಿ ತೋರುವ ಸಿಬ್ಬಂದಿಗಳ ವೇತನ ಕಡಿತಗೊಳಿಸುವ ಎಚ್ಚರಿಕೆ ನೀಡಲಾಗಿದೆ. – ಚಂದ್ರಕಾಂತ ನರಿಬೋಳ, ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿಗಳು ಸಾರ್ವಜನಿಕ ಆಸ್ಪತ್ರೆ ಆಳಂದ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…