ಕಲಬುರಗಿ: ವಿಶ್ವಜ್ಯೋತಿ ಪ್ರತಿಷ್ಠಾನಕ್ಕೆ ಹನ್ನೊಂದರ ಹೊನಲು ಹಾಗೂ ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಯವರ ಜನ್ಮಜ್ಯೋತಿಗೆ ನಲ್ವತ್ತರ ಬೆಳಕು ನಿಮಿತ್ತ ತಿಂಗಳ ಪರ್ಯಂತ ವಿವಿಧ ಕಾರ್ಯಕ್ರಮದ ಭಾಗವಾಗಿ ಇಂದು ನಗರದ ಎನ್.ವಿ. ಬಿ.ಈಡಿ. ಕಾಲೇಜಿನಲ್ಲಿ ಅಂಗದಾನದರಿವು ಸಮಾರಂಭದ ಜೊತೆಗೆ ಹೆಚ್ಚು ಬಾರಿ ರಕ್ತದಾನ ಮಾಡಿದ ಮತ್ತು ದೇಹದಾನ ಮಾಡಲಿಕ್ಕೆ ಒಪ್ಪಿಗೆ ನೀಡಿದ ಮಹಾನುಭಾವರಿಗೆ ವಿಶೇಷವಾಗಿ ಗೌರವಿಸುವ ಮೂಲಕ ಸರಣಿ ಕಾರ್ಯಕ್ರಮದ ಸಮಾರೋಪಗೊಳಿಸಲಾಯಿತು.
ಪ್ರತಿಯೊಬ್ಬರೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಮಣ್ಣಲ್ಲಿ ಮಣ್ಣಾಗುವ ದೇಹವನ್ನು ಮೆಡಿಕಲ್ ಕಾಲೇಜುವೊಂದಕ್ಕೆ ದಾನ ಮಾಡುವ ಮೂಲಕ ಸಮಾಜ ಸೇವೆ ಮುಂದುವರಿಸಬೇಕು.
ಒಂದು ಹನಿ ರಕ್ತದಿಂದ ಒಂದು ಜೀವ ಉಳಿಯುದಾದರೇ ರಕ್ತ ಮಾಡಿದ ವ್ಯಕ್ತಿ ನಿಜಕ್ಕೂ ಕಣ್ಣಿಗೆ ಕಾಣುವ ದೇವರು. ಹಾಗಾಗಿ, ಇಂಥ ಮಹತ್ವದ ವಿಚಾರಗಳನ್ನು ತಿಳಿಸಿಕೊಡುವ ಕಾರ್ಯಕ್ರಮ ಇದಾಗಿದ್ದು, ಇಂತಹ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕಾರ್ಯಾಧ್ಯಕ್ಷ ರವೀಂದ್ರಕುಮಾರ ಭಂಟನಳ್ಳಿ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ, ವಿಶೇಷ ಸತ್ಕಾರ, ಸಿದ್ರಾಮಪ್ಪಾ ಹಾಗರಗಿ, ಜನಾರ್ಧನ ಅಗ್ನಿಹೋತ್ರಿ, ಸಂಗೀತಾ ಪ್ರಶಾಂತ ಗುಡ್ಡಾ, ಸಂಗಮೇಶ ಜೋಗೂರ, ಪುರುಷೋತ್ತಮ ಹಡಪದ, ಸ್ವಾಗತ ಸಮಿತಿಯ ಪರಮೇಶ್ವರ ಶಟಕಾರ, ಸಂಚಾಲಕರು, ಸ್ವಾಗತ ಸಮಿತಿ ಸದಸ್ಯರು ಸೇರಿದಂತೆ ಮುಂತಾದವರು ಇದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…