ಬಿಸಿ ಬಿಸಿ ಸುದ್ದಿ

ಆಧ್ಯಾತ್ಮಿಕ ಪ್ರವಚನ ಭಾಗ-೬

ನೆಲದ ಮರೆಯ ನಿಧಾನದಂತೆ
ಫಲದ ಮರೆಯ ರುಚಿಯಂತೆ
ಶಿಲೆಯ ಮರೆಯ ಹೇಮದಂತೆ
ತೀಲದ ಮರೆಯ ತೈಲದಂತೆ
ಮರದ ಮರೆಯ ತೇಜದಂತೆ
ಭಾವದ ಮರೆಯ ಬ್ರಹ್ಮವಾಗಿಪ್ಪ
ಚೆನ್ನಮಲ್ಲಿಕಾರ್ಜುನನ ನಿಲವನರಿಯಬಾರದು
                  -ಅಕ್ಕಮಹಾದೇವಿ

ನಮ್ಮ ಬದುಕು ಅತ್ಯಂತ ಅಮೂಲ್ಯ. ಅದಕ್ಕೆ ಬೆಲೆ ಕಟ್ಟಲಾಗದು. ಅಂತಹ ಬದುಕನ್ನು ನಾವು ಪವಿತ್ರ ಕಾರ್ಯಗಳಿಂದ ಶೃಂಗರಿಸಬೇಕು. ಸುಂದರಗೊಳಿಸಬೇಕು. ಆಗ ಪವಿತ್ರ ಜೀವನ ಆಗುವುದು. ಇಂತಹ ಜೀವನದ ಫಲ ಅನುಭವಿಸಬೇಕು. ಮಣ್ಣಿನಲ್ಲಿ ಏನೆಲ್ಲ ಶಕ್ತಿ ಇದೆ. ಹುಡುಕಿದರೆ ಅಲ್ಲಿ ಏನೂ ಕಾಣುವುದಿಲ್ಲ. ಆದರೆ ಇದೇ ಮಣ್ಣಿನಿಂದ, ಪುಷ್ಪಗಳು, ಕಾಳುಗಳು ಪಡೆಯುತ್ತೇವೆ. ಮಣ್ಣಿನಲ್ಲಿ ಎಲ್ಲವೂ ತುಂಬಿದೆ. ಸಿಹಿ, ಸೌಂದರ್ಯ ಎಲ್ಲವೂ ಮಣ್ಣಿನಲ್ಲಿದೆ. ಇದು ತಿಳಿದವನೆ ಶ್ರೀಮಂತ. ತಿಳಿಯಲಾರದವನೇ ಬಡವ. ಹಾಗಾಗಿ ಶರಣರು ಇದನ್ನು ನೆಲೆದ ಮರೆಯ ನಿಧಾನ ಎಂದರು.

ಈ ನಿಧಾನ ಬದುಕಿಗೆ ಅತ್ಯಂತ ಅವಶ್ಯವಿದೆ. ಶ್ರೀಮಂತನಾಗಲಿಕ್ಕೆ ನಿಧಾನಬೇಕು. ನಿಧಾನವು ದೊಡ್ಡ ಸಂಪತ್ತು. ನಾವು ನಡೆದಾಡುವ ನೆಲೆದಲ್ಲೇ ಸಂಪತ್ತು ತುಂಬಿದೆ. ಬದುಕನ್ನು ಜ್ಯೋರ್ತಿಮಯವಾಗಿಸುವ ಮತ್ತು ಸುಂದರಗೊಳಿಸುವ ನಿಧಾನ ಇದಾಗಿದೆ. ಒಂದು ಮಗುವಿನಲ್ಲಿ ವಿಜ್ಞಾನಿ, ಕವಿ, ಋಷಿ, ಶರಣ ಎಲ್ಲರೂ ಇರಬಹುದು ಎಲ್ಲವೂ ತುಂಬಿಕೊಂಡಿದೆ ನೆಲದ ಮರೆಯ ನಿಧಾನದಂತೆ. ಮಾತು, ಕೃತಿ, ಭಾವದಲ್ಲಿ ಸಂಪತ್ತು ನೋಡಲಿಕ್ಕೆ ಕಾಣುವುದಿಲ್ಲ. ಆದರೆ ಎಲ್ಲವೂ ತುಂಬಿಕೊಂಡಿದೆ. ಒಕ್ಕಲಿಗನಿಗೆ ಮಣ್ಣಿನ ಶಕ್ತಿ ಗೊತ್ತಿದೆ. ಸಿಹಿ ಹಣ್ಣು ಇದೇ ಮಣ್ಣಲ್ಲಿ ಒಕ್ಕಲಿಗ ತೆಗೆಯುವನು. ಇದು ಒಂದು ದೊಡ್ಡ ಪವಾಡವೇ ಆಗಿದೆ. ಬೆಳ್ಳಿ ಬಂಗಾರದ ಬದುಕು ನಿಂತಿಲ್ಲಿ. ಮಣ್ಣಿನ ಮೇಲೆ ಬದುಕು ನಿಂತಿದೆ. ನೆಲೆದ ಮರೆಯ ನಿಧಾನದಂತೆ.

