ಆಳಂದ: ಹಲವು ಭಾಷೆ ಧರ್ಮಗಳಿಂದ ಕೂಡಿದ ಭಾರತವು ವಿವಿಧತೆಯಲ್ಲಿ ಏಕತೆ ಹೊಂದಿರುವ ಏಕೈಕ ರಾಷ್ಟ್ರದ ಭಾವೈಕ್ಯತೆ ರಾಷ್ಟ್ರೀಯತೆಯನ್ನು ಕಾಪಾಡಲು ಗೃಹ ರಕ್ಷಕರ ಗುರಿಯಾಗಬೇಕು ಎಂದು ಗೃಹ ರಕ್ಷಕದಳದ ಪ್ರಭಾರಿ ಘಟಕಾಧಿಕಾರಿ ಶ್ರೀಮಂತ ಟಿ. ಬರಮಣೆ ಅವರು ಹೇಳಿದರು.
ಪಟ್ಟಣದ ಹೃದಯ ಭಾಗದಲ್ಲಿರುವ ಗೃಹ ರಕ್ಷಕದಳ ಘಟಕದ ಆಶ್ರಯದಲ್ಲಿ ಕಚೇರಿಯ ಮುಂದೆ ಹಮ್ಮಿಕೊಂಡ ರಾಷ್ಟ್ರೀಯ ಏಕತಾದಿನ ಅಂಗವಾಗಿ ಪ್ರತಿಜ್ಞಾ ವಿಧಿಸಿ ಬೋಧಿಸಿ ಅವರು ಮಾತನಾಡಿದರು.
ಈ ನಿಟ್ಟಿನಲ್ಲಿ ಗೃಹ ರಕ್ಷದಳ ಸಮಾಜ ದೇಶ ಸೇವೆಗೆ ಸದಾ ಬದ್ಧವಾಗಿ ನಡೆದುಕೊಳ್ಳುತ್ತದೆ. ಇದಕ್ಕೆ ಸಿಬ್ಬಂದಿಗಳು ಸಹ ನಮ್ಮ ಕರ್ತವ್ಯ ಮತ್ತು ಪ್ರಾಣಿಕತೆ ಮರೆಯುವ ಮೂಲಕ ಜನ ಮೆಚ್ಚಿಗೆ ಪಡೆದುಕೊಳ್ಳಲು ಮುಂದಾಅಗಬೇಕು ಎಂದು ಹೇಳಿದರು.
ನಿಕಟಪೂರ್ವ ಘಟಕಾಧಿಕಾರಿ ಪಿಎಲ್‌ಸಿ ಶ್ರೀಶೈಲ ಎಂ. ಅಚಲೇರಿ ಅವರು ಮಾತನಾಡಿ, ರಾಷ್ಟ್ರೀಯ ಏಕೀಕರಣದ ಸ್ಫೂರ್ತಿಯನ್ನು ಕಾಪಾಡಲು ಗೃಹ ರಕ್ಷದಳದ ಪ್ರತಿಜ್ಞೆಯಂತೆ ನಡೆದುಕೊಂಡು ರಾಷ್ಟ್ರದ ಅಂತರಿಕ ಭದ್ರತೆಯನ್ನು ಖಾತ್ರಿಪಡಿಸಲು ನಾವುಗಳು ನಮ್ಮದೆಯಾದ ಕೊಡುಗೆಯನ್ನು ನೀಡಲು ಬದ್ಧರಾಗೋಣ ಎಂದು ಹೇಳಿದರು.
ಸಿಬ್ಬಂದಿ ಚಂದ್ರಕಾಂತ ಎಸ್. ಜವಳಿ, ಅಮೂಲಕುಮಾರ ಜಿ. ಜೈನ್, ಚೌಡಪ್ಪ ಮಾಡಿಯಾಳ, ಸಂತೋಷ ಮೇತ್ರೆ, ವೀರೇಂದ್ರ ಕಾಲೇಕರ್, ಸುನೀಲಕುಮಾರ ಬಟಗೇರಿ, ಬಸವರಾಜ ಎಂ. ಅಚಲೇರಿ, ಹುಸೇನಿ ಮುಲ್ಲಾ, ರವೋಫ್ ಅನ್ಸಾರಿ, ನಜಮೋದ್ದೀನ್ ಹಿರೋಳಿ, ಲಕ್ಷ್ಮೀಕಾಂತ ಕೋಣೆ, ಮಲ್ಲಿನಾಥ ಮಗಿ, ರಾಜಕುಮಾರ ಗೊಳೆ ಮತ್ತು ಇತರ ಸಿಬ್ಬಂದಿಗಳು ಸೇರಿ ನಾಗರಿಕರು ಪಾಲ್ಗೊಂಡಿದ್ದರು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…