ರಾಷ್ಟ್ರೀಯ ಏಕತೆಯ ಸಾಧಿಸುವುದೇ ಗೃಹ ರಕ್ಷಕರ ಗುರಿಯಾಗಬೇಕು

0
11

ಆಳಂದ: ಹಲವು ಭಾಷೆ ಧರ್ಮಗಳಿಂದ ಕೂಡಿದ ಭಾರತವು ವಿವಿಧತೆಯಲ್ಲಿ ಏಕತೆ ಹೊಂದಿರುವ ಏಕೈಕ ರಾಷ್ಟ್ರದ ಭಾವೈಕ್ಯತೆ ರಾಷ್ಟ್ರೀಯತೆಯನ್ನು ಕಾಪಾಡಲು ಗೃಹ ರಕ್ಷಕರ ಗುರಿಯಾಗಬೇಕು ಎಂದು ಗೃಹ ರಕ್ಷಕದಳದ ಪ್ರಭಾರಿ ಘಟಕಾಧಿಕಾರಿ ಶ್ರೀಮಂತ ಟಿ. ಬರಮಣೆ ಅವರು ಹೇಳಿದರು.

ಪಟ್ಟಣದ ಹೃದಯ ಭಾಗದಲ್ಲಿರುವ ಗೃಹ ರಕ್ಷಕದಳ ಘಟಕದ ಆಶ್ರಯದಲ್ಲಿ ಕಚೇರಿಯ ಮುಂದೆ ಹಮ್ಮಿಕೊಂಡ ರಾಷ್ಟ್ರೀಯ ಏಕತಾದಿನ ಅಂಗವಾಗಿ ಪ್ರತಿಜ್ಞಾ ವಿಧಿಸಿ ಬೋಧಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ಈ ನಿಟ್ಟಿನಲ್ಲಿ ಗೃಹ ರಕ್ಷದಳ ಸಮಾಜ ದೇಶ ಸೇವೆಗೆ ಸದಾ ಬದ್ಧವಾಗಿ ನಡೆದುಕೊಳ್ಳುತ್ತದೆ. ಇದಕ್ಕೆ ಸಿಬ್ಬಂದಿಗಳು ಸಹ ನಮ್ಮ ಕರ್ತವ್ಯ ಮತ್ತು ಪ್ರಾಣಿಕತೆ ಮರೆಯುವ ಮೂಲಕ ಜನ ಮೆಚ್ಚಿಗೆ ಪಡೆದುಕೊಳ್ಳಲು ಮುಂದಾಅಗಬೇಕು ಎಂದು ಹೇಳಿದರು.

ನಿಕಟಪೂರ್ವ ಘಟಕಾಧಿಕಾರಿ ಪಿಎಲ್‌ಸಿ ಶ್ರೀಶೈಲ ಎಂ. ಅಚಲೇರಿ ಅವರು ಮಾತನಾಡಿ, ರಾಷ್ಟ್ರೀಯ ಏಕೀಕರಣದ ಸ್ಫೂರ್ತಿಯನ್ನು ಕಾಪಾಡಲು ಗೃಹ ರಕ್ಷದಳದ ಪ್ರತಿಜ್ಞೆಯಂತೆ ನಡೆದುಕೊಂಡು ರಾಷ್ಟ್ರದ ಅಂತರಿಕ ಭದ್ರತೆಯನ್ನು ಖಾತ್ರಿಪಡಿಸಲು ನಾವುಗಳು ನಮ್ಮದೆಯಾದ ಕೊಡುಗೆಯನ್ನು ನೀಡಲು ಬದ್ಧರಾಗೋಣ ಎಂದು ಹೇಳಿದರು.

ಸಿಬ್ಬಂದಿ ಚಂದ್ರಕಾಂತ ಎಸ್. ಜವಳಿ, ಅಮೂಲಕುಮಾರ ಜಿ. ಜೈನ್, ಚೌಡಪ್ಪ ಮಾಡಿಯಾಳ, ಸಂತೋಷ ಮೇತ್ರೆ, ವೀರೇಂದ್ರ ಕಾಲೇಕರ್, ಸುನೀಲಕುಮಾರ ಬಟಗೇರಿ, ಬಸವರಾಜ ಎಂ. ಅಚಲೇರಿ, ಹುಸೇನಿ ಮುಲ್ಲಾ, ರವೋಫ್ ಅನ್ಸಾರಿ, ನಜಮೋದ್ದೀನ್ ಹಿರೋಳಿ, ಲಕ್ಷ್ಮೀಕಾಂತ ಕೋಣೆ, ಮಲ್ಲಿನಾಥ ಮಗಿ, ರಾಜಕುಮಾರ ಗೊಳೆ ಮತ್ತು ಇತರ ಸಿಬ್ಬಂದಿಗಳು ಸೇರಿ ನಾಗರಿಕರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here