ಸಾಧಕನು ಒಬ್ಬ ಕೃಷಿ ಇದ್ದಂತೆ. ಆತ ತನ್ನ ಸಾಧನೆಯಿಂದ ಭಗವಂತನೇ ಆಗಬಹುದು. ಭೂಮಿಯಂತೆ ದೇಹವು ಇದೆ. ಈ ದೇಹದಲ್ಲಿ ಎಲ್ಲ ಸಂಪತ್ತು ತುಂಬಿದೆ. ಮಣ್ಣು ಹದಗೊಳಿಸುವಂತೆ ದೇಹವನ್ನು ಹದಗೊಳಿಸುತ್ತ ಸಾಧನೆ ಮಾಡಬೇಕು. ವಿಜ್ಞಾನಿಯೊಬ್ಬನಿಗೆ ಒಂದು ಮಗುವಿನಲ್ಲಿ ಎಲ್ಲವೂ ಕಾಣುವುದು. ಹಾಗೆ ಮಣ್ಣಿನ ಶಕ್ತಿ ಒಕ್ಕಲಿಗ ತಿಳಿದಿರುವುದರಿಂದ ಒಕ್ಕಲಿಗನೆ ಶ್ರೀಮಂತ ಆಗುವನು. ತಿಳಿಯದಿದ್ದರೆ ಬಡವನಾಗುವನು. ಹಾಗೆಯೇ ದೇಹದ ಶಕ್ತಿ ತಿಳಿದರೆ ಸಾಮಾನ್ಯ ಮಾನವ ದೇವನೆ ಆಗುವನು. ಶರಣನಾಗುವನು. ವಿಶ್ವದಲ್ಲಿ ಸಾಧಕ ಒಳ್ಳೆಯ ಒಕ್ಕಲಿಗ ಆಗಬೇಕು. ಅಂತರಂಗದಲ್ಲಿ ಒಕ್ಕಲಿಗ ಆಗಬೇಕು.

ಮಣ್ಣಿನಿಂದ ಸಂಪತ್ತು ತಿಳಿದು ತೆಗೆಯುವುದು ಒಂದು ಕಲೆ. ಆ ಶ್ರಮವು. ತಪಸ್ಸು ಎನಿಸಿಕೊಳ್ಳುತ್ತದೆ. ಭೂಮಿಯ ಮೇಲೆ ಮಲಗಿದರೆ ಆಗದು. ದುಡಿಯಬೇಕು. ಆಗ ಬದುಕು ಶ್ರೀಮಂತವಾಗುತ್ತದೆ. ದೀಪದ ಹಣತೆಯಂತೆ ಬದುಕು. ಆ ಬದುಕಿಗೆ ಎಣ್ಣೆಬೇಕು. ಅಂತರಂಗ ಎಂಬುದು ಎಲ್ಲರಲ್ಲಿ ಒಂದೇ ಆಗಿದೆ. ಅಂಗವೇ ಭೂಮಿಯಲ್ಲಿರುವ ಅಂತರಂಗ ಅರಿತು ಸಾಧನೆ ಮಾಡಬೇಕು. ಲಕ್ಷ ಲಕ್ಷ, ಕೋಟಿ ಕೋಟಿ ಜನರನ್ನು ಮಣ್ಣು, ನೀರು, ಗಾಳಿ ರಕ್ಷಿಸಿವೆ. ನಾವು ತಿಳಿಯುತ್ತಿರುವ ಮಣ್ಣಿನಲ್ಲೇ ಎಲ್ಲರನ್ನೂ ರಕ್ಷಿಸುವ ಶಕ್ತಿ ಇದೆ. ಅಲ್ಲೇ ನೀರು ಅನ್ನ, ಗಾಳಿ, ಅಗ್ನಿ ಇವೆ. ಮಣ್ಣನ್ನು ಗೌರವಿಸಬೇಕು. ಏಕೆಂದರೆ ದೇವರೇ ನೆಲ, ನೀರು, ಬೆಳಕು, ಗಾಳಿ, ಅಗ್ನಿ ಆಗಿರುವನು. ಈ ಜ್ಞಾನ ತಿಳಿದರೆ ಮಾನವನೇ ದೇವರು. ಆದ್ದರಿಂದ ದೇಹ ತಿರಸ್ಕರಿಸಲಾಗದು.

ಈ ದೇಹವು ಅದ್ಭುತ. ಇಲ್ಲಿ ತಲೆ, ಹೃದಯ ಎಂಬ ಅದ್ಭುತ ಅಂಗಗಳಿವೆ. ಹಾಗಾಗಿ ಮಾನವ ಸಿರಿವಂತ. ಬಡವ ಅಲ್ಲ. ಒಳಗಿರುವುದನ್ನು ಹೊರಗೆ ತೆಗೆಯುವುದೇ ಶಿಕ್ಷಣ. ಬೀಜ ನೋಡಿದರೆ ಗಿಡದ ಅನುಭವ ಆಗದು. ಆದರೆ ಬೀಜದಲ್ಲೇ ಗಿಡದ ಎಲ್ಲಾ ಭಾಗಗಳು ತುಂಬಿವೆ. ಹಾಗೆಯೇ ದೇಹದಲ್ಲಿ ಎಲ್ಲವೂ ತುಂಬಿದೆ. ಮಾತು, ಕಾರ್ಯ, ಭಾವ ಸುಂದರಗೊಳಿಸಿದಾಗ ಜೀವನದ ಸಂಪತ್ತು ಸಿಗುವುದು. ಅದುವೇ ಸಂಪದ. ಬದುಕಿನಲ್ಲಿ ಒಕ್ಕಲುತನ ಮಾಡಿ ಶ್ರೇಷ್ಠ ಶರಣರಾದರು. ಅಂತಹವರಲ್ಲಿ ಬಸವಣ್ಣ ಒಬ್ಬ ಶ್ರೇಷ್ಠ ಒಕ್ಕಲಿಗ. ಅವರು ನುಡಿದುದೆಲ್ಲ ಮಂತ್ರವಾಯಿತು. ಎಲ್ಲರ ದೇಹದೊಳಗೆ ಶ್ರೇಷ್ಠ ಸಂತನಿದ್ದಾನೆಂದು ತಿಳಿದು ಸಾಧನೆ ಮಾಡಬೇಕು. ಸಂಪತ್ತು ದುಡಿಯುವವನ ಆಸ್ತಿ. ದುಡಿಯುವ ಕಲೆ ಗೊತ್ತಿದ್ದವನೇ ಭಾಗ್ಯವಂತ. ಅವನೇ ಸುದೈವಿ. ದುಡಿಯುವವನಿಗೆ ದೇವರಲ್ಲಿ ಬೇಡುವ ಅವಶ್ಯಕತೆಯೇ ಇಲ್ಲ. ಮಾನವನ ಕಾಲಡಿಯಲ್ಲಿಯೇ ಸಂಪತ್ತು ತುಂಬಿದೆ. ಜಗತ್ತಿನ ವೈಭವ ನೋಡಬೇಕು. ನೋಡದಿದ್ದರೆ ಆತನೆ ಬಡವ.

