ಬಿಸಿ ಬಿಸಿ ಸುದ್ದಿ

ಶ್ರೀಕೃಷ್ಣ ಪರಮಾತ್ಮ ಜಗತ್ತಿನ ಮೊದಲ ಗೋರಕ್ಷಕ

ಕಲಬುರಗಿ: ಪ್ರತಿವರ್ಷ ಕಾರ್ತಿಕ ಮಾಸದ ಶುಕ್ಲ ಪಕ್ಷ ಎಂಟನೆಯ ದಿನ ಅಂದರೆ ಅಷ್ಟಮಿಯ ತಿಥಿಯಂದು ಗೋಪಾಷ್ಟಮಿ ಹಬ್ಬವನ್ನಾಗಿ ಆಚರಿಸಲಾಗುತ್ತದೆ. ಶ್ರೀಕೃಷ್ಣ ಪರಮಾತ್ಮನಿಗೆ ತಂದೆ ನಂದ ಮಹಾರಾಜ ಗೋಪಾಲನೆಯ ಜವಾಬ್ದಾರಿಯನಿತ್ತ ಮತ್ತು ಬಾಲಕ ಶ್ರೀಕೃಷ್ಣನು ಮೊದಲ ಬಾರಿಗೆ ಹಸುವನ್ನು ಮೇಯಿಸಲು ಪ್ರಾರಂಭಿಸಿದ ದಿನ ಆದುದರಿಂದ ಶ್ರೀಕೃಷ್ಣ ಪರಮಾತ್ಮನಿಗೆ ಜಗತ್ತಿನ ಮೊದಲ ಗೋರಕ್ಷಕ ಗೋಪಾಲಕೃಷ್ಣ ಗೋವಿಂದನೆಂಬ ಪದವಿ ಪ್ರಾಪ್ತಿಯಾಯಿತು.

ಶ್ರೀಕೃಷ್ಣನು ವರುಣ ಸುರಿಸಿದ ಭಾರಿ ಮಳೆಯಿಂದ ಗೋವುಗಳನ್ನು ರಕ್ಷಿಸಲು ಏಳು ದಿನಗಳ ಕಾಲ ಗೋವರ್ಧನ ಗಿರಿಯನ್ನು ಎತ್ತಿಹಿಡಿದ ಎಂಬ ಪ್ರತೀತಿ ಇದೆ. ಹಸುವಿನಲ್ಲಿ ೩೩ ಕೋಟಿ ದೇವತೆಗಳು ನೆಲೆಸಿದ್ದಾರೆ ಆದುದರಿಂದ ಹಿಂದೂ ಧರ್ಮದಲ್ಲಿ ಹಸುವಿಗೆ ವಿಶೇಷ ಸ್ಥಾನವಿದೆ.

ನಗರದ ಶ್ರೀರಾಮಮಂದಿರದ ಪ್ರಧಾನ ಅರ್ಚಕರಾದ ಶ್ರೀ ನಾಗರಾಜ ಆಚಾರ್ ಹಸು ಮತ್ತು ಕರುವಿಗೆ ಪೂಜೆ ಮಂಗಳಾರತಿ ಹಾಗೂ ಗೋಗ್ರಾಸವನ್ನು ತಿನ್ನಿಸಿ ಗೋಪಾಷ್ಟಮಿ ಹಬ್ಬಕ್ಕೆ ಚಾಲನೆ ನೀಡಿದರು.

ವಿಹಿಂಪ  ಮಾತೃಶಕ್ತಿಯ ರಾಣಿ ಪಾಟೀಲ್ ಹಾಗೂ ಬಡಾವಣೆಯ ಪ್ರಮುಖ ಮಹಿಳೆಯರಾದ ಸುನಂದಾ ಜೋಶಿ, ರಜನಿ ಸೂಗೂರ್, ಪ್ರಿಯಾ ಕುಲಕರ್ಣಿ, ಅನುರಾಧ .ವಿ. ಜೋಶಿ ಹಸುವಿಗೆ ಅರಿಶಿಣ, ಕುಂಕುಮ, ಹೂವಿನ ಹಾರ ಮತ್ತು ವಿವಿಧ ಬಣ್ಣಗಳ ಬಟ್ಟೆಯಿಂದ ಶೃಂಗರಿಸಿ ಅಕ್ಕಿ ಬೆಲ್ಲ ಬಾಳೆಹಣ್ಣು ತಿನ್ನಿಸಿ ಸಂಭ್ರಮಿಸಿದರು.

ಸಮಾರಂಭಕ್ಕೆ ವಿಶೇಷ ಆಹ್ವಾನಿತರಾಗಿದ್ದ ಕಲಬುರಗಿ ಗೋಶಾಲೆ ಪ್ರಮುಖರಾದ ಕೃಷ್ಣ ಕೆಂಭಾವಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿಮಾತನಾಡಿ ಗೋವು ದೈವಿ ಸ್ವರೂಪ, ಒಂದು ಸಂಸಾರವನ್ನು ಆರ್ಥಿಕವಾಗಿ ಸಬಲಗೊಳಿಸುತ್ತದೆ ಪಂಚಗವ್ಯದಿಂದ ಕ್ಯಾನ್ಸರ್ ರೋಗವನ್ನು ಗುಣಪಡಿಸಬಹುದು, ದೀಪಾವಳಿ ಹಬ್ಬದ ಸಂದರ್ಭದಲ್ಲಿ ಗೋ ಮಾಯದ ಪ್ರಣತಿಗಳನ್ನು ದೇಶದಾದ್ಯಂತ ಮಾರಾಟ ಮಾಡಿ ೩.೫ ಲಕ್ಷ ಸಂಪಾದಿಸಿದ್ದಾಗಿ ತಿಳಿಸಿದರು.

ಗೋರಕ್ಷಾ ಪ್ರಮುಖರಾದ ಮಾತಂಡ ಶಾಸ್ತ್ರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಗೋಪಾಲನೆ ಬರೀ ರೈತರ ಜವಾಬ್ದಾರಿಯಲ್ಲ ಪ್ರತಿಯೊಂದು ಕುಟುಂಬವು ಹಸುವನ್ನು ಮನೆಯಲ್ಲಿ ಸಾಕಣೆ ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು, ನಮ್ಮ ಮುಂದಿನ ಪೀಳಿಗೆಗೆ ಹಾಲು ಪ್ಯಾಕೆಟ್ ನಲ್ಲಿ ದೊರೆಯುವುದಿಲ್ಲ, ಡುಬ್ಬವಿಲ್ಲದ ಆಕಳು ಆಕಳಲ್ಲವೆಂದು ತಿಳಿಸಬೇಕಾಗಿದೆ ಎಂದು ಮಾರ್ಮಿಕವಾಗಿ ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು ವಿವೇಕಾನಂದ ಶಾಲೆಯ ಸಿದ್ದಪ್ಪ ಭಗವತಿಯವರು. ಗೋಪಾಷ್ಟಮಿ ಮತ್ತು ಗೋವಿನ ಪ್ರಾಮುಖ್ಯತೆಯನ್ನು ನನ್ನ ಶಾಲೆಯ ಮಕ್ಕಳಿಗೆ ತಿಳಿಸುವೆನೆಂದರು.

ಈ ಸಂದರ್ಭದಲ್ಲಿ ಶ್ರೀರಾಮ ಮಂದಿರ ಪ್ರಖಂಡದ ಅಧ್ಯಕ್ಷರಾದ ಸತೀಶಕುಮಾರ ಮಾಹೂರ, ಉಪಾಧ್ಯಕ್ಷರಾದ ರಾಮಚಂದ್ರ ಸೂಗೂರ್, ಮಹಾನಗರದ ಸುದಾಕರ ಉಡಬಾಳಕರ್, ಪ್ರಖಂಡ ಉಪಾಧ್ಯಕ್ಷರಾದ ರಾಮಚಂದ್ರ ಸುಗೂರ, ಋಷಿಕೇಶ್ ಚೌಡಾಪುರಕರ್, ಸತ್ಸಂಗ ಪ್ರಮುಖರಾದ ವಿನಾಯಕ ಕುಲಕರ್ಣಿ, ರಾಘವೇಂದ್ರ ದೇಸಾಯಿ, ಪ್ರಖಂಡದ ಪದಾಧೀಕಾರಿಗಳಾದ ವಿನುತ್ ಜೋಷಿ, ಮಲ್ಲಿಕಾರ್ಜುನ ಹೂಗಾರ್ ಮತ್ತು ನಗರದ ಸಾರ್ವಜನಿಕರು ಸಹಕಾರ ನೀಡಿದರು.

ಸುಧೀರ್ ಕುಳಗೇರಿ ನಿರೂಪಿಸಿದರು ಋಷಿಕೇಶ್ ಸ್ವಾಗತಿಸಿದರು ಮತ್ತು ರಾಮಚಂದ್ರ ಸೂಗೂರ್ ವಿಶ್ವ ಹಿಂದೂ ಪರಿಷತ್ ಕಾರ್ಯವನ್ನು ಪರಿಚಯಿಸಿ ವಂದಿಸಿದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

11 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

21 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

21 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

21 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago