ಆಧ್ಯಾತ್ಮಿಕ ಪ್ರವಚನ ಭಾಗ-೫

ಅಂಗವೇ ಭೂಮಿಯಾಗಿ
ಲಿಂಗವೇ ಬೆಳೆಯಾಗಿ
ವಿಶ್ವಾಸವೆಂಬ ಬತ್ತ ಒಲಿದು ಉಂಡು
ಸುಖಿಯಾಗಿರಬೇಕೆಂದ
ಕಾಮಭೀಮ ಜೀವಘನದೊಡನೆ
-ಒಕ್ಕಲಿಗ ಮುದ್ದಣ್ಣ

ಸುಂದರವಾದ ಜಗತ್ತಿನಲ್ಲಿ ನಾವು ಬಾಳುತ್ತಿದ್ದೇವೆ. ಸತ್ಯ ಶಿವಂ ಸುದರಂ ಇದು ದೇವನ ರೂಪ. ದೇವನೇ ಸತ್ಯ, ಸುಂದರ, ಶಾಂತ. ಇವು ಮೂರು ದೇವನ ಲಕ್ಷಣಗಳು. ಹೂ ಇವೆ. ಸುಂದರವಾಗಿವೆ. ದೇವರ ಸೌಂದರ್ಯ ಇಲ್ಲಿ ಋಷಿಮುನಿಗಳು ಕಂಡರು. ಜ್ಞಾನ ಸೌಂದರ್ಯ, ಭಾವಸೌಂದರ್ಯ, ಗುಣಸೌಂದರ್ಯ ಇಲ್ಲಿ ಮೇಳೈಸಿವೆ. ಎಲ್ಲಿ ಸೌಂದರ್ಯ ಇದೆಯೋ ಅಲ್ಲಿ ಶಾಂತಿ, ಸಮಾಧಾನ ಇರುತ್ತದೆ. ಅಲ್ಲಿಯೇ ದೇವನ ಅಸ್ತಿತ್ವ ಗುರುತಿಸುವುದು.

ಪೃಥ್ವಿಯಲ್ಲಿ ಸೌಂದರ್ಯ ತುಂಬಿದೆ. ಬೆಟ್ಟ, ಗುಟ್ಟ, ನದಿ, ಲಕ್ಷ ಲಕ್ಷ ಗಿಡಮರಗಳು, ಸುರಿಯುವ ಮಳೆ ಇವೆಲ್ಲ ದೇವನ ಅಭಿವ್ಯಕ್ತ ರೂಪವೇ. ಸೌಂದರ್ಯದ ಮಧ್ಯದಲ್ಲಿ ದೇವನ ಅಸ್ತಿತ್ವ ಕಾಣು ಮಾನವ. ದೇವನನ್ನು ನೆನೆದರೆ ಭಾವ ಮಧುರ. ಮನಸ್ಸು ಪ್ರಶಾಂತ ಆಗ ಎಲ್ಲವೂ ಸೌಂದರ್ಯ ಎಲ್ಲರಿಗೂ ಒಳ್ಳೆಯದಾಗಲಿ ಎನ್ನುವಲ್ಲಿ ಭಾವಸೌಂದರ್ಯ ಭಾರತೀಯರು ಸರ್ವೆಜನಃ ಸುಖಿನೋ ಭವಂತು ಎಂದು ಪ್ರಾರ್ಥಿಸಿದರು. ನಮ್ಮವರು-ನಿಮ್ಮವರು, ಸಿರಿವಂತ-ಬಡವ ಎಂಬ ಭೇದವಿಲ್ಲದೆ ಹೀಗೆ ಭಾವಿಸಿ, ಎಲ್ಲರಿಗೂ ಸಂತೋಷ ಸಿಗಲಿ ಎಂದು ಪ್ರಾರ್ಥಿಸುವುದು.

ಪಾಶ್ಚಿಮಾತ್ಯ ತತ್ವಜ್ಞನಿಗಳು ಭಾರತೀಯರನ್ನು ಕೊಂಡಾಡಿದರು. ವಿಶ್ವದ ಎಲ್ಲ ಜನರ ಸಂತೋಷ ಬಯಸುವುದೇ ಭಾವದ ಸೌಂದರ್ಯ. ಯಾರಿಗೂ ದುಃಖವಾಗುವುದು ಬೇಡ. ಮನುಷ್ಯ ಹಾಗೂ ಪ್ರಾಣಿ ಸಂಕುಲ ಎಲ್ಲವೂ ಒಳ್ಳೆಯದಾಗಲಿ ಎಂಬ ಭಾವ ಸೌಂದರ್ಯದಲ್ಲಿ ದೇವನ ಅಸ್ತಿತ್ವ ಇದೆ. ಇಂತಹ ವಿಚಾರದಲ್ಲಿ ಸತ್ಯ ಇದೆ. ಕಾರ್ಯ, ಭಾವ, ಜ್ಞಾನ, ಸುಂದರ ವಿಚಾರ ಹೊಂದಿ ಕೈಗಳಿಂದ ಒಳ್ಳೆಯ ಕಾರ್ಯ ಮಾಡಿದಾಗ ದೇಹ ಸೌಂದರ್ಯ ಎಲ್ಲರನ್ನೂ ಒಳ್ಳೆಯದಾಗಲಿ ಎಂಬುದು ಜ್ಞಾನ ಸೌಂದರ್ಯ. ಸತ್ಯ ಅನುಭಾವಿಸುವುದು ಜ್ಞಾನ ಸೌಂದರ್ಯ.

ಮನುಷ್ಯ ಪೂರ್ಣ ಸ್ವಚ್ಛವಾಗಿರುವುದರಿಂದ ಎಲ್ಲವೂ ಸ್ವಚ್ಛ ಸುಂದರ ದಿವ್ಯ ಬದುಕು ಆಗುವುದು. ಬದುಕು ಅಪರೂಪದ ವಸ್ತು. ಒಂದೊಂದು ಕ್ಷಣ ಅಮೂಲ್ಯ. ಬದುಕು ದೊಡ್ಡ ಸಂಪತ್ತು. ಬದುಕು ಮುಗಿದಾಗ ಎಲ್ಲ ಸಂಪತ್ತು ನಿಷ್ಫಲ.

ಸುಂದರ ಸಮರ್ಥವಾದ ಬದುಕಿನ ದೀಪ ಬೆಳಗಬೇಕು. ಉರಿಯಬಾರದು. ಬೆಳಗಬೇಕು. ಬೆಳಕು ಚೆಲ್ಲಬೇಕು. ಉರಿ ಹಚ್ಚಬಾರದು. ಸುಂದರ, ಸೌಮ್ಯವಾದ ಬೆಳಕು ಬೇಕು. ಉರಿ ಬೇಡ. ನಿರ್ವಾತ ಪ್ರದೇಶದಲ್ಲಿಟ್ಟ ದೀಪದಂತೆ ಬೆಳಗಬೇಕು. ಹಾಗಿದ್ದಾಗ ಅದು ಜೀವನ. ಎಣ್ಣಿ ಹಾಕುವುದು ದೀಪ ಉರಿಸಲು. ಪ್ರಣತೆ, ಬತ್ತಿ, ಗಟ್ಟಿಯಾಗಿರಬೇಕು. ನೀರು ಹಾಕುವ ಕೆಲಸ ಮಾಡಬಾರದು. ದೀಪ ಆರಿಸಬಾರದು. ಎಲ್ಲವೂ ಇರುವುದು ದೀಪ ಉರಿಸುವುದಕ್ಕಾಗಿ ದೀಪ ಉರಿಸುವುದಕ್ಕೆ ಇದೆ ಆರಿಸುವುದಕ್ಕಾಗಿ ಅಲ್ಲ. ಕೈಗಳು ನಿರ್ಮಾಣ ಮಾಡುವುದಕ್ಕೆ ಇವೆ. ನಾಶ ಮಾಡುವುದಕ್ಕಾಗಿ ಅಲ್ಲ.

ಸರಳ, ಸುಂದರ, ನೀತಿ, ಧರ್ಮ ಪಾಲಿಸುವುದು. ಕೈಗಳಿಂದ ನಾಶ ಮಾಡುವ ಕಾರ್ಯ ಮಾಡಬಾರದು. ಕೈಗಳು ಒಳ್ಳೆಯ ಕಾರ್ಯಕ್ಕಾಗಿ ಬಳಕೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುವುದು. ಕೈಗಳು ರಕ್ತಶಿಕ್ತವಾಗಬಾರದು. ನಾವು ದುಡಿಯಲಿಕ್ಕೆ ಕಟ್ಟಲಿಕ್ಕೆ ಬಂದವರು. ವಿನಾಶ ಮಾಡಲಿಕ್ಕಲ್ಲ.

ಒಂದಿಷ್ಟು ಆಯುಷ್ಯ ಇರುವಾಗ ಇಳ್ಳೆಯದನ್ನು ಕೇಳಬೇಕು. ವಿಚಾರಿಸು, ಕಾರ್ಯ ಮಾಡು. ಮನುಷ್ಯ ದೇವನಾಗಿ ಬದುಕಿದರೆ ಇದುವೇ ಸ್ವರ್ಗ. ರಾಕ್ಷಸನಾಗಿ ಬದುಕಿದರೆ ಇದುವೇ ನರಕ. ನಮ್ಮ ನೋಟ, ಭಾವ, ಕಾರ್ಯಗಳು ಸ್ವರ್ಗ ನಿರ್ಮಾಣಕ್ಕಾಗಿ ಇರಲಿ. ಒಳ್ಳೆಯ ಸಂಗೀತ ಹಾಡುವುದು ಮನುಷ್ಯ ಅರಳುತ್ತದೆ. ಒಳ್ಳೆಯ ಕಾರ್ಯ ಮಾಡುವುದು ಕೈಗಳಿಂದ ಒಳ್ಳೆಯ ಕಾರ್ಯ ಮಾಡಿ ಸ್ವರ್ಗ ನಿರ್ಮಿಸುವುದು.

ಸಾವಿರಾರು ಜನ ಶಾಂತಿಯಿಂದ ಕೂಡಿದಾಗ ಇದುವೇ ಸ್ವರ್ಗ. ಇಬ್ಬರೇ ಇದ್ದು ಜಗಳ ಆಡಿದಾಗ ಅದುವೇ ನರಕ. ಶ್ರೀಮಂತ, ಬಡವ ಭೇದ ಏಕೆ? ಎಲ್ಲವೂ ಸುಳ್ಳು ಗಂಧ, ವಿಭೂತಿ ಎಲ್ಲ ಬೇಕಿಲ್ಲ. ಸ್ವರ್ಗ ನಿರ್ಮಾಣ ಮಾಡುವುದು ಅದು ಬೇರೆಲ್ಲೋ ಇಲ್ಲ. ಙou ಂಡಿe ಅಡಿeಚಿಣiಟಿg ಊeveಟಿ ನಿಮ್ಮ ಮನೆ ಸ್ವಚ್ಛವಾಗಿದ್ದರೆ ಮನದಲ್ಲಿ ದೇವನೇ ನೆಲೆಗೊಳ್ಳುವನು. ಸ್ವರ್ಗ ನಿಮ್ಮಲ್ಲೇ ಇದೆ. ಆಚಾರವೇ ಸ್ವರ್ಗ, ಅನಾಚರವೇ ನರಕ ಎಂದು ಬಸವಣ್ಣನವರು ನುಡಿದರು.

ವಿಶ್ವದಲ್ಲಿ ಮಹಾಯುದ್ಧಗಳು ನಡೆದವು. ಆಗ ಭೂಮಿ ಉರಿಯಿತು. ನರಕವಾಯಿತು. ಹೀರೋಸಿಮಾ, ನಾಗಾಸಾಕಿ ಪ್ರದೇಶಗಳು ಅಂದು ನರಕವಾದವು. ಇಂದು ಸ್ವರ್ಗ ಮಾಡಿದ್ದು ಇದೇ ಕೈಗಳು. ಮಧ್ಯ ಕುಡಿದಾಗ ಆಹಾರ ರುಚಿಸುವುದಿಲ್ಲ. ಮುಳ್ಳಿನ ಗಿಡ ಬೆಳೆದರೆ ಮುಳ್ಳು ಸಿಗುತ್ತವೆ. ಹೂವಿನ ಗಿಡ ಬೆಳೆದರೆ ಹೂವು ಸಿಗುತ್ತವೆ. ಇಲ್ಲಿ ಏನು ಬೆಳೆಸಿ ಸಂತೋಷ, ಸುಂದರ, ಸ್ವರ್ಗ ಮಾಡಬೇಕೆಂಬ ಮಾತು ಕೃಷಿ ಕಾಯಕ ಮಾಡುವ ಒಕ್ಕಲಿಕ ಮುದ್ದಣ್ಣ ಹೇಳುತ್ತಾರೆ. ಮನುಷ್ಯನೇ ಸ್ವರ್ಗದ ನಿರ್ಮಾಪಕ. ಮನುಷ್ಯನೇ ನರಕದ ನಿರ್ಮಾಪಕ. ವಿಚಾರ ಮಾಡಿ ಬದುಕು. ಮಾತು ಸ್ವರ್ಗ ನಿರ್ಮಿಸಲಿ. ನರಕ ಬೇಡ. ನಗುವು ಸ್ವರ್ಗ ನಿರ್ಮಿಸಲಿ, ನರಕ ಬೇಡ ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ ಇದೇ ನಮ್ಮ ಕೂಡಲಸಂಗಮದೇವರ ನೊಲಿಸುವ ಪರಿ. ಇಲ್ಲಿ ಬಸವಣ್ಣನವರು ಶುದ್ಧಿಯನ್ನು ಸ್ವರ್ಗಕ್ಕೆ ಮತ್ತು ಪರಿಯನ್ನು ಧರ್ಮಕ್ಕೆ ಹೋಲಿಸಿದ್ದಾರೆ.

ಮಾತು ಮೃದುವಾಗಿರಲಿ. ಶಕ್ತಿಯುತವಾಗಿರಲಿ. ಅಯ್ಯಾ ಎಂದರೆ ಸ್ವರ್ಗ, ಎಲವೋ ಎಂದರೆ ನರಕ. ಮನೆ ಮತ್ತು ಮನ ಇವೆರಡು ಸ್ವರ್ಗ ನಿರ್ಮಿಸುವುದು. ಪಕ್ಷಿಗಳನ್ನು ಕೊಂದು ತಿನ್ನುವುದು ನರಕ. ಪ್ರಾಣಿಗಳ ಕೊಂದು ಅದು ಹೇಗೆ ನೀನು ಸ್ವರ್ಗ ಕಾಣುವೇ ಬಂದೂಕ ನರಕ ನಿರ್ಮಿಸುವುದು. ಮಾತಿನಲ್ಲಿ ಸತ್ಯ, ಮನಸ್ಸಿನಲ್ಲಿ ಶಾಂತಿ ಕಣ್ಣಿನಲ್ಲಿ ಸೌಂದರ್ಯ ಇದ್ದಾಗ ಇದು ದೇವದರ್ಶನ. ಧರ್ಮಜೀವನ.

emedialine

Recent Posts

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

5 hours ago

ಕಲಬುರಗಿ; ರಾಜ್ಯ ತಳವಾರ ಮಹಾಸಭಾ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ; ಕನಾ೯ಟಕ ರಾಜ್ಯ ತಳವಾರ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷರಾದ ಚಂದ್ರಕಾಂತ ದಶರಥ ತಳವಾರ ಅವರ ಅಧ್ಯಕ್ಷತೆಯಲ್ಲಿ ಇಂದು ಆನಂದ ನಿಲಯ…

8 hours ago

ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಉದ್ಯಮಿಗಳ ಅಹವಾಲು ಆಲಿಸಿದ ಬಿ.ಫೌಜಿಯಾ ತರನ್ನುಮ್

ಕಲಬುರಗಿ; ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ಶನಿವಾರ ಶಹಾಬಾದ ರಸ್ತೆಯಲ್ಲಿರುವ ನಂದೂರ-ಕೆಸರಟಗಿ ಮತ್ತು ಹುಮನಾಬಾದ ರಸ್ತೆಯಲ್ಲಿರುವ ಕಪನೂರ ಕೈಗಾರಿಕಾ…

8 hours ago

ಸಿಎಂ ರಾಜೀನಾಮೆ ಕೇಳುತ್ತಿರುವ ಬಿಜೆಪಿ -ಜೆಡಿಎಸ್‍ಗೆ ಯಾವುದೇ ನೈತಿಕತೆಯಿಲ್ಲ

ಶಹಾಬಾದ: ಕರ್ನಾಟಕದ ಬಹುಮತ ಸರಕಾರವನ್ನು ಬೀಳಿಸಲು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಸಿಎಂ ರಾಜೀನಾಮೆಗೆ ಒತ್ತಾಯ ಮಡುತ್ತಿರುವ ಬಿಜೆಪಿ ಹಾಗೂ…

8 hours ago

ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಶಹಾಬಾದ:ಪ್ರತಿ ಮನೆಗೂ ನೀರು ದೊರಿಸಿಕೊಡುವ ಉದ್ದೇಶದಿಂದ ನಡೆಯುವ ಜೆಜೆಎಂ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕೆಂದು ಕಾಂಗ್ರೆಸ್ ಮುಖಂಡ ಮೃತ್ಯುಂಜಯ್ ಹಿರೇಮಠ ಹೇಳಿದರು.…

8 hours ago

ಅ.13, 14 ರಂದು ಧಮ್ಮ ಕ್ರಾಂತಿ ಉತ್ಸವ : ಪೂರ್ವಭಾವಿ ಸಭೆ

ಶಹಾಬಾದ :ನಗರದ ಬೌದ್ಧ ವಿಹಾರದಲ್ಲಿ ರವಿವಾರ ಹಮ್ಮಿಕೊಂಡ 68ನೇ ಧಮ್ಮಚಕ್ರ ಪ್ರವರ್ತನಾ ದಿನದ ಅಂಗವಾಗಿ ಕಲಬುರ್ಗಿಯಲ್ಲಿ ಅ.13 ಮತ್ತು 14…

8 hours ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420