ಃegiಟಿ ಥಿouಡಿ ಜಚಿಥಿ ತಿiಣh ಚಿ smiಟe eಟಿಜ ತಿiಣh smiಟe ನಿನ್ನ ದಿನವು ನಗುವಿನಿಂದ ಆರಂಭವಾಗಲಿ. ನಗುತ್ತ ಕಾರ್ಯ ಮಾಡು. ಮಲಗು, ಏಳು ಇದುವೇ ಧರ್ಮ. ಸಿಟ್ಟಿನಿಂದ ಕೋಪದಿಂದ ಯಾವುದು ಕಾರ್ಯ ಮಾಡಬೇಡ. ನಗುವ ಧರ್ಮದಿಂದ ಮನೆಯಲ್ಲ ಸ್ವರ್ಗವಾಗುತ್ತದೆ. ನಗುತ್ತ ಇರುವುದೇ ಸಾಧನೆ. ಮುಖಕ್ಕೆ ಗಂಟು ಹಾಕಬೇಡ. ನೀನು ಸ್ವರ್ಗದಲ್ಲಿ ಇರುವಿ, ನೀನು ದೇವನೊಂದಿಗೆ ಇರುವಿ ಇಂತಹ ಜ್ಞಾನ ನಮ್ಮಷ್ಟಕ್ಕೆ ನಾವು ಮಾಡಿಕೊಂಡು ಬದುಕಲಿಕ್ಕಾಗುವುದಿಲ್ಲ. ಸಂತರ, ಶರಣರ ಶ್ರೇಷ್ಠ ಮಾತು ಕೇಳಬೇಕು. ಅವರ ಸಂಗ ಮಾಡಬೇಕು. ಅವರಿಂದ ಕಲಿತು ಅವರಂತಹ ದಿವ್ಯ ಬದುಕನ್ನು ರೂಢಿಸಿಕೊಳ್ಳಬೇಕು. ನಾವೇ ಒಕ್ಕಲಿಗರಾಗಬೇಕು. ಬಿತ್ತಿ ಬೆಳೆದು ಉಣ್ಣಬೇಕು. ಮುಗ್ಳುನಗೆಯಿಂದ ದಿನ ಆರಂಭಿಸಬೇಕು. ಆಗ ಬದುಕು ಮಧುರು. ಸ್ವರ್ಗ ನರಕ ನಿನ್ನಲ್ಲಿಯೇ ಇದೆ. ಕಾಮ, ದುಃಖ, ದ್ವೇಷ ಇವುಗಳು ಬದುಕಲ್ಲಿ ಬೆಳೆಯಲಿಕ್ಕೆ ಬಿಡಬಾರದು. ಶಾಂತಿ ಬೆಳೆಸಬೇಕು.

ಹೊರಗೆ ನೀನು ಏನೆಲ್ಲ ಆಗಿರಬಹುದು. ಆದರೆ ಅಂತರಂಗದಲ್ಲಿ ನೀನೊಬ್ಬ ಒಕ್ಕಲಿಗ. ಒಕ್ಕಲಿಗ ಇಲ್ಲವಾದರೆ ಜಗತ್ತು ಶೂನ್ಯ. ಅನ್ನ ಹಾಕುವವನೇ ಒಕ್ಕಲಿಗ. ಒಕ್ಕಲಿಗನಿಗೆ ವಿಶ್ವಾಸವೇ ಬೀಜ. ವಿಶ್ವಾಸದಿಂದ ವಿಜ್ಞಾನಿ, ಬುದ್ಧ, ಸಾಕ್ರೆಟಿಸ್ ಆಗಬಹುದು. ಇದೇ ವಿಶ್ವಾಸ ಇಲ್ಲದಿದ್ದರೆ ಅಜ್ಞಾನಿಯಾಗಿ ಹಿಟ್ಲರ್ ಆಗಬಹುದು. ಮಣ್ಣಿನಲ್ಲಿ ಸಂಪತ್ತು ಇದೆ ಎಂಬ ವಿಶ್ವಾಸವಿಟ್ಟು ಒಕ್ಕಲುತನ ಮಾಡಬೇಕು. ಅಂಗವೆಂಬ ಭೂಮಿಯಲ್ಲಿ ವಿಶ್ವಾಸವೆಂಬ ಬೀಜಬಿತ್ತಿ ಲಿಂಗವೆಂಬ ಬೆಳೆ ಬೆಳೆದು ಉಂಡು ಪರಮಸುಖಿ ಆಗಬೇಕು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

21 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago