ಬಿಸಿ ಬಿಸಿ ಸುದ್ದಿ

ಭಾರತೀಯ ಸಂಸ್ಕøತಿ ಪಾಲಿಸಿದರೆ ಕಾನೂನು ಪಾಲಿಸಿದಂತೆ-ನ್ಯಾ: ಚಿದಾನಂದ ಬಡಿಗೇರ

ಸುರಪುರ: ಭಾರತ ಒಂದು ಐತಿಹಾಸಿಕ ದೇಶವಾಗಿದ್ದು ಇಲ್ಲಿಯ ಸಂಸ್ಕøತಿಯನ್ನು ಮನುಷ್ಯ ಪಾಲಿಸಿದರೆ ಇಂದಿನ ಕಾನೂನುಗಳನ್ನು ಪಾಲಿಸಿದಂತಾಗಲಿದೆ ಎಂದು ದಿವಾಣಿ ನ್ಯಾಯಾಧೀಶರು ಹಾಗು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳು ಹಾಗು ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ಚಿದಾನಂದ ಬಡಿಗೇರ ಮಾತನಾಡಿದರು.

ತಾಲೂಕು ಕಾನೂನು ಸೇವಾ ಸಮಿತಿ ಹಾಗು ತಾಲೂಕು ನ್ಯಾಯವಾದಿಗಳ ಸಂಘದಿಂದ ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,ದೇಶದ ಜನರಲ್ಲಿ ಕಾನೂನಿನ ಅರಿವು ಮೂಡಿಸುವ ಉದ್ದೇಶದಿಂದ ನಿರಂತರವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮ ನಡೆಸಲಾಗುತ್ತಿದ್ದು ಸಾರ್ವಜನಿಕರು ಹೆಚ್ಚೆಚ್ಚು ಭಾಗವಹಿಸುವ ಮೂಲಕ ಕಾನೂನುಗಳನ್ನು ತಿಳಿದುಕೊಳ್ಳಬೇಕೆಂದರು.

ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ನ್ಯಾಯವಾದಿಗಳಾದ ಜಿ.ಆರ್.ಬನ್ನಾಳ ಹಾಗು ನಂದನಗೌಡ ಪಾಟೀಲ್ ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಲೈಂಗಿಕ ಕಿರಕುಳ ನಿಷೇಧ ಮತ್ತು ಕಾನೂನು ಸೇವಾ ಪ್ರಾಧಿಕಾರಗಳ ಧ್ಯೇಯ ಉದ್ದೇಶಗಳು ಮತ್ತು ಜನತಾ ನ್ಯಾಯಾಲಯ ವಿಷಯಗಳ ಕುರಿತು ಮಾತನಾಡಿ,ಮಹಿಳೆಯರು ಕೆಲಸ ಮಾಡುತ್ತಿರುವ ಸ್ಥಳದಲ್ಲಿರುವ ಮೇಲಾಧಿಕಾರಿ ಅಥವಾ ಸಹೋದ್ಯೋಗಿ ಮಹಿಳೆಯರ ಉಡಿಗೆ ತೊಡಿಗೆ ಬಗ್ಗೆ ಹಿಯ್ಯಾಳಿಸುವುದು,ಅಶ್ಲೀಲವಾಗಿ ಸನ್ನೆ ಮಾಡುವುದು,ಲೈಂಗಿಕ ಕಿರಕುಳ ನೀಡುವುದು ಅಪರಾಧವಾಗಿದ್ದು ಇಂತಹ ಸಂದರ್ಭದಲ್ಲಿ ಮಹಿಳೆ ಕಾನೂನಿನ ನೆರವು ಪಡೆಯಬಹದು ಮತ್ತು ಮೇಲಾಧಿಕಾರಿಗಳಿಗೆ ದೂರು ನೀಡಬಹುದು ಎಂದರು.

