ನಮ್ಮ ಶರಣರು ಸಾಹಿತ್ಯಾಗಸದ ಮಿನುಗುವ ಚುಕ್ಕೆಗಳು. ೯೦೦ ವರ್ಷಗಳಿಂದ ದಿದೇಪ್ಯಮಾನವಾಗಿ ಬೆಳಗಿದ ದೃವತಾರೆಗಳು. ಅವರ ಮನೋಗಂಗೆಯಿಂದ ಓತಪ್ರೋತವಾಗಿ ಹರಿದು ಬಂದ ಜ್ಞಾನದ ಕಿರಣಗಳು. ಶರಣರಿಗೆ ಮನೆಗಳಿರಲಿಲ್ಲ. ಅವರು ಹಣದಿಂದ ಶ್ರೀಮಂತರಲ್ಲ. ಆದರೆ ಅವರಷ್ಟು ಶ್ರೀಮಂತರೂ ಯಾರೂ ಇಲ್ಲ. ಅವರದು ಕಹಿಯಿಲ್ಲದ ನುಡಿ, ಕಪ್ಪಿಲ್ಲದ ನಡೆ. ಗುಣದಿಂದ ಕೂಡಿದ ಆಚಾರವಂತಿಕೆಯ ಶರಣರ ಹೃದಯ ಕರುಣಾ ಸಾಗರ. ಒಡಲಲ್ಲಿ ಒಲಮೆಯ ದೇವರನ್ನು ನೆಲೆಸಿಕೊಂಡ ಅಂಕಿತದಲ್ಲಿ ಬಚ್ಟಿಟ್ಟುಕೊಂಡು ಸ್ವ ನಾಮಾಂಕಿತಗಳನ್ನೇ ಬಳಸಿದವರು ನಮ್ಮ ಶರಣರು.
ಪಂಪ, ರನ್ನರ ಬಗ್ಗೆ ತಿಳಿಯದವರು, ಕನ್ನಡದ ಆಳ ಜ್ಞಾನವಿಲ್ಲದೆಯೇ ಆಡುಭಾಷೆ ಕನ್ನಡದಲ್ಲಿಯೇ , ತಾಯಿನುಡಿಯಲ್ಲಿ ವಚನ ರಚಿಸಿದವರು. ಅಧ್ಯತ್ಮಾವನ್ನು ತುಂಬಿದವರು ನಮ್ಮ ಶರಣರು. ಅವರು ಬರೆದದ್ದೇ ಅಧ್ಯಾತ್ಮವಯಿತು. ಅಟ್ಟದ ಮೇಲೆ ನಗುತ್ತಿದ್ದ, ಅಟ್ಟದ ಮೇಲೆ ಕುಣಿಯುತ್ತಿದ್ದ ಧರ್ಮವನ್ನು ಮನೆಯ ಅಂಗಳಕ್ಕೆ ತಂದವರು. ಅಂತರಂಗದಲ್ಲಿ ಯಾರಿಗೂ ಕಾಣಬಾರದೆಂದು ಅವಿತುಕೊಂಡ ದೇವರನ್ನು ಅಂಗೈಕ್ಕೆ ತಂದು ಕೊಟ್ಟವರು. ಶರಣರು ಸ್ತ್ರೀ ಸಮಾನತೆಯ ಆಂದೋಲನಕ್ಕೆ ಕಹಳೆ ಊದಿದವರು. ಮಹೋನ್ನತ ಸಾಧನೆಗೆ ಮುನ್ನುಡಿ ಬರೆದವರು. ಸ್ತ್ರೀ ಸಮಾನತೆಗಾಗಿಯೇ ವಚನಾಂದೋಲನದ ನೇತೃತ್ವ ವಹಿಸಿದ್ದ ಬಸವಣ್ಣನವರು ಸಹ ಮನೆ ಬಿಟ್ಟು ಬಂದವರು.
ಕಲ್ಯಾಣದ ಕ್ರಾಂತಿಯಲ್ಲಿ ನೆನಪಿಟ್ಟುಕೊಳ್ಳಬೇಕಾದ ಎರಡು ವಿಶಿಷ್ಟ ವ್ಯಕ್ತಿತ್ವಗಳಲ್ಲಿ ಒಬ್ಬರು ಅಕ್ಕಮಹಾದೇವಿ. ಇನ್ನೊಬ್ಬರು ಬೋಂತಾದೇವಿ.
ನಮಗೆ ಅರ್ಥಮನೆ (ಸಂಪತ್ತಿನ) ಬೇಡ, ನಮಗೆ ಗುರುಮನೆ (ಅರಿವಿನ) ಬೇಕು ಎಂದು ಸಿರಿವಂತಿಕೆಯ ರಾಜಾಶ್ರಯವನ್ನು ತೊರೆದು ಕಾಯಕ ಸಿದ್ಧಾಂತವನ್ನು ಒಪ್ಪಿಕೊಂಡು ಕಲ್ಯಾಣಕ್ಕೆ ಬಂದವರು ಈ ಶರಣೆಯರು. ಬೋಂತಾದೇವಿಯ ಮೂಲ ಹೆಸರು ನಿಜದೇವಿ. ಬೋಂತಾದೇವಿ ಅಕ್ಕಮಹಾದೇವಿಯಂತೆ ವಿವಾಹ ಬಂಧನಕ್ಕೆ ಸಿಲುಕದೆ ಶರಣ ದೀಕ್ಷೆ ತೊಟ್ಟವರು. ಕಾಶ್ಮೀರದಲ್ಲಿದ್ದಾಗ ವಿಪರೀತ ಚಳಿಯಿಂದ ನಡಗುತ್ತಿದ್ದ ವೃದ್ಧೆಗೆ ತಾನುಟ್ಟ ಬಿಚ್ಚಿಕೊಟ್ಟು ಬಡಜನರ ಸೇವೆಯಲ್ಲಿ ಕಾರ್ಯತತ್ಪರರಾದವರು. ಕಲ್ಯಾಣದಲ್ಲಿ ತಿಪ್ಪೆಯಪ್ಪರಿಗೆಯೆನ್ನದೆ ಎಲೆಯ ಮರೆಯ ಹೂವಾಗಿ, ಸಾಧನೆ ಮಾಡುತ್ತ ಉಳಿದುಕೊಂಡ ಇವರನ್ನು ದಿವ್ಯಜ್ಞಾನಿಯಾದ ಅಲ್ಲಮರು ಗುರಿತಿಸುತ್ತಾರೆ. ಬಿಡಾಡಿ ಅಂಕಿತನಾಮದಲ್ಲಿ ಇವರು ರಚಿಸಿದ ಐದು ವಚನಗಳು ಮಾತ್ರ ಲಭ್ಯವಿದ್ದು, ಏಕದೇವೋಪಾಸನೆ ಇವರ ವಚನಗಳ ಅಂತರಂಗ. ಅಂತರ‍್ಗಂಗೆ.
ಪರಮಾತ್ಮನು ಯಾವ ನಿರ್ಭಂಧಕ್ಕೊಳಗಾಗದ ಸರ್ವತಂತ್ರ ಸ್ವತಂತ್ರ ಎಂಬಂರ್ಥದಲ್ಲಿ ಆತನನ್ನು ಬಿಡಾಡಿ ಎಂದು ಕರೆದು ಆತನ ಅನಂತತೆ, ಸರ್ವಂತರ್ಯಾಮಿತ್ವನ್ನು ತಮ್ಮ ವಚನಗಳಲ್ಲಿ ವರ್ಣಿಸಿದ್ದಾರೆ.
ಮನುಷ್ಯ ತನ್ನ ಸ್ವಾರ್ಥತನದಿಂದ ಹಲವು ಕುಲ,ಗೋತ್ರ, ಜಾತಿಗಳನ್ನು ಸೃಷ್ಟಿ ಮಾಡಿದ್ದಾನೆ. ಎಲ್ಲರಿಗೂ ಒಂದೇ ಬಯಲು ಇರುವಂತೆ ಎಲ್ಲರಿಗೂ ಒಂದೇ ಕುಲ. ಊರ ಹೊರಗಿನ ಗಾಳಿ, ಊರ ಒಳಗಿನ ಗಾಳಿ ಬೇರೆ ಇರದಂತೆ ಎಲ್ಲಡೆಯೂ ಆತನ ವಾಸಸ್ಥಾನ ಎಂದು ಹೇಳುವ ಬೋಂತಾದೇವಿ, ಮಾನವರ ಮರ್ಧಯೆ ಅಡ್ಡಗೋಡೆ ಕಟ್ಟಿ ಓಲಗೆ-ಹೊರಗೆ ಎಂದು ಹೆಸರುಕೊಡುವುದುಂಟೇ? ಎಂದು ಪ್ರಶ್ನಿಸುವ ಮೂಲಕ ವರ್ಣ, ವರ್ಗ, ಜಾತಿ ಮತ್ತು ಉಪಜಾತಿಗಳಿಂದ ಕೂಡಿದ ಶ್ರೇಣಿಕೃತ ಸಮಾಜದ ಅತಾರ್ಕಿಕತೆಯ ಮೇಲೆ ಬೆಳಕು ಚೆಲ್ಲುತ್ತಾರೆ.
ಅದ್ಯಾತ್ಮದ ತುತ್ತ ತುದಿಯನ್ನು ಮುಟ್ಟಿದ ಬೋಂತಾದೇವಿಯ ಮನಸ್ಸು ಸಮತಾಭಾವದಿಂದ ಹಾಗೂ ಸಮಾಜ ಕಾಳಜಿಯಿಂದ ಕೂಡಿದ್ದಾಗಿದೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…