ಬಿಸಿ ಬಿಸಿ ಸುದ್ದಿ

ಲಿಂಗಣ್ಣ ಸತ್ಯಂಪೇಟೆಯವರ ಮಗ ಶಿವರಂಜನ್ ಸತ್ಯಂಪೇಟೆಯವರು ಮತ್ತು ಇ-ಮೀಡಿಯಾಲೈನ್ ನ ವರದಿಗಾರ ಕೆ.ಶಿವು.ಲಕ್ಕಣ್ಣವರವರ ವರದಿ ಸತ್ಯವಾದ ಘಟೆನೆನಯೂ..!

ಆಕಾಲದಕಲ್ಲಿ ಅಂದರೆ ೮೦ರ ದಶಕದಲ್ಲಿ ‘ಬಸವ ಮಾರ್ಗ’ ಒಂದು ಬಹು ದೊಡ್ಡ ಮಾನೀಯತೆಯ ಮತ್ತು ಬಸವ ಧರ್ಮ ಮತ್ತು ತತ್ವಗಳನ್ನು ಬಿತ್ತರಿಸುವ ಪತ್ರಿಕೆಯಾಗುತ್ತು. ಅದರ ಅಂದರೆ ಬಸವಣ್ಣನವರ ತತ್ವಗಳನ್ನು ಬರೀ ಬಿತ್ತರಿಸುಲು ಮಾತ್ರ ಪತ್ರಿಕೆ ಸೀಮಿತವಾಗಿರಲಿಲ್ಲ‌, ಬಸವಣ್ಣನವರ ಎಲ್ಲಾ ನಡೆ-ನುಡಿಯಗಳನ್ನು ಪಾಲಿಸುವ ಲಿಂಗಣ್ಣ ಸಂತಪೇಪೇಟೆಯವರು ಸಮಾಜದ ಒಳಿತನ್ನು ಅಂದರೆ ಜಾತಿ, ಮತ, ಪಂಥಗಳನ್ನು ಮೀರಿ ಬಸವಣ್ಣನಂತೆಯೇ ಸಮಾಜಕ್ಕೆ ಒಂದು ಅತ್ಯಮೂಲ್ಯ ‘ಬಸವ ಮಾರ್ಗ’ ತೋರಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು ಲಿಂಗಣ್ಣ ಸತ್ಯಂಪೇಟೆಯವರು. ಈಗ ಅವರು ಇಲ್ಲ. ಆ ‘ಬಸವ ಮಾರ್ಗ’ದಲ್ಲಿಯೇ ಬಸವಣ್ಣನಂತೆಯೇ ಲಿಂಗದೊಳಗೆ ಲೀನವಾದರು ಲಿಂಗಣ್ಣ ಸತ್ಯಂಪೇಟೆಯವರು. ಅದು ಇರಲಿ…

ಆದರೆ ಈಗ ಅವರ ಮಗ ಶಿವರಂಜನ್ ಸತ್ಯಂಪೇಟೆಯವರೂ ಲಿಂಗಣ್ಣ ಸತ್ಯಂಪೇಟೆಯವರ ಮಾರ್ಗದಲ್ಲಿಯೇ ಮುನ್ನಡೆಯುತ್ತ ಅವರು ಈಗ ‘ಶರಣ ಮಾರ್ಗ’ ಎಂಬ ಪತ್ರಿಕೆಯನ್ನು ಮುನ್ನಡೆಸುತ್ತಿದ್ದಾರೆ. ಅಲ್ಲದೇ ಶಿವರಂಜನ್ ಸತ್ಯಂಪೇಟೆಯವರು ಇ-ಮೀಡಿಯಾಲೈನ್ ಎಂಬ ಸುದ್ದಿ ವಾಹಿನಿಯನ್ನು ಸತ್ಯ, ನ್ಯಾಯ, ನಿಷ್ಟುರ ಮಾರ್ಗದಲ್ಲಿಯೇ ನಡೆಸುತ್ತಿದ್ದಾರೆ.

ಈ ಇ-ಮಿಡಿಯಾಲೈನ್ ನ ಮೂಲಕ ನ್ಯಾಯ ಎತ್ತಿಹಿಡಿಯುವ ಕೆಲಸವನ್ನು ಮಾಡುತ್ತಿದ್ದಾರೆ. ಹೀಗೆಯೇ ಮೊನ್ನೆ ಅಂದರೆ ಇತ್ತೀಚೆಗೆ ನಡೆದ ಉಪಚುನಾವಣೆಗಳ ಸುದ್ದಿಗಳನ್ನು ಈ ಇ-ಮೀಡಿಯಾಲೈನ್ ನಲ್ಲಿ ಲಿಂಗಣ್ಣ ಸತ್ಯಂಪೇಟೆಯವರ ಮಾರ್ಗದಲ್ಲಿಯೇ ಶಿವರಂಜನ್ ಸತ್ಯಂಪೇಟೆಯವರರು ಮೊನ್ನೆ ಅಂದರೆ ಉಪಚುನಾವಣೆಯಲ್ಲಿ ಹಾನಗಲ್ ಉಪಚುನಾಣೆಯಲ್ಲಿ ಇ-ಮೀಡಿಯಾಲೈನ್ ವರದಿಗಾರ ಮತ್ತು ಲೇಖಕವಾಗಿರುವ ನನಗೆ ಅಂದರೆ ಕೆ.ಶಿವು.ಲಕ್ಕಣ್ಣವರಗೆ ಸರಿಯಾಗಿ ನ್ಯಾಯ, ನಿಷ್ಠುರವಾಗಿ ಮತ್ತು ಜನಪರವಾಗಿ ವರದಿ ಮಾಡಬೇಕು ಶಿವು ಎಂದು ಹೇಳಿ, ನನ್ನನ್ನು ಹಾನಗಲ್ ಗೆ ಕಳುಹಿಸಿದ್ದರು ಇ-ಮೀಡಿಯಾಲೈನ್ ನ ಸಂಪಾದಕ ಶಿವರಂಜನ್ ಸತ್ಯಂಪೇಟೆಯವರು.

ಅವರು ಅಂದರೆ ಇ-ಮೀಡಿಯಾಲೈನ್ ಸಂಪಾದಕರಾದ ಶಿವರಂಜನ್ ಸತ್ಯಂಪೇಟೆಯವರು, ಅಂದಂತೆಯೇ ನಾನು ವರದಿಯನ್ನು ಸಲ್ಲಿಸಿದ್ದೇನು. ಆ ವರದಿಗಳು ಇ-ಮೀಡಿಯಾಲೈನ್ ನಲ್ಲಿ ಪ್ರಕಟವಾದವು.

ಹಣ, ಹೆಂಡ, ಖಂಡದ ಬಲದ ಬಿಜೆಪಿಯ ಶಿವರಾಜ್ ಸಜ್ಜನವರ ಇ-ಮೀಡಿಯಾಲೈನ್ ನಲ್ಲಿ ನಾವು ಬರೆದಂತೆಯೇ ಸೋತರು. ಕಾಂಗ್ರೆಸ್ ನ ಜನಪರವಾಗಿ ಈ ವರೆಗೂ ದುಡಿದ ಶ್ರೀನಿವಾಸ್ ಮಾನೆ ಗೆದ್ದರು. ಅಲ್ಲಿಗೆ ಇ-ಮೀಡಿಯಾಲೈನ್ ನ ಶ್ರಮ ಸಾರ್ತಕವಾಯಿತು. ಏನೇ ಆಗಲಿ ಈ ಬಾರಿ ಹಾನಗಲ್ ನಲ್ಲಿ ಹಣ , ಹೆಂಡ, ಖಂಡದ ಆಮೀಸದ ನಡೆಯಲಿಲ್ಲ. ಬರೀ ಮಾನವೀಯ ಮೌಲ್ಯಗಳು ಗೊಚರಿಸಿದವು. ಹಾಗಾಗಿಯೇ ಕಾಂಗ್ರೆಸ್ ನ ಶ್ರೀನಿವಾಸ ಮಾನೆ ಗೆದ್ದರು.

ಈ ವರದಿಗಳನ್ನು ಬರೆದ ಇ-ಮೀಡಿಯಾಲೈನ್ ನ ಒಳ್ಳೆಯ ಕೆಲಸಕ್ಕಾಗಿ ಅನೇಕಾನೇಕ ಗೆಳೆಯ — ಗೆಳೆತಿಯರು, ಹಾಗೂ ಓದುಗರು ಅಲ್ಲದೇ ಸಾಕಷ್ಟು ಜನರು ಇ-ಮೀಡಿಯಾಲೈನ್ ನ ಈ ಕಾರ್ಯವನ್ನು ಮೆಚ್ಚಿ ಸಾಕಷ್ಟು ಫೋನ್ ಕರೆಗಳನ್ನು ಮಾಡಿದರು. ಅಲ್ಲದೇ ಈ ಸುದ್ದಿಗಳನ್ನು ಟ್ವಿಟರ್ ನಲ್ಲಿಯೂ ಪ್ತಕಟಿಸುತ್ತಿದ್ದಂತೆ ಅಲ್ಲಿಯೂ ಸಾಕಷ್ಟು ಮೆಚ್ಚುಗೆಯ ಮಹಾಪೂರವನ್ನೇ ಜನರು ಹಂಚಿದರು..!

ಇದೇನೇ ಇರಲಿ, ಆವಾಗಲೂ ಇ-ಮೀಡಿಯಾಲೈನ್ ಸುದ್ದಿ ವಾಹಿನಿಯು ಜನರ ಪ್ರಗತಿ, ಏಳಿಗೆಯ ಮಾರ್ಗದಲ್ಲಿಯೇ ಮುನ್ನೆಡೆಯುತ್ತದೆ ಎಂದು ಹೇಳುತ್ತಾ ಈ ಲೇಖನ ಮುಗಿಸುತ್ತೇನೆ..!

ಇಂತು

# ಕೆ.ಶಿವು.ಲಕ್ಕಣ್ಣವರ
emedialine

Recent Posts

ಕಲಬುರಗಿ ಕೆಬಿಎನ್ ಆಸ್ಪತ್ರೆಯಲ್ಲಿ ವಿಶೇಷ ಉಪನ್ಯಾಸ

ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…

12 mins ago

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ವೈದ್ಯರ ಸಲಹೆ ಅವಶ್ಯಕ: ಡಾ.ಪಿ.ಎಸ್.ಶಂಕರ್

ಕಲಬುರಗಿ:  ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…

15 mins ago

ವಿಕಲಚೇತನರು, ಹಿರಿಯ ನಾಗರಿಕರ ಹೆಸರಲ್ಲಿ ಅಕ್ರಮ: ಕ್ರಮಕ್ಕೆ ಆಗ್ರಹ

ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…

18 mins ago

ಕಾಳಗಿ; ರಟಕಲ್ ಗ್ರಾಮದಲ್ಲಿ ಬಸವಾದಿ ಶರಣರ ವಚನ ಸಂಗಮಕ್ಕೆ ಅದ್ಧೂರಿ ಚಾಲನೆ

ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…

1 hour ago

ಕೃಷ್ಣ ಮಂದಿರದಲ್ಲಿ ಪಲಿಮಾರು ಮಠದ ಸಂಸ್ಥಾನ ಪೂಜೆ

ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…

2 hours ago

ಚಿಂಚೋಳಿ: ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಸ್ಪಷ್ಟನೆ

ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…

5 hours ago