ಅಲ್ಲದೆ 1 ಲಕ್ಷ ಒಳಗಿನ ಆದಾಯ ಇರುವವರಿಗೆ,ಪರಿಶಿಷ್ಟ ಜಾತಿ ,ಪರಿಶಿಷ್ಟ ಪಂಗಡದವರಿಗೆ ಉಚಿತ ಕಾನೂನು ನೆರವು ದೊರೆಯಲಿದೆ ಅಲ್ಲದೆ ಯಾರಾದರು ತಮ್ಮ ಆಸ್ತಿ ಪ್ರಕರಣ,ಸಂಬಂಧಿಕರೊಂದಿಗಿನ ಪ್ರಕರಣ ಹಾಗು ವೈಯಕ್ತಿಕ ಪ್ರಕರಣಗಳು ಜನತಾ ನ್ಯಾಯಾಲಯದಲ್ಲಿ ಪರಿಹರಿಸಿಕೊಳ್ಳಬಹುದು ಎಂದರು.

ನಂತರ ಪಿಎಸ್‍ಐ ಕೃಷ್ಣಾ ಸುಬೇದಾರ ಮಾತನಾಡಿ,ಸಾರ್ವಜನಿಕರು ಅನುಕೂಲಕ್ಕಾಗಿ ಯಾವುದೇ ಸಂದರ್ಭದಲ್ಲಿ 112 ಉಚಿತ ಕರೆಯ ಮೂಲಕ ಪೊಲೀಸ್ ನೆರವನ್ನು ಪಡೆಯಲು ಸಾಧ್ಯವಿದೆ.ಆದ್ದರಿಂದ ಇದರ ಸದುಪಯೋಗವನ್ನು ಮಾಡಿಕೊಳ್ಳುವಂತೆ ತಿಳಿಸಿ,ನಂತರ 112 ನಂಬರ್‍ಗೆ ಕರೆ ಮಾಡಿ ಕೆಲವೆ ಸಮಯದಲ್ಲಿ ಪೊಲೀಸ್ ವಾಹನ ಹೇಗೆ ಬರಲಿದೆ ಎಂಬುದರ ಕುರಿತು ಪ್ರತ್ಯಕ್ಷವಾಗಿ ಕರೆ ಮಾಡಿ ತೋರಿಸಿದರು.

ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಬಸವರಾಜ ಕಿಲ್ಲೇದಾರ, ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷೆ ಶ್ರೀದೇವಿ ಪಾಟೀಲ್,ಬಿಇಒ ಮಹಾದೇವರಡ್ಡಿ,ಅರಣ್ಯಾಧಿಕಾರಿ ಮೌಲಾಲಿಸಾಬ್ ವಕೀಲರಾದ ದೇವಿಂದ್ರಪ್ಪ ಬೇವಿನಕಟ್ಟಿ ಮತ್ತು ನಿಂಗಣ್ಣ ಚಿಂಚೋಡಿ ಮಾತನಾಡಿದರು.

ಕಾರ್ಯಕ್ರಮದ ವೇದಿಕೆ ಮೇಲೆ ಸಹಾಯಕ ಸರಕಾರಿ ಅಭಿಯೋಜಕ ರಾಘವೇಂದ್ರ ಜಹಾಗೀರದಾರ,ಹೆಚ್ಚುವರಿ ಸಹಾಯಕ ಸರಕಾರಿ ಅಭಿಯೋಜಕರಾದ ದಿದ್ಯಾರಾಣಿ,ನ್ಯಾಯವಾದಿ ಉದಯಸಿಂಗ್,ವಕೀಲರ ಸಂಘದ ಉಪಾಧ್ಯಕ್ಷ ಅಶೋಕ ಬಿ.ಕವಲಿ ವೇದಿಕೆ ಮೇಲಿದ್ದರು.

ಗೋಪಾಲ ತಳವಾರ ನಿರೂಪಿಸಿದರು,ಆದಪ್ಪ ಹೊಸ್ಮನಿ ಸ್ವಾಗತಿಸಿದರು ವಕೀಲ ನಾಗಪ್ಪ ಚವಲ್ಕರ್ ವಂದಿಸಿದರು.ಪರಮಾನಂದ ದೇಸಾಯಿ ಸೇರಿದಂತೆ ಅನೇಕ ಜನ ಶಿಕ್ಷಕಿಯರು ಹಾಗು ಸಾರ್ವಜನಿಕರಿದ್ದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

2 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

12 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

12 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

12 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago