ಕಲಬುರಗಿ; ನಗರದ ಜಗತ್ ಸರ್ಕಲ್ ವೃತ್ತದಿಂದ ತಿಮ್ಮಾಪೂರ ವೃತ್ತದ ಮುಖ್ಯ ರಸ್ತೆಗೆ ಇರುವ ವಿದ್ಯುತ್ ಕಬ್ಬಿಣದ ಕಂಬಗಳು ತುಕು ಜಂಗ ಹಿಡಿದು ಯಾವುದೇ ಸಮಯದಲ್ಲಿ ಬೀಳುವ ಹಂತದಲ್ಲಿದ್ದು, ಹಾಗೂ ಕಲಬುರಗಿ ನಗರದ ತುಂಬೆಲ್ಲಾ ಡೆಂಗೋ, ಟೈಪಡ್, ಮಲೇರಿಯಾ ರೋಗವು ಹೆಚ್ಚಾಗಿ ಅಕ್ರಮಿಸುತ್ತಿದ್ದು, ಕೂಡಲೇ ಸಾರ್ವಜನಿಕರಿಗೆ ಅನುಕೂಲ ಆಗುವ ಹಾಗೆ ವ್ಯವಸ್ಥೆ ಮಾಡಬೆಕೆಂದು ಜೈ ಕನ್ನಡಿಗರ ರಕ್ಷಣಾ ವೇದಿಕೆಯ ಕಾರ್ಯಕರ್ತರು ಮಹಾನಗರ ಪಾಲಿಕೆ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿದರು.
ಜೈ ಕನ್ನಡಿಗರ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಸಚೀನ್ ಫರತಾಬಾದ ಮಾತನಾಡಿ ನಗರದ ಜಗತ್ ಸರ್ಕಲ್ ದಿಂದ ತಿಮ್ಮಾಪೂರ ವೃತ್ತದ ಮುಖ್ಯ ರಸ್ತೆಗೆ ಹೋಗುವ ಮಾರ್ಗದ ಬದಿಯಲ್ಲಿ ವಿದ್ಯುತ್ ಕಬ್ಬಣದ ಕಂಬಗಳು ಇದ್ದು, ಸದರಿ ಈ ವಿದ್ಯುತ್ ಕಂಬಗಳು ಸುಮಾರು ೨೫ ವರ್ಷಗಳಿಂದ ಇದ್ದು, ಈಗಾಗಲೇ ಇವುಗಳು ತುಕ್ಕು ಹಿಡಿದು ವಿದ್ಯುತ್ ಶಾಟ್ ಸಕ್ಯೂರ್ಟ ಆಗುವ ಸಂಭವ ಹೆಚ್ಚಾಗಿರುತ್ತದೆ. ಅಲ್ಲದೇ ಸೆಂಟರ್ ಕಾಮತ್ ಹೊಟೇಲ್ ಮುಂದುಗಡೆ ಇರುವ ವಿದ್ಯುತ್ ಕಂಬವು ವಾಹನದ ಮೇಲೆ ಬಿದ್ದಿರುವುದರಿಂದ ಸದರಿ ವಾಹನವು ಸಂಪೂರ್ಣವಾಗಿ ಜಖಂಗೊಂಡಿದೆ.
ನಗರದಲ್ಲಿ ಇತ್ತೀಚಿಗೆ ಡೆಂಗ್ಯೂ, ಟೈಪಡ್, ಮಲೇರಿಯಾ ರೋಗ, ಹಾಗೂ ಸಿಕ್ಕ ಸಿಕ್ಕಣ್ಣ ಸೊಳೆಗಳ ಕಾಟ ಹೆಚ್ಚಾಗಿದ್ದು, ಮಕ್ಕಳು ಹಾಗೂ ವಯೋವೃದ್ಧರು, ಹೆಣ್ಣು ಮಕ್ಕಳು ಯುವಕರು. ನೆಮ್ಮದಿಯಿಂದ ಜೀವನ ಸಾಗಿಸಲು ತುಂಬಾ ದುರದೃಷ್ಟಕರವಾಗಿದ್ದು, ಅದಕ್ಕೆ ಬೇಡಿಕೆಗಳಾದ ಜಗತ್ ವೃತ್ತದಿಂದ ತಿಮ್ಮಾಪೂರ ಸರ್ಕಲ್‌ವರೆಗೆ ಇರುವ ತುಕು ಹಿಡಿದಿರುವ ವಿದ್ಯುತ್ ಕಂಬಗಳನ್ನು ಬದಲಾವಣೆ ಮಾಡಿ, ಹೊಸದಾಗಿ ವಿದ್ಯುತ್ ಕಂಬಗಳ ವ್ಯವಸ್ಥೆ ಮಾಡಬೇಕು, ಹೀರಾಪೂರ ಕ್ಲಾಸ್ ದಿಂದ ಹೈ ಕೋರ್ಟ ಮಾರ್ಗವಾಗಿ ರಾಮಮಂದಿರವರೆಗೆ ವಿದ್ಯುತ್ ಕಂಬಗಳನ್ನು ಬದಲಾವಣೆ ಮಾಡಿ, ಹೊಸದಾಗಿ ವಿದ್ಯುತ್ ಕಂಬಗಳ ಹಾಕಬೇಕು, ನ್ಯೂ ಜೇವರ್ಗಿ ರಸ್ತೆಯಿಂದ ರಾಮ ಮಂದಿರ ಸರ್ಕಲ್ ವರೆಗೆ ಹಾಗೂ ಖರ್ಗೆ ಪೆಟ್ರೋಲ್ ಪಂಪದಿಂದ ಸುಲ್ತಾನಪೂರ ಕ್ರಾಸ್ ಮಾರ್ಗವಾಗಿ ಹೀರಾಪೂರ ಕ್ರಾಸ್ ವರೆಗೆ ವಿದ್ಯುತ್ ಕಂಬಗಳ ವ್ಯವಸ್ಥೆ ಮಾಡಬೇಕು,
ಕಲಬುರಗಿ ನಗರದಲ್ಲಿ ಡೆಂಗ್ಯೋ, ಮಲೇರಿಯಾ, ಟೈಪಡ್ ಹಾಗೂ ಸೊಳ್ಳೆಗಳಿಂದ ಅನೇಕ ರೀತಿಯ ಸಾಂಕ್ರಾಮೀಕ ರೋಗವು ಹರಡುವ ಪರಿಸ್ಥಿತಿ ಇರುತ್ತದೆ. ಈಗ ಟಿ.ವಿ. ಮಾಧ್ಯಮದಲ್ಲಿ ಕೋವಿಡ್ -೧೯ ೩ನೇ ಅಲೇ ಬರುವುದು ಸಮೀಪವಾಗಿದ್ದು, ಇದರಿಂದ ಅನೇಕರ ನೆಮ್ಮದಿಯವನ್ನು ಹಾಳು ಮಾಡಿರುತ್ತದೆ. ಆದ್ದರಿಂದ ಬೆಳಗ್ಗೆ ಮತ್ತು ಸಾಯಂಕಾಲ ಸೊಳ್ಳೆ ಔಷಧಿ ಮತ್ತು ಇತರೇ ಸಾಂಕ್ರಾಮೀಕ ರೋಗಗಳನ್ನು ಹೋಗಲಾಡಿಸುವ ಔಷಧಗಳನ್ನು ಕಲಬುರಗಿ ನಗರದಲ್ಲಿಯೇ ಸಿಂಪಡಿಸಬೇಕು ಹಾಗೂ ಆಟೋ ವಾಹನದಲ್ಲಿ ಧನ್ವಿವರ್ಧಕ ಮೂಲಕ ಈ ರೋಗಗಳ ಬಗ್ಗೆ ಜಾಗೃತಿ ಮೂಡಿಸಿ. ಜನರು ಆರೋಗ್ಯವಂತರಾಗಿರಲು ತಾವುಗಳು ಕಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಚೀನ ಹೇಳಿದರು.
ಈ ಸಂದರ್ಭದಲ್ಲಿ ಸುರೇಶ ಹನಗುಂಡಿ, ಅಂಬು ಮಸ್ಕಿ, ಅಕ್ಷಯ, ರಾಹುಲ ಫರತಾಬಾದ, ಅರ್ಜುನ ಸಿಂಗೆ, ಸುನೀಲ ಜಾಧವ, ಪ್ರವೀಣ ಸಜ್ಜನ್, ಲಕ್ಷ್ಮೀಕಾಂತ, ಉದಯಕುಮಾರ, ರಾಹುಲ ಆಶ್ರಯ ಕಾಲೋನಿ